ಕಾಂಗ್ರೆಸ್ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಳೆದ 3 – 4 ದಿನಗಳಿಂದ ಪಟ್ಟಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದ್ದು, ಈವರೆಗೆ ಪಟ್ಟಿ ಬಿಡುಗಡೆಯಾಗಿರಲಿಲ್ಲ. ಆದರೆ, ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸುವ ದಿನವೇ ಕಾಂಗ್ರೆಸ್ 124 ವಿಧಾನಸಭಾ ಕ್ಷೇತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಪ್ರಮುಖವಾಗಿ, ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲಿಂದ ಸ್ಪರ್ಧಿಸುತ್ತಾರೆ ಎಂಬುದು ಕುತೂಹಲ ಮೂಡಿಸಿತ್ತು. ಈಗ ಸಿದ್ದರಾಮಯ್ಯ ವರುಣಾದಿಂದಲೇ ಸ್ಪರ್ಧಿಸುವುದು ಸ್ಪಷ್ಟವಾಗಿದೆ. ಅಲ್ಲದೆ, ಮೊದಲ ಪಟ್ಟಿಯಲ್ಲಿ ಕೋಲಾರ ಹಾಗೂ ಬಾದಾಮಿ ಕ್ಷೇತ್ರದ ಅಭ್ಯರ್ಥಿ ಹೆಸರಿಲ್ಲ. ಸಿದ್ದರಾಮಯ್ಯ 2 ಕ್ಷೇತ್ರ ಸ್ಪರ್ಧೆ ಸುಳಿವು ಬೆನ್ನಲ್ಲೇ ಮೊದಲ ಪಟ್ಟಿಯಲ್ಲಿ ಕೋಲಾರ, ಬಾದಾಮಿಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಘೋಷಿಸಿರದಿರುವುದು ಕುತೂಹಲ ಮೂಡಿಸಿದೆ.
ಚಿತ್ರದುರ್ಗದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದಲೇ ಸ್ಪರ್ಧೆಗೆ ಕುಟುಂಬದವರು ಹೇಳುತ್ತಿದ್ದಾರೆ. ಎರಡು ಕ್ಷೇತ್ರದಲ್ಲಿ ನಿಲ್ಲುವ ಆಯ್ಕೆಯೂ ಇದೆ. ಎಲ್ಲವೂ ಹೈಕಮಾಂಡಿಗೆ ಬಿಟ್ಟಿದ್ದು ಎಂದು ಹೇಳಿ ಬಾದಾಮಿಗೆ ಹೋಗಿದ್ದರು. ತದನಂತರ ಬಾದಾಮಿಯಲ್ಲಿ ಭರ್ಜರಿ ರೋಡ್ ಶೋ ನಡೆಸಿದ್ದರು. ಯುಗಾದಿ ದಿನವೇ ಘೋಷಣೆಯಾಗಬೇಕಿದ್ದ ಕಾಂಗ್ರೆಸ್ ಮೊದಲ ಪಟ್ಟಿ ಇದೀಗ ಬಿಡುಗಡೆಯಾಗಿದೆ.
ಕೋಲಾರ, ಬಾದಾಮಿ ಕ್ಷೇತ್ರಕ್ಕೆ ಟಿಕೆಟ್ ಘೋಷಿಸಿಲ್ಲ. ಏಕೆ?
