ಗೃಹಜ್ಯೋತಿ ಉಚಿತ ವಿದ್ಯುತ್ ಯೋಜನೆಗೆ ನೋಂದಣಿಯಾಗಬೇಕು ಎಂದರೆ ಅರ್ಹತೆ ಇರಬೇಕು. ಆದರೆ, ಅರ್ಹತೆಗಿಂತಲೂ ಹೆಚ್ಚಾಗಿ ಅದೃಷ್ಟ ಇರಬೇಕು. ಅಂದರೆ ನಿಮ್ಮ ತಿಂಗಳ ಸರಾಸರಿ ಯುನಿಟ್ ಬಳಕೆ 200 ಯುನಿಟ್ ಒಳಗೆ ಇರಬೇಕು. ನೀವು ಅಪ್ಲೈ ಮಾಡಲು ಟ್ರೈ ಮಾಡಿದಾಗ ಸರ್ವರ್ ಆಕ್ಟಿವ್ ಆಗಿರಬೇಕು. ಹಣೆಬರಹ ಚೆನ್ನಾಗಿದ್ದರೆ, ಗೃಹಜ್ಯೋತಿಗೆ ನೋಂದಣಿ ಮಾಡಿಕೊಳ್ಳಬಹುದು. ಇದು ಈಗಿನ ರಾಜ್ಯದ ಗೃಹಜ್ಯೋತಿಯ ಸ್ಥಿತಿಗತಿ. ಗೃಹಜ್ಯೋತಿ ಯೋಜನೆಗೆ ನೋಂದಣಿ ಪ್ರಕ್ರಿಯೆ ಎರಡನೇ ದಿನಕ್ಕೆ, ಸೋಮವಾರ ಸಂಜೆವರೆಗೆ 1,61,958 ಗ್ರಾಹಕರು ಯೋಜನೆಗೆ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಮೊದಲ ದಿನವಾದ ಭಾನುವಾರಕ್ಕೆ ಹೋಲಿಸಿದರೆ ಸೋಮವಾರ ನೋಂದಣಿ ಮಾಡಿಕೊಂಡ ಗ್ರಾಹಕರ ಸಂಖ್ಯೆ ಎರಡು ಪಟ್ಟು ಹೆಚ್ಚಿದೆ.
ಗೃಹಜ್ಯೋತಿ ನೋಂದಣಿಗೆ ಲಿಂಕ್ :
https://sevasindhugs.karnataka.gov.in
ನೋಂದಣಿ ಮಾಡಿಕೊಳ್ಳುವಾಗ ಗ್ರಾಹಕರು ಜಸ್ಟ್ ನಿಮ್ಮ ಕರೆಂಟ್ ಬಿಲ್ಲಿನಲ್ಲಿರುವ ಖಾತೆ ಸಂಖ್ಯೆ, ಆಧಾರ್ ನಂಬರ್ ಮತ್ತು ಮೊಬೈಲ್ ನಂಬರ್ ಎಂಟ್ರಿ ಮಾಡಿದರೆ, ಸಾಕು. ಆದರೆ ಇಷ್ಟು ಕೆಲಸಕ್ಕೆ ಸರ್ವರ್ ಕೆಲಸ ಮಾಡುತ್ತಿಲ್ಲ. ಹ್ಯಾಂಗ್ ಆಗುತ್ತಿದೆ. ಸರ್ವರ್ ಸಮಸ್ಯೆ ಮುಂದುವರೆದಿದೆ. ಗ್ರಾಹಕರು ಸೇವಾ ಸಿಂಧು ಹಾಗೂ ಸೈಬರ್ ಸೆಂಟರ್ಗಳ ಮುಂದೆ ಬೆಳಗ್ಗೆಯಿಂದ ಸಂಜೆವರೆಗೂ ಕಾದು ಕಾದು ಬಸವಳಿದರೇ ವಿನಃ ವೆಬ್ಸೈಟ್ ಮಾತ್ರ ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸಲೇ ಇಲ್ಲ.ಹೊರಗೆ ಹೋದಾಗ ಸರ್ವರ್ ಸಿಕ್ಕುಬಿಟ್ರೆ.. ಎಂಬ ಆತಂಕದಲ್ಲಿಯೇ ಸಾವಿರಾರು ಜನ ಸರ್ವರ್`ಗಾಗಿ ಸಂಜೆಯವರೆಗೂ ಕಾದರು. ಆನ್`ಲೈನ್ ನೋಂದಣಿಯಾಗಿರುವ ಕಾರಣ ಸಂಜೆಯ ಮೇಲೆ ತೆಗೆದುಕೊಳ್ಳುವುದಿಲ್ಲ ಎನ್ನುತ್ತಿರುವುದೇಕೋ ಅರ್ಥವಾಗುತ್ತಿಲ್ಲ. ಸಂಜೆಯ ಮೇಲಂತೂ ಸಿಕ್ಕುವುದೇ ಇಲ್ಲ. ಆನ್ ಲೈನ್ ರಿಜಿಸ್ಟ್ರೇಷನ್`ನ್ನು 24 ಗಂಟೆಯೂ ಓಪನ್ ಮಾಡಿಟ್ಟರೆ ಗ್ರಾಹಕರಿಗೆ ಅನುಕೂಲವಾಗಬಹುದು. ಇನ್ನು ಲಾಸ್ಟ್ ಡೇಟ್ ಫಿಕ್ಸ್ ಮಾಡಿಲ್ಲವಂತೆ. ಅರ್ಜಿಯಲ್ಲಿಯೂ ಇಲ್ಲ. ಲಾಸ್ಟ್ ಡೇ ಮೆನ್ಷನ್ ಆಗಿಲ್ಲ. ಆದರೆ.. ಗ್ರಾಹಕರಲ್ಲಿ ಒಂದೇ ಒಂದು ಅನುಮಾನ.
ಲಾಸ್ಟ್ ಡೇ ಇಲ್ಲ. ಸರಿ, ಆದರೆ ಆಗಸ್ಟ್ 1ರಿಂದ ಗೃಹಜ್ಯೋತಿ ಶುರುವಾಗಲಿದೆ. ಇದೇ ಸ್ಪೀಡಿನಲ್ಲಿ ಕಂಟಿನ್ಯೂ ಆದರೆ, ಎರಡು ಕೋಟಿಗೂ ಹೆಚ್ಚು ಜನಸಂಖ್ಯೆಯ ಗ್ರಾಹಕರು ರಿಜಿಸ್ಟ್ರೇಷನ್ ಆಗುವುದಕ್ಕೆ ಸಾಧ್ಯವೇ ಇಲ್ಲ. ಹೀಗಿರುವಾಗ ಆಗಸ್ಟ್ 1ರ ಹೊತ್ತಿಗೂ ಇದೇ ಪರಿಸ್ಥಿತಿ ಮುಂದುವರಿದು, ರಿಜಿಸ್ಟ್ರೇಷನ್ ಮಾಡಿಕೊಳ್ಳೋಕೆ ಆಗದೇ ಇದ್ದರೆ ಏನು ಮಾಡುವುದು.. ಗೃಹಜ್ಯೋತಿ ಸಿಗುತ್ತಾ ಸಿಗಲ್ವಾ.. ಏನೋ.. ಎಲ್ಲ ಪ್ರಶ್ನೆ/ಅನುಮಾನ/ಗೊಂದಲಗಳಿಗೂ ಉತ್ತರ ನೀಡುತ್ತಿರುವ ಸರ್ಕಾರವೇ ಉತ್ತರ ಹೇಳಬೇಕು.



