ಕರ್ನಾಟಕ ಅಸೆಂಬ್ಲಿ ಚುನಾವಣೆ ಹತ್ತಿರವಾದಂತೆಲ್ಲ ಟೆನ್ಷನ್ ಜೋರಾಗಿದೆ. ನಮಗೇ ಬಹುಮತ ಎನ್ನುತ್ತಿವೆ ಎಲ್ಲ ಪಕ್ಷಗಳು. ಕಾಂಗ್ರೆಸ್`ನವರ ಪ್ರಕಾರ ಕಾಂಗ್ರೆಸ್ 150 ಸ್ಥಾನ ಗೆಲ್ಲುತ್ತೆ. ಬಿಜೆಪಿಯವರ ಪ್ರಕಾರ ಬಿಜೆಪಿ 140+ ಸ್ಥಾನ ಗೆಲ್ಲುತ್ತೆ. ಜೆಡಿಎಸ್`ನವರ ಪ್ರಕಾರ ಜೆಡಿಎಸ್ 120 ಸ್ಥಾನ ಗೆಲ್ಲುತ್ತೆ. ಯಾವುದು ಸತ್ಯ? ಸದ್ಯಕ್ಕೆ ಎಲ್ಲ ಪಕ್ಷಗಳೂ ನಂಬಿಕೊಂಡಿರುವುದು ನೆಚ್ಚಿಕೊಂಡಿರುವುದು ಸಮೀಕ್ಷೆಗಳನ್ನೇ. ಈ ಮೂರೂ ಪಕ್ಷಗಳ ಆಂತರಿಕ ಸಮೀಕ್ಷೆಗಳ ಪ್ರಕಾರ ಯಾವ ಪಕ್ಷಕ್ಕೂ ಬಹುಮತ ಇಲ್ಲ. ಯಾವ ಪಕ್ಷಕ್ಕೂ ನಮ್ಮದೇ ಸರ್ಕಾರ ಎಂಬ ಭರವಸೆ ಇಲ್ಲ. ಈ ವಿಷಯ ಮೂರೂ ಪಕ್ಷಗಳು ನಡೆಸಿದ ಅಂತರಿಕ ಸಮೀಕ್ಷೆಯಲ್ಲಿ ಗೊತ್ತಾಗಿದ್ದ ಅಂಶ. ಕ್ಷೇತ್ರವಾರು ಸಮೀಕ್ಷೆ ನಡೆಸಿದ್ದರಾದರೂ ಕ್ಷೇತ್ರವಾರು ವಿವರಗಳನ್ನು ಮಾತ್ರ ಮೂರೂ ಪಕ್ಷಗಳ ಸರ್ವೆ ಟೀಂ ಗುಟ್ಟಾಗಿಯೇ ಇಟ್ಟಿತ್ತು. ಈಗಲೂ ಅದನ್ನು ಗುಟ್ಟಾಗಿಯೇ ಇಟ್ಟಿದೆ.
ಆದರೆ ಹೊಸ ವಿಷಯ ಏನೆಂದರೆ ಹೊಸ ಆಂತರಿಕ ಸಮೀಕ್ಷೆಯಲ್ಲಿ ರಾಜ್ಯದ 224 ಕ್ಷೇತ್ರಗಳ ಪೈಕಿ 139 ಕ್ಷೇತ್ರಗಳಲ್ಲಿ ಇಂತಹ ಪಕ್ಷದವರಿಗೇ ಗೆಲುವು ಎನ್ನುವುದು ಪಕ್ಕಾ ಆಗಿದೆ. 139 ಕ್ಷೇತ್ರಗಳಲ್ಲಿ ತೀರಾ ಪವಾಡ ನಡೆಯದ ಹೊರತು ಮತ್ತೇನೂ ಬದಲಾವಣೆ ಆಗುವುದಿಲ್ಲ. ಅಂದರೆ ಉಳಿದ 85 ಕ್ಷೇತ್ರಗಳಿಗೆ ಮೂರೂ ಪಕ್ಷಗಳು ಹೋರಾಟ ನಡೆಸಬೇಕು. 139 ಕ್ಷೇತ್ರಗಳ ಪೈಕಿ ಆಡಳಿತಾರೂಢ ಬಿಜೆಪಿ 56 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಪಕ್ಕಾ ಎನ್ನಲಾಗಿದೆ. ಕಾಂಗ್ರೆಸ್ ತೀರಾ ಮುಂದೇನಿಲ್ಲ. 58 ಕ್ಷೇತ್ರಗಳಲ್ಲಿ ಗೆಲುವು ಪಕ್ಕಾ ಎನ್ನಲಾಗಿದೆ. ಜೆಡಿಎಸ್ 25 ಕ್ಷೇತ್ರಗಳಲ್ಲಿ ಗೆಲುವು ಶತಃಸಿದ್ಧ ಅಂತೆ. ಉಳಿದ 85 ಕ್ಷೇತ್ರಗಳಲ್ಲಿ ಯಾರು ಗೆಲ್ಲುತ್ತಾರೆ? ಎಷ್ಟು ಸೀಟು ಗೆಲ್ಲುತ್ತಾರೆ? ಎಂಬುದರ ಮೇಲೆ ಕರ್ನಾಟಕ ಅಸೆಂಬ್ಲಿ ಎಲೆಕ್ಷನ್ ನಿಂತಿದೆ. ಇದರರ್ಥ ಇಷ್ಟೆ, ಈ ಬಾರಿ ಸ್ವಯಂಬಲದ ಮೇಲೆ ಒಂದೇ ಒಂದು ಪಕ್ಷಕ್ಕೆ ಅಧಿಕಾರ ಸಿಕ್ಕಲಿದೆ ಎನ್ನುವುದು ಅಸಾಧ್ಯ.
