ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೈವೇ ಉದ್ಘಾಟನೆಗೂ ಮುನ್ನವೇ ಟೋಲ್ ದರ ಜಾರಿಯಾಗಿದೆ. ಫೆ.28ರ ಮಂಗಳವಾರದಿಂದಲೇ ಹೊಸ ಟೋಲ್ ನಿಯಮ ಜಾರಿಗೆ ಬರಲಿದೆ. ಇತ್ತ ಹೆದ್ದಾರಿಯ ಕಾಮಗಾರಿ ಪೂರ್ಣಗೊಂಡಿಲ್ಲ. ಉದ್ಘಾಟನೆಯೂ ಆಗಿಲ್ಲ. ಆದರೂ ಟೋಲ್ ವಸೂಲಿ ಮಾಡಲು ನಿರ್ಧರಿಸಲಾಗಿದೆ. ಈ ಮೂಲಕ ಇಷ್ಟು ದಿನ ಉಚಿತ ಪ್ರಯಾಣಕ್ಕೆ ಕಡಿವಾಣ ಬೀಳಲಿದೆ. ಮಾರ್ಗದಲ್ಲಿ ಬರುವ ಮೊದಲ ಟೋಲ್ ಬೆಂಗಳೂರು – ನಿಡಘಟ್ಟ ನಡುವಿನ ಶೇಷಗಿರಿಹಳ್ಳಿಯ ಟೋಲ್ ಇದಾಗಿದೆ. ಮತ್ತೊಂದು ಟೋಲ್ ಮಂಡ್ಯ ಬಳಿ ಇದ್ದು, ಅದರ ಕಾರ್ಯಾಚರಣೆ ಸದಸ್ಯಕ್ಕೆ ಆರಂಭಿಸಿಲ್ಲ.
ಇದು ಅನಧಿಕೃತ ಸುದ್ದಿಯೇನಾಗಿರಲಿಲ್ಲ. ಎಲ್ಲವೂ ಕರೆಕ್ಟ್ ಆಗಿ ನಡೆದಿದ್ದರೆ ಇಷ್ಟು ಹೊತ್ತಿಗೆ ಈ ನಿಯಮ ಜಾರಿಗೂ ಬಂದುಬಿಡುತ್ತಿತ್ತು. ಆದರೆ ಈಗ ಸಂಸದ ಪ್ರತಾಪ್ ಸಿಂಹ ಟೋಲ್ ಸಂಗ್ರಹಕ್ಕೆ ಬ್ರೇಕ್ ಹಾಕಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೂಡಾ ಸದ್ಯಕ್ಕೆ ಟೋಲ್ ಸಂಗ್ರಹ ಇಲ್ಲ ಎಂದು ಹೇಳಿದೆ. ಮಾರ್ಚ್ 14ರವರೆಗಂತೂ ಟೋಲ್ ಕಟ್ಟಿಸಿಕೊಳ್ಳಲ್ಲ. ಆಮೇಲೆ.. ಆಮೇಲೆ ಶಾಕ್ ಕಾದಿದೆ.
ಟೋಲ್ ದರ ಎಷ್ಟಿದೆ?
ಕಾರು, ಜೀಪು, ವ್ಯಾನು
ಏಕಮುಖ ಸಂಚಾರಕ್ಕೆ 135 ರೂ. ಅದೇ ದಿನ ಮರು ಸಂಚಾರಕ್ಕೆ 205 ರೂ. ಸ್ಥಳೀಯ ವಾಹನಗಳಿಗೆ 70 ರೂ. ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್‌ಗೆ 4,525 ರೂ.


ಏಕಮುಖ ಸಂಚಾರಕ್ಕೆ 220ರೂ. ಅದೇ ದಿನ ಮರು ಸಂಚಾರಕ್ಕೆ 320 ರೂ. ಸ್ಥಳೀಯ ವಾಹನಗಳಿಗೆ 110 ರೂ., ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್‌ಗೆ 7315 ರೂ.
ಬಸ್ ಅಥವಾ ಟ್ರಕ್(ಎರಡು ಆಕ್ಸೆಲ್)
ಒನ್ ಸೈಡ್ಗೆ 460ರೂ. ಅದೇ ದಿನ ಮರು ಸಂಚಾರಕ್ಕೆ 690 ರೂ. ಸ್ಥಳೀಯ ವಾಹನಗಳಿಗೆ 230ರೂ., ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್‌ಗೆ 15,325 ರೂ.
ವಾಣಿಜ್ಯ ವಾಹನಗಳು (ಮೂರು ಆಕ್ಸೆಲ್)
ಏಕಮುಖ ಸಂಚಾರಕ್ಕೆ 500 ರೂ. ಅದೇ ದಿನ ಮರು ಸಂಚಾರಕ್ಕೆ 750 ರೂ. ಸ್ಥಳೀಯ ವಾಹನಗಳಿಗೆ 250ರೂ. ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್‌ಗೆ 16,715 ರೂ.
