ರಾಜಕಾರಣದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ. ಶಾಶ್ವತ ಮಿತ್ರರೂ ಅಲ್ಲ. ಅಂತಹ ನೂರಾರು ನಿದರ್ಶನಗಳನ್ನು ದೇಶ ನೋಡಿದೆ. ಅವರಿಬ್ಬರ ಮಧ್ಯೆ ನೀರು ಹಾಕಿದ್ರೂ ಬೆಂಕಿ ಹೊತ್ತಿಕೊಳ್ಳುತ್ತೆ ಅನ್ನೋ ತರದ ಶತ್ರುಗಳೂ ಒಬ್ಬಿಬ್ಬರಲ್ಲ. ಅಂಹವರು ಹೆಗಲ ಮೇಲೆ ಕೈ ಹಾಕಿಕೊಂಡಿದ್ದನ್ನು ಕರ್ನಾಟಕ ನೋಡಿದೆ. ಹೆಗಲ ಮೇಲೆ ಕೈ ಇಟ್ಟಿದ್ದವರೇ ತಲೆಯ ಮೇಲೆ ಕೈ ಹಾಕಿ ಅದುಮಿದ್ದನ್ನೂ ರಾಜ್ಯ ರಾಜಕೀಯ ಕಣ್ಣಾರೆ ಕಂಡಿದೆ. ಇವರಲ್ಲಿ ಸಖತ್ ಡಿಫರೆಂಟ್ ಅನ್ನಿಸೋದು ಸಿದ್ದರಾಮಯ್ಯ ಈಶ್ವರಪ್ಪ ಫ್ರೆಂಡ್‍ಶಿಪ್ಪು.

ಇಬ್ಬರೂ ಕುರುಬ ಸಮುದಾಯದ ಪ್ರಬಲ ನಾಯಕರು. ಸಿದ್ದರಾಮಯ್ಯ ಅವರಿಗಿಂತ ಈಶ್ವರಪ್ಪ ಒಂದು ವರ್ಷ ಚಿಕ್ಕವರು. ಒಬ್ಬರು ಬಿಜೆಪಿ.. ಮತ್ತೊಬ್ಬರು ಕಾಂಗ್ರೆಸ್. ಸಿದ್ದರಾಮಯ್ಯ ಅವರನ್ನು ಹಣಿಯೋಕೆ ಬಿಜೆಪಿ ಬಿಡೋದೇ ಈಶ್ವರಪ್ಪ ಅಸ್ತ್ರವನ್ನ. ನೋ ಫಿಲ್ಟರ್.. ಏಕವಚನದಲ್ಲಿ ಬೈಬೇಕಾ.. ಬಹುವಚನದಲ್ಲಿ ಬೈಬೇಕಾ.. ಮುಲಾಜೇ ಇಲ್ಲದೆ ಸಿದ್ದರಾಮಯ್ಯರನ್ನು ಈಶ್ವರಪ್ಪ ಬೈತಾರೆ. ಸಿದ್ದು ಕೂಡಾ ಇದಕ್ಕೆ ಹೊರತೇನಲ್ಲ. ಮುಲಾಜಿಲ್ಲದೆ ಟೀಕಿಸ್ತಾರೆ. ಈಶ್ವರಪ್ಪನಿಗೆ ಮೆದುಳೇ ಇಲ್ಲ. ಬುದ್ದಿ ಇಲ್ಲ. ದಡ್ಡ. ಡ್ಯಾಷ್..ಡ್ಯಾಷ್.. ಹೀಗೆ ಬೈತಾರೆ. ಆದರೆ.. ಇಬ್ಬರ ನಡುವಿನ ಬಾಂಧವ್ಯದ ಕಥೆಯೇ ಬೇರೆ. ಬೆಳಗಾವಿಯಲ್ಲಿ ನಡೀತಿರೋ ಅಧಿವೇಶನದಲ್ಲಿ ಆಗಿದ್ದೂ ಇದೆ.
ಈಶ್ವರಪ್ಪ ಈ ಬಾರಿ ಸದನಕ್ಕೆ ಬಂದಿದ್ದರು. ಸಚಿವ ಸ್ಥಾನ ಹೋದ ಮೇಲೆ ಸೆಷನ್ ತಪ್ಪಿಸಿಕೊಂಡಿದ್ದ ಈಶ್ವರಪ್ಪಗೆ ಈ ಬಾರಿ ಏನೋ ಒಂದು ಸಂದೇಶವಂತೂ ಸಿಕ್ಕಿದೆ. ಬೊಮ್ಮಾಯಿ ಅವರೊಂದಿಗೆ ಮಾತನಾಡಿದ ಮೇಲೆ ಮುಖದಲ್ಲಿ ಮುದುಡಿದ್ದ ತಾವರೆ ಅರಳುತ್ತಿದೆ. 

ಇದ್ದರೂ ಇರಬಹುದು ಎನ್ನುತ್ತಾರೆ ರಾಜಕೀಯ ವರದಿಗಾರಿಕೆಯಲ್ಲಿ ಪಳಗಿದವರು. ಏಕೆಂದರೆ ಹೊರಗೆ ಏನೇ ಬೈದಾಡಿಕೊಂಡರೂ ಇಬ್ಬರೂ ಕೂಡಾ ಇವತ್ತಿಗೂ ಆಪ್ತರಾಗಿಯೇ ಉಳಿದಿದ್ದಾರೆ. ಓಪನ್ ಆಗಿಯೇ ಇಬ್ಬರೂ ಅದನ್ನು ಒಪ್ಪಿಕೊಂಡೂ ಇದ್ದಾರೆ. ಸಿದ್ದರಾಮಯ್ಯ ಈಶ್ವರಪ್ಪ ಅವರಿಗೆ ಯಾವತ್ತೂ ಮಾತನಾಡಿಸೋದು ಏಕವಚನದಲ್ಲಿಯೇ. ಪ್ರೀತಿಯಲ್ಲಿಯೇ ಇರಲಿ, ಟೀಕಿಸುವಾಗಲೇ ಇರಲಿ..ಅವನು ಎಂದೇ ಬಳಸೋದು. ಅದಕ್ಕೆ ಈಶ್ವರಪ್ಪ ಒಮ್ಮೊಮ್ಮೆ ಸಿಟ್ಟಾದರೂ..

ಡಿಕೆ-ಯಡಿಯೂರಪ್ಪ, ಎಂಬಿಪಾಟೀಲ್-ಯಡಿಯೂರಪ್ಪ, ಶೆಟ್ಟರ್-ಶಾಮನೂರು ಶಿವಶಂಕರಪ್ಪ, ಜಾರಕಿಹೊಳಿ ಬ್ರದರ್ಸ್, ಸಿದ್ದು-ಜಿ.ಟಿ.ದೇವೇಗೌಡ, ರಾಮಲಿಂಗಾರೆಡ್ಡಿ-ಆರ್.ಅಶೋಕ್, ಯತ್ನಾಳ್-ಎಂಬಿ ಪಾಟೀಲ್.. ಹೀಗೆ ಪಟ್ಟಿ ಉದ್ದವಾಗಿಯೇ ಇದೆ.