ವರುಣಾ ಕ್ಷೇತ್ರಕ್ಕೆ ಸಿದ್ದರಾಮಯ್ಯ ಹೆಸರು ಘೋಷಿಸಿದ್ದರೂ ಬಾದಾಮಿ ಹಾಗೂ ಕೋಲಾರ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಆಗಿಲ್ಲ. ಇದು ಸಿದ್ದರಾಮಯ್ಯ ಕಟ್ಟಕಡೆಯವರೆಗೆ ಪ್ರಯತ್ನ ಮಾಡಿದ್ದರ ಫಲ ಎನ್ನಲಾಗುತ್ತಿದೆ. ಸಿದ್ದರಾಮಯ್ಯಗೆ ಪರ್ಯಾಯ ಯಾರು ಎಂಬ ಬಗ್ಗೆ ಕಾಂಗ್ರೆಸ್ ನಾಯಕರು ಯೋಚನೆ ಕೂಡಾ ಮಾಡಿಲ್ಲ. ಕೊನೆ ಕ್ಷಣದಲ್ಲಿ ಮತ್ತೆ ಇಲ್ಲಿಗೇ ಬರುವ ಸಾಧ್ಯತೆ ಇರುವಾಗ ಹೆಸರು ಘೋಷಿಸಿ ಪ್ರಾಬ್ಲಂ ಮಾಡಿಕೊಳ್ಳುವುದು ಏಕೆ ಎಂಬುದು ಇನ್ನೊಂದು ಕಾರಣ. ಅಲ್ಲದೆ ವರುಣಾ ಕ್ಷೇತ್ರಕ್ಕೆ ಈ ಬಾರಿಯೂ ವಿಜಯೇಂದ್ರ ಹೆಸರು ಕೇಳಿಬರುತ್ತಿದೆ. ಹಾಗಾದರೆ ಕಷ್ಟ ಎನ್ನುವ ಅಂದಾಜಿನಲ್ಲಿ ಸಿದ್ದರಾಮಯ್ಯ ತಮಗೆ ಕೋಲಾರ ಹಾಗೂ ಬಾದಾಮಿಯನ್ನು ಹಾಗೆಯೇ ಉಳಿಸಿಕೊಳ್ಳುವಂತೆ ಹೇಳಿದ್ದಾರೆಯೇ.. ಈ ಪ್ರಶ್ನೆ ಕಾಂಗೆಸ್ಸಿನಲ್ಲೇ ಇರುವ ಸಿದ್ದು ವಿರೋಧಿಗಳದ್ದು.
ಇನ್ನು ಬಾದಾಮಿ ಕ್ಷೇತ್ರಕ್ಕೆ ಈಗ ಪ್ರತಿನಿಧಿ ಸಿದ್ದರಾಮಯ್ಯ ಅವರಾದರೂ, ಕಳೆದ ಬಾರಿ ಸಿದ್ದರಾಮಯ್ಯಗಾಗಿ ತ್ಯಾಗ ಮಾಡಿದ್ದವರು ಪೈಪೋಟಿಯಲ್ಲಿದ್ದಾರೆ. ಇತ್ತ ಕೋಲಾರದಲ್ಲಿ ಶ್ರೀನಿವಾಸ ಗೌಡ ಹಾಲಿ ಶಾಸಕ. ಜೆಡಿಎಸ್‍ನಿಂದ ಬಂದವರು. ಸಿದ್ದರಾಮಯ್ಯಗಾಗಿ ಟಿಕೆಟ್ ತ್ಯಾಗ ಮಾಡಲು ರೆಡಿಯಾಗಿದ್ದವರು. ಈಗ ಸಿದ್ದರಾಮಯ್ಯ ನಿಲ್ಲುವುದಿಲ್ಲ ಎನ್ನುವುದು ಖಚಿತವಾಗಿದೆ. ಈಗಲೂ ಶ್ರೀನಿವಾಸ ಗೌಡ ಟಿಕೆಟ್ ತ್ಯಾಗ ಮಾಡ್ತಾರಾ..? ಹೀಗೆ ಹಲವು ಪ್ರಶ್ನೆಗಳಿವೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕನಕಪುರ, ಲಕ್ಷ್ಮಿ ಹೆಬ್ಬಾಳ್ಕರ್ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರ, ಶಾಮನೂರು ಶಿವಶಂಕ್ರಪ್ಪನವರು ದಾವಣಗೆರೆ ದಕ್ಷಿಣ ಕ್ಷೇತ್ರ ಹಾಗೂ ಎಂ. ಬಿ ಪಾಟೀಲ್ ಅವರಿಗೆ ಬಬಲೇಶ್ವರ ಟಿಕೆಟ್ ನೀಡಿ ಪಟ್ಟಿ ಬಿಡುಗಡೆ ಮಾಡಲಾಗಿದೆ. ಇತ್ತೀಚೆಗೆ ಮೃತಪಟ್ಟ ಧ್ರುವ ನಾರಾಯಣ ಪುತ್ರ ದರ್ಶನ್ ಧ್ರುವನಾರಾಯಣ ಅವರಿಗೆ ನಂಜನಗೂಡು ಟಿಕೆಟ್ ನೀಡಲಾಗಿದೆ. ಕೊರಟಗೆರೆ ಕ್ಷೇತ್ರಕ್ಕೆ ಜಿ.ಪರಮೇಶ್ವರ್, ಶಿರಾ ಕ್ಷೇತ್ರಕ್ಕೆ ಟಿ.ಬಿ.ಜಯಚಂದ್ರ ಅವರಿಗೆ ಟಿಕೆಟ್ ನೀಡಲಾಗಿದೆ. ಭಿನ್ನಮತ, ಬಂಡಾಯದ ಮಧ್ಯೆಯೂ ರಾಜಾಜಿನಗರ ಕ್ಷೇತ್ರಕ್ಕೆ ಪುಟ್ಟಣ್ಣ ಅವರಿಗೆ ಟಿಕೆಟ್ ಘೋಷಿಸಲಾಗಿದೆ.
