ಈಗ ಎಲ್ಲೆಲ್ಲೂ ಗ್ಯಾರಂಟಿಗಳದ್ದೇ ಚರ್ಚೆ. ಬಸ್ಸು, ವಿದ್ಯುತ್ತು, ಗೃಹಲಕ್ಷ್ಮಿ, ಯುವನಿಧಿ.. ಹೀಗೆ ಹಲವು ಭಾಗ್ಯಗಳನ್ನು ಘೋಷಿಸಿ ಅಧಿಕರಕ್ಕೆ ಬಂದಿರುವ ಕಾಂಗ್ರೆಸ್, ಅದೆಲ್ಲವನ್ನೂ ಮೊದಲ ಕ್ಯಾಬಿನೆಟ್ಟಿನಲ್ಲಿಯೇ ಈಡೇರಿಸುತ್ತೇವೆ ಎಂಬ ಭರವಸೆಯನ್ನೂ ಕೊಟ್ಟಿತ್ತು. ಆದರೆ ತಾತ್ವಿಕ ಒಪ್ಪಿಗೆಯ ಹೊರತಾಗಿ ಸರ್ಕಾರ ಇನ್ನೂ ಮುಂದಕ್ಕೆ ಹೋಗಿಲ್ಲ. ಹೀಗೆ ಪ್ರಶ್ನಿಸುವವರಿಗೆಲ್ಲ ಕಾಂಗ್ರೆಸ್ಸಿಗರು ಕೇಳುತ್ತಿರುವ ಮತ್ತು ಹೇಳುತ್ತಿರುವ ಮಾತೇನು ಗೊತ್ತೇ..? ನರೇಂದ್ರ ಮೋದಿ ಅಕೌಂಟಿಗೆ 15 ಲಕ್ಷ ಹಾಕ್ತೀನಿ ಅಂದಿದ್ರಲ್ಲ, ಹಾಕಿದ್ರಾ? ಅವರನ್ನ ಕೇಳಲ್ಲ, ನಮ್ಮನ್ನ ಕೇಳ್ತೀರಿ.. ಎನ್ನುತ್ತಿದ್ದಾರೆ.
ಈ ಮಾತನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಇದೀಗ ಸಚಿವರಾಗಿರುವ ರಾಮಲಿಂಗಾ ರೆಡ್ಡಿ, ಸತೀಶ್ ಜಾರಕಿಹೊಳಿ, ಪರಮೇಶ್ವರ್, ಕೆ.ಎನ್.ರಾಜಣ್ಣ, ಪ್ರಿಯಾಂಕ್ ಖರ್ಗೆ.. ಎಲ್ಲರೂ ಕೇಳುತ್ತಿದ್ದಾರೆ. ಕೇವಲ ಮಾಧ್ಯಮಗಳಲ್ಲಷ್ಟೇ ಅಲ್ಲ, ವೇದಿಕೆಗಳಲ್ಲಿ, ಪ್ರಚಾರ ಸಭೆಗಳಲ್ಲಿ, ಅಧಿಕೃತ ಪತ್ರಿಕಾ ಪ್ರಕಟಣೆಗಳಲ್ಲಿ, ಅಧಿಕೃತ ಸೋಷಿಯಲ್ ಮೀಡಿಯಾ ಪೇಜುಗಳಲ್ಲಿ ಬರೆಯುತ್ತಿದ್ದಾರೆ. ಹಾಗಾದರೆ.. ಇದ್ದರೂ ಇರಬಹುದೇನೋ.. ಎಂದು ಅನ್ನಿಸುತ್ತಿದೆ. ಅಲ್ಲವೇ.. ನಿಜವಾದ ಸಂಗತಿ ಇಲ್ಲಿದೆ.
ವಾಸ್ತವ ಸಂಗತಿ ಏನು?
ನರೇಂದ್ರ ಮೋದಿ ಈ ಮಾತು ಹೇಳಿದ್ದು ಈಗಲ್ಲ, 2013-14ರಲ್ಲಿ. ಒಂದು ಕಡೆ ಹೇಳಿದ್ದಾರೆ ಅಂತಲ್ಲ, ಆಗ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ, ದೇಶದ ಅನೇಕ ಕಡೆಗಳಲ್ಲಿ ಮಾತನಾಡಿದ್ದರು. ಮೋದಿ ಮಾತಿನ ಹಲವು ವಿಡಿಯೋ ಫೈಲ್ಸ್ ಆನ್`ಲೈನಿನಲ್ಲೇ ಸಿಗುತ್ತವೆ. ಆ ಮಾತಿನ ಪ್ರಕಾರ..
