ಚಿತ್ರರಂಗದ ದೊಡ್ಮನೆ ಎಂದೇ ಹೆಸರಾಗಿರುವ ಡಾ.ರಾಜ್ ಕುಟುಂಬದಲ್ಲಿ ಬಹುದಿನಗಳ ನಂತರ ಸಂಭ್ರಮ ಮೂಡಿದೆ. ಪುನೀತ್ ನಿಧನರಾದ ಮೇಲೆ ಎಲ್ಲಿಯೇ ಹೋದರೂ.. ಪುನೀತ್ ನಿಧನದ ನೋವು ಕಾಡುತ್ತಿತ್ತು. ಒಂದು ರೀತಿಯಲ್ಲಿ ಕಳೆದೆರಡು ವರ್ಷಗಳಿಂದ ನಗುವನ್ನೇ ಮರೆತಿದ್ದ ದೊಡ್ಮನೆಗೆ ಈಗ ಡಬಲ್ ಸಂಭ್ರಮ ಸಿಕ್ಕಿದೆ. ಮೊದಲನೆಯದ್ದು ಯುವ ಕೊಟ್ಟ ಯಶಸ್ಸಿನ ಸಂಭ್ರಮ. ಎರಡನೆಯನ್ನು ಕಾರು ತಂದ ಸಂಭ್ರಮ.
ಯುವ ಕಲೆಕ್ಷನ್ ಎಷ್ಟು ಕೋಟಿ..?
ಒಂದು ಸಿನಿಮಾದ ಯಶಸ್ಸನ್ನು ಈ ಲೆಕ್ಕದಲ್ಲಿ ಕೂಡಾ ನೋಡಬಹುದು. ಯುವ ರಿಲೀಸ್ ಆಗಿದ್ದು ಶುಕ್ರವಾರ. ಶನಿವಾರದ ಹೊತ್ತಿಗೆ ಸ್ಕ್ರೀನ್ʻಗಳ ಸಂಖ್ಯೆ ಹೆಚ್ಚಾಗಿದ್ದು, ಯುವ ಗೆಲುವಿನ ಸುಳಿವು ಸಿಕ್ಕಿದೆ.
ಮೊದಲ ಪ್ರಯತ್ನದಲ್ಲೇ ರಾಘವೇಂದ್ರ ರಾಜಕುಮಾರ್ ಅವರ ಕಿರಿಮಗ ‘ಯುವ’ ಗೆದ್ದಿದ್ದಾರೆ .
ಗುಡ್‌ಫ್ರೈಡೇ, ಮರು ದಿನವೇ ಶನಿವಾರ ಹಾಗೂ ಭಾನುವಾರದ ರಜಾ ದಿನಗಳು ಕೂಡಾ ಚಿತ್ರದ ಕಲೆಕ್ಷನ್‌ಗೆ ಪ್ಲಸ್ ಆಗಿವೆ. ಈ ವರ್ಷ ಕನ್ನಡದಲ್ಲಿ ದೊಡ್ಡ ಸಿನಿಮಾಗಳಿಗೆ ಇದ್ದ ಬರವನ್ನು ಯುವ ನೀಗಿಸಿದಂತಿದೆ.
ಮೂಲಗಳ ಪ್ರಕಾರ ಮೊದಲ ದಿನ 4 ಕೋಟಿ ರೂ. ಎರಡನೇ ದಿನ 3.5 ಕೋಟಿ ರೂ. ಹಾಗೂ 3ನೇ ದಿನ 4.5 ಕೋಟಿ ರೂ. ಕಲೆಕ್ಷನ್ ಮಾಡಿದೆ. ಬೆಂಗಳೂರು ಮೈಸೂರು ಪ್ರದೇಶದಲ್ಲಿಯೇ ಭರ್ಜರಿ ಕಲೆಕ್ಷನ್ ಆಗಿದ್ದು, ಯುವ ಸಿನಿಮಾವನ್ನು ಥಿಯೇಟರಿನಲ್ಲಿ ನೋಡಿದವರ ಸಂಖ್ಯೆ 1 ಲಕ್ಷದ ಗಡಿ ದಾಟಿದೆ.
