Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Politics

ಹೀರಾ ಬೆನ್ ಮೋದಿ : ತಾಯಿ ಮಗನ ಚಿರಬಾಂಧವ್ಯದ ಕಥೆಗಳು

SpeciallU by SpeciallU
December 30, 2022
in Politics
Reading Time: 1 min read
0 0
0
ಹೀರಾ ಬೆನ್ ಮೋದಿ : ತಾಯಿ ಮಗನ ಚಿರಬಾಂಧವ್ಯದ ಕಥೆಗಳು

ಹೀರಾ ಬೆನ್. ಜಗತ್ತಿನ ಅತ್ಯಂತ ಪ್ರಬಲ ನಾಯಕನ ತಾಯಿಯಾಗಿದ್ದವರು. ನೂರನೇ ವರ್ಷಕ್ಕೆ ಕಾಲಿಟ್ಟ ವರ್ಷದಲ್ಲೇ ಇಹಲೋಕದ ಪಯಣ ಮುಗಿಸಿದ್ದಾರೆ. ಗುಜರಾತಿನ ಅಹಮದಾಬಾದಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಹೀರಾಬೆನ್, ಮುಂಜಾನೆ 3.30ರ ಸುಮಾರಿಗೆ ವಿಧಿವಶರಾಗಿದ್ದಾರೆ. ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಧಾನಿ ಮೋದಿ ಸರಣಿ ಟ್ವೀಟ್ ಮಾಡಿ, ತಮ್ಮ ತಾಯಿಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. “ಭವ್ಯವಾದ ಶತಮಾನವು ದೇವರ ಪಾದದ ಮೇಲೆ ನಿಂತಿದೆ.. ತಾಯಿಯಲ್ಲಿ ನಾನು ಯಾವಾಗಲೂ ಆ ತ್ರಿಮೂರ್ತಿಗಳನ್ನು ಅನುಭವಿಸಿದ್ದೇನೆ, ಅದು ತಪಸ್ವಿಯ ಪ್ರಯಾಣ, ನಿಸ್ವಾರ್ಥ ಕರ್ಮಯೋಗಿಯ ಸಂಕೇತ ಮತ್ತು ಮೌಲ್ಯಗಳಿಗೆ ಬದ್ಧವಾಗಿರುವ ಜೀವನವನ್ನು ಒಳಗೊಂಡಿದೆ ಅಂತ ಬರೆದುಕೊಂಡಿದ್ದಾರೆ.

ಜಗತ್ತಿನ ಪ್ರಭಾವಿ ನಾಯಕ ನಂ.1 ಆಗಿರುವ ಮೋದಿಯೂ ಸೇರಿದಂತೆ ಹೀರಾಬೆನ್ ಅವರಿಗೆ ಒಟ್ಟು 6 ಮಕ್ಕಳು. ಐದು ಗಂಡು, ಒಂದು ಹೆಣ್ಣು. ಸೋಮ ಮೋದಿ ಹಿರಿಯ ಮಗ. ಆರೋಗ್ಯ ಇಲಾಖೆಯ ನಿವೃತ್ತ ಅಧಿಕಾರಿ. ಎರಡನೇ ಮಗ ಪಂಕಜ್ ಮೋದಿ. ಸರ್ಕಾರಿ ಇಲಾಖೆಯಲ್ಲಿ ಕ್ಲರ್ಕ್ ಆಗಿದ್ದವರು. ನಾಲ್ಕನೇ ಮಗ ಅಮೃತ್ ಮೋದಿ. ಲೇಥ್ ಮೆಷಿನ್ ಆಪರೇಟರ್ ಆಗಿದ್ದವರು. ಐದನೇ ಮಗ ಪ್ರಹ್ಲಾದ್ ಮೋದಿ. ಶಾಪ್ ಓನರ್. ಒಬ್ಬಳೇ ಒಬ್ಬ ಮಗಳು ವಸಂತಿಬೆನ್ ಹಸ್‍ಮುಖ್ ಲಾಲ್. 3ನೇ ಮಗನೇ ನರೇಂದ್ರ ಮೋದಿ.ಕಿರಿಯ ವಯಸ್ಸಿಗೇ ದಾಮೋದರ್ ದಾಸ್ ಅವರೊಂದಿಗೆ ಮದುವೆಯಾಗಿದ್ದ ಹೀರಾಬೆನ್‍ಗೆ ಬದುಕು ಹೂವಿನ ಹಾಸಿಗೆಯಾಗಿರಲಿಲ್ಲ. ಮೋದಿಯವರೇ ಹೇಳಿಕೊಂಡಂತೆ ಹೀರಾಬೆನ್ ಇಡೀ ಕುಟುಂಬದ ಅಸ್ಥಿಭಾರತವನ್ನು ಹೆಗಲಮೇಲೆ ಹೊತ್ತಿದ್ದವರು. ವಡಾನಗರ್‍ನಲ್ಲಿಯೇ ಇದ್ದ ಹೀರಾಬೆನ್, ಪತಿ ಮರಣದ ನಂತರ ಕಿರಿಯ ಮಗನ ಮನೆಗೆ ಶಿಫ್ಟ್ ಆದರು.

