

ಪರಿಶಿಷ್ಟ ಜಾತಿ(Sಅ)ಗೆ ಮೊದಲು ಇದ್ದ ಮೀಸಲಾತಿ ಶೇ.15. ಇನ್ನು ಮುಂದೆ ಅದು ಶೇ.17ರಷ್ಟು ಸಿಗಲಿದೆ. ಶೇ.2ರಷ್ಟು ಹೆಚ್ಚಳವಾಗಿದೆ.
ಪರಿಶಿಷ್ಟ ಪಂಗಡ(Sಖಿ)ಕ್ಕೆ ಮೊದಲಿದ್ದ ಮೀಸಲಾತಿ ಶೇ.3. ಇನ್ನು ಮುಂದೆ ಅವರು ಶೇ.7ರಷ್ಟು ಮೀಸಲಾತಿ ಪಡೆಯುತ್ತಾರೆ.
ಇದರಿಂದಾಗಿ ಮೀಸಲಾತಿ ಪ್ರಮಾಣ ರಾಜ್ಯದಲ್ಲಿ ಶೇ.56ಕ್ಕೆ ಏರಿಕೆಯಾಗಲಿದೆ. ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಮೀಸಲಾತಿ ಶೇ.50ನ್ನು ದಾಟುವಂತಿಲ್ಲ. ಇದನ್ನು ನಿಭಾಯಿಸಲೂ ರಾಜ್ಯ ಸರ್ಕಾರ ಬಳಿ ಅಸ್ತ್ರ ಇದೆ. ತಮಿಳುನಾಡು, ಜಾರ್ಖಂಡ್, ಚತ್ತೀಸ್‍ಘಡ, ಸಿಕ್ಕಿಂ.. ಮೊದಲಾದ ರಾಜ್ಯಗಳಲ್ಲಿ ಮೀಸಲಾತಿ ಶೇ.50ಕ್ಕಿಂತ ಹೆಚ್ಚಿದೆ. ಆದರೆ ಅಲ್ಲಿ ವಿಶೇಷ ಕಾರಣ ನೀಡಿ ರಾಜ್ಯ ಸರ್ಕಾರಗಳು ಸಮರ್ಥನೆ ಮಾಡಿಕೊಂಡಿವೆ. ಆಯಾ ರಾಜ್ಯಗಳಲ್ಲಿನ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಪ್ರಮಾಣವೂ ಬದಲಾಗುತ್ತೆ. ರಾಜ್ಯದಲ್ಲಿ ಈ ಮೀಸಲಾತಿಯಿಂದ ಕೆಲವು ಬದಲಾವಣೆಗಳಂತೂ ಆಗುತ್ತವೆ. ಸದ್ಯಕ್ಕೆ ರಾಜ್ಯದಲ್ಲಿ ಇರುವ ಪ್ರಮುಖ ಮೀಸಲಾತಿ ವಿವರ ಹೀಗಿದೆ.
ಹಾಲಿ ಮೀಸಲಾತಿ ಎಷ್ಟಿದೆ?
ಎಸ್‌ಸಿ- 15%
ಹಿಂದುಳಿದ ವರ್ಗ 2 ಎ- 15%
ಪ್ರವರ್ಗ 1- 4%
2ಬಿ – 4%
3ಎ- 4%
3ಬಿ- 5%
ಎಸ್ ಟಿ- 3%
ಒಟ್ಟು ಮೀಸಲಾತಿ ಪ್ರಮಾಣ: 50%


ಯಾರು ಯಾವುದರಲ್ಲಿ ಬರುತ್ತಾರೆ?
ಪ್ರವರ್ಗ 1 – 95 ಜಾತಿಗಳು
ಔಃಅ (2ಎ)- 102 ಜಾತಿಗಳು
2b -ಮುಸ್ಲಿಂ ಸಮುದಾಯ
3ಎ- ಒಕ್ಕಲಿಗ, ಕೊಡವ, ಬಲಿಜ
3b- ಲಿಂಗಾಯತ, ಮರಾಠ, ಕ್ರಿಶ್ಚಿಯನ್, ಬಂಟ್ಸ್
ಎಷ್ಟು ಏರಿಕೆ ಆಗುತ್ತೆ?