ಯುವ ಚಿತ್ರ ಕಾಲೇಜು ಮತ್ತು ಫ್ಯಾಮಿಲಿ ಸ್ಟೋರಿಯನ್ನು ಬ್ಲೆಂಡ್ ಮಾಡಿರುವ ಕಥೆ ಇದ್ದು, ಸಂತೋಷ್ ಆನಂದರಾಮ್ ಚೆಂದದ ಕಥೆ ಹೆಣೆದಿದ್ದಾರೆ. ಕಾಲೇಜ್ ಲೈಫ್, ರಸ್ಲಿಂಗ್, ಅಪ್ಪ-ಮಗನ ಬಾಂಧವ್ಯ, ರಿವೆಂಜ್, ಲವ್ ಎಲ್ಲವನ್ನೂ ಪ್ರೇಕ್ಷಕರಿಗೆ ಬೋರ್ ಆಗದಂತೆ ಕೂರಿಸಿದ್ದಾರೆ. ಯುವ ಎದುರು ಸಪ್ತಮಿ ಗೌಡ ನಾಯಕಿಯಾಗಿದ್ದು, ಅಚ್ಯುತ್ ಕುಮಾರ್ ತಂದೆಯಾಗಿ, ಕಿಶೋರ್ ಕೋಚ್ ಆಗಿ, ಸುಧಾರಾಣಿ ತಾಯಿಯಾಗಿ, ಹಿತಾ ಚಂದ್ರಶೇಖರ್ ತಂಗಿಯಾಗಿ ನಟಿಸಿದ್ದಾರೆ. ಸೋಮವಾರದ ನಂತರವೂ ಪ್ರೇಕ್ಷಕರ ಎಂಟ್ರಿ ಉಳಿಸಿಕೊಂಡರೆ.. ಯುವ 100% ಗೆದ್ದಂತೆ.
ದೊಡ್ಮನೆಗೆ ದೊಡ್ಡ ಕಾರ್ : ಪುನೀತ್ ಅವರಿಗೆ ಕಾರ್ʻಗಳ ಬಗ್ಗೆ ಇದ್ದ ಕ್ರೇಜ್ ಅವರ ಪತ್ನಿ ಅಶ್ವಿನಿ ಅವರಿಗೂ ಇದೆ. ಹೀಗಾಗಿ ಅವರ ಮನೆಗೀಗ ಆಡಿ Q7 ಕಾರು ಬಂದಿದೆ. ಆಡಿ Q7 ಈಗ ಇರುವ ಆಡಿ ಸಿರೀಸ್ʻನಲ್ಲಿ ಲೇಟೆಸ್ಟ್ ಮಾಡೆಲ್ ಎನ್ನುವುದು ವಿಶೇಷ. ಕಾರಿನ ಜೊತೆಗೆ ಅಶ್ವಿನಿ ಇರುವ ಫೋಟೋ ನೋಡಿದವರು ಆಡಿ ಕ್ಯೂ 7 ಕಾರ್ʻನ ಬಗ್ಗೆ ಕುತೂಹಲ ತೋರಿಸುತ್ತಿದ್ದಾರೆ.
ಇದು ಆಡಿ Q7ರ ಟಾಪ್ ಎಂಡ್ ಮಾಡೆಲ್. ಗ್ರೇ ಕಲರ್. ಬೆಲೆ 1.11 ಕೋಟಿ ರೂ.ಗಳಿಂದ ರಿಂದ 1.20 ಕೋಟಿ ರೂಪಾಯಿ. 250 ಕಿ.ಮೀ. ಮ್ಯಾಕ್ಸಿಮಮ್ ಸ್ಪೀಡ್ ಇರಲಿದ್ದು, ವೇಗ ಮತ್ತು ನಿಯಂತ್ರಣ ಅಷ್ಟೇ ಕರಾರುವಾಕ್ ಆಗಿದೆ. ಒಂದು ಲೀಟರ್ ಪೆಟ್ರೋಲ್ʻಗೆ ಕೊಡುವ ಮೈಲೇಜ್ ಜಸ್ಟ್ 14 ಕಿ.ಮೀ. ಕಾರಿನಲ್ಲಿ ಡ್ರೈವರ್ ಅಷ್ಟೇ ಅಲ್ಲ, ಕಾರಿನಲ್ಲಿ ಪ್ರಯಾಣಿಸುವ ಎಲ್ಲರಿಗೂ ಸೇಫ್ಟಿ ಇದೆ. 8 ಏರ್ ಬ್ಯಾಗ್ಸ್ ಇದೆ.
ಅಶ್ವಿನಿ ಅವರು ಆಡಿ Q7 ಖರೀದಿಸಿದ ಬೆನ್ನಲ್ಲೇ ಅಪ್ಪು ಫ್ಯಾನ್ಸ್ ಮಹಿಳಾ ದಿನಾಚರಣೆಯಂತು ಅಪ್ಪು, ಅಶ್ವಿನಿಗೆ ಲ್ಯಾಂಬೋರ್ಗಿನಿ ಕಾರು ಗಿಫ್ಟ್ ಕೊಟ್ಟಿದ್ದನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ. ಪುನೀತ್ ನಿಧನದ ನಂತರ ಪುನೀತ್ ಮನೆಗೆ ಬಂದ ಮೊದಲ ಕಾರ್ ಕೂಡಾ ಇದಾಗಿದೆ. ಅಶ್ವಿನಿಯವರೂ ಪತಿಯ ಅಗಲಿಕೆ ನೋವಿನಿಂದ ಹೊರಬಂದಿದ್ಧಾರೆ.



