ಕಾವೇರಿ (kaveir protest) ಪರ ನಿಂತ ಶಿವಣ್ಣ (Shiva Rajkumar) ನೀಡಿದ ಹೇಳಿಕೆ ವಿವಾದವಾಗುತ್ತಿದೆ. ಶಿವಣ್ಣ ಒಳಗೊಂದು ಹೊರಗೊಂದು ಹೇಳುವವರಲ್ಲ. ಡೈರೆಕ್ಟ್ ಅಂದ್ರೆ ಡೈರೆಕ್ಟ್. ಹೇಳೋದನ್ನ ಒಳ್ಳೆ ಮಾತಿನಲ್ಲಿ ಹೇಳ್ತಾರಷ್ಟೆ. ಕೆಟ್ಟ ಪದಗಳನ್ನ ಬಳಸಲ್ಲ. ಇಷ್ಟಕ್ಕೂ ಇದೆಲ್ಲ ಹೇಳೋಕೆ ಕಾರಣವಾಗಿದ್ದು ಶಿವಣ್ಣ ಹೇಳಿದ ಮಾತು. ಆ ಮಾತಿನ ಪರ ವಿರೋಧ ಚರ್ಚೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಶಿವಣ್ಣ ಸರೀನಾ.. ಅಲ್ವಾ.. ಶಿವಣ್ಣ (Shivanna) ತಪ್ಪು ಹೇಳಿದ್ರಾ ಇಲ್ವಾ.. ಅನ್ನೋದು ದೊಡ್ಡ ಚರ್ಚೆ.
ಕಾವೇರಿ ಪರವಾಗಿ ಕರ್ನಾಟಕದಲ್ಲಿ ಹೋರಾಟ ನಡೆಯುತ್ತಿದೆ. ನಟ ಶಿವರಾಜ್ಕುಮಾರ್ ಅವರು ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ್ದು ಕಾವೇರಿ ಸಮಸ್ಯೆ ಮೊದಲಿನಿಂದಲೂ ಇದೆ. ಆಗಿನಿಂದಲೂ ನಾವು ಹೋರಾಟದಲ್ಲಿ ಭಾಗಿಯಾಗುತ್ತಿದ್ದೇವೆ, ಇದೆಲ್ಲ ನೋಡಿದ್ರೆ ಕಾವೇರಿಗೆ ಎಷ್ಟು ನೋವಾಗ್ತಿರಬಹುದು ಅಲ್ವೇ? ಇಲ್ಲಿಯೂ ಇರಬೇಕು, ಅಲ್ಲಿಯೂ ಹೋಗಬೇಕು. ನೀರಿಲ್ಲ ಅಂದ್ರೆ ಅಳಬೇಕು. ಆದರೆ ತಾಯಿ ಪವರ್ ಅಂಥಹದ್ದು, ಎಲ್ಲ ನೋವನ್ನು ಅವಳು ತಗೊಳ್ತಾಳೆ. ಸಮಸ್ಯೆ ಅಂತ ಬಂದಾಗ ಕಲಾವಿದರು ಬರಲ್ಲ ಅಂತ ಹೇಳ್ತೀರಿ. ಸಿನಿಮಾದವ್ರು ಬಂದು 5 ನಿಮಿಷ ಮಾತಾಡಿದ್ರೆ ಸಮಸ್ಯೆ ಬಗೆಹರಿಯುತ್ತಾ? ನಾವು ಮನುಷ್ಯರು. ನಮಗೆ ಸ್ಟಾರ್ಡಂ ಕೊಟ್ಟಿರೋದು ನೀವು, ಬೇಕಿದ್ರೆ ಅದನ್ನು ಕಿತ್ತುಕೊಳ್ಳಿ. ನನ್ನ ಪ್ರಶ್ನೆಗೆ ನೀವು ಉತ್ತರ ಕೊಡಿ ಎಂದಿದ್ದಾರೆ.