ಯಾರು ಯಾರಿಗೆ ಎಲ್ಲೆಲ್ಲಿ ಟಿಕೆಟ್..?
- ಯಮಕನಮರಡಿ : ಸತೀಶ್ ಜಾರಕಿಹೊಳಿ
- ಬೆಳಗಾವಿ ಗ್ರಾಮೀಣ : ಲಕ್ಷ್ಮೀ ಹೆಬ್ಬಾಳ್ಕರ್
- ಖಾನಾಪುರ : ಅಂಜಲಿ ನಿಂಬಾಳ್ಕರ್
- ಬಬಲೇಶ್ವರ : ಎಂ. ಬಿ. ಪಾಟೀಲ
- ಅಳಂದ : ಬಿ. ಆರ್. ಪಾಟೀಲ
- ಭಾಲ್ಕಿ : ಈಶ್ವರ ಖಂಡ್ರೆ
- ಚಿತ್ತಾಪುರ : ಪ್ರಿಯಾಂಕ ಖರ್ಗೆ
- ಬೀದರ್ : ರಹೀಂಖಾನ್
- ಕಾಗವಾಡ: ಭರಮಗೌಡ ಎ. ಕಗೆ
- ಕುಡಚಿ: ಮಹೇಂದ್ರ ಕೆ ತಮ್ಮನ್ನವರ್
- ಹುಕ್ಕೇರಿ: ಎಬಿ ಪಾಟೀಲ್
- ಬೈಲಹೊಂಗಲ: ಮಹಾಂತೇಶ್ ಶಿವಾನಂದ ಕೌಜಲಗಿ
- ರಾಮದುರ್ಗ: ಅಶೋಕ್ ಎಂ ಪಟ್ಟಣ
- ಜಮಖಂಡಿ: ಅನಂದ ಸಿದ್ದು ನ್ಯಾಮಗೌಡ
- ಹುನಗುಂದ: ವಿಜಯನಾಂದ ಕಾಶಪ್ಪನವರ್
- ಮುದ್ದೇಬಿಹಾಳ: ಸಿಎಸ್ ನಾಡಗೌಡ
- ಬಸವನ ಬಾಗೇವಾಡಿ: ಶಿವಾನಂದ ಪಾಟೀಲ್
- ಇಂಡಿ: ಯಶವಂತರಾಯಗೌಡ ಪಾಟೀಲ್
- ಜೇವರ್ಗಿ: ಅಜಯ್ ಧರಂಸಿಂಗ್
- ಸುರಪುರ: ರಾಜಾವೆಂಕಟಪ್ಪ ನಾಯಕ್
- ಶಹಪುರ: ಶರಣಬಸಪ್ಪ ಗೌಡ
- ಸೇಡಂ: ಶಂಕರಪ್ರಕಾಶ್ ಪಾಟೀಲ್
- ಚಿಂಚೊಳ್ಳಿ: ಸುಭಾಶ್ ವಿ ರಾಥೋಡ್
- ಗುಲ್ಬರ್ಗಾ ಉತ್ತರ: ಖನೀಜ ಫಾತಿಮಾ
- ಹುಮ್ನಾಬಾದ್: ರಾಜಶೇಖರ್ ಬಿ ಪಾಟೀಲ್
- ಬೀದರ್ ದಕ್ಷಿಣ: ಅಶೋಕ್ ಖೇಣಿ
- ರಾಯಚೂರು ಗ್ರಾಮೀಣ: ಬಸನಗೌಡ ದದ್ದಲ್
- ವರುಣಾ: ಸಿದ್ದರಾಮಯ್ಯ
- ದಾವಣಗೆರೆ ದಕ್ಷಿಣ: ಶಾಮನೂರು ಶಿವಶಂಕ್ರಪ್ಪ
- ಕನಕಪುರ: ಡಿ.ಕೆ. ಶಿವಕುಮಾರ್
