ವಿಷ್ಣುವರ್ಧನ್ ಸ್ಮಾರಕದ ಉದ್ಘಾಟನೆ, ಪುನೀತ್ ರಾಜ್ ಕುಮಾರ್ ರಸ್ತೆ ಲೋಕಾರ್ಪಣೆ ನಂತರ ಅಂಬರೀಷ್ ಸ್ಮಾರಕಕ್ಕೂ ಕಾಲ ಕೂಡಿ ಬಂದಿದೆ. ಜನವರಿ ಅಂತ್ಯದಲ್ಲಿ ವಿಷ್ಣು ಸ್ಮಾರಕ ಉದ್ಘಾಟಿಸಿದ್ದ ಬೊಮ್ಮಾಯಿ, ಫೆಬ್ರವರಿ ಮೊದಲ ವಾರ ಪುನೀತ್ ರಾಜ್ ಕುಮಾರ್ ರಸ್ತೆ ಉದ್ಘಾಟಿಸಿದರು. ಇದೀಗ ಮಾರ್ಚ್ ಅಂತ್ಯದ ವೇಳೆಗೆ ಅಂಬರೀಷ್ ಸ್ಮಾರಕವೂ ಪೂರ್ಣಗೊಳ್ಳಲಿದ್ದು, ಉದ್ಘಾಟನೆಯಾಗುವ ಸುಳಿವು ನೀಡಿದ್ದಾರೆ. ಬಾನದಾರಿಯಲ್ಲಿ ಪುನೀತ್ ಪಯಣ. ಡಾ. ಪುನೀತ್ ರಾಜ್ ಕುಮಾರ್ ರಸ್ತೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಇಟ್ಟಿದ್ದು ಹೆಸರು. 



ರೇಸ್ ಕೋರ್ಸ್ ರಸ್ತೆಗೆ ಅಂಬರೀಷ್ ಹೆಸರು ಇಡುವುದು ಸೂಕ್ತ ಎನಿಸುತ್ತದೆ ಎಂದು ಸಿಎಂ ಹೇಳಿದಾಗ ಕೆಲವು ಸಭಿಕರು ನಕ್ಕರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ವನಗಬೇಡಿ, ಅಂಬರೀಷ್ ಬಗ್ಗೆ ಗೊತ್ತಿರುವವರು ಇದು ಸರಿಯಾದ ನಿರ್ಧಾರ ಎಂದು ಗುರುತಿಸುತ್ತಾರೆ. ಅವರು ಹೆಚ್ಚು ಸಮಯವನ್ನು ರೇಸ್ಕೋರ್ಸ್ನಲ್ಲಿ ಕಳೆಯುತ್ತಿದ್ದರು, ಅವರು ಕುದುರೆಗಳ ಮಾಲೀಕರೂ ಸಹ ಆಗಿದ್ದರು. ರೇಸ್ಕೋರ್ಸ್ ರಸ್ತೆಗೆ ಗಾಂಧಿ ನಗರವೂ ಹತ್ತಿರ ಇದೆ ಹಾಗಾಗಿ ಅದೇ ರಸ್ತೆಗೆ ಅಂಬರೀಷ್ ಹೆಸರಿಡುವುದು ಸೂಕ್ತ ಎಂದು ಬೊಮ್ಮಾಯಿ ಸ್ಪಷ್ಟನೆಯನ್ನೂ ಕೊಟ್ಟರು.
ಈ ಸಂದರ್ಭದಲ್ಲಿ ಕಂದಾಯ ಸಚಿವರಾದ ಆರ್. ಅಶೋಕ್, ಸಂಸದ ತೇಜಸ್ವಿಸೂರ್ಯ, ಶಾಸಕರಾದ ಸತೀಶ್ ರೆಡ್ಡಿ, ರವಿ ಸುಬ್ರಹ್ಮಣ್ಯ, ಉದಯ ಗರುಡಾಚಾರ್, ಎಂ.ಕೃಷ್ಣಪ್ಪ, ನಟ ರಾಘವೇಂದ್ರ ರಾಜ್ಕುಮಾರ್, ಅಭಿಷೇಕ್ ಅಂಬರೀಶ್ ಹಾಗೂ ಮತ್ತಿತರ ಗಣ್ಯರು ಹಾಜರಿದ್ದರು.