ಇದೇ ವೇಳೆ ಶಿವಣ್ಣ ತಮಿಳು ನಟ ಸಿದ್ಧಾರ್ಥ (tamil actor siddartha ) ಅವರ ಕ್ಷಮೆ ಕೇಳಿದ್ದಾರೆ. ಬೇರೆ ಭಾಷೆಯ ನಟರು ಸುದ್ದಿಗೋಷ್ಠಿಯನ್ನು (press meet) ಯಾರು ನಿಲ್ಲಿಸಿದ್ದಾರೆ ಅಂತ ಗೊತ್ತಿಲ್ಲ, ಆದರೆ ಆ ರೀತಿ ಮಾಡಿರೋದು ತಪ್ಪು. ಸಮಸ್ಯೆಯನ್ನು ನಾವು ಎದುರಿಸಬೇಕು, ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ನಾವು ಈ ರೀತಿ ಕೂತ್ಕೊಂಡು ಮಾತನಾಡಿದ್ರೆ ಏನಾಗತ್ತೆ? ಈ ರೀತಿ ಸಮಸ್ಯೆಯಿಂದ ಪ್ರಯೋಜನ ಪಡೆದುಕೊಳ್ಳಬಾರದು. ದಯವಿಟ್ಟು ಸಿದ್ದಾರ್ಥ್ ಅವರಿಗೆ ನಮ್ಮಿಂದ ಬೇಸರ ಆಗಿದೆ, ಕನ್ನಡ ಚಿತ್ರರಂಗದ ಪರವಾಗಿ ಅವರಿಗೆ ನಾವು ಕ್ಷಮೆ ಕೇಳುತ್ತೇವೆ. ನಿಜಕ್ಕೂ ಈ ಘಟನೆಯಿಂದ ನಮಗೆ ನೋವಾಗಿದೆ ಎಂದು ಹೇಳಿದ್ದಾರೆ.
ಶಿವಣ್ಣ ಹೇಳಿಕೆ ವಿವಾದವಾಗಿದ್ದೇಕೆ?
ಕಾವೇರಿ ಹೋರಾಟ ನಡೆಯುತ್ತಿರುವಾಗ ತಮಿಳುನಾಡು (tamilnadu) ಹಾಗೂ ಕರ್ನಾಟಕ (karnataka) ರೈತರ ನಡುವೆ ತಿಕ್ಕಾಟ ನಡೆಯುತ್ತಿರುವ ನಟ ಸಿದ್ಧಾರ್ಥ (siddartha) ಸಿನಿಮಾ ರಿಲೀಸ್ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇಷ್ಟಕ್ಕೂ ವಿರೋಧ ಯಾಕೆ? ಯಾರ ವಿರುದ್ಧ ಅನ್ನೋದು ಶಿವಣ್ಣ ಪ್ರಶ್ನೆ.
ಸಿದ್ದಾರ್ಥ ಕೂಡಾ ನಮ್ಮಂತೆಯೇ ಒಬ್ಬ ಕಲಾವಿದ. ಅವರ ವಿರುದ್ಧ ಕೂಗಾಡುವುದರಿಂದ ಸಮಸ್ಯೆ ಬಗೆಹರಿಯತ್ತಾ ಅನ್ನೋದು ಶಿವಣ್ಣ ವಾದ. ಅದು ನಿಜವೂ ಹೌದು.
ಯಾಕಂದ್ರೆ, ನಾವು ನಮ್ಮ ರಾಜ್ಯದಲ್ಲಿ ಬಂದ್ ನಡೆಸಿ, ಪ್ರತಿಭಟನೆ ಮಾಡೋದ್ರಿಂದ ಸಮಸ್ಯೆ ಪರಿಹಾರ ಆಗಲ್ಲ. ನೀರು ಕೊಡಬೇಕಾದ ಸರ್ಕಾರ ಕೊಡುತ್ತಲೇ ಇದೆ. ಯಾಕಂದ್ರೆ ನಮ್ಮ ಬಳಿ ಸಮಸ್ಯೆಗೆ ಸೂಕ್ತ ಪರಿಹಾರ ಇಲ್ಲ. ಒಗ್ಗಟ್ಟೂ ಇಲ್ಲ. ಅದನ್ನು ಮಾಡಬೇಕಿರೋದು ರಾಜಕೀಯ ನಾಯಕರು ಮತ್ತು ಸರ್ಕಾರ. ತಮಿಳುನಾಡು ಹಾಗೂ ಕರ್ನಾಟಕದ ಸರ್ಕಾರಗಳು, ಮುಖ್ಯಮಂತ್ರಿಗಳು ಕೂತು ಸಮಸ್ಯೆಯನ್ನು ಅರಿತುಕೊಂಡು ಮಾತನಾಡಿ ಬಗೆಹರಿಸಬೇಕು ಎನ್ನುವುದಷ್ಟೆ. ಆದರೆ ಹಾರಾಡಿ ಕೂಗಾಡುವವರ ಎದುರು ಈ ಸಮಸ್ಯೆ ಮತ್ತು ಪರಿಹಾರ ಅರ್ಥವಾಗುತ್ತದೆಯೇ..
