ಕಾಂಗ್ರೆಸ್ ಐತಿಹಾಸಿಕ ಜಯ ಸಾಧಿಸಿದ ಕೊನೆಗೂ ರಾಜಿಸೂತ್ರ ಸಿದ್ಧವಾಗಿದೆ. ಡಿಕೆ ಶಿವಕುಮಾರ್ ಅವರಿಗೆ ಈ ಬಾರಿ ಸಿಎಂ ಪಟ್ಟ ಸಿಕ್ಕಿಲ್ಲ. ಬದಲಿಗೆ ಸಿದ್ದರಾಮಯ್ಯ ಅವರನ್ನೇ ಸಿಎಂ ಆಗಿ ಆಯ್ಕೆ ಮಾಡಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಂಧಾನದ ಬಳಿಕವೂ ಇತ್ಯರ್ಥವಾಗಿದ್ದು ರಾಹುಲ್ ಗಾಂಧಿ ಎಂಟ್ರಿ ನಂತರ. ರಾಹುಲ್ ಗಾಂಧಿ ನಿವಾಸದಲ್ಲಿ ಸಭೆ ನಡೆಸಿ ರಾಜಿ ಸೂತ್ರಕ್ಕೆ ಒಪ್ಪಿಸಲಾಗಿದೆ.
ಈ ಸೂತ್ರದ ಪ್ರಕಾಋ 2 ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುತ್ತಾರೆ. ಅದರ ಅರ್ಥ, ಲೋಕಸಭೆ ಚುನಾವಣೆ ಘೋಷಣೆಯಾದ ಬಳಿಕವೂ ಕೂಡ ತಕ್ಷಣ ಸಿಎಂ ಆಗೋಕೆ ಸಾಧ್ಯವಿಲ್ಲ. ಕೊನೆಯ 3 ವರ್ಷ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರಿಗೆ ಪಟ್ಟ ಬಿಟ್ಟುಕೊಡಬೇಕು. ಜೊತೆಗೆ ಪ್ರಬಲ ಖಾತೆಗಳನ್ನು ಡಿಕೆಶಿಗೇ ನೀಡಬೇಕು ಎನ್ನುವುದು ಸೂತ್ರ.
ಸಿದ್ದರಾಮಯ್ಯ ಸಿಎಂ ಘೋಷಣೆಗೂ ಮುನ್ನವೇ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಡಿಕೆ ಶಿವಕುಮಾರ್ ಬೆಂಬಲಿಗರು ನಿರಾಶರಾಗಿದ್ದಾರೆ. ಡಿಸಿಎಂ ಆದರೂ ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ಹೊಣೆಗಾರಿಕೆ ಮುಂದುವರಿಯಲಿದೆ. ಲೋಕಸಭೆಯಲ್ಲೂ ಪಕ್ಷವನ್ನು ಗೆಲ್ಲಿಸಬೇಕು ಎನ್ನುವುದು ಡಿಕೆಗೆ ಕೊಟ್ಟಿರುವ ಟಾಸ್ಕ್. ಆದರೆ ಈ ಬಗ್ಗೆ ಡಿಕೆ ಯೆಸ್ ಎಂದಿದ್ದಾರೆಯೋ ಇಲ್ಲವೋ ಎಂಬ ಬಗ್ಗೆ ಮಾಹಿತಿ ಇಲ್ಲ.



