ರಾಜ್ಯ ರಾಜಕೀಯದ ಬಿರುಗಾಳಿ ಸುದ್ದಿ ಇದು. ಏಕೆಂದರೆ ಆರೋಪ ಸ್ಥಾನದಲ್ಲಿರುವುದು ಬಿ.ಎಸ್.ಯಡಿಯೂರಪ್ಪ. ಅವರ ಮೇಲೆ ಬಂದಿರುವ ದೂರು ಕೂಡಾ ಸಾಮಾನ್ಯದ್ದಲ್ಲ. ಲೈಂಗಿಕ ಕಿರುಕುಳ ನೀಡಿದ ಆರೋಪ. ಬಾಲಕಿಯೊಬ್ಬರು ದೂರು ನೀಡಿರುವ ಕಾರಣ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
ಸಂತ್ರಸ್ತೆ ನೀಡಿದ ದೂರಿನ ಅನ್ವಯ ಸದಾಶಿವನಗರ ಠಾಣಾ ಪೊಲೀಸರು ಯಡಿಯೂರಪ್ಪ ವಿರುದ್ಧ ಪೋಕ್ಸೋ ಹಾಗೂ 354 (ಎ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಫೆಬ್ರವರಿ 2 ರಂದು ಸಹಾಯ ಕೇಳಲು ಹೋಗಿದ್ದಾಗ ತನಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ಸಂತ್ರಸ್ತೆಯು ಎಫ್ಐಆರ್ನಲ್ಲಿ ಉಲ್ಲೇಖಿಸಿದ್ದಾಳೆ ಎಂದು ತಿಳಿದುಬಂದಿದೆ.
ಅಂದರೆ ಪ್ರಕರಣ ನಡೆದಿರುವುದು ಫೆಬ್ರವರಿ ೨ರಂದು. ಈಗ ದೂರು ನೀಡಿರುವುದೇಕೆ..? ಈ ಪ್ರಶ್ನೆಗೆ ಉತ್ತರ ಇಲ್ಲವಾದರೂ, ಎಫ್ʻಐಆರ್ ದಾಖಲಾಗಿರುವುದಂತೂ ಸತ್ಯ.
ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಬಿಜೆಪಿಯು ಬಿರುಸಿನ ಚಟುವಟಿಕೆಗಳನ್ನು ನಡೆಸುತ್ತಿದೆ. ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಓಡಾಡ ನಡೆಸುತ್ತಿರುವ ಯಡಿಯೂರಪ್ಪ ಅವರು ಚುನಾವಣಾ ಪ್ರಚಾರಕ್ಕೆ ಅಣಿಯಾಗುತ್ತಿದ್ದಾರೆ. ಈ ನಡುವೆ ಪೋಕ್ಸೋ ಪ್ರಕರಣ ದಾಖಲಾಗಿರುವುದು ಯಡಿಯೂರಪ್ಪ ಅವರು ಸಂಕಷ್ಟಕ್ಕೆ ಸಿಲುಕಿಸಿದಂತಾಗಿದೆ. ಬಂಧನದ ಭೀತಿಯೂ ಎದುರಾಗಿದೆ.
ಏಕೆಂದರೆ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾದರೆ, ಆರೋಪಿಗಳನ್ನು ಅರೆಸ್ಟ್ ಮಾಡುವ ಅನಿವಾರ್ಯತೆ ಇರುತ್ತದೆ. ಯಡಿಯೂರಪ್ಪ ಮಾಜಿ ಸಿಎಂ ಎಂಬ ವಿಷಯ ಇಲ್ಲಿ ಗಣನೆಗೆ ಬರುವುದಿಲ್ಲ. ಆರೋಪಿ ಅದೆಷ್ಟೇ ಪ್ರಭಾವಿಯಾಗಿದ್ದರೂ, ಆರೋಪಿಯನ್ನು ಅರೆಸ್ಟ್ ಮಾಡಲೇಬೇಕಾಗುತ್ತೆ.
ಆದರೆ ವಿಷಯವೇನೆಂದರೆ ಹೀಗೆ ಯಡಿಯೂರಪ್ಪ ವಿರುದ್ಧ ದೂರು ಕೊಟ್ಟಿರುವ ಮಹಿಳೆ ಈಗಾಗಲೇ ೫೩ ಗಣ್ಯರ ವಿರುದ್ಧ ದೂರು ಕೊಟ್ಟಿದ್ದಾರೆ. ಹಲವು ಉದ್ಯಮಿಗಳು, ರಾಜಕಾರಣಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧವೂ ದೂರು ಕೊಟ್ಟಿದ್ಧಾರೆ. ಗಣ್ಯ ವ್ಯಕ್ತಿಗಳ ಬಳಿ ನ್ಯಾಯ ಕೊಡಿಸಿ ಎಂದು ಕೇಳಿಕೊಂಡು ಹೋದಾಗ, ಬಾಲಕಿಗೆ ಕಿರುಕುಳ ಕೊಟ್ಟಿದ್ದಾರೆ ಎನ್ನುವುದು ಒಟ್ಟಾರೆ ಎಲ್ಲ ದೂರುಗಳ ಸಾರಾಂಶ. ಹೀಗಿರುವಾಗ.. ಯಡಿಯೂರಪ್ಪ ಅರೆಸ್ಟ್ ಆಗ್ತಾರಾ..? ಅಥವಾ ಯಡಿಯೂರಪ್ಪ ಅವರೊಂದಿಗೆ ಆ ಮಹಿಳೆ ದೂರು ನೀಡಿರುವ ಎಲ್ಲರನ್ನೂ ಅರೆಸ್ಟ್ ಮಾಡ್ತಾರಾ..? ಕಾನೂನು ತಜ್ಞರು ಉತ್ತರ ಹೇಳಬೇಕು.