ತಮಿಳುನಾಡು ರಾಜ್ಯ ನಮ್ಮ ಪಕ್ಕದಲ್ಲಿಯೇ ಇದೆ. ಹಾಗಾಗಿ ಎರಡು ರಾಜ್ಯಗಳ ಸರ್ಕಾರ ಕೂತುಕೊಂಡು ಪರಿಹಾರ ಕಂಡುಕೊಳ್ಳಬೇಕು. ಒಂದು ವೇಳೆ ಒಂದು ವಾರ ಸರಿಯಾಗಿ ಮಳೆ ಬಂದರೆ ಎಲ್ಲ ಸಮಸ್ಯೆಯೂ ಪರಿಹಾರ ಆಗತ್ತೆ ಎಂದಿರುವ ಶಿವಣ್ಣ, ಮಾತುಕತೆಯೇ ಸರಿಯಾದ ಮಾರ್ಗ ಎಂದಿದ್ದಾರೆ.
ಇಷ್ಟಕ್ಕೂ ಸರ್ಕಾರ ಆಗಲೇ ರಾಜಕೀಯವನ್ನು ತಾರಕಕ್ಕೆ ಒಯ್ಯುತ್ತಿದೆ. ಮೊದಲಿಗೆ ರಾಜ್ಯ ಸರ್ಕಾರ ಮಾತುಕತೆಗೆ ಮೊದಲ ಹೆಜ್ಜೆ ಇಡಬೇಕು. ಸ್ಟಾಲಿನ್ ಕಡೆಯಿಂದ ಯಾವ ರೀತಿಯ ಪ್ರತಿಕ್ರಿಯೆ ಬರುತ್ತದೋ.. ಅದನ್ನು ನೋಡಿಕೊಂಡು ಅಗತ್ಯ ಬಿದ್ದರೆ ಕೇಂದ್ರದ ಬಳಿ ಮನವಿ ಮಾಡಬೇಕು. ಒಪ್ಪಿಸಬೇಕು. ಆದರೆ ಮಿತ್ರ ಸ್ಟಾಲಿನ್ ವಿರುದ್ಧ ಒಂದಕ್ಷರವನ್ನು ಮಾತನಾಡದ ಸರ್ಕಾರ ಮೋದಿ ವಿರುದ್ಧ ಮಾತನಾಡುತ್ತಿದೆ.
ಆದರೆ ಶಿವಣ್ಣ ವಿರುದ್ಧ ನಿಂತಿರೋವ್ರ ವಾದ ಏನಂದ್ರೆ, ಇಂತಹ ಸಮಯದಲ್ಲಿ ಈ ರೀತಿಯ ಹೇಳಿಕೆ ಬೇಕಿತ್ತಾ ಅನ್ನೋದಷ್ಟೆ. ಅದನ್ನು ಮೀರಿದಂತೆ ಶಿವಣ್ಣ ಹೇಳಿಕೆ ವಿರೋಧಿಸ್ತಿರೋವ್ರಲ್ಲಿ ಯಾವ ತರ್ಕವೂ ಇಲ್ಲ. ಕೇವಲ ಭಾವನೆ ಇದೆ. ಈ ಟೈಮಲ್ಲಿ ಇಂತಹ ಹೇಳಿಕೆ ಕೊಟ್ಟಿದ್ಯಾಕೆ ಅನ್ನೋದಷ್ಟೆ.



