ಕಾಂಗ್ರೆಸ್ ಚುನಾವಣೆಯ ರಂಗು ಏರುತ್ತಿದ್ದಂತೆಯೇ ಘೋಷಿಸಿದ್ದ ಮೊದಲ ಕೊಡುಗೆ ಮನೆ ಮನೆಗೂ 200 ಯುನಿಟ್ ವಿದ್ಯುತ್ ಫ್ರೀ ಎಂಬ ಘೋಷಣೆ. ಡಿಕೆ ಶಿವಕುಮಾರ್ ಅವರು ನೀಡಿದ್ದ ಪವರ್ ಸ್ಟ್ರೋಕ್ ಎಲ್ಲರಿಗೂ ಥಂಡಾ ಹೊಡೆಸಿತ್ತು. ಬಿಜೆಪಿ ಮತ್ತು ಜೆಡಿಎಸ್ ಇದು ಸಾಧ್ಯವಿಲ್ಲ ಎಂದು ಟೀಕಿಸಿದಾಗ ನಾನು ಇಂಧನ ಸಚಿವನಾಗಿದ್ದವನು, ನನಗೆ ಗೊತ್ತು ಎಂದು ಉತ್ತರ ಕೊಟ್ಟಿದ್ದರು ಡಿಕೆಶಿವಕುಮಾರ್. 








