ಕೆಲವೇ ಕೆಲವು ದಿನಗಳ ಹಿಂದೆ ನಡೆದಿದ್ದ ಘಟನೆ ಅದು. ಉತ್ತರ ಪ್ರದೇಶದಲ್ಲಿ ಉಮೇಶ್ ಪಾಲ್ ಎಂಬ ವ್ಯಕ್ತಿಯೊಬ್ಬ ಕೊಲೆಯಾಗಿದ್ದ. ಆತ 2005ರಲ್ಲಿ ನಡೆದಿದ್ದ ಬಿಎಸ್‍ಪಿ ನಾಯಕ ರಾಜು ಪಾಲ್ ಹತ್ಯೆಯ ಪ್ರಮುಖ ಸಾಕ್ಷಿ. 2005ರಲ್ಲಿ ಅಲಹಾಬಾದ್ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಪಿ ನಾಯಕ ರಾಜು ಪಾಲ್ ಗೆದ್ದಿದ್ದರು. ಇದಾದ 1 ತಿಂಗಳಲ್ಲಿ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಉಮೇಶ್ ಪಾಲ್ ಪ್ರಮುಖ ಸಾಕ್ಷಿಯಾಗಿದ್ದರು. ಕಳೆದ ತಿಂಗಳು ಉಮೇಶ್ ಪಾಲ್ ಅವರನ್ನು ಪ್ರಯಾಗ್ರಾಜ್ನಲ್ಲಿರುವ ಅವರ ನಿವಾಸದಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು. ಸುಮಾರು 10 ವರ್ಷ ತನಿಖೆಯೇ ಆಗದೆ ಸಮಾಧಿಯಾಗಿದ್ದ ಪ್ರಕರಣದ ತನಿಖೆ ಕೈಗೆತ್ತಿಕೊಂಡಾಗ ಉಮೇಶ್ ಪಾಲ್ ಎಂಬ ವ್ಯಕ್ತಿ ಸಾಕ್ಷಿಯಾಗಿದ್ದ ಕಥೆಯೂ ಹೊರಬಂದಿತ್ತು. ಯಾವಾಗ ಸಾಕ್ಷಿಯಿದೆ ಎಂದು ಗೊತ್ತಾಯಿತೋ.. ಹಂತಕರು ಸಾಕ್ಷಿಯನ್ನೇ ನಡುರಸ್ತೆಯಲ್ಲಿ ಕೊಂದುಬಿಟ್ಟರು. ಆಗ ಟಾರ್ಗೆಟ್ ಅದವರು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್.


ಹಾಗೆ ಯೋಗಿ ಅಬ್ಬರಿಸಿದ ನಂತರ ಪೊಲೀಸರೂ ಚುರುಕಾಗಿದ್ದರು. ಒಬ್ಬ ಆರೋಪಿ ಹೆಣವಾಗಿದ್ದ. ಇದೀಗ ಉಮೇಶ್ ಪಾಲ್ ಕೇಸಿನಲ್ಲಿ ಶೂಟರ್ ವಿಜಯ್ ಅಲಿಯಾಸ್ ಉಸ್ಮಾನ್`ನ್ನು ಎನ್‍ಕೌಂಟರ್ ಮಾಡಲಾಗಿದೆ. ಈತನ ತಲೆಗೆ 50 ಸಾವಿರ ಬಹುಮಾನ ಘೋಷಿಸಲಾಗಿತ್ತು. ಇದಕ್ಕೂ ಮುನ್ನ ಶುಕ್ರವಾರ ಅರ್ಬಾಜ್ ಎಂಬುವವನು ಎನ್‍ಕೌಂಟರ್ ಆಗಿದ್ದ. ಆತ ಕೊಲೆಗಾರರಿಗೆ ಆಶ್ರಯ ನೀಡಿದ್ದವನು. ಇದೀಗ ಇನ್ನೊಬ್ಬ ಶೂಟರ್ ಹತನಾಗಿದ್ದಾನೆ. ಈತನೂ ಕೂಡಾ ಪೊಲೀಸರನ್ನು ಕಂಡೊಡನೆಯೇ ಓಡಿ ಹೋಗಲು ಯತ್ನಿಸಿದ್ದು, ಆಗ ಪೊಲೀಸರು ಗುಂಡು ಹಾರಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಉಸ್ಮಾನ್ ಆಸ್ಪತ್ರೆಗೆ ಕರೆತರುವ ದಾರಿಯಲ್ಲಿ ಸಾವಿಗೀಡಾಗಿದ್ದಾನೆ.
ಯೋಗಿ ಸಿಎಂ ಆದ ಮೇಲೆ 10 ಸಾವಿರಕ್ಕೂ ಹೆಚ್ಚು ಎನ್‍ಕೌಂಟರ್ ಆಗಿವೆ. ಸತ್ತ ಅಪರಾಧಿಗಳ ಸಂಖ್ಯೆ 170ಕ್ಕೂ ಹೆಚ್ಚು. 5 ಸಾವಿರಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. 22 ಸಾವಿರಕ್ಕೂ ಹೆಚ್ಚು ಕ್ರಿಮಿನಲ್ಸ್ ಅರೆಸ್ಟ್ ಆಗಿದ್ದಾರೆ.



