ಸ್ಯಾಂಡಲ್ವುಡ್ ಸಿಂಗಾರಿಯಾಗಿ ಹೊಳೆಯುತ್ತಿದ್ದಾಲೆ ಬ್ಯಾಂಗಲ್ ಬಂಗಾರಿ. ಎಕ್ಕದ ಕಲೆಕ್ಷನ್ ಲೆಕ್ಕ ಭರ್ಜರಿ. ಕಲೆಕ್ಷನ್ ಇಲ್ಲದೆ ಡಲ್ಲು ಹೊಡೆಯುತ್ತಿದ್ದ ಕನ್ನಡ ಚಿತ್ರರಂಗಕ್ಕೆ ‘ಎಕ್ಕ’ ಹಿಟ್ ಎಂಬ ಬೂಸ್ಟ್ ಕೊಟ್ಟಿದೆ. ಯುವ ರಾಜ್ ಕುಮಾರ್ ಅವರ ʻಯುವʼ ಆವರೇಜ್ ಎನಿಸಿಕೊಂಡಿದ್ದ ಕಾರಣ.. 2ನೇ ಸಿನಿಮಾ ಎಕ್ಕ ಚಿತ್ರದ ಬಗ್ಗೆ ಅಭಿಮಾನಿಗಳು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ಆ ನಿರೀಕ್ಷೆಯನ್ನು ಎಕ್ಕ ಹುಸಿ ಮಾಡಿಲ್ಲ.
ಈಗ ಎಕ್ಕ ಚಿತ್ರದ ಡೇ ಬೈ ಡೇ ಕಲೆಕ್ಷನ್ ಲೆಕ್ಕವೂ ಸಿಗುತ್ತಿದೆ. ಎಕ್ಕ ಚಿತ್ರದ ಬಾಕ್ಸಾಫೀಸ್ ಕಲೆಕ್ಷನ್ ಹತ್ತಿರತ್ತಿರ 7 ಕೋಟಿಗೆ ರೀಚ್ ಆಗಿದೆ.
ಎಕ್ಕ ಟಿಕೆಟ್ ಲೆಕ್ಕ :
ಎಕ್ಕ ಚಿತ್ರ ರಿಲೀಸ್ ಆದ ದಿನ 36 ಸಾವಿರ, 2ನೇ ದಿನ 41 ಸಾವಿರ, ಮೂರನೇ ದಿನ ಭಾನುವಾರ 44 ಸಾವಿರ ಹಾಗೂ 4ನೇ ದಿನ ಸೋಮವಾರ 12 ಸಾವಿರ ಟಿಕೆಟ್ಸ್ ಸೇಲ್ ಆಗಿವೆ. ಒಟ್ಟಾರೆ ಒಂದೂವರೆ ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರು ಸಿನಿಮಾ ನೋಡಿದ್ದಾರೆ.
ಎಕ್ಕ ದುಡ್ಡಿನ ಲೆಕ್ಕ
ಮೊದಲ ದಿನ ಕರ್ನಾಟಕದಲ್ಲಿ ಎಕ್ಕ ಹತ್ತಿರತ್ತಿರ 2 ಕೋಟಿ ರೂಪಾಯಿ ಗಳಿಸಿತ್ತು. 2ನೇ ದಿನಕ್ಕೆ ಅದರ ಗಳಿಕೆ 2 ಕೋಟಿ ರೂಪಾಯಿಯ ಗಡಿ ದಾಟಿತ್ತು. ಮೂರನೇ ದಿನ ಭಾನುವಾರದ ಕಲೆಕ್ಷನ್ 3 ಕೋಟಿಗೆ ರೀಚ್ ಆಯ್ತು. ಸೋಮವಾರವೂ ಕೂಡಾ ಕಲೆಕ್ಷನ್ 1 ಕೋಟಿ ಸಮೀಪ ಇದೆ. ಟೋಟಲ್ ಆಗಿ ಚಿತ್ರದ ಕಲೆಕ್ಷನ್ 7 ಕೋಟಿ ಬಾರ್ಡರ್ ದಾಟಿದೆ.