2018ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 104, ಕಾಂಗ್ರೆಸ್ 80 ಹಾಗೂ ಜೆಡಿಎಸ್ 38 ಕ್ಷೇತ್ರಗಳಲ್ಲಿ ಗೆದ್ದಿತ್ತು. ಬಿಎಸ್‍ಪಿ 1 ಹಾಗೂ ಇಬ್ಬರು ಪಕ್ಷೇತರರು ಗೆದ್ದಿದ್ದರು. ಅದು ಎಲೆಕ್ಷನ್ ರಿಸಲ್ಟ್. ಅದಾದ ಮೇಲೆ ನಡೆದ ಆಪರೇಷನ್ ಕಮಲ ಅಸೆಂಬ್ಲಿ ನಂಬರ್ ಗೇಮ್‍ನ್ನು ಬದಲಾಯಿಸಿತು. 17 ಜನ ಪಕ್ಷಾಂತರ ಮಾಡಿ, ಬಿಜೆಪಿಯಿಂದ ನಿಂತು ಗೆದ್ದರು. ಈಗ ಬಿಜೆಪಿ ಬಲ ಅಸೆಂಬ್ಲಿಯಲ್ಲಿ 116.
ಕಾಂಗ್ರೆಸ್ ಪ್ಲಾನ್ : ಕಾಂಗ್ರೆಸ್ ಈಗಿನ ಸಮೀಕ್ಷೆ ಪ್ರಕಾರ 58 ಫಿಕ್ಸ್. ಬಹುಮತಕ್ಕೆ ಬೇಕಿರುವುದು 113. ಉಳಿದಿರುವ 85ರಲ್ಲಿ ಕನಿಷ್ಠ 55 ಸೀಟು ಗೆಲ್ಲಬೇಕು. ಏರುಮುಖದಲ್ಲಿದ್ದ ಕಾಂಗ್ರೆಸ್ ಗ್ರಾಫ್ ಏರಿಕೆ ಕಂಡಿಲ್ಲ. ಇಳಿಕೆಯೂ ಆಗಿಲ್ಲ ಎನ್ನುವುದು ಪ್ಲಸ್ ಪಾಯಿಂಟ್. ಅಂದರೆ ಮುಂದಿನ 3 ತಿಂಗಳ ಗ್ಯಾಪ್‍ನಲ್ಲಿ ಆ ಗ್ಯಾಪ್ ಕವರ್ ಮಾಡಿಕೊಂಡು ಪುಟಿದೇಳಬೇಕು. ಕಾಂಗ್ರೆಸ್ ಪಕ್ಷಕ್ಕೆ ಮಾರ್ಜಿನ್ ವರ್ಗ ಮಾಡಿಕೊಂಡರೆ ಆಯಿತು. ಅಡ್ಡಿಯಾಗಿರುವುದು ಪಕ್ಷದ ಒಳಗಿನ ಫೈಟು ಮತ್ತು ಮುಸ್ಲಿಂ ಮತಗಳು ವಿಭಜನೆಯಾಗುತ್ತಿರುವುದು. ಅದನ್ನು ಹೇಗೆ ನಿಭಾಯಿಸಲಿದೆ ಎಂಬುದರ ಮೇಲೆ ಕಾಂಗ್ರೆಸ್ 113 ದಾಟುತ್ತದೋ.. ಇಲ್ಲವೋ ಎಂಬುದು ನಿಂತಿದೆ.