- ಚಿಕ್ಕೋಡಿ,ಸದಲಗಾ: ಗಣೇಶ ಹುಕ್ಕೇರಿ
- ಕುಡಚಿ: ಮಹೇಂದ್ರ ಕೆ ತಮ್ಮಣ್ಣವರ್
- ಗಾಂಧಿನಗರ (ಬೆಂಗಳೂರು): ದಿನೇಶ್ ಗುಂಡುರಾವ್
- ಚಾಮರಾಜಪೇಟೆ: ಜಮೀರ್ ಅಹ್ಮದ್
- ಬಿಟಿಎಂಲೇಔಟ್: ರಾಮಲಿಂಗಾರೆಡ್ಡಿ
- ಜಯನಗರ: ಸೌಮ್ಯ ರೆಡ್ಡಿ
- ಮಸ್ಕಿ: ಬಸನಗೌಡ ತುರ್ವಿಹಾಳ
- ಕುಷ್ಟಗಿ: ಅಮರೇಗೌಡ ಪಾಟೀಲ್ ಬಯ್ಯಾಪುರ
- ಯಲಬುರ್ಗ: ಬಸವರಾಜ್ ರಾಯರೆಡ್ಡಿ
- ಕೊಪ್ಪಳ: ಕೆ.ರಾಘವೇಂದ್ರ
- ಗದಗ: ಹೆಚ್ ಕೆ ಪಾಟೀಲ್
- ರೋಣ: ಜಿಎಸ್ ಪಾಟೀಲ್
- ಹುಬ್ಬಳ್ಳಿ-ಧಾರವಾಡ (ಪೂರ್ವ): ಪ್ರಸಾದ್ ಅಬ್ಬಯ್ಯ
- ಹಳಿಯಾಳ: ಆರ್ ವಿ ದೇಶಪಾಂಡೆ
- ಕಾರವಾರ: ಸತೀಶ್ ಸೈಲ್
- ಭಟ್ಕಳ: ಎಂ ಸುಬ್ಬವೈದ್ಯ
- ಹಾನಗಲ್: ಶ್ರೀನಿವಾಸ್ ಮಾನೆ
- ಹಾವೇರಿ: ರುದ್ರಪ್ಪ ಲಮಾಣಿ
- ಬ್ಯಾಡಗಿ: ಬಸವರಾಜ್ ಎನ್ ಶಿವಣ್ಣನ್ನರ್
- ಹಿರೇಕೆರೂರು: ಯುಬಿ ಬಣಕರ್
- ರಾಣೇಬೆನ್ನೂರು: ಪ್ರಕಾಶ್ ಕೆ ಕೋಳಿವಾಡ
- ಹಡಗಲಿ: ಪಿಟಿ ಪರಮೇಶ್ವರ್ ನಾಯಕ್
- ಹಗರಿಬೊಮ್ಮನಹಳ್ಳಿ: ಭೀಮಾ ನಾಯಕ್
- ವಿಜಯನಗರ: ಹೆಚ್ ಆರ್ ಗವಿಯಪ್ಪ
- ಕಂಪ್ಲಿ: ಜೆಎನ್ ಗಣೇಶ್
- ಬಳ್ಳಾರಿ: ಬಿ ನಾಗೇಂದ್ರ
- ಸಂಡೂರು: ಇ ತುಕಾರಾಂ
- ಚಳ್ಳಕೆರೆ: ಟಿ ರಘುಮೂರ್ತಿ
- ಹಿರಿಯೂರು: ಡಿ ಸುಧಾಕರ್
- ಹೊಸದುರ್ಗ: ಗೋವಿಂದಪ್ಪ ಬಿ.ಜಿ
- ದಾವಣಗೆರೆ ಉತ್ತರ: ಎಸ್ ಎಸ್ ಮಲ್ಲಿಕಾರ್ಜುನ್