ಹೀಗಾಗಿ ಎಕ್ಕ ಚಿತ್ರವನ್ನ ಈ ವರ್ಷದ ದೊಡ್ಡ ಹಿಟ್ ಎನ್ನುವುದಕ್ಕೆ ಅಡ್ಡಿ ಇಲ್ಲ. ಎಕ್ಕ ಚಿತ್ರವನ್ನು ನಿರ್ದೇಶನ ಮಾಡಿರುವ ರೋಹಿತ್ ಪದಕಿ, ದೊಡ್ಡ ಮಟ್ಟದಲ್ಲೇ ಗೆದ್ದಿದ್ದಾರೆ. ಕೆಆರ್ಜಿ ಸ್ಟುಡಿಯೋ, ಜಯಣ್ಣ ಫಿಲ್ಮ್ಸ್, ಪಿಆರ್ಕೆ ಸ್ಟುಡಿಯೋ ಸಂಭ್ರಮಿಸುತ್ತಿವೆ. ನಾಯಕಿ ಸಂಜನಾ ಆನಂದ್ ಹೊಸ ಕ್ರಶ್ ಆಗಿದ್ದಾರೆ. ಯುವ ಅವರ ನಟನೆ, ಯುವ ಆ್ಯಕ್ಷನ್ ಅಭಿಮಾನಿಗಳಿಗೆ ಇಷ್ಟ ಆಗಿದೆ. ‘ಬ್ಯಾಂಗಲ್ ಬಂಗಾರಿ’ ಹಾಡು ಕೂಡ ಚಿತ್ರಕ್ಕೆ ಮೈಲೇಜ್ ನೀಡಿದೆ. ಸಿನಿಮಾದ ಇನ್ನೊಬ್ಬ ಹೀರೋ ಆಗಿ ಗುರುತಿಸಿಕೊಂಡಿರುವುದು ಸಂಗೀತ ನಿರ್ದೇಶಕ ಚರಣ್ ರಾಜ್.
2025ರಲ್ಲಿ ತೆರೆಕಂಡ ಕನ್ನಡದ ಯಾವ ಸಿನಿಮಾಗಳು ಈವರೆಗೂ ಇಷ್ಟೊಂದು ವೇಗವಾಗಿ ಈ ಪ್ರಮಾಣದ ಗಳಿಕೆ ಆಗಿರಲಿಲ್ಲ. ಆ ಮಟ್ಟಿಗೆ ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್‌ಗೆ ಇದೊಂದು ರೀತಿಯಲ್ಲಿ ಸಮಾಧಾನಕರ ಸಂಗತಿ ಆಗಿದೆ. 2025ರಲ್ಲಿ 140ಕ್ಕೂ ಅಧಿಕ ಸಿನಿಮಾಗಳು ಬಂದಿದ್ದರೂ, ಯಾವ ಸಿನಿಮಾಗಳು ಕೂಡ ದೊಡ್ಡಮಟ್ಟದಲ್ಲಿ ಕಲೆಕ್ಷನ್ ಮಾಡಿರಲಿಲ್ಲ. ಹೌಸ್‌ಫುಲ್ ಬೋರ್ಡ್ ಬಿದ್ದಿದ್ದಂತೂ ತೀರಾ ಕಮ್ಮಿ. ಆದರೆ.. ಎಕ್ಕ ಚಿತ್ರದ ಮೂಲಕ ಹೌಸ್ ಫುಲ್ ಬರ ದೂರವಾಗಿದೆ. ಈ ಹಿಂದೆ ದಯವಿಟ್ಟು ಗಮನಿಸಿ ಹಾಗೂ ರತ್ನನ್ ಪ್ರಪಂಚ ಸಿನಿಮಾಗಳನ್ನು ಮಾಡಿದ್ದ ರೋಹಿತ್ ಪದಕಿಗೆ ಮೆಚ್ಚುಗೆ ಸಿಕ್ಕಿತ್ತೇ ಕಲೆಕ್ಷನ್ ಸಿಕ್ಕಿರಲಿಲ್ಲ. ಅದನ್ನೂ ಕೂಡಾ ‘ಎಕ್ಕ’ ಸಿನಿಮಾ ಪೂರೈಸಿದೆ. ಬ್ಯಾಂಗಲ್ ಬಂಗಾರಿ ಸಂಜನಾ ಆನಂದ್ ಅವರಿಗೂ ಹಿಟ್ ಸಿಕ್ಕಿತ್ತಾದರೂ.. ಆಕೆಯೇ ಹೈಲೈಟ್ ಆಗಿರಲಿಲ್ಲ. ಅದೂ ಕೂಡಾ ಈಡೇರಿದೆ.



