ರಾಜ್ಯದ ಹೈವೋಲ್ಟೇಜ್ ಕ್ಷೇತ್ರಗಳ ಪಟ್ಟಿಯಲ್ಲಿ ಈಗಾಗಲೇ ಚನ್ನಪಟ್ಟಣ ಕ್ಷೇತ್ರ ಇದೆ. ಏಕೆಂದರೆ ಈ ಬಾರಿ ಇದು ಕುಮಾರಸ್ವಾಮಿ ಸ್ಪರ್ಧಿಸಲಿರುವ ಕ್ಷೇತ್ರ. ಕಳೆದ ಬಾರಿ ಸ್ವಕ್ಷೇತ್ರ ರಾಮನಗರದಲ್ಲಿ ಹಾಗೂ ಪಕ್ಕದ ಚನ್ನಪಟ್ಟಣ, ಎರಡರಲ್ಲೂ ಗೆದ್ದು ನಂತರ ರಾಮನಗರವನ್ನು ಪತ್ನಿಗೆ ಬಿಟ್ಟುಕೊಟ್ಟಿದ್ದರು. ಈಗ ರಾಮನಗರವನ್ನು ಅನಿತಾ ಕುಮಾರಸ್ವಾಮಿ, ಮಗ ನಿಖಿಲ್ ಅವರಿಗೆ ನೀಡಿದ್ದಾರೆ. ಕುಮಾರಸ್ವಾಮಿ ಚನ್ನಪಟ್ಟಣದಿಂದಲೇ ಸ್ಪರ್ಧಿಸಲಿದ್ದಾರೆ. ಆ ಕ್ಷೇತ್ರದಿಂದ ಇದೇ ಮೊದಲ ಬಾರಿಗೆ ರಮ್ಯಾ ಹೆಸರು ಕೇಳಿ ಬರುತ್ತಿದೆ.
ಹೇಗಿದೆ ಚನ್ನಪಟ್ಟಣ ಕ್ಷೇತ್ರ?
ಚನ್ನಪಟ್ಟಣದಲ್ಲಿ ಸತತ 4 ಬಾರಿ ಗೆದ್ದಿದ್ದವರು ಸಿ.ಪಿ.ಯೋಗೀಶ್ವರ್. 1999ರಲ್ಲಿ ಪಕ್ಷೇತರರಾಗಿ ಗೆದ್ದಿದ್ದ ಯೋಗೀಶ್ವರ್, ನಂತರ ಕಾಂಗ್ರೆಸ್`ನಿಂದ ಎರಡು ಬಾರಿ ಹಾಗೂ ಸಮಾಜವಾದಿ ಪಕ್ಷದಿಂದ ಒಂದು ಬಾರಿ ಗೆದ್ದಿದ್ದರು. ಅದೂ ಸತತವಾಗಿ. 

ರಮ್ಯಾ ಹೆಸರು ಕೇಳಿ ಬರುತ್ತಿರುವುದು ಏಕೆ?
ಚನ್ನಪಟ್ಟಣ ಕ್ಷೇತ್ರದಲ್ಲಿ ಸಿ.ಪಿ.ಯೋಗೀಶ್ವರ್ ಪ್ರಬಲರಾದಾಗಿನಿಂದಲೂ ಕಾಂಗ್ರೆಸ್ಸಿಗೆ ಖಾಯಂ ಅಭ್ಯರ್ಥಿ ಸಿಕ್ಕಿಲ್ಲ. ಅತ್ತ ಕುಮಾರಸ್ವಾಮಿ, ಇತ್ತ ಡಿಕೆ ಬ್ರದರ್ಸ್ ನಡುವೆ ಗೆದ್ದಿದ್ದ ಸಿ.ಪಿ.ಯೋಗೀಶ್ವರ್ ಸುಲಭದ ಎದುರಾಳಿಯಂತೂ ಖಂಡಿತಾ ಅಲ್ಲ. ಕ್ಷೇತ್ರದಲ್ಲಿ ಟಿಕೆಟ್`ಗಾಗಿ ಪ್ರಬಲ ಆಕಾಂಕ್ಷಿಯಾಗಿರುವುದು ಶರತ್ ಚಂದ್ರ. ಈ ಶರತ್ ಚಂದ್ರ ಡಿಕೆ ಬ್ರದರ್ಸ್‍ಗೆ ಬಾವನಾಗಬೇಕು. ಇದರಿಂದಾಗಿಯೇ ಸ್ಥಳೀಯ ಕಾಂಗ್ರೆಸ್ ಬಿರುಕು ಬಿಟ್ಟಿತ್ತು. ಕಳೆದ ಬಾರಿಯೂ ಆಕಾಂಕ್ಷಿಯಾಗಿದ್ದ ಶರತ್ ಚಂದ್ರ, ಕೊನೆಯ ಕ್ಷಣದಲ್ಲಿ ಹೆಚ್.ಎಂ.ರೇವಣ್ಣ ಅವರಿಗೆ ಟಿಕೆಟ್ ಕೊಟ್ಟಾಗ ಸುಮ್ಮನಾಗಿದ್ದರು. ಮುಂದಿನ ಬಾರಿ ತನಗೇ ಟಿಕೆಟ್ ಕೊಡಬೇಕು ಎಂಬ ಷರತ್ತನ್ನೂ ವಿಧಿಸಿದ್ದರಂತೆ. ಆದರೆ ಶರತ್ ಚಂದ್ರ ಬದಲು ಉದ್ಯಮಿ ಪ್ರಸನ್ನ ಅವರಿಗೇ ಟಿಕೆಟ್ ನೀಡುವ ಡಿಕೆ ಶಿವಕುಮಾರ್ ಒಲವು ಹೊಂದಿದ್ದಾರಂತೆ. ಕ್ಷೇತ್ರದಿಂದ ಟಿಕೆಟ್‍ಗಾಗಿ ಅರ್ಜಿ ಸಲ್ಲಿಸಿದವರ ಸಂಖ್ಯೆ ಒಟ್ಟಾರೆ 8. ಯಾರಿಗೆ ಟಿಕೆಟ್ ಕೊಟ್ಟರೂ ಉಳಿದವರು ಸಿಟ್ಟಿಗೇಳುವುದು ಪಕ್ಕಾ. ಏನು ಮಾಡುವುದು ಎಂಬ ಗೊಂದಲ ಕಾಂಗ್ರೆಸ್ಸಿನಲ್ಲಿದೆ.
