ರಾಜಕೀಯಕ್ಕೆ ಊರುಗಳಲ್ಲಿ ಹೊಡೆದಾಟ ಸಾಮಾನ್ಯ. ಅಣ್ಣ-ತಮ್ಮಂದಿರನ್ನೇ ಶತ್ರುಗಳನ್ನಾಗಿ ಮಾಡಿಬಿಡುತ್ತೆ. ದೊಡ್ಡ ಮಟ್ಟದಲ್ಲಿ ಅಂತಹ ಉದಾಹರಣೆಗಳು ಕಡಿಮೆ ಎನ್ನಬಹುದಾದರೂ, ನಡೆಯುತ್ತಲೇ ಇರುತ್ತವೆ. ಕರ್ನಾಟಕದಲ್ಲಿ ಆ ಮಟ್ಟಿಗೆ ದೊಡ್ಡ ಮಟ್ಟದಲ್ಲಿ ಒಡೆದಿರುವ ರಾಜಕೀಯ ಕುಟುಂಬವೆಂದರೆ ಅದು ಬಂಗಾರಪ್ಪನವರ ಕುಟುಂಬ. ಬಂಗಾರಪ್ಪನವರ ಮಕ್ಕಳಾದ ಮಧು ಮತ್ತು ಗೀತಾ ಶಿವರಾಜ್ ಕುಮಾರ್ ಒಂದು ಕಡೆಯಾದರೆ, ಕುಮಾರ್ ಬಂಗಾರಪ್ಪನವರದ್ದೇ ಇನ್ನೊಂದು ದಿಕ್ಕು.
ಬೇರೆ ಬೇರೆ ಪಕ್ಷಗಳಲ್ಲಿದ್ದರೂ ಸಂಬಂಧ, ಬಾಂಧವ್ಯ ಉಳಿಸಿಕೊಂಡಿರುವುದು ಜಾರಕಿಹೊಳಿ ಕುಟುಂಬ. ರಾಜಕೀಯವೆನೇ ಇರಲಿ, ಜಾರಕಿಹೊಳಿ ಕುಟುಂಬದ ರಮೇಶ್, ಸತೀಶ್, ಬಾಲಚಂದ್ರ, ಲಖನ್ ಜಾರಕಿಹೊಳಿ, ಕುಟುಂಬದ ಮಟ್ಟಿಗೆ ಒಂದೇ. ಒಬ್ಬರನ್ನು ಮತ್ತೊಬ್ಬರು ಬಿಟ್ಟು ಕೊಡಲ್ಲ.
ಇನ್ನು ದೇವೇಗೌಡರ ಕುಟುಂಬದಲ್ಲಿ ಇತ್ತೀಚೆಗೆ ಬಿರುಕು ಮೂಡಿತೇನೋ ಎಂಬ ಭಾವನೆ ಬಂತಾದರೂ, ಆಗಲಿಲ್ಲ. ಯಡಿಯೂರಪ್ಪ ಕುಟುಂಬದವರಂತೂ ಅಣ್ಣ-ತಮ್ಮ ಅನ್ಯೋನ್ಯವಾಗಿದ್ದು, ತಮ್ಮ ವಿಜಯೇಂದ್ರ ಗೆಲುವಿನ ಹೊಣೆಯನ್ನು ಅಣ್ಣ ರಾಘವೇಂದ್ರ ಹೊತ್ತುಕೊಳ್ತಾರೆ. ಹೀಗೆಯೇ ಇದ್ದದ್ದು ರೆಡ್ಡಿ ಫ್ಯಾಮಿಲಿ.


