ರಾಜ ರಾಜ ಚೋಳ ಹಿಂದೂ ದೊರೆ ಅಲ್ಲ. ಅವರು ಹಿಂದೂಗಳೇ ಅಲ್ಲ. ಆ ಕಾಲದಲ್ಲಿ ಹಿಂದೂಗಳೇ ಇರಲಿಲ್ಲ. ಇಂತದ್ದೊಂದು ವಿತಂಡವಾದ ಹುಟ್ಟಿದ್ದು ಪೊನ್ನಿಯನ್ ಸೆಲ್ವನ್ ಅನ್ನೋ ಸಿನಿಮಾ ಬಂದ ನಂತರ. ಅದು ರಾಜರಾಜ ಚೋಳನ ಕಥೆ. ಚೋಳ ವಂಶದವರ ಕಥೆ. ಸಿನಿಮಾ ಬಿಡುಗಡೆಯಾಗಿ ಹಿಟ್ ಆಗಿದ್ದೇ ತಡ ವೆಟ್ರಿಮಾರನ್ ಅನ್ನೋ ಡೈರೆಕ್ಟರ್ ಭಾರತದಲ್ಲಿ ಹಿಂದೂ ಧರ್ಮವೇ ಇರಲಿಲ್ಲ. ಅದು ಬ್ರಿಟಿಷರು ತಮ್ಮ ಅನುಕೂಲಕ್ಕಾಗಿ ಸೃಷಿಸಿದ್ದು ಎಂದು ಹೇಳಿಕೆ ಕೊಟ್ಟು ವಿವಾದ ಸೃಷ್ಟಿಸಿದ್ದಾರೆ. ಈತ ಅಸುರನ್, ವಿಸಾರಣೈ, ಕಾಕ್ಕಮೊಟ್ಟೈ ನಂತಹ ಚಿತ್ರಗಳನ್ನು ಕೊಟ್ಟ ನಿರ್ದೇಶಕ.


ಬೃಹದೀಶ್ವರ ದೇಗುಲವನ್ನು ರಾಜರಾಜೇಶ್ವರಂ ಎಂದೂ ಕರೆಯುತ್ತಾರೆ. ಅದಕ್ಕೆ ಕಾರಣ ಕಟ್ಟಿಸಿದ್ದು ರಾಜರಾಜ ಚೋಳ. ಕ್ರಿ.ಶ. 1003ರಿಂದ 1010ರ ಅವಧಿಯಲ್ಲಿ ಕಟ್ಟಲ್ಪಟ್ಟ ದೇವಸ್ಥಾನ ಇದು. ವಿಮಾನ ಗೋಪುರ ಇಲ್ಲಿನ ಆಕರ್ಷಣೆ. ಇದನ್ನು ಆ ಕಾದಲ್ಲಿ ಹೇಗೆ ಕಟ್ಟಿದರು ಎನ್ನುವುದು ಇವತ್ತಿಗೂ ನಿಗೂಢ.


ತಂಜಾವೂರು. ಬೃಹದೀಶ್ವರ ದೇಗುಲ, ಕಟ್ಟಿಸಿದ್ದು ರಾಜರಾಜ ಚೋಳ


ಗಂಗಡಿಕೊಂಡ ಚೋಳಪುರಂ. ಬೃಹದೀಶ್ವರ ದೇಗುಲ. ಕಟ್ಟಿಸಿದ್ದು ರಾಜೇಂದ್ರ ಚೋಳ


ಗಡಿಕೊಂಡ ಬೃಹದೀಶ್ವರ ದೇಗುಲದಲ್ಲಿರುವ ಅರ್ಧ ನಾರೀಶ್ವರ ವಿಗ್ರಹ


ಕುಂಭಕೋಣಂ. ಐರಾವತೇಶ್ವರ ದೇಗುಲ. ಕಟ್ಟಿಸಿದ್ದು 2ನೇ ರಾಜರಾಜ ಚೋಳ
ಇಂತಹ ದೇಗುಲಗಳ ಸಂಖ್ಯೆ ನೂರಾರು. ಕೇವಲ ದೇವಸ್ಥಾನಗಳಷ್ಟೇ ಅಲ್ಲ, ಲಿಖಿತ ದಾಖಲೆಗಳೂ ಇವೆ. ದೇವಸ್ಥಾನದ ಆವರಣದಲ್ಲಿ ವೇದಶಾಲೆಗಳನ್ನೂ ತೆರೆದಿದ್ದ. ರಾಜಕೀಯ ಲಾಭಕ್ಕಾಗಿ ಇನ್ಯಾವುದೇ ದ್ವೇಷದಿಂದ ಉದ್ದೇಶದಿಂದ ಇತಿಹಾಸವನ್ನೇ ತಿರುಚುವ ಕೆಲಸವಂತೂ ನಡೆಯುತ್ತಿದೆ.