ರಮ್ಯಾ ಹೆಸರು ಚಾಲ್ತಿಗೆ ಬಂದಿದ್ದೇಕೆ?
ಚನ್ನಪಟ್ಟಣದಲ್ಲಿ ಡಿಕೆ ಸೋದರರಿಗೆ ಬಾವನಾಗಿರುವ ಶರತ್ ಚಂದ್ರ ಅವರನ್ನು ಕಣಕ್ಕಿಳಿಸಿದರೆ, ಕಾಂಗ್ರೆಸ್ ಕಾರ್ಯಕರ್ತರೇ ಒಪ್ಪಿಕೊಳ್ಳಲ್ಲ. ಇನ್ನು ಉದ್ಯಮಿ ಪ್ರಸನ್ನ, ಪಕ್ಷದೊಳಗಿನ ಭಿನ್ನಮತದಿಂದಾಗಿಯೇ ಸೈಲೆಂಟ್ ಆಗಿದ್ದವರು. ಸೈಲೆಂಟ್ ಲೀಡರ್ ಚನ್ನಪಟ್ಟಣದಂತಹ ಕ್ಷೇತ್ರಕ್ಕೆ ವರ್ಕೌಟ್ ಆಗಲ್ಲ ಎನ್ನುವ ಅಭಿಪ್ರಾಯ ಕೆಲವು ಕಾಂಗ್ರೆಸ್ ಕಾರ್ಯಕರ್ತರದ್ದು. ಪುರುಷ ಮತದಾರರಲ್ಲಿ ಕುಮಾರಸ್ವಾಮಿ ಮತ್ತು ಯೋಗೀಶ್ವರ್ ಪರ/ವಿರೋಧ ಅಭಿಪ್ರಾಯಗಳಿಗೆ. ಹೀಗಿರುವಾಗ ರಮ್ಯಾ ಅವರನ್ನು ಕಣಕ್ಕಿಳಿಸಿದರೆ ಮಹಿಳಾ ಮತದಾರರನ್ನು ಸಾಲಿಡ್ ಆಗಿ ಸೆಳೆಯಬಹುದು ಎಂಬ ಚಿಂತನೆ ಪಕ್ಷದ ವಲಯದಲ್ಲಿದೆ. ಆದರೆ ರಮ್ಯಾ ಟಿಕೆಟ್ ಕೊಡಿ ಎಂದು ಅರ್ಜಿ ಸಲ್ಲಿಸಿದವರಲ್ಲ.
ರಮ್ಯಾ ನಿಲ್ತಾರಾ?
ರಮ್ಯಾ ಎಂ.ಎಲ್.ಎ. ಚುನಾವಣೆಗೆ ನಿಲ್ಲುತ್ತಾರೋ.. ಗೆಲ್ಲುತ್ತಾರೋ.. ಬೇರೆ ಮಾತು. ಈ ಹಿಂದೆ ಮಂಡ್ಯ ಲೋಕಸಭೆ ಉಪಚುನಾವಣೆಯಲ್ಲಿ ಕುಮಾರಸ್ವಾಮಿ ವಿರುದ್ಧ ಸ್ಪರ್ಧಿಸಿ ಗೆದ್ದಿದ್ದವರೇ. ನಂತರದ ಚುನಾವಣೆಯಲ್ಲಿ ಸೋತ ಬಳಿಕ, ನ್ಯಾಷನಲ್ ಕಾಂಗ್ರೆಸ್`ನಲ್ಲಿ ಆಕ್ಟಿವ್ ಆಗಿದ್ದರು. ಮಂಡ್ಯವನ್ನು ಮರೆತುಬಿಟ್ಟರು. 

ಸ್ವಾತಿ ಮುತ್ತಿನ ಮಳೆ ಹನಿಯೇ..
ಚಿತ್ರಕ್ಕೆ ಹೀರೋಯಿನ್ ಆಗುವ ಬದಲು, ನಿರ್ಮಾಪಕಿಯಾಗಿಯಷ್ಟೇ ಉಳಿದುಕೊಂಡರು ಎಂಬ ಹೊಸ ವರಸೆಯೂ ಚಾಲ್ತಿಗೆ ಬಂದಿದೆ ಎನ್ನುವುದು ಸುಳ್ಳಲ್ಲ.