Related posts

ಗ್ಯಾರಂಟಿಯಿಂದ ಹೊರೆ : ಡಿಕೆ ಶಿವಕುಮಾರ್‌ ಒಪ್ಪಿಕೊಂಡ ಸತ್ಯ

ಈಗ ಮೀಡಿಯಾಗಳ ಮೇಲೆ ಮೋದಿಯದ್ದೂ ಟೀಕೆ..!

ತಾಯಿ ಮತ್ತು ಮಗನ ನಡುವೆ ಬಾಂಧವ್ಯ ಚೆನ್ನಾಗಿತ್ತು. ಪ್ರಾಮಾಣಿಕತೆಯ ಪಾಠಗಳನ್ನು ಬೋಧಿಸುತ್ತಿದ್ದ ಹೀರಾಬೆನ್, ಮಗ ಮೊದಲ ಬಾರಿ ಗುಜರಾತ್ ಸಿಎಂ ಆದಾಗ ಹೇಳಿದ್ದದ್ದು ಒಂದೇ ಮಾತು, ಯಾವತ್ತು ಲಂಚವನ್ನು ತೆಗೆದುಕೊಳ್ಳಬೇಡ. ತಾಯಿಯ ಮಾತಿಗೆ ತಕ್ಕಂತೆ ನಡೆದುಕೊಂಡ ಮೋದಿಯ ಮೇಲೆ ಇವತ್ತಿಗೂ ಲಂಚದ ಆರೋಪಗಳೂ ಇಲ್ಲ. ತಮ್ಮ ವ್ಯಕ್ತಿತ್ವ ರೂಪಿಸಿದ್ದೇ ತಮ್ಮ ತಾಯಿ ಎಂದು ಹಲವು ಬಾರಿ ಮೋದಿ ಹೇಳಿಕೊಂಡಿದ್ದಾರೆ.

