ಯುವ ಚಿತ್ರದ ಗುಂಗು ಹೆಚ್ಚುತ್ತಲೇ ಇದೆ. ಯುವ ಚಿತ್ರದ ಎರಡನೇ ಹಾಡು ಮೌನದಲ್ಲೇ ಮಾತನಾಡುವ ಮಾಯೆ ನೀನೆ… ಕವಿತೆ, ಕವಿತೆಯ ಲಿರಿಕಲ್ ಸಾಂಗ್‌ನಲ್ಲಿ ಯುವರಾಜ್-ಸಪ್ತಮಿ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಮೊದಲ ಹಾಡಿನಲ್ಲಿ ‘ಮಾಸ್’ ಆಡಿಯನ್ಸ್ ನ ಹುಚ್ಚೆದ್ದು ಕುಣಿಸಿದ್ದ ಯುವ, ಈ ಹಾಡಿನಲ್ಲಿ ‘ಕ್ಲಾಸ್’ ಹೃದಯಗಳಿಗೆ ಕನ್ನ ಹಾಕಿದ್ದಾರೆ. ಮಾಸ್ ಗೂ ಜೈ ಕ್ಲಾಸಿಗೂ ಸೈ ಎಂಬ ಸಂದೇಶವನ್ನೂ ‘ಯುವ’ ಚಿತ್ರದ ಈ ಹಾಡಿನ ಮೂಲಕ ರವಾನೆ ಮಾಡಿದ್ದಾರೆ ಯುವ.
ಅಜನೀಶ್ ಸಂಗೀತಕ್ಕೆ ಸಾಹಿತ್ಯ ನೀಡಿರುವುದು ಪ್ರಮೋದ್ ಮರವಂತೆ. ಸಂಜಿತ್ ಹೆಗ್ಡೆ ತನ್ಮಯರಾಗಿ ಹಾಡಿದ್ದು, ಹಾಡಿನಲ್ಲಿ ಸಖತ್ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ಧಾರೆ ಯುವ ಮತ್ತು ಸಪ್ತಮಿ ಗೌಡ.
ಏನೂ ಹೇಳಲಿ ನಾನು ಹೊಸ ತರ , ಏನೇ ಇದ್ದರೂ ನಿನ್ನ ನಂತರ” ಎಂಬ ಚೆಂದದ ಸಾಲುಗಳಿಂದ ಆರಂಭವಾಗುವ ಹಾಡಿನಲ್ಲಿ ಸಪ್ತಮಿ ಗೌಡ ವ್ಹಾವ್.. ವಾಟ್ ಎ ಬ್ಯೂಟಿ ಎನಿಸುತ್ತಾರೆ. ನಟ ಯುವ ರಾಜ್‌ಕುಮಾರ್ ಚಿತ್ರದ ಮೊದಲ ಸಾಂಗ್‌ನಲ್ಲಿ ರಗಡ್ ಲುಕ್‌ನಲ್ಲಿ ಕಾಣಿಕೊಂಡರೇ, ಎರಡನೇ ಹಾಡಿನಲ್ಲಿ ರೊಮ್ಯಾಂಟಿಕ್ ಬಾಯ್ ಆಗಿದ್ಧಾರೆ. ಇದೇ ಮಾರ್ಚ್ 29ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಡೈರೆಕ್ಟರ್ ಸಂತೋಷ್ ಆನಂದ್ ರಾಮ್ ಆಕ್ಷನ್ ಕಟ್ ಹೇಳಿದ್ದು, ದೊಡ್ಮನೆ ಮೊಮ್ಮಗನ ಮೊದಲ ಚಿತ್ರಕ್ಕೆ ಹೊಂಬಾಳೆಯವರೇ ಪ್ರೊಡ್ಯೂಸರ್ಸ್.