- ಮಾಯಕೊಂಡ: ಕೆಎಸ್ ಬಸವರಾಜು
- ಭದ್ರಾವತಿ: ಸಂಗಮೇಶ್ವರ್ ಬಿಕೆ
- ಸೊರಬ: ಮಧು ಬಂಗಾರಪ್ಪ
- ಸಾಗರ: ಗೋಪಾಲಕೃಷ್ಣ
- ಬೈಂದೂರು: ಕೆ ಗೋಪಾಲ ಪೂಜಾರಿ
- ಕುಂದಾಪುರ: ದಿನೇಶ್ ಹೆಗಡೆ
- ಕಾಪು: ವಿನಯ ಕುಮಾರ್ ಸೊರಕೆ
- ಮಾಗಡಿ:ಎಚ್.ಸಿ. ಬಾಲಕೃಷ್ಣ
- ರಾಮನಗರ: ಇಕ್ಬಾಲ್ ಹುಸೈನ್ ಎಚ್.ಎ
- ಮಳವಳ್ಳಿ : ಪಿ.ಎಂ. ನರೇಂದ್ರಸ್ವಾಮಿ
- ಶ್ರೀರಂಗಪಟ್ಟಣ :ಎ.ಬಿ. ರಮೇಶ್ ಬಂಡಿಸಿದ್ದೇಗೌಡ
- ನಾಗಮಂಗಲ:ಎನ್. ಚೆಲುವರಾಯಸ್ವಾಮಿ
- ಹೊಳೆನರಸೀಪುರ: ಶ್ರೇಯಸ್ ಎಂ.ಪಟೇಲ್
- ಸಕಲೇಶಪುರ(ಎಸ್ಸಿ): ಮುರಳಿ ಮೋಹನ್
- ಬೆಳ್ತಂಗಡಿ: ರಕ್ಷಿತ್ ಶಿವರಾಮ್
- ಮೂಡಬಿದಿರೆ: ಮಿಥುನ್ ಎಮ್. ರೈ.
- ಮಂಗಳೂರು: ಯು.ಟಿ. ಅಬ್ದುಲ್ ಖಾದರ್ ಅಲಿ ಫರೀದ್
- ಬಂಟ್ವಾಳ: ರಮನಾಥ್ ರೈ ಬಿ
- ಸುಳ್ಯ: ಕೃಷ್ಣಪ್ಪ ಜಿ
- ಬವಿರಾಜಪೇಟೆ: ಎ.ಎಸ್ ಪೊನ್ನಣ್ಣ
- ಪಿರಿಯಾಪಟ್ಟಣ: ಕೆ. ವೆಂಕಟೇಶ್
- ಕೃಷ್ಣರಾಜನಗರ:ಡಿ. ರವಿಶಂಕರ್
- ಹುಣಸೂರು: ಎಚ್.ಪಿ ಮಂಜುನಾಥ್
- ಎಚ್ಡಿ ಕೋಟೆ-ಎಸ್ಟಿ: ಅನಿಲ್ ಕುಮಾರ್. ಸಿ
- ನಂಜನಗೂಡು:ದರ್ಶನ್ ಧ್ರುವನಾರಾಯಣ
- ನರಸಿಂಹರಾಜ: ತನ್ವೀರ್ ಸೇಠ್
- ಶೃಂಗೇರಿ: ಟಿಡಿ ರಾಜೇಗೌಡ
- ಚಿಕ್ಕನಾಯಕನಹಳ್ಳಿ: ಕಿರಣ್ ಕುಮಾರ್
- ತಿಪಟೂರು: ಕೆ ಷಡಕ್ಷರಿ
- ತುರುವೆಕೆರೆ: ಕಾಂತರಾಜ್ ಬಿಎಂ
- ಕುಣಿಗಲ್: ಹೆಚ್ ಡಿ ರಂಗನಾಥ್
