ಕಾಂಗ್ರೆಸ್ 2ನೇ ಪಟ್ಟಿ ಅನೌನ್ಸ್ ಆಗಿದೆ. ಒಟ್ಟು 166 ಕ್ಷೇತ್ರಗಳ ಟಿಕೆಟ್ ಫೈನಲ್ ಆಗಿವೆ. 58 ಕ್ಷೇತ್ರಗಳ ಟಿಕೆಟ್ ಘೋಷಣೆ ಇನ್ನೂ ಬಾಕಿ ಇದೆ. 58 ಕ್ಷೇತ್ರಗಳಿಗೆ 2-3 ಅಭ್ಯರ್ಥಿಗಳ ಹೆಸರು ಶಿಫಾರಸು ಮಾಡಲಾಗಿದೆ. ಇದುವರೆಗೆ ಒಟ್ಟು 166ರಲ್ಲಿ 43 ಲಿಂಗಾಯತರಿಗೆ ಟಿಕೆಟ್ ನೀಡಿದ್ದು, ಲಿಂಗಾಯತರ ಮತ ಬ್ಯಾಂಕಿಗೆ ಕೈ ಹಾಕಿದೆ. ಆದರೆ ಅಖಂಡ ಶ್ರೀನಿವಾಸ ಮೂರ್ತಿ ಹಾಗೂ ಸಿದ್ದರಾಮಯ್ಯ ಸ್ಪರ್ಧಿಸಲು ಇಚ್ಚಿಸಿರುವ ಇನ್ನೊಂದು ಕ್ಷೇತ್ರ ಕೋಲಾರದ ಸಸ್ಪೆನ್ಸ್ ಇನ್ನೂ ಕ್ಲಿಯರ್ ಆಗಿಲ್ಲ.
ಕಾಂಗ್ರೆಸ್ 2ನೇ ಪಟ್ಟಿಯಲ್ಲೂ ಲಿಂಗಾಯತರಿಗೆ ಮಣೆ ಹಾಕಲಾಗಿದ್ದು, 11 ಕ್ಷೇತ್ರಗಳಲ್ಲಿ ಲಿಂಗಾಯತ ನಾಯಕರಿಗೆ ಟಿಕೆಟ್ ನೀಡಲಾಗಿದೆ. ಒಕ್ಕಲಿಗರು- 10, ಮುಸ್ಲಿಂ – 3, ದಲಿತ ಬಲ-2, ದಲಿತ ಎಡಗೈ-2, ಕುರುಬರು-3, ರೆಡ್ಡಿ-1, ಈಡಿಗ-2, ಮೊಗವೀರ- 2
ಎಸ್ಟಿ-2, ರಜಪೂತ-2, ಮರಾಠಿ -1, ನಾಯ್ಡು ಸಮುದಾಯದ ಒಬ್ಬರಿಗೆ ಟಿಕೆಟ್ ನೀಡಲಾಗಿದೆ. ಮೊದಲ ಪಟ್ಟಿಯಲ್ಲಿ 32 ಲಿಂಗಾಯತರಿಗೆ ಟಿಕೆಟ್ ನೀಡಿದ್ದ ಕಾಂಗ್ರೆಸ್ ಒಟ್ಟು 43 ಕ್ಷೇತ್ರಗಳಿಗೆ ಟಿಕೆಟ್ ನೀಡಿದೆ.
ಬೆಂಗಳೂರಿನ 4 ಕ್ಷೇತ್ರಗಳಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗಿದ್ದು, ಯಶವಂತಪುರಕ್ಕೆ ಎಸ್. ಬಾಲರಾಜಗೌಡ, ಮಹಾಲಕ್ಷ್ಮೀ ಲೇಔಟ್ ಕ್ಷೇತ್ರಕ್ಕೆ ಕೇಶವಮೂರ್ತಿ, ಪದ್ಮನಾಭನಗರಕ್ಕೆ ವಿ.ರಘುನಾಥ ನಾಯ್ಡು ಹಾಗೂ ಯಲಹಂಕಕ್ಕೆ ಕೇಶವರಾಜಣ್ಣ ಹೆಸರು ಘೋಷಿಸಿದೆ.