ಮಗ ಸಿಎಂ ಆದರೂ, ಹೀರಾಬೆನ್ ತಮ್ಮ ಪುಟ್ಟ ಮನೆಯಿಂದ ಬಂಗಲೆಗೆ ಹೋಗಲಿಲ್ಲ. ಮಗನೆಂದರೆ ಅಕ್ಕರೆಯಿತ್ತಾದರೂ ಮಗನ ಅಧಿಕಾರದ ವಲಯದಲ್ಲಿ ತಾನಿರಬಾರದು ಎಂದು ನಿರ್ಧರಿಸಿ ದೂರವೇ ಇದ್ದರು ಹೀರಾಬೆನ್. ಪ್ರಧಾನಿ ನಿವಾಸಕ್ಕೆ ಭೇಟಿ ಕೊಟ್ಟಿದ್ದು ಮೋದಿ ಪ್ರಧಾನಿಯಾಗಿ 2 ವರ್ಷಗಳ ನಂತರ. ಆಗ ತಮ್ಮ ವಿಶಾಲ ಭವನದಲ್ಲಿ ತಾಯಿಯನ್ನು ವೀಲ್ ಚೇರ್‍ನಲ್ಲಿ ಕೂರಿಸಿಕೊಂಡು ಕಾಂಪೌಂಡ್ ಸುತ್ತಿಸಿದ್ದರು ಖುದ್ದು ಪ್ರಧಾನಿ ಮೋದಿ. ನೋಟ್ ಬ್ಯಾನ್ ಮಾಡಿದಾಗ ತಾವೂ ಎಟಿಎಂನಲ್ಲಿ ಕ್ಯೂನಲ್ಲಿ ನಿಂತು ನೋಟ್ ಬ್ಯಾನ್‍ಗೆ ಬೆಂಬಲ ವ್ಯಕ್ತಪಡಿಸಿದ್ದರು. 2014ರಲ್ಲಿ ಮೋದಿ ಪ್ರಧಾನಿಯಾದಾಗ ಹೀರಾಬೆನ್ ಅವರಿಗೆ ಸೀರೆಯೊಂದನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಅದಕ್ಕೆ ಪ್ರತಿಯಾಗಿ ಹೀರಾ ಬೆನ್ ಶಾಲ್‍ನ್ನು ಗಿಫ್ಟ್ ಆಗಿ ಕೊಟ್ಟಿದ್ದರು.

ನನ್ನ ತಾಯಿ 15-16ನೇ ವಯಸ್ಸಿನಲ್ಲಿ ಮದುವೆಯಾದರು. ಮನೆಯಲ್ಲಿ ಬಡತನವಿತ್ತು. ಹೀಗಾಗಿ ಮುಂದೆ ಓದಲು ಆಗಲಿಲ್ಲ. ಕಷ್ಟವಿದ್ದರೂ ತಮ್ಮ ಮಕ್ಕಳ ಓದನ್ನು ಮಾತ್ರ ನಿಲ್ಲಿಸಲಿಲ್ಲ. ಎಷ್ಟು ಕಷ್ಟವಿತ್ತೆಂದರೆ ಸ್ಕೂಲಿನ ಫೀಸ್ ಕಟ್ಟೋಕೂ ದುಡ್ಡಿರುತ್ತಿರಲಿಲ್ಲ. ಆದರೆ ಸಾಲ ಮಾಡುವುದೆಂದರೆ ಅಮ್ಮನಿಗೆ ವಿರೋಧವಿತ್ತು. ಹೆಚ್ಚು ಕೂಲಿ ಮಾಡಿ ದುಡ್ಡು ಹೊಂಚುತ್ತಿದ್ದರೇ ಹೊರತು ಸಾಲ ಮಾಡುತ್ತಿರಲಿಲ್ಲ. ಫೀಸ್ ಹೊಂಚುತ್ತಿದ್ದರು. ಆಗ ನನ್ನ ಬಳಿ ಇದ್ದದ್ದು ಒಂದೇ ಯೂನಿಫಾರ್ಮ್. ಆಗಾಗ ಹರಿದು ಹೋಗುತ್ತಿತ್ತು. ತಕ್ಷಣ ಅದಕ್ಕೆ ಹೊಲಿಗೆ ಹಾಕಿ, ತೇಪೆ ಹಾಕುತ್ತಿದ್ದರು. ಆದರೆ ತೇಪೆ ಹಾಕಿದ್ದು ಕಾಣದಂತೆ ಎಚ್ಚರಿಕೆ ವಹಿಸುತ್ತಿದ್ದರು ಎಂದು ಹೇಳಿಕೊಂಡಿದ್ದರು ಖುದ್ದು ನರೇಂದ್ರ ಮೋದಿ.