ವಿದೇಶದಲ್ಲಿ ಭಾರತದ ಕಪ್ಪು ಹಣ ಎಷ್ಟರಮಟ್ಟಿಗೆ ಇದೆಯೆಂದರೆ, ಅದೆಲ್ಲ ಕಪ್ಪುಹಣವನ್ನೂ ವಾಪಸ್ ತಂದಿದ್ದೇ ಆದರೆ, ಪ್ರತಿಯೊಬ್ಬ ಭಾರತೀಯನ ಖಾತೆಗೂ 15ರಿಂದ 20 ಲಕ್ಷ ಹಣ ಹಾಕಬಹುದು, ಅಷ್ಟೊಂದು ಕಪ್ಪು ಹಣ ವಿದೇಶಿ ಬ್ಯಾಂಕುಗಳಲ್ಲಿದೆ.
ಇದು ನರೇಂದ್ರ ಮೋದಿನ ಒಟ್ಟಾರೆ ಸಾರಾಂಶ.
ವಿಡಿಯೋ ಲಿಂಕ್ ಇಲ್ಲಿದೆ. 17ನೇ ನಿಮಿಷದ ಬಳಿಕ ಈ ವಿಷಯ ಇದೆ. ಹಿಂದಿಯಲ್ಲಿಯೇ ಇದೆ. ಹಿಂದಿ ಬರದಿದ್ದವರು ಹಿಂದಿ ಗೊತ್ತಿರುವ ಯಾರ ಬಳಿಯಿಂದಾದರೂ ಕೇಳಿ ತಿಳಿದುಕೊಳ್ಳಬಹುದು. ಅಥವಾ ಗೂಗಲ್ ಟ್ರಾನ್ಸ್‍ಲೇಷನ್ ನೋಡಿಯೂ ತಿಳಿದುಕೊಳ್ಳಬಹುದು.
ಹಾಗಾದರೆ ಇದು ಟೀಕೆ ಮಾಡುತ್ತಿರುವವರಿಗೆ ಗೊತ್ತಿಲ್ಲವೇ.. ಖಂಡಿತಾ ಗೊತ್ತಿದೆ. ಸಿದ್ದರಾಮಯ್ಯ ಅವರನ್ನು ಬಿಟ್ಟರೆ ಬಹುತೇಕರಿಗೆ ಹಿಂದಿ ಚೆನ್ನಾಗಿಯೇ ಗೊತ್ತು. ಸಿದ್ದರಾಮಯ್ಯ ಅವರಿಗೂ ಅಷ್ಟೆ, ಹಿಂದಿ ಅರ್ಥವಾಗುತ್ತೆ. ಮಾತನಾಡುವುದಕ್ಕೆ ಬರಲ್ಲ, ಅಷ್ಟೆ. ಖರ್ಗೆಯವರು ಹಿಂದಿಯಲ್ಲಿಯೇ ಏಕೆ, ಉರ್ದುವಿನಲ್ಲೂ ಘಜಲ್/ಕವಿತೆ ಓದುವಷ್ಟು ಪರಿಣತರು. ಹೀಗಿದ್ದರೂ ಈ ರೀತಿ ಹೇಳುತ್ತಿರುವುದೇಕೆ? ಉತ್ತರ ರಾಜಕೀಯ. ಅಷ್ಟೆ.
ಫೈನಲ್ ತೀರ್ಮಾನ
ಆರೋಪ : ಮೋದಿ ಪ್ರತಿಯೊಬ್ಬರ ಖಾತೆಗೂ 15 ಲಕ್ಷ ಹಾಕುತ್ತೇವೆ ಎಂದು ಭರವಸೆ ಕೊಟ್ಟಿದ್ದರು.
ಫ್ಯಾಕ್ಟ್ ಚೆಕ್ : ಆರೋಪ ಸುಳ್ಳು.



