ಚೀತಾಗಳು ಭಾರತಕ್ಕೆ ಬಂದು ಕೆಲವೇ ದಿನಗಳಲ್ಲಿ ಗುಡ್ ನ್ಯೂಸ್. ಮಧ್ಯಪ್ರದೇಶದ ಕುನು ಅರಣ್ಯದಲ್ಲಿರುವ ಚೀತಾಗಳಲ್ಲಿ ಹೊಸ ಜನರೇಷನ್ ಸೃಷ್ಟಿಯಾಗುತ್ತಿದೆ. ಆಶಾ ಎಂಬ ಚಿರತೆ ಈಗ ಗರ್ಭಿಣಿ. 7 ದಶಕಗಳ ನಂತರ ಭಾರತದಲ್ಲಿ ಚೀತಾದ ಮರಿಯೊಂದು ಜನ್ಮತಾಳುತ್ತಿದೆ.
ಆಶಾ ಎಂದು ಚೀತಾಗೆ ಪ್ರಧಾನಿ ನರೇಂದ್ರ ಮೋದಿಯೇ ಹೆಸರಿಟ್ಟಿದ್ದರು. ಆಶಾಳ ಎಲ್ಲ ದೈಹಿಕ ಬೆಳವಣಿಗೆಗಳೂ ತೃಪ್ತಿದಾಯಕವಾಗಿವೆ ಎಂದು ತಜ್ಞರು ಪರಿಶೀಲಿಸಿ ಹೇಳಿದ್ದಾರೆ. ಅಂದಹಾಗೆ ಆಶಾ ಗರ್ಭಿಣಿಯಾಗಿರುವುದು ನಮೀಬಿಯಾದಲ್ಲೇ. ಇದೂ ಕೂಡ ಒಂದು ರೀತಿ ಚಾಲೆಂಜಿಂಗ್. 7 ದಶಕಗಳ ನಂತರ ಚೀತಾವೊಂದು ಮರಿ ಹಾಕುತ್ತಿರುವುದನ್ನು ನಿಭಾಯಿಸುವ ಹೊಣೆಗಾರಿಕೆ ಇದೆ. ಭಾರತದಲ್ಲಿ ಮರಿ ಹಾಕುವ ಆಶಾಗೆ ಅಗತ್ಯವಾದ ಪರಿಸರ, ಏಕಾಂಗಿತನ ಒದಗಿಸಬೇಕು.




ಸೆಪ್ಟೆಂಬರ್ 17ರಂದು ನಮೀಬಿಯಾದ ಚೀತಾಗಳನ್ನು ಭಾರತಕ್ಕೆ ಕರೆ ತರಲಾಗಿತ್ತು. ಮೋದಿ ಹುಟ್ಟುಹಬ್ಬದ ಹಿನ್ನೆಲೆಯಲಿಲ 1952ರ ನಂತರ ಭಾರತಕ್ಕೆ ಚೀತಾ ಕಾಲಿಟ್ಟಿತ್ತು. ಭಾರತದಲ್ಲಿ ಸರ್ವನಾಶವಾಗಿ ಹೋಗಿದ್ದ ಚೀತಾಗಳ ಸಂತತಿಯನ್ನು ಮತ್ತೆ ಬೆಳೆಸುವ ಉದ್ದೇಶದಿಂದ ತರಲಾಗಿದ್ದ ಚೀತಾ ಈಗ ಮರಿ ಹಾಕುತ್ತಿದೆ. ನಮೀಬಿಯಾದಲ್ಲೇ ಗರ್ಭಿಣಿಯಾಗಿದ್ದ ಆಶಾ ಇಲ್ಲಿ ಹೆರಿಗೆ ಮಾಡಿದರೆ ನಮೀಬಿಯಾ ಕೊಟ್ಟ ಕೊಡುಗೆ ಸಂಖ್ಯೆ ಹೆಚ್ಚಿದಂತಾಗುತ್ತದೆ.





