ಅಭಿನಂದನ್ ವರ್ಧಮಾನ್. ಭಾರತದ 2ನೇ ಸರ್ಜಿಕಲ್ ಸ್ಟ್ರೈಕ್‍ನಲ್ಲಿ ಹೀರೋ ಆದವರು. ಕೂದಲೆಳೆ ಅಂತರದಲ್ಲಿ ಸಾವನ್ನು ಗೆದ್ದು ಪಾಕಿಸ್ಥಾನ ಸೈನಿಕರಿಗೆ ಸೆರೆಯಾಗಿದ್ದವು. ಭಾರತದ ಹಠಕ್ಕೆ ಹೆದರಿ ಪಾಕ್ ವರ್ಧಮಾನ್ ಅವರನ್ನು ಬಿಡುಗಡೆ ಮಾಡಿತ್ತು. ಅವರೀಗ ವಾಯುಪಡೆಗೆ ನಿವೃತ್ತಿ ಹೇಳಿದ್ದಾರೆ.
ಅಭಿನಂದನ್ ಸೋರ್ಡ್ ಆರ್ಮ್ ಎಂದೇ ಹೆಸರಾಗಿದ್ದ 51ನೇ ಸ್ಕ್ವಾಡ್ರನ್ ಟೀಂನವರು. 2019ರಲ್ಲಿ ವಿಂಗ್ ಕಮಾಂಡರ್ ಆಗಿದ್ದ ವರ್ಧಮಾನ್ ಅವರಿಗೆ ಕೇಂದ್ರ ಸರ್ಕಾರ ವೀರ್ ಚಕ್ರ ಪುರಸ್ಕಾರ ನೀಡಿ ಗೌರವಿಸಿತ್ತು. ಈಗ ಅಭಿನಂದನ್ ಪ್ರಮೋಷನ್ ಕೂಡಾ ಪಡೆದು ಗ್ರೂಪ್ ಕ್ಯಾಪ್ಟನ್ ಆಗಿದ್ದಾರೆ.


ಭಾರತದ ಸೈನ್ಯ ಪಾಕಿಸ್ತಾನದ ಉಗ್ರರು ಮತ್ತು ಸೈನಿಕರ ವಿರುದ್ಧ ನಡೆಸಿದ 2ನೇ ಸರ್ಜಿಕಲ್ ಸ್ಟೈಕ್‍ನಲ್ಲಿ ಹೀರೋ ವರ್ಧಮಾನ್. ಮಿಗ್-21 ವಿಮಾನದಲ್ಲಿ ದಾಳಿ ನಡೆಸಿ ಅತ್ಯುನ್ನತ ತಂತ್ರಜ್ಞಾನ ಹೊಂದಿದ್ದ ಎಫ್-16 ವಿಮಾನವನ್ನು ಹೊಡೆದುರುಳಿಸಿದ್ದರು ಅಭಿನಂದನ್. ಒಂದೇ ಹೊಡೆತಕ್ಕೆ ಪಾಕ್ ಮತ್ತು ಅಮೆರಿಕ ಎರಡೂ ದೇಶಗಳ ಪ್ರತಿಷ್ಠೆಗೆ ಪೆಟ್ಟು ಕೊಟ್ಟಿದ್ದರು.
ಈಗ 38 ವರ್ಷಗಳ ಇತಿಹಾಸ ಹೊಂದಿದ್ದ ಮಿಗ್ 21 ವಿಮಾನ ಹಾಗೂ 18 ವರ್ಷಗಳ ಅನುಭವ ಹೊಂದಿದ್ದ ಅಭಿನಂದನ್ ವರ್ಧಮಾನ್ ಎರಡೂ ರಿಟೈರ್. ಮಿಗ್ ವಿಮಾನಕ್ಕೆ ಖ್ಯಾತಿ ಮತ್ತು ಕುಖ್ಯಾತಿ ಎರಡೂ ಇದ್ದವು. ಪಾಕಿಸ್ತಾನ ವಿರುದ್ಧವೇ ಯುದ್ಧಗಳಲ್ಲಿ ಪರಾಕ್ರಮ ಮೆರಿದಿತ್ತು. ಕಾಶ್ಮೀರ ಕಣಿವೆಯ ರಕ್ಷಕ ಎಂಬ ಬಿರುದೂ ಈ ಮಿಗ್ 21 ವಿಮಾನಕ್ಕೆ ಇತ್ತು. ಜೊತೆಗೆ ಇದು ಹಾರುವ ಶವಪೆಟ್ಟಿಗೆ ಎಂಬ ಕುಖ್ಯಾತಿಗೂ ಒಳಗಾಗಿತ್ತು.
ಆದರೆ ಸ್ಕ್ವಾಡ್ರನ್ ಆರ್ಮಿ ಮಾತ್ರ ರಿಟೈರ್ ಆಗುತ್ತಿದೆ. ಮಿಗ್ 21ನ ಉಳಿದ ಮೂರು ವಿಂಗ್‍ಗಳು ಕಾರ್ಯ ನಿರ್ವಹಿಸಲಿವೆ.