ಬಿಜೆಪಿ ಪ್ಲಾನ್ : ಅಧಿಕಾರವೇ ಕೈಲಿದ್ದರೂ ಸರ್ಕಾರದ ಬಳಿ ಹೇಳಿಕೊಳ್ಳುವಂತದ್ದೇನೂ ಇಲ್ಲ. ಮೋದಿ ಹೆಸರಿನ ಹೊರತಾಗಿ ಇದು ನಮ್ಮ ಸಾಧನೆ ಎಂದು ಹೇಳಿಕೊಳ್ಳೋ ಯೋಜನೆ ಇಲ್ಲ. ಆದರೂ ನಿಷ್ಠ ಮತದಾರರು ಭದ್ರವಾಗಿರುವುದು ಬಿಜೆಪಿಯ ಚೈತನ್ಯವನ್ನು ಕಾಪಾಡಿಕೊಂಡಿದೆ. ಬಹುಮತಕ್ಕೆ ಬೇಕಿರುವುದು 113. ಈ ಹಿಂದೆ ಎರಡು ಬಾರಿ ಸರ್ಕಾರ ಮಾಡಿದಾಗಲೂ ಬಹುಮತವನ್ನು ಬಿಜೆಪಿ ಗೆದ್ದಿರಲಿಲ್ಲ. ಆಪರೇಷನ್ ಬಹುಮತ ಮಾಡಿತ್ತು. ವಿಶೇಷವೆಂದರೆ ಬಿಜೆಪಿ ನಾಯಕರಿಗೂ ಅದೇ ವಿಶ್ವಾಸವಿದ್ದಂತಿದೆ. ಮೊದಲೆಲ್ಲ ಯಡಿಯೂರಪ್ಪ ಮೇಲೆ ಭಾರ ಹಾಕುತ್ತಿದ್ದವರು ಈಗ ದೆಹಲಿ ಹೈಕಮಾಂಡ್ ಹೆಗಲ ಮೇಲೆ ಭಾರ ಹೊರಿಸುತ್ತಿದ್ದಾರೆ.
ಜೆಡಿಎಸ್ ಪ್ಲಾನ್ :113ರ ಗಡಿ ದಾಟಬೇಕೆಂದರೆ ಕಳೆದ ಬಾರಿ ಗೆದ್ದಿದ್ದ ಸೀಟುಗಳ ಸಂಖ್ಯೆಯನ್ನು 4 ಪಟ್ಟು ಹೆಚ್ಚಿಸಿಕೊಳ್ಳಬೇಕು. ಬಹಿರಂಗವಾಗಿ ಏನೇ ಹೇಳಲಿ, ಅಂತರಂಗದಲ್ಲಿ ಅವರಿಗೂ ವಾಸ್ತವ ಗೊತ್ತಿದೆ. ಎಲೆಕ್ಷನ್ ಮುಗಿದ ಮೇಲೆ ನಾವೇ ಇವರಿಗೆಲ್ಲ ಬೇಕು. ಬಂದೇ ಬರಬೇಕು ಎಂಬ ಲೆಕ್ಕಾಚಾರದಲ್ಲಿದ್ದಾರೆ ಕುಮಾರಸ್ವಾಮಿ.
ಮತದಾರರ ಪ್ಲಾನ್ : ಮತದಾರ ಯಾವತ್ತೂ ಹಾಗೆಯೇ. ಆತ ಗುಟ್ಟು ಬಿಟ್ಟುಕೊಡಲ್ಲ. ಕೆಲವರನ್ನು ಮಾತನಾಡಿಸಿದರೆ ಪ್ರಜಾಕೀಯ, ಅಮ್ ಆದ್ಮಿ, ಕೆಆರ್`ಎಸ್ ಪಕ್ಷಗಳ ಹೆಸರನ್ನೂ ಹೇಳುತ್ತಾರೆ. ರಿಯಾಲಿಟಿ ಲೆಕ್ಕದಲ್ಲಿ ಅದನ್ನು ನಂಬುವಂತಿಲ್ಲ. ಹಾಗೆ ಹೇಳುವವರು ವೋಟ್ ಹಾಕುವಾಗ ನೋಡುವ ಲೆಕ್ಕಾಚಾರವೇ ಬೇರೆ. ಹೀಗಾಗಿ.. ಸಮೀಕ್ಷೆಗಳ ಅಸಲಿತನ ಹೇಳಬೇಕಿರೋದು ಮತಪೆಟ್ಟಿಗೆಗಳು ಮಾತ್ರ. ಎಲೆಕ್ಷನ್ ನಡೆಯಲಿ. ವೋಟು ನಡೆಯಲಿ. ಕೌಂಟಿಂಗ್ ಆಗಲಿ.. ಆ ದಿನ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅಥವಾ ಬೊಮ್ಮಾಯಿ ನಗು ನಗುತ್ತ ಬರುತ್ತಾರೋ.. ಅಥವಾ ಪದ್ಮನಾಭನಗರದ ಮನೆ ತಲುಪುತ್ತಾರೋ.. ನೋಡಬೇಕು.
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes.The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.