

ಬೆಂಗಳೂರಿನಲ್ಲಿ ಗುಂಡಿಗಳಿಲ್ಲದ ಒಂದು ಕಿ.ಮೀ. ರಸ್ತೆ ತೋರಿಸಿದವರಿಗೆ ಲಕ್ಷ ಬಹುಮಾನ ಕೊಡುತ್ತೇವೆ ಎಂದರೆ ಅದು ಅಸಾಧ್ಯ. ಸಾವಿಲ್ಲದ ಮನೆಯ ಸಾಸಿವೆ ಹೇಗಿಲ್ಲವೋ ಹಾಗೆಯೇ ಗುಂಡಿಗಳಿಲ್ಲದ ರಸ್ತೆಗಳೂ ಇಲ್ಲ. ಹೈಕೋರ್ಟ್ ಅದೆಷ್ಟು ಬಾರಿ ಛೀಮಾರಿ ಹಾಕಿದೆಯೋ.. ಅಧಿಕಾರಿಗಳಿಗೆ ಎಲ್ಲಿಯೂ ತಾಕುತ್ತಿಲ್ಲ. ಅಧಿಕೃತ ಲೆಕ್ಕದ ಪ್ರಕಾರ (ಇದು ಕೇವಲ ಅಧಿಕೃತ) ಕಳೆದೈದು ವರ್ಷಗಳಲ್ಲಿ ಗುಂಡಿಗೆ ಬಲಿಯಾದವರ ಸಂಖ್ಯೆ 12. ಇಂತಹ ಗುಂಡಿ ಮುಚ್ಚುವುದೇ ಒಂದು ಕಾಯಕ.
ಕಳೆದ 5 ವರ್ಷಗಳಲ್ಲಿ ಗುಂಡಿ ಮುಚ್ಚುವುದಕ್ಕೆಂದೇ ಬಿಬಿಎಂಪಿ ಖರ್ಚು ಮಾಡಿದ ಹಣ 215.74 ಕೋಟಿ. ಇದು ಅಧಿಕೃತ ಲೆಕ್ಕ. 2017ರಿಂದ 2021ರವರೆಗೆ ಗುಂಡಿ ಮುಚ್ಚೋಕೆ ಖರ್ಚು ಮಾಡಿದ್ದು. ಖಂಡಿತಾ ಇದು ರಸ್ತೆಗಳಿಗೆ ಖರ್ಚು ಮಾಡಿದ ಹಣವಲ್ಲ. ರಸ್ತೆಗಳನ್ನು ಮಾಡಿದ ಮೇಲೆ ಬೀಳೋ ಗುಂಡಿಗಳಿವೆಯಲ್ಲ. ಅವುಗಳನ್ನು ಮುಚ್ಚೋಕೆ ಮಾಡಿದ ಖರ್ಚು. ಹೀಗಿದ್ದರೂ ಗುಂಡಿಗಳಿಲ್ಲದ ರಸ್ತೆಗಳಿಲ್ಲ. ಏಕೆ ಗೊತ್ತೇ..
ರಸ್ತೆ ಗುಂಡಿ ರಹಸ್ಯ 01 : ರಸ್ತೆಗಳಲ್ಲಿ ಚರಂಡಿಗೆ ಅಥವಾ ಕೇಬಲ್ ಹಾಕೋಕೆ ರಸ್ತೆ ಅಗೆಯಬೇಕು ಎಂದು ಅಧಿಕಾರಿಗಳಿಗೆ ನೆನಪಾಗುವುದೇ ರಸ್ತೆ ಕೆಲಸ ಮುಗಿಸಿದ ಮೇಲೆ.
ರಸ್ತೆ ಗುಂಡಿ ರಹಸ್ಯ 02 : ರಸ್ತೆಗಳಿಗೆ ಟಾರು ಹಾಕಲು ಅರಂಭ ಮಾಡುವುದು ಮಳೆಗಾಲದ ಶುರುವಾತಿನಲ್ಲಿ. ಗುಂಡಿ ಬಿದ್ದರೆ ಮಳೆಯ ನೆಪ ಹೇಳಬಹುದು


ರಸ್ತೆ ಗುಂಡಿ ರಹಸ್ಯ 04 : ರಸ್ತೆ ಮಾಡುವ ಇಂಜಿನಿಯರ್ ಎಷ್ಟು ಬುದ್ದಿವಂತನಿರುತ್ತಾರೆ ಎಂದರೆ ನೀರು ಹೋಗುವುದಕ್ಕೆ ಸ್ಥಳ ಬಿಡಬೇಕು. ಪ್ಲಾನ್‍ನಲ್ಲಿಯೇ ಅಂಥಾದ್ದೊಂದು ಸಿಸ್ಟಂ ರೂಪಿಸಬೇಕು ಎಂಬ ಆಲೋಚನೆಯೂ ಇರುವುದಿಲ್ಲ
ರಸ್ತೆ ಗುಂಡಿ ರಹಸ್ಯ 05 : ಇಂಜಿಯರುಗಳು ಎಂತಹ ಪ್ರಚಂಡಿರುತ್ತಾರೆ ಎಂದರೆ ಕೋಟಿ ಕೋಟಿ ಸುರಿದು ರಸ್ತೆಗಳೆಲ್ಲ ಪೂರೈಸಿದ ಮೇಲೆಯೇ ಸಮಸ್ಯೆಗಳು ಗೊತ್ತಾಗುವುದು.
ರಸ್ತೆ ಗುಂಡಿ ರಹಸ್ಯ 06 : ಫಿಕ್ಸ್ ಮೈ ಸ್ಟ್ರೀಟ್ ಅನ್ನೊ ಆಪ್ ಇದೆ. ಅದರಲ್ಲಿ ಗುರುತಿಸಿದ ಗುಂಡಿಗಳನ್ನು ಮಾತ್ರ ಮುಚ್ಚಬೇಕು. ಬೇರೆ ಗುಂಡಿ ಮುಚ್ಚಿದರೆ ದುಡ್ಡು ಕೊಡುವಂತಿಲ್ಲ. ಇದರ ಪ್ರಕಾರ ರಸ್ತೆಗಳಲ್ಲಿರುವ ಗುಂಡಿಗಳಿಗಿಂತ ಆಪ್‍ನಲ್ಲಿ ಕಾಣಿಸುವ ಗುಂಡಿಗಳಷ್ಟೇ ಗುಂಡಿಗಳು.
ಅತಿ ದೊಡ್ಡ ಕಾರಣಗಳ ಪಟ್ಟಿಯಲ್ಲಿ ಭ್ರಷ್ಟಾಚಾರವನ್ನು ಸೇರಿಸಲಾಗಿಲ್ಲ. ಇದು ಭ್ರಷ್ಟಾಚಾರೇತರ ಕಾರಣಗಳ ಪಟ್ಟಿ. ಇವುಗಳನ್ನು ನೋಡಿದಾಗ ಶೇ.40ರ ಕಥೆ ಬಿಡಿ.. ಶೇ.100ಕ್ಕೆ ನೂರು ಎಂದರೂ ಜನ ನಂಬುತ್ತಾರೆ.



