ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರು ಜೆಡಿಎಸ್`ನನ್ನು ಬಿಜೆಪಿಯ ಬಿ ಟೀಂ ಎನ್ನುತ್ತಿದ್ದಾರೆ. ಜೆಡಿಎಸ್`ಗೆ ವೋಟು ಹಾಕಿದರೆ ಬಿಜೆಪಿಗೆ ಹಾಕಿದಂತೆ. ಹೀಗಾಗಿ ಜೆಡಿಎಸ್`ಗೆ ವೋಟು ನೀಡಬೇಡಿ ಎಂದು ಕೂಡಾ ಪ್ರಚಾರ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಸೇರಿದಂತೆ ಹಲವು ಜೆಡಿಎಸ್ ನಾಯಕರು ಒಳಗೊಳಗೇ ಬಿಜೆಪಿ ಜೊತೆ ಅಡ್ಜಸ್ಟ್`ಮೆಂಟ್ ಮಾಡಿಕೊಂಡಿದ್ದಾರೆ ಎನ್ನುವುದು ಕಾಂಗ್ರೆಸ್ ನಾಯಕರ ಬಹಿರಂಗ ಆರೋಪ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ ಕೇಳಲು ಎಲ್ಲರಿಗೂ ಅವಕಾಶ ಇದೆ. ಆದರೆ ಜೆಡಿಎಸ್ಗೆ ಮತ ಹಾಕಬೇಡಿ ಅನ್ನೋದು ತಪ್ಪು. ನಿಮ್ಮ ಕಾರ್ಯವೈಖರಿ ತಿಳಿಸಿ ಮತ ಕೇಳಿ ಅಷ್ಟೇ, ಇನ್ನೊಬ್ಬರಿಗೆ ನೀಡಿಬೇಡಿ ಎಂದಲ್ಲ . ಅಮಿತ್ ಶಾ ಬಂದಾಗ ಜೆಡಿಎಸ್ಗೆ ಮತ ನೀಡಿದರೆ ಅದು ಕಾಂಗ್ರೆಸ್ಗೆ ಹಾಕಿದ ರೀತಿ. ಜೆಡಿಎಸ್ ಕಾಂಗ್ರೆಸ್ನ ಬಿ ಟೀಂ ಎನ್ನುತ್ತಾರೆ. ಇಲ್ಲಿ ಕಾಂಗ್ರೆಸ್ನವರು ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಅಪಪ್ರಚಾರ ಮಾಡುತ್ತಾರೆ.


ಈಗಾಗಲೇ ನಾನು 70 ವಿಧಾನಸಭಾ ಕ್ಷೇತ್ರಗಳ ಸಾವಿರಾರು ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ. ನನಗಿರುವ ಮಾಹಿತಿ ಮತ್ತು ಅಲ್ಲಿನ ವಾತಾವರಣದ ಪ್ರಕಾರ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರೋದಿಲ್ಲ. 

ರಮ್ಯಾ ಸ್ಪರ್ಧೆಗೆ ಕುಮಾರಸ್ವಾಮಿ ಹೇಳಿದ್ದೇನು?
20 ವರ್ಷ ಚನ್ನಪಟ್ಟಣದ ಶಾಸಕರಾಗಿದ್ದ ಸಿ.ಪಿ.ಯೋಗೇಶ್ವರ್ ಕ್ಷೇತ್ರ ಅಭಿವೃದ್ಧಿ ಮಾಡಿದ್ದರೆ ಸೀರೆ ಹಂಚಿಕೊಂಡು ರಾಜಕೀಯ ಮಾಡುವ ಅನಿವಾರ್ಯತೆ ಇದೆಯೇ. 

ಚನ್ನಪಟ್ಟಣದಲ್ಲಿ ನಟಿ ರಮ್ಯ ಸ್ಪರ್ಧೆಗೆ ಪ್ರತಿಕ್ರಿಯಿಸಿ, ಆಕೆ ಕೂಡ ನನ್ನ ಸಹೋದರಿ ಇದ್ದಂತೆ. ಯಾರು ಬೇಕಾದರೂ ಸ್ಪರ್ಧೆ ಮಾಡಬಹುದು. ಆಕೆ ಸ್ಪರ್ಧಿಸಿದರೆ ಸ್ವಾಗತಿಸುತ್ತೇನೆ. ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್ ಇಬ್ಬರೂ ಚರ್ಚಿಸಿ ಸ್ಪರ್ಧೆ ಮಾಡಿಸಲಿ. 




