ವಿದ್ಯುತ್ ಬಿಲ್ ಡಬ್ಬಲ್ ತ್ರಿಬ್ಬಲ್ ಬರ್ತಾ ಇದೆ. ಹಾಗೆ ಆಗೋದಕ್ಕೆ ಕಾರಣ ಎರಡು. ಮೊದಲನೆಯದ್ದು ಏಪ್ರಿಲ್ನದ್ದೂ ಸೇರಿಸಿ ಬಿಲ್ ಬರ್ತಿರೋದು. ಎರಡನೆಯದ್ದು ಸ್ಲಾಬ್ ಸಂಖ್ಯೆ ಕಡಿಮೆ ಮಾಡಿರೋದು. ಗೃಹಜ್ಯೋತಿ ಮಿತಿಯ ಒಳಗೆ ಇದ್ದರೆ, ನಿಮಗೆ ಕರೆಂಟ್ ಬಿಲ್ ಫ್ರೀ. ಕರೆಂಟ್ ಬಿಲ್ 200 ಯುನಿಟ್ ದಾಟಿದರೆ ಡಬ್ಬಲ್ ಬಿಲ್ ಕಟ್ಟಬೇಕಾದ ಅನಿವಾರ್ಯತೆ ಇದೆ. ಸಣ್ಣ ಮಟ್ಟದ ಕೈಗಾರಿಕೆಗಳು ಉದಾಃ ವೆಂಡರ್ ಶಾಪ್, ಗಿರಣಿ ನಡೆಸುವವರು, ಬಡಗಿಗಳು, ಎಲೆಕ್ಟ್ರಾನಿಕ್ ರಿಪೇರಿ ಅಂಗಡಿಗಳು, ಲೇಥರ್ ಮೆಷಿನ್ ಇಟ್ಟಕೊಂಡಿರುವವರು, ಬಟ್ಟೆ ನೇಯ್ಗೆ ಮಾಡುತ್ತಿರುವವರು, ಟೈಲರುಗಳು.. ಒಟ್ಟಿನಲ್ಲಿ ಸಣ್ಣ ಸಣ್ಣ ಮೆಷಿನ್ ಬಳಸುವವರ ಹೆಚ್ಪಿ ಮಿನಿಮಮ್ ದರ ಏರಿಕೆಯಾಗಿದೆ.



