ರಾಜ್ಯ ಸರ್ಕಾರ ದೈವ ನರ್ತಕರಿಗೆ 60 ವರ್ಷ ಮೇಲ್ಪಟ್ಟವರಿಗೆ 2 ಸಾವಿರ ರೂ. ಮಾಸಾಶನ ನೀಡಲು ನಿರ್ಧರಿಸಿದೆ. ರಾಜ್ಯ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಈ ವಿಷಯ ತಿಳಿಸಿದ್ದಾರೆ. ಜಾನಪದ ಅಕಾಡೆಮಿ ಮೂಲಕ ಮಾಸಾಶನ ನೀಡುವ ನಿರ್ಧಾರ ಮಾಡಲಾಗಿದೆ. ಆದೇಶವೂ ಹೊರಬಿದ್ದಿದೆ. ದೈವಾರಾಧನೆ ತುಳು ನಾಡಿನವರ ಅವಿಭಾಜ್ಯ ಅಂಗವಾಗಿದೆ. ಅರವತ್ತು ವರ್ಷ ಮೇಲ್ಪಟ್ಟವರು ಅರ್ಜಿ ಹಾಕಬೇಕು ಎಂದು ಸರ್ಕಾರ ಹೇಳಿದೆ.
ಇದು ಕಾಂತಾರದ ಯಶಸ್ಸು. ಕಾಂತಾರ ಚಿತ್ರದಲ್ಲಿ ತೋರಿಸಿರುವ ದೈವಾರಾಧನೆ ಹಾಗೂ ಚಿತ್ರಕ್ಕೆ ಸಿಕ್ಕ ಯಶಸ್ಸು ಕೂಡಾ ದೈವನರ್ತಕರಿಗೆ ಇಷ್ಟು ದೊಡ್ಡ ಗೌರವ ಸಿಗಲು ಕಾರಣ ಎಂದರೆ ತಪ್ಪಲ್ಲ. ಮಾಸಾಶನ ಘೋಷಣೆಗೆ ಪಾಣಾರ ಸಂಘ ಸೇರಿದಂತೆ ಕರಾವಳಿ ಭಾಗದ ಹಲವು ಸಂಘಟನೆಗಳು ಹರ್ಷ ವ್ಯಕ್ತಪಡಿಸಿವೆ. ಅಂದಹಾಗೆ ಅವರು ಧನ್ಯವಾದ ಅರ್ಪಿಸಿರುವುದು ಇಬ್ಬರು ಶೆಟ್ಟರಿಗೆ.
ಕಾಂತಾರಾದ ರಿಷಬ್ ಶೆಟ್ಟಿ ಮತ್ತು ಸುವರ್ಣ ನ್ಯೂಸ್‍ನ ಬಿಗ್ 3 ಜಯಪ್ರಕಾಶ್ ಶೆಟ್ಟಿ. ಬಿಗ್ 3 ಶೋನಲ್ಲಿ ದೈವನರ್ತಕರ ಸಮಸ್ಯೆಗಳನ್ನು ಸವಿಸ್ತಾರವಾಗಿ ತೋರಿಸಲಾಗಿತ್ತು. ಸಚಿವರ ಗಮನಕ್ಕೆ ತಂದು ಮನವಿ ಮಾಡಲಾಗಿತ್ತು. ಸಚಿವ ಸುನಿಲ್ ಕುಮಾರ್ ಕೂಡಾ ಸ್ಪಂದಿಸಿದ ನಂತರ ಕಾರ್ಯಕ್ರಮ ಮುಗಿಯವ ಹೊತ್ತಿಗೆ ಸರ್ಕಾರದ ಆದೇಶವೂ ಬಂತು. ಹೀಗಾಗಿ ಇಬ್ಬರು ಶೆಟ್ರಿಗೂ ದೈವನರ್ತಕರು ಹಾಗೂ ಕರಾವಳಿಯ ಜನ ಅಭಿನಂದನೆ ಸಲ್ಲಿಸುತ್ತಿದ್ದಾರೆ.