- ಕೊರಟಗೆರೆ: ಜಿ ಪರಮೇಶ್ವರ್
- ಶಿರಾ: ಟಿಬಿ ಜಯಚಂದ್ರ
- ಪಾವಗಡ: ಹೆಚ್ ವಿ ವೆಂಕಟೇಶ್
- ಮಧುಗಿರಿ: ಕೆಎನ್ ರಾಜಣ್ಣ
- ಗೌರಿಬಿದನೂರು: ಶಿವಶಂಕರ್ ರೆಡ್ಡಿ
- ಬಾಗೇಪಲ್ಲಿ: ಎಸ್ ಎನ್ ಸುಬ್ಬಾರೆಡ್ಡಿ
- ಚಿಂತಾಮಣಿ: ಎಂ ಸಿ ಸುಧಾಕರ್
- ಶ್ರೀನಿವಾಸಪುರ: ಕೆಆರ್ ರಮೇಶ್ ಕುಮಾರ್
- ಕೆಜಿಎಫ್: ರೂಪಕಲಾ ಎಂ
- ಬಂಗಾರಪೇಟೆ: ಎಸ್ ಎನ್ ನಾರಾಯಣಸ್ವಾಮಿ
- ಮಾಲೂರು: ಕೆವೈ ನಂಜೇಗೌಡ
- ಬ್ಯಾಟರಾಯನಪುರ: ಕೃಷ್ಣ ಬೈರೇಗೌಡ
- ಆರ್ ಆರ್ ನಗರ: ಕುಸುಮಾ
- ಮಲ್ಲೇಶ್ವರಂ: ಅನೂಪ್ ಅಯ್ಯಂಗಾರ್
- ಹೆಬ್ಬಾಳ : ಸುರೇಶ್ ಬಿ.ಎಸ್
- ಸರ್ವಜ್ಞ ನಗರ: ಕೆ. ಜೆ. ಜಾರ್ಜ್
- ಶಿವಾಜಿನಗರ: ರಿಜ್ವಾನ್ ಆರ್ಷದ್
- ಶಾಂತಿನಗರ: ಎನ್. ಎ. ಹ್ಯಾರಿಸ್
- ರಾಜಾಜಿನಗರ: ಪುಟ್ಟಣ್ಣ
- ಗೋವಿಂದರಾಜ ನಗರ:ಪ್ರಿಯಾಕೃಷ್ಣಾ
- ವಿಜಯ ನಗರ: ಎಂ. ಕೃಷ್ಣಪ್ಪ
- ಬಸವನಗುಡಿ:ಯು.ಬಿ. ವೆಂಕಟೇಶ್
- ಮಹದೇವಪುರ: ನಾಗೇಶ್ ಟಿ
- ಆನೇಕಲ್: ಬಿ ಶಿವಣ್ಣ
- ಹೊಸಕೋಟೆ: ಶರತ್ ಕುಮಾರ್ ಬಚ್ಚೇಗೌಡ
- ದೇವನಹಳ್ಳಿ : ಕೆ. ಎಚ್. ಮುನಿಯಪ್ಪ
- ದೊಡ್ಡಬಳ್ಳಾಪುರ: ಟಿ. ವೆಂಕಟರಾಮಯ್ಯ
- ನೆಲಮಂಗಲ: ಶ್ರೀನಿವಾಸಯ್ಯ ಎನ್
- ಟಿ ನರಸೀಪುರ: ಹೆಚ್ ಸಿ ಮಹಾದೇವಪ್ಪ
- ಹನೂರು: ಆರ್. ನರೇಂದ್ರ
- ಚಾಮರಾಜನಗರ: ಸಿ ಪುಟ್ಟರಂಗಶೆಟ್ಟಿ
- ಗುಂಡ್ಲುಪೇಟೆ: ಹೆಚ್,ಎಂ ಗಣೇಶ್ ಪ್ರಸಾದ್