ಈಗ ಎಸ್ ಟಿಗೆ 4%, ಎಸ್‌ಸಿ 2% ಮೀಸಲಾತಿ ಹೆಚ್ಚಳ ಮಾಡಿದ್ದರಿಂದ ಒಟ್ಟು ಮೀಸಲಾತಿ ಪ್ರಮಾಣ 56% ಏರಿಕೆಯಾಗಲಿದೆ. ಮೀಸಲಾತಿ ಹೆಚ್ಚಳದಿಂದ ಎಸ್‌ಟಿ ಸಮುದಾಯಕ್ಕೆ 7%, ಎಸ್ ಸಿ ಸಮುದಾಯಕ್ಕೆ 17% ಮೀಸಲಾತಿ ದಕ್ಕಲಿದೆ.
ಇದು ಒಂದು ಲೆಕ್ಕಾಚಾರವಾದರೆ ಇದರ ಹಿಂದೆ ರಾಜಕೀಯ ಲೆಕ್ಕಾಚಾರವೂ ಇದೆ. ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಎಸ್‍ಸಿ/ಎಸ್‍ಟಿ ಸಮುದಾಯ ಹೆಚ್ಚು ಇರುವ ಭಾಗದಲ್ಲಿ ಸಂಚಾರ ಮಾಡುವ ಹೊತ್ತಿನಲ್ಲೇ ಈ ಸೂಚನೆ ಹೊರಬಿದ್ದಿದೆ. ಈ ಮೂಲಕ ಶ್ರೀರಾಮುಲು ವಾಲ್ಮೀಕಿ ಹಾಗೂ ಎಸ್‍ಸಿ ಸಮುದಾಯದ ನಾಯಕರಾಗಿ ಹೊರಹೊಮ್ಮಿರುವುದು ವಿಶೇಷ. ವಾಸ್ತವದಲ್ಲಿ ಹೇಳಬೇಕೆಂದರೆ ವಾಲ್ಮೀಕಿ ಸಮುದಾಯದ ನಾಯಕತ್ವಕ್ಕೆ ಪೈಪೋಟಿ ಕೊಡಬಲ್ಲ ಇನ್ನೊಬ್ಬ ನಾಯಕ ಇಲ್ಲ. ಹೇಳಿದಂತೆ ಶ್ರೀರಾಮುಲು ಅವರಿಗೆ ಡಿಸಿಎಂ ಪೋಸ್ಟ್ ಸಿಗಲಿಲ್ಲ. ಮೀಸಲಾತಿಯೂ ಸಿಗಲಿಲ್ಲ ಎಂದು ಬೇಸರ ಮಾಡಿಕೊಂಡಿದ್ದ ವಾಲ್ಮೀಕಿ ಸಮುದಾಯ ಈಗ ಮತ್ತೆ ಬಿಜೆಪಿ ಜೊತೆಗೇ ನಿಲ್ಲಬಹುದು.


ಇದರಿಂದ ಎಸ್‍ಸಿ/ಎಸ್‍ಟಿ ಸಮುದಾಯದ ವೋಟುಗಳು ತಮ್ಮ ಬುಟ್ಟಿಗೆ ಬಿದ್ದವು ಎಂದು ಬಿಜೆಪಿ ಹಿರಿಹಿರಿ ಹಿಗ್ಗುತ್ತಿದೆ. ಅಧಿಕಾರದಲ್ಲಿರುವ ಸರ್ಕಾರ ಇಂತಹದ್ದೊಂದು ನಿರೀಕ್ಷೆ ಇಟ್ಟುಕೊಳ್ಳೋದು ಸಹಜವೇ. ಇದರಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಗಾಬರಿ ಬಿದ್ದಿರುವುದಂತೂ ಸತ್ಯ. ಹೀಗಾಗಿಯೇ ನಾಗಮೋಹನ್ ದಾಸ್ ಆಯೋಗ ರಚನೆ ಮಾಡಿದ್ದು ನಾನು ಎಂದು ಸಿದ್ದರಾಮಯ್ಯ, ಆಯೋಗ ವರದಿ ಕೊಟ್ಟಿದ್ದು ಎರಡೂವರೆ ವರ್ಷಗಳ ಹಿಂದೆ. ಈಗ ಜಾರಿ ಮಾಡಿರುವುದರ ಹಿಂದೆ ರಾಜಕೀಯ ಇದೆ. ಅದೇ ಅವರಿಗೆ ತಿರುಗುಬಾಣವಾಗುತ್ತೆ ನೋಡುತ್ತಿರಿ ಎನ್ನುವುದು ಕುಮಾರಸ್ವಾಮಿ ಮಾತು. ಬಿಜೆಪಿಯವರ ಪ್ರಕಾರ ಇದು ಮಾಸ್ಟರ್ ಸ್ಟ್ರೋಕ್. ಜೆಡಿಎಸ್‍ನವರ ಪ್ರಕಾರ ಬೂಮ್‍ರಾಂಗ್. ಕಾಂಗ್ರೆಸ್‍ನವರಲ್ಲೇ ಸ್ವಲ್ಪ ಗೊಂದಲ ಇರುವ ಹಾಗಿದೆ.