ನನ್ನ ಅಮ್ಮ ಹೆಚ್ಚು ಓದಿರಿಲಿಲ್ಲ, ನಿಜ. ಆದರೆ ಕೆಲವು ಆಯುರ್ವೇದ ಚಿಕಿತ್ಸೆಗಳು, ಔಷಧಿಗಳು ಗೊತ್ತಿದ್ದವು. ನಮ್ಮ ಹಳ್ಳಿಯ ಮಂದಿಗೆ ಅವಳೇ ಡಾಕ್ಟರ್. ಆಕೆಯ ನೂರು ವರ್ಷದ ಗುಟ್ಟು ಅದೇ ಎಂದು ಹೇಳಿದ್ದರು ಕಿರಿಯ ಮಗ ಪ್ರಹ್ಲಾದ್ ಮೋದಿ.
ಹೀರಾ ಬೆನ್ ಅವರಿಗೆ ಐಸ್ ಕ್ರೀಂ ಎಂದರೆ ಇಷ್ಟ. ಮಕ್ಕಳು ಏನು ಕೊಟ್ಟರೂ ಅಷ್ಟೇನು ಉತ್ಸಾಹ ತೋರಿಸದೇ ಇದ್ದ ಹೀರಾಬೆನ್, ಐಸ್ ಕ್ರೀಂ ಎಂದರೆ ಇಷ್ಟಪಟ್ಟು ತಿನ್ನುತ್ತಿದ್ದರು. ಐಸ್ ಕ್ರೀಂನ್ನು ಯಾವತ್ತೂ ಬೇಡ ಎಂದವರಲ್ಲ. ರೋಟಿ ಮತ್ತು ಕಡಿಯಲ್ಲೇ ಜೀವನ ತಳ್ಳಿದ್ದ ಹೀರಾಬೆನ್‍ಗೆ ಐಷಾರಾಮಿ ಬದುಕಿನ ಬಗ್ಗೆ ವ್ಯಾಮೋಹವೂ ಇರಲಿಲ್ಲ. ತರಕಾರಿಗೂ ಹಣ ಇರುತ್ತಿರಲಿಲ್ಲ. ಹೀಗಾಗಿ ಹಳ್ಳಿಯಲ್ಲಿ ಸಿಗುತ್ತಿದ್ದ ಉಚಿತ ಮಜ್ಜಿಗೆಯೇ ರೋಟಿಗೆ ಜೊತೆಯಾಗುತ್ತಿತ್ತು.