ಭಾರಿ ನಿರ್ಮಾಣ ಯಂತ್ರ, ಬಹು ಆಕ್ಸೆಲ್ ವಾಹನ (6ರಿಂದ 8 ಆಕ್ಸೆಲ್)
ಏಕಮುಖ ಸಂಚಾರಕ್ಕೆ 720ರೂ. ಅದೇ ದಿನ ಮರು ಸಂಚಾರಕ್ಕೆ 1080 ರೂ. ಸ್ಥಳೀಯ ವಾಹನಗಳಿಗೆ 360ರೂ, ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್‌ಗೆ 24,030 ರೂ.
ಅತೀ ಗಾತ್ರದ ವಾಹನಗಳು (7ರಿಂದ ಹೆಚ್ಚಿನ ಆಕ್ಸೆಲ್)
ಏಕಮುಖ ಸಂಚಾರಕ್ಕೆ 880ರೂ. ಅದೇ ದಿನ ಮರು ಸಂಚಾರಕ್ಕೆ 1315ರೂ. ಸ್ಥಳೀಯ ವಾಹನಗಳಿಗೆ 440 ರೂ., ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್‌ಗೆ 29,255 ರೂ.
ಈ ಟೋಲ್‌ನಲ್ಲಿ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯ ಮೊದಲ ಹಂತದ 55.63 ಕಿ.ಮೀ ರಸ್ತೆಗೆ ಶುಲ್ಕ ಪಡೆಯಲಾಗುತ್ತದೆ ಎಂದು ಕೇಂದ್ರ ಹೆದ್ದಾರಿ ಪ್ರಾಧಿಕಾರದಿಂದ ಪ್ರಕಟಣೆ ನೀಡಿದೆ. ವಿವಿಧ ಮಾದರಿಯ ವಾಹನಗಳಿಗೆ ಪ್ರತ್ಯೇಕ ದರವನ್ನು ನಿಗದಿ ಪಡಿಸಲಾಗಿದೆ. ಸೇವಾ (ಸರ್ವೀಸ್) ರಸ್ತೆ ಹೊರತು ಪಡಿಸಿ, ಉಳಿದ ಆರುಪಥಗಳಿಗೆ ಶುಲ್ಕ ಅನ್ವಯವಾಗಲಿದೆ.
ದುಬಾರಿ ದರ:
ಸರಕಾರ ನಿಗದಿ ಪಡಿಸಿರುವ ಟೋಲ್ ದರಕ್ಕೆ ಜನಸಾಮಾನ್ಯರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ದಶಪಥ ರಸ್ತೆ ಸಂಚಾರ ದುಬಾರಿಯಾಗಿರುವು ಕುರಿತು ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದು ಟೋಲ್ ದರದ ಕಡಿಮೆ ಮಾಡಬೇಕೆಂಬ ಆಗ್ರಹವೂ ಕೇಳಿ ಬರುತ್ತಿದೆ.
ಮಾರ್ಚ್ 11ಕ್ಕೆ ಉದ್ಘಾಟನೆ
ಪ್ರಧಾನಿ ನರೇಂದ್ರ ಮೋದಿ ಅವರು ಮಾ.11ರಂದು ನೂತನ ಹೆದ್ದಾರಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಹಾಗಾಗಿ ಈ ವೇಳೆಗೆ ಎರಡನೇ ಹಂತ ಮುಕ್ತಾಯವಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ಸರ್ವಿಸ್ ರಸ್ತೆ ಸಂಪೂರ್ಣ ಸಿದ್ಧವಾಗುವವರೆಗೆ ಟೋಲ್ ಸಂಗ್ರಹ ಇಲ್ಲ. ಹಾಗಾದರೆ ಈ ಮೇಲೆ ಹೇಳಿದ ಟೋಲ್ ಫೈನಲ್ ಆಗಿದೆಯಾ..? ಆಗಿದ್ದುದು ನಿಜ. ಒನ್ಸ್ ಎಗೇನ್ ಸಂಸದ ಪ್ರತಾಪ್ ಸಿಂಹ ಶ್ರಮವಹಿಸಿ ಅದಕ್ಕೂ ಬ್ರೇಕ್ ಹಾಕಿದ್ದಾರೆ. ಹಳೆಯ ದಾಖಲೆಯನ್ನು ತೆಗೆದು ಹಾಕಿದ್ದಾರೆ. ಹೊಸ ದರಗಳ ಜೊತೆ ವಿವರ ನೀಡುವುದಾಗಿ ಹೇಳಿದ್ದಾರೆ. ಆ ಹೊಸ ದರಗಳು ಯಾವಾಗ ಜಾರಿಯಾಗುತ್ತವೆ.. ಗೊತ್ತಿಲ್ಲ. ಮಾರ್ಚ್ 14ರವರೆಗಂತೂ ಟೋಲ್ ಕಟ್ಟುವಂತಿಲ್ಲ. ಆಮೇಲೆ ಶಾಕ್ ಕಾದಿದೆ.