ವಲಸಿಗರಿಗೆ ಮಣೆ ಹಾಕಿದ ಕಾಂಗ್ರೆಸ್ ಹೈಕಮಾಂಡ್, ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಎನ್ವೈ ಗೋಪಾಲಕೃಷ್ಣಗೆ ಮೊಳಕಾಲ್ಮೂರು ಹಾಗೂ ಗುರುಮಿಠಕಲ್ ಕ್ಷೇತ್ರಕ್ಕೆ ಬಾಬುರಾವ್ ಚಿಂಚನಸೂರ್ಗೆ ಟಿಕೆಟ್ ನೀಡಿದೆ. ಮಾಜಿ ಸಿಎಂ ಧರ್ಮಸಿಂಗ್ 2ನೇ ಮಗ ವಿಜಯ್ ಸಿಂಗ್ಗೆ ಟಿಕೆಟ್ ನೀಡಲಾಗಿದೆ. ಕಲಘಟಗಿಯಲ್ಲಿ ನಾಗರಾಜ್ ಛಬ್ಬಿಗೆ ಟಿಕೆಟ್ ಮಿಸ್ ಆಗಿದ್ದರೆ, ಚಿತ್ರದುರ್ಗದಲ್ಲಿ ರಘು ಆಚಾರ್ಗೆ ಟಿಕೆಟ್ ತಪ್ಪಿದೆ. ಸಿದ್ದರಾಮಯ್ಯ ಕ್ಷೇತ್ರ ಬಾದಾಮಿಯಲ್ಲಿ ಚಿಮ್ಮನಕಟ್ಟಿ ಪುತ್ರನಿಗೆ ಟಿಕೆಟ್ ನೀಡಿದ್ದರೆ,


ಬಿ.ಎಲ್. ದೇವರಾಜುಗೆ ಕೆಆರ್ ಪೇಟೆ ಟಿಕೆಟ್ ನೀಡಿದ್ದು, ಕೆ.ಬಿ. ಚಂದ್ರಶೇಖರ್ಗೆ ಕೈತಪ್ಪಿದೆ. ಅರಕಲಗೂಡುಗೆ ಜೆಡಿಎಸ್ ಅಭ್ಯರ್ಥಿಯಾಗಿರುವ ಎ.ಮಂಜು ಪುತ್ರ ಡಾ. ಮಂಥರ್ ಗೌಡ ಮಡಿಕೇರಿಯಿಂದ ಸ್ಪರ್ಧೆ ಮಾಡಲಿದ್ದಾರೆ.
ಪುಲಿಕೇಶಿನಗರ ಕ್ಷೇತ್ರ ವಿವಾದಾತ್ಮಕ ಕ್ಷೇತ್ರವಾಗಿದ್ದು, ಇಲ್ಲಿನ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಭರ್ಜರಿ ಬಹುಮತದೊಂದಿಗೆ ಗೆದ್ದಿದ್ದರು. ಆದರೆ ಗಲಭೆಯಲ್ಲಿ ಮುಸ್ಲಿಮರು ಅಖಂಡ ಮನೆಯನ್ನೇ ಸುಟ್ಟಿದ್ದರು. ಅಖಂಡಗೆ ಟಿಕೆಟ್ ಬೇಡ ಎನ್ನುವುದು ಮುಸ್ಲಿಮ್ ಧರ್ಮಗುರುಗಳ ವಾದ. ಅಲ್ಲದೆ ಈ ಪ್ರಕರಣದ ಆರೋಪಿ ಸಂಪತ್ ರಾಜ್, ಡಿಕೆ ಬೆಂಬಲಿಗ. ಹೀಗಾಗಿ ಈ ಕ್ಷೇತ್ರಕ್ಕೂ ಟಿಕೆಟ್ ಘೋಷಣೆ ಆಗಿಲ್ಲ. ಸಿವಿ ರಾಮನ್ನಗರ, ಚಿಕ್ಕಪೇಟೆ, ಕೆ.ಆರ್ಪುರಂ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರಗಳಿಗೆ ಕೂಡಾ ಅಭ್ಯರ್ಥಿ ಘೋಷಣೆ ಆಗಿಲ್ಲ.