ಅಣ್ಣನ ಬದುಕಿನ ದೊಡ್ಡ ಪಾಠವೇ ಅದು. ಹೀಗಾಗಿಯೇ ಆತ ಮನೆ ಬಿಟ್ಟು ಹಿಮಾಲಯಕ್ಕೆ ಹೋಗಿದ್ದಾಗ ಆತನ ದೇಹ ಪ್ರಕೃತಿ ಕಡಿಮೆ ಆಹಾರಕ್ಕೆ ಅಡ್ಜಸ್ಟ್ ಆಗಿರಬೇಕು. ಇವತ್ತಿಗೂ ಆತನ ಊಟದಲ್ಲಿ ಬದಲಾವಣೆಯಾಗಿಲ್ಲ. ಅಮ್ಮನೂ ಅಷ್ಟೆ, ರೋಟಿ, ಕಡಿಯೇ ಆಕೆಗೆ ಇಷ್ಟವಾದ ಆಹಾರ ಎಂದಿದ್ದರು ಪ್ರಹ್ಲಾದ್ ಮೋದಿ. ಅಪ್ಪನೂ ದುಡಿಯುತ್ತಿದ್ದರು, ಅಮ್ಮನೂ ದುಡಿಯುತ್ತಿದ್ದರು. ನೀವೀಗ ಹೇಳುತ್ತೀರಲ್ಲ, ನರೇಂದ್ರ ಮೋದಿ 18 ಗಂಟೆ ಕೆಲಸ ಮಾಡುತ್ತಾರೆ ಅಂತ, ಆ 18 ಗಂಟೆಗಳ ಕರ್ತವ್ಯಕ್ಕೆ ಸ್ಫೂರ್ತಿಯೇ ನಮ್ಮಮ್ಮ ಎಮದು ಅಣ್ಣನ ಬಗ್ಗೆ, ಅಮ್ಮನ ಬಗ್ಗೆ ಅಭಿಮಾನದಿಂದ ಹೇಳಿಕೊಂಡಿದ್ದರು ಪ್ರಹ್ಲಾದ್ ಮೋದಿ.
ಆಕೆಗೆ ಓದು ಅಷ್ಟಾಗಿ ಗೊತಿರಲಲ್ಲ. ಆದರೆ ಪತಿ ಇರುವವರೆಗೆ ಅವರು ಧಾರ್ಮಿಕ ಪುಸ್ತಕಗಳನ್ನು ಓದಿ ಹೇಳುತ್ತಿದ್ದರು. ಅಲ್ಲಿ ಕೇಳಿದ್ದನ್ನು ಮಕ್ಕಳಿಗೆ ಹೇಳುತ್ತಿದ್ದರು. ಮೋದಿಯ ಧಾರ್ಮಿಕ ನಂಬಿಕೆಗಳ ಹಿಂದಿನ ಶಕ್ತಿಯೂ ಹೀರಾಬೆನ್ ಅವರೇ. ಎಲ್ಲ ಗಂಡು ಮಕ್ಕಳಂತೆಯೇ, ತಂದೆಗಿಂತ ಹೆಚ್ಚು ತಾಯಿಯ ಬಳಿಯೇ ಮೋದಿಗೆ ಆತ್ಮೀಯತೆಯಿತ್ತು. ತಾಯಿಯ ಜೊತೆ ದೇವಸ್ಥಾನಗಳಿಗೆ ಹೋಗುತ್ತಿದ್ದ ಮೋದಿಗೆ ಅದು ದೇವರು, ಧರ್ಮದ ಬಗ್ಗೆ ಗಟ್ಟಿಯಾದ ನಂಬಿಕೆಗಳನ್ನು ಚಿಕ್ಕಂದಿನಲ್ಲಿಯೇ ಬಿತ್ತಿತು.

ಹಿರಿಯರಾಗಿದ್ದರೂ, ಪಿಂಚಣಿಯಲ್ಲೇ ಜೀವನ ಸಾಗಿಸುತ್ತಿದ್ದರೂ ಹೀರಾಬೆನ್ ಅವರಿಗೆ ಮಗನ ಮೇಲೆ ವಿಶೇಷ ಮಮತೆ. ಮಗ ಮೋದಿಯೂ ಅಷ್ಟೆ, ಪ್ರಧಾನಿಯಾಗಿದ್ದರೂ ಅಮ್ಮ ಕೊಡುವ ಹಣದ ಮೇಲೆ ಎಲ್ಲ ಮಕ್ಕಳಂತೆಯೇ ಒಂದು ಅಕ್ಕರೆ. ಮೊದಲ ಬಾರಿ ಪ್ರಧಾನಿಯಾದಾಗ 5001 ರೂ.ಗಳನ್ನು ಪ್ರಧಾನಮಂತ್ರಿ ನಿಧಿಗೆ ಕಾಣಿಕೆಯಾಗಿದ್ದ ನೀಡಿದ್ದರು ಹೀರಾಬೆನ್.

Tags: #Hiraben #Modi #Modimother #Motherson #ಹೀರಾಬೆನ್ #ಮೋದಿ #ಮೋದಿಯತಾಯಿ #ಮೋದಿಯಅಮ್ಮ #ಅಮ್ಮಮಗ #ತಾಯಿಗೆತಕ್ಕಮಗ
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.