ಜನಾರ್ದನ ರೆಡ್ಡಿ ಮತ್ತವರ ಕೆಆರ್`ಪಿಪಿ ಪಕ್ಷವೇ ನನ್ನ ಸೋಲಿಗೆ ಕಾರಣ. ನನ್ನ ಸೋಲಿಸಲೆಂದೇ ಅವರು ಸ್ಪರ್ಧೆ ಮಾಡಿದರು. ಜನಾರ್ದನ ರೆಡ್ಡಿ ತನ್ನ ಬುದ್ಧಿಯನ್ನು ತೋರಿಸಿಬಿಟ್ಟ. ಜನಾರ್ದನ ರೆಡ್ಡಿ ಮತ್ತವರ ಕೆಆರ್ಪಿಪಿ ಪಕ್ಷವೇ ನನ್ನ ಸೋಲಿಗೆ ಕಾರಣ. ನನ್ನ ಸೋಲಿಸಲೆಂದೇ ಅವರು ಸ್ಪರ್ಧೆ ಮಾಡಿದರು. ಜನಾರ್ದನ ರೆಡ್ಡಿ ತನ್ನ ಬುದ್ಧಿಯನ್ನು ತೋರಿಸಿಬಿಟ್ಟ ಎಂದಿದ್ದಾರೆ.
ನಾನು ಬೆಳಸಿದ ಹೇಡಿಗಳು ಈಗ ಮನೆಯಲ್ಲಿದ್ದಾರೆ, ನಾನು ಸದನಕ್ಕೆ ಬಂದಿದ್ದೇನಿ” ಎಂದು ಜನಾರ್ದನರೆಡ್ಡಿ ಹೇಳಿಕೆ ನೀಡುವ ಮೂಲಕ ನಮ್ಮನ್ನು ಕೆಣಕುತ್ತಿದ್ದಾರೆ. ನನಗೆ, ಶ್ರೀರಾಮುಲು. ಸೋಮಲಿಂಗಪ್ಪ. ಸುರೇಶಬಾಬು ಹಾಗೂ ಕರುಣಾಕರರೆಡ್ಡಿಗೆ ರಣಹೇಡಿ ಅಂತಾ ಕರೆದಿದ್ದಾರೆ. ಆದರೆ, ನಿಜವಾದ ರಣಹೇಡಿ ಜನಾರ್ದನರೆಡ್ಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಸೋಮಶೇಖರ ರೆಡ್ಡಿ.
ಜನಾರ್ಧನರೆಡ್ಡಿ ನಮ್ಮನ್ನ ಬಳಸಿಕೊಂಡು ಅವನ ಬೇಳೆ ಬೇಯಿಸಿಕೊಂಡನು. ನಮ್ಮನ್ನ ಬಳಸಿಕೊಂಡು ಜನಾರ್ದನರೆಡ್ಡಿ ಅಕ್ರಮವಾಗಿ ಹಣ ಗಳಿಸಿದ್ದಾನೆ. ಜನಾರ್ದನರೆಡ್ಡಿಗೆ ಚಿಕ್ಕದಿನಿಂದ ಒಂದು ಗುಣ ಇದೆ. ಅದು ಯಾರೇ ಆಗಲಿ, ಅವನ ಕೆಳಗೆ ಇರಬೇಕು. ಅವನು ಹೇಳಿದ್ದು ಕೇಳಲಿಲ್ಲವೆಂದರೆ ಅವನು ಎಲ್ಲರನ್ನೂ ಡೆಮಾಲಿಷ್ ಮಾಡ್ತಾನೆ. ನಾವೆಲ್ಲಾ ಒಂದಾಗಿದ್ದೇವೆ. ನಾವೂ ಜನಾರ್ದನರೆಡ್ಡಿಯನ್ನು ಎದುರಿಸುತ್ತೇವೆ. ಲೋಕಸಭೆ ಚುನಾವಣೆಯಲ್ಲಿ ನಮ್ಮ ಬಲ ತೋರಿಸುತ್ತೇವೆ ಎಂದು ಸವಾಲು ಹಾಕಿದ್ದಾರೆ ಸೋಮಶೇಖರ ರೆಡ್ಡಿ.



