ಹಿಂದುತ್ವ ಎಂದರೆ ಅಶ್ಲೀಲ ಎಂಬ ಅರ್ಥವಿದೆ ಎಂದು ವಿವಾದ ಸೃಷ್ಟಿಸಿದ್ದ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಈ ಬಾರಿ ಸ್ಮಶಾನದಲ್ಲಿ ಪೂಜೆ ಮಾಡುವ ಮೂಲಕ ಚುನಾವಣಾ ಪ್ರಚಾರಕ್ಕೆ ಚಾಲನೆ ಕೊಡುವುದಾಗಿ ಹೇಳಿದ್ದಾರೆ. ಪ್ರಚಾರಕ್ಕೆ ವಿಶೇಷ ವಾಹನವನ್ನು ತಯಾರಿಸಲಾಗಿದ್ದು, ನಾಲ್ಕು ಐದು ದಿನ ಸ್ಮಶಾನದಲ್ಲಿ ವಾಹನ ಪೂಜೆ ಸಲ್ಲಿಸಿ ಚುನಾವಣಾ ಕಣಕ್ಕೆ ಇಳಿಯಲಾಗುವುದು ಮತ್ತು ರಾಹು ಕಾಲದಲ್ಲಿ ನಾಮಪತ್ರ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.
ನನ್ನದು ಮೌಢ್ಯತೆಯ ವಿರುದ್ಧದ ಹೋರಾಟ ಎನ್ನುವುದು ಸತೀಶ್ ಜಾರಕಿಹೊಳಿಯ ವಾದ. ವಿಪರ್ಯಾಸವೆಂದರೆ ಇದೂ ಒಂದು ಮೌಢ್ಯವೇ. ಸ್ಮಶಾನ ಪೂಜೆಗೆ ಬೇರೆಯದೇ ಅರ್ಥವಿದೆ. ಮೌಢ್ಯತೆಯನ್ನು ವಿರೋಧಿಸಬೇಕಿರುವುದು ಮನವೊಲಿಕೆಯಿಂದಲೇ ಹೊರತು, ಇಂತಹ ಹುಚ್ಚಾಟಗಳಿಂದ ಅಲ್ಲ. ಇರಲಿ ಬಿಡಿ, ಸತೀಶ್ ಜಾರಕಿಹೊಳಿ ವಿರುದ್ಧ ಸದ್ಯಕ್ಕೆ ಪ್ರಬಲ ಅಭ್ಯರ್ಥಿಗಳ್ಯಾರೂ ಕಂಡು ಬರುತ್ತಿಲ್ಲ. ಏಕೆಂದರೆ ಬೆಳಗಾವಿ ರಾಜಕಾರಣ.
ಬೆಳಗಾವಿಯಲ್ಲಿ ಎಲ್ಲರೂ ಎಲ್ಲ ಪಕ್ಷದವರೂ ಒಂದೇ. ಅವರ ಗೆಲುವಿಗಾಗಿ ಇವರ ಗೆಲುವಿಗಾಗಿ ಅವರು ಶ್ರಮಿಸುತ್ತಾರೆ. ಹೀಗಾಗಿಯೇ ಸತೀಶ್ ಜಾರಕಿಹೊಳಿ ವಿಚಾರವಂತಿಕೆ ಹೆಸರಲ್ಲಿ ಈ ರೀತಿಯ ಹೋರಾಟ ನಡೆಸುತ್ತಾರೆ. ಮೌಢ್ಯತೆ ಎಂದು ಅದನ್ನು ವಿರೋಧಿಸುವವರು ಜನರಿಗೆ ಹೇಳುವ ಬದಲು, ತಮ್ಮದೇ ಪಕ್ಷದ ನಾಯಕರಿಗೆ ಹೇಳಿ ಎಲ್ಲರಿಂದಲೂ ಏಕೆ ರಾಹುಕಾಲದಲ್ಲೇ ನಾಮಪತ್ರ ಸಲ್ಲಿಸುವ ಹಾಗೂ ಸ್ಮಶಾನದಿಂದಲೇ ಪೂಜೆ ಮಾಡಿ ಪ್ರಚಾರ ಆರಂಭಿಸುವ ಕೆಲಸವನ್ನೇಕೆ ಮಾಡಿಸಬರಾದು ಎನ್ನುವುದು ವಿರೋಧಿಗಳ ಪ್ರಶ್ನೆ. ಅದಕ್ಕೆ ಉತ್ತರ ಸ್ಮಶಾನದಲ್ಲಿಯೇ ಸಿಗಲಿದೆಯೇನೋ..



