ಉತ್ತರಪ್ರದೇಶದ ಪ್ರಯಾಗ್ ರಾಜ್‍ನಲ್ಲಿ ಮೂವರು ಹುಡುಗರಿಂದ ಹತ್ಯೆಯಾದ ಪಾತಕಿ ಅತಿಕ್ ಅಹ್ಮದ್ ಸಾಮಾನ್ಯನಲ್ಲ. 5 ಸಲದ ಶಾಸಕ ಹಾಗೂ 1 ಸಲದ ಸಮಾಜವಾದಿ ಪಾರ್ಟಿ ಸಂಸದ ಕೂಡ. 2004ರಲ್ಲಿ ಸಮಾಜವಾದಿ ಪಾರ್ಟಿ ಸಂಸದನಾಗಿ ಈತ ಆಯ್ಕೆಯಾಗಿದ್ದ. ಆಗ ನಡೆದ ಉಪಚುನಾವಣೆಯಲ್ಲಿ ಈತನ ತಮ್ಮ ಸೋತಿದ್ದರಿಂದಲೇ ಈಗ ದೇಶಾದ್ಯಂತ ಸುದ್ದಿಯಾಗಿದ್ದ ರಾಜ್ ಪಾಲ್ ಕೊಲೆ. ಆ ಕೊಲೆಯನ್ನು ಕಣ್ಣಾರೆ ಕಂಡಿದ್ದ ಉಮೇಶ್ ಪಾಲ್‍ನನ್ನು ಕೊಂದ ಪರಿಣಾಮವೇ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಶಪಥ ಮಾಡಿ, ಮಾಫಿಯಾ ದೊರೆಗಳನ್ನು ಮಟ್ಟ ಹಾಕಿದ್ದು. ಇಂತಹ ಅತೀಕ್ ಅಹ್ಮದ್, 2008ರಲ್ಲಿ ಮನಮೋಹನ್ ಸಿಂಗ್ ಸರ್ಕಾರವನ್ನು ರಕ್ಷಿಸಿದ್ದ.


ಚಿಕ್ಕಂದಿನಲ್ಲಿ ಬಡತನದ ಕಾರಣ ಈತ ರೈಲುಗಳಲ್ಲಿ ಸಾಗಿಸುವ ಕಲ್ಲಿದ್ದಲು ಕದ್ದು ದುಡ್ಡು ಮಾಡಿಕೊಳ್ಳಲು ಆರಂಭಿಸಿದ್ದ. ನಂತರ ರೈಲ್ವೆ ಅಧಿಕಾರಿಗಳನ್ನು ಬೆದರಿಸಿ ಗುತ್ತಿಗೆ ಪಡೆಯಲು ಆರಂಭಿಸದ. ಕ್ರಮೇಣ ಪಾತಕ ಲೋಕಕ್ಕೆ ಇಳಿದ ಈತ ಅಲ್ಲಿ ಕೊಲೆ, ಸುಲಿಗೆ, ದರೋಡೆಗಳ ಮೂಲ ಬಾಹುಬಲಿ ಹಾಗೂ ಉತ್ತರ ಪ್ರದೇಶದ ನಂ.1 ಡಾನ್ ಎಂದು ಖ್ಯಾತಿ ಪಡೆದ. 100ಕ್ಕೂ ಹೆಚ್ಚು ಕ್ರಿಮಿನಲ್ ಕೇಸುಗಳು ಈತನ ಮೇಲಿವೆ.


ಹಂತಕರನ್ನು ಬಂದಾ ಪಟ್ಟಣದ ಲವಲೇಶ ತಿವಾರಿ (22), ಹಮೀರ್ಪುರದ ಮೋಹಿತ್ ಅಲಿಯಾಸ್ ಸನ್ನಿ (23) ಹಾಗೂ ಕಾಸ್ಗಂಜ್ನ ರಾಜೇಶಕುಮಾರ್ ಮೌರ್ಯ (18) ಎಂದು ಗುರುತಿಸಲಾಗಿದೆ. ಇದರಲ್ಲಿ ಒಬ್ಬ ಹಿಸ್ಟರಿ ಶೀಟರ್, ಮತ್ತೊಬ್ಬ ಬಜರಂಗದಳದ ನಾಯಕ ಕಂ ಡ್ರಗ್ ವ್ಯಸನಿ. ಇನ್ನೊಬ್ಬ ಅನಾಥ.
ಅತೀಕ್ ಅಹ್ಮದ್‍ನನ್ನು ಕೊಂದರೆ ಭೂಗತ ಲೋಕದಲ್ಲಿ ಭರ್ಜರಿಯಾಗಿ ಎಂಟ್ರಿ ಕೊಡಬಹುದು ಎಂಬ ಕಾರಣಕ್ಕೇ ಕೊಂದೆವು ಎಂದು ಆರೋಪಿ ಮೋಹಿತ್ ಸನ್ನಿ ಹೇಳಿಕೆ ನೀಡಿದ್ದಾನೆ. ಮೀಡಿಯಾಗಳ ಮುಂದೆಯೇ ಕೊಂದರೆ ಹೆಚ್ಚು ಪ್ರಚಾರ ಸಿಗುತ್ತದೆ ಎಂಬ ಕಾರಣಕ್ಕೆ ಈ ರೀತಿ ಹತ್ಯೆ ಮಾಡಿದೆವು ಎಂದು ತಿಳಿಸಿದ್ದಾನಂತೆ.