2ನೇ ಪಟ್ಟಿಯಲ್ಲೂ ಕೆಲವು ಹಾಲಿ ಶಾಸಕರಿಗೆ ಟಿಕೆಟ್ ಘೋಷಣೆ ಇಲ್ಲ.
ಕುಂದಗೋಳ, ಹರಿಹರ, ಶಿಡ್ಲಘಟ್ಟ, ಚಿಕ್ಕಮಗಳೂರು, ಮೂಡಿಗೆರೆ ಕ್ಷೇತ್ರ ಇನ್ನೂ ಸಸ್ಪೆನ್ಸ್
ಸಿಎಂ ಬೊಮ್ಮಾಯಿ ತವರು ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಸಸ್ಪೆನ್ಸ್ ಆಗಿಯೇ ಉಳಿದಿದೆ. ವಿನಯ್ ಕುಲಕರ್ಣಿಗೆ ಧಾರವಾಡ ಟಿಕೆಟ್ ಘೋಷಣೆಯಾಗಿದೆ.
ಗುಬ್ಬಿಯಲ್ಲಿ ಜೆಡಿಎಸ್ ಬಂಡಾಯ ಶಾಸಕ ಶ್ರೀನಿವಾಸ್ಗೆ ಟಿಕೆಟ್ ನೀಡಲಾಗಿದೆ.
ಕಳೆದ ಬಾರಿ ಸಿದ್ದರಾಮಯ್ಯಗಾಗಿ ಕ್ಷೇತ್ರ ತ್ಯಾಗ ಮಾಡಿದ್ದ ಚಿಮ್ಮನಕಟ್ಟಿ
ಮಗ ಭೀಮಸೇನ್ ಬಿ. ಚಿಮ್ಮನಕಟ್ಟಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಬಾಗಲಕೋಟೆಯಲ್ಲಿ ಸಿಡಿ ಕೇಸಿನಲ್ಲಿ ಸಿಕ್ಕಿಬಿದ್ದಿದ್ದ ಎಚ್.ವೈ. ಮೇಟಿಗೆ ಮತ್ತೆ ಟಿಕೆಟ್ ನೀಡಿದ್ದರೆ, ಮೇಲುಕೋಟೆಗೆ ಈ ಬಾರಿಯೂ ಅಭ್ಯರ್ಥಿ ಹಾಕಿಲ್ಲ. ರೈತ ಸಂಘದ ದರ್ಶನ್ ಪುಟ್ಟಣ್ಣಯ್ಯಗೆ ಕಾಂಗ್ರೆಸ್ ಬೆಂಬಲ ಘೋಷಿಸಿದೆ.
ಕಡೂರಿನಿಂದ ವೈಎಸ್ವಿ ದತ್ತಾಗೆ ಟಿಕೆಟ್ ಮಿಸ್ ಆಗಿದ್ದರೆ, ಚಾಮುಂಡೇಶ್ವರಿ ಕ್ಷೇತ್ರದಿಂದ ಜೆಡಿಎಸ್ನಿಂದ ಬಂಡಾಯವೆದ್ದು ಕಾಂಗ್ರೆಸ್ ಸೇರಿರುವ ಮಾವಿನಹಳ್ಳಿ ಸಿದ್ಧೇಗೌಡಗೆ ಟಿಕೆಟ್ ನೀಡಲಾಗಿದೆ.