ಸಿದ್ದರಾಮಯ್ಯ ತಮ್ಮ ಆಡಳಿತದ ಕೊನೆ ದಿನಗಳಲ್ಲಿ ದಲಿತರಿಗಾಗಿ ಪ್ರಮೋಷನ್, ಗುತ್ತಿಗೆಯಲ್ಲೂ ಮೀಸಲಾತಿ ಹಾಗೂ ಅನುದಾನಗಳಲ್ಲಿ ಪರಿಶಿಷ್ಟರಿಗೆ ಮೀಸಲಾತಿ ತಂದಿದ್ದರು. ಇದು ಎಸ್‍ಸಿ/ಎಸ್‍ಟಿ ವೋಟ್ ಬ್ಯಾಂಕ್ ದೃಷ್ಟಿಯಲ್ಲಿಟ್ಟುಕೊಂಡೇ ಮಾಡಿದ ನಿರ್ಧಾರವಾಗಿತ್ತು. ಆದರೆ ಹಾಗೇನೂ ಆಗಲಿಲ್ಲ. 2013ರಲ್ಲಿ ಸಿದ್ದುಗೆ ಬೆಂಬಲಿಸಿದ್ದ ದಲಿತರೂ ದೂರ ಸರಿದ ಪರಿಣಾಮ ಕಾಂಗ್ರೆಸ್, ದೇವೇಗೌಡರ ಮನೆಯೆದುರು ಕೈಕಟ್ಟಿ ನಿಲ್ಲುವಂತಾಯಿತು. ಇದು ಬಿಜೆಪಿಗೆ ಎಚ್ಚರಿಕೆ ಗಂಟೆಯೂ ಹೌದು.
ಮೀಸಲಾತಿ ಹೆಚ್ಚು ಮಾಡಿದರೆ ವೋಟು ಬರಲ್ಲ ಎನ್ನುವುದು ಇತಿಹಾಸದಲ್ಲಿ ಸಾಬೀತಾಗಿದೆ. ವಾಸ್ತವದಲ್ಲಿ ಬಿಜೆಪಿ ಎರಡು ಬಾರಿ ಅಧಿಕಾರದ ಗದ್ದುಗೆ ಹಿಡಿದಿದ್ದರೂ ಮ್ಯಾಜಿಕ್ ನಂ.113 ಗಳಿಸೋಕೆ ಸಾಧ್ಯವಾಗಿಲ್ಲ. ಪಕ್ಷೇತರರು ಹಾಗೂ ಆಪರೇಷನ್ ಮೂಲಕ ಬಹುಮತಕ್ಕಿಂತ ಹೆಚ್ಚು ಸೀಟು ಗಳಿಸಿರಬಹುದು. ಅದು ಬೇರೆ. ಯಡಿಯೂರಪ್ಪ ಎಂಬ ಪ್ರಬಲ ನಾಯಕ ಪಕ್ಷದಲ್ಲಿ ಪ್ರಬಲವಾಗಿ ಇದ್ದಾಗಲೇ ಸಿಕ್ಕದ ಮ್ಯಾಜಿಕ್ ನಂಬರ್ ಮೀಸಲಾತಿ ಅಸ್ತ್ರದಿಂದ ಬಿಜೆಪಿಗೆ ಸಿಗುತ್ತಾ? ತುಂಬಾ ಕಾಲ ಕಾಯಬೇಕಿಲ್ಲ. ಇನ್ನೊಂದಾರು ತಿಂಗಳು. ಅಷ್ಟೆ.
ಅಂದಹಾಗೆ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ಉದ್ಭವವಾದರೆ ರಾಜರಾದವರು ಏನು ಮಾಡೋದು ಎಂದು ಟೆನ್ಷನ್ ಆಗುತ್ತಾರೆ. ಖುಷಿಯಾಗುವುದು ರಾಜ`ಕುಮಾರ’ನಿಗೆ ಅನ್ನೋದು ಸುಳ್ಳಾ? ಸತ್ಯವಾ?



