ಶಿವ ರಾಜ ಕುಮಾರ್, ಅಭಿಮಾನಿಗಳಿಂದ ನಾಟ್ಯ ಸಾರ್ವಭೌಮ ಎಂದೇ ಕರೆಸಿಕೊಳ್ತಾರೆ. ಅದ್ಭುತ ಡ್ಯಾನ್ಸರ್. ಪುನೀತ್ ಕೂಡಾ ಅಣ್ಣ ಮಾಡುವಷ್ಟು ಚೆನ್ನಾಗಿ ಡ್ಯಾನ್ಸ್ ಮಾಡೋಕೆ ಬರಲ್ಲ ಅಂತಾನೇ ಹೇಳ್ತಿದ್ದರು. ಶಿವಣ್ಣ, ನಂಗೆ ಅಪ್ಪು ಡ್ಯಾನ್ಸ್ ಇಷ್ಟ ಎನ್ನುತ್ತಿದ್ದರು. ಅಣ್ಣ ಮತ್ತು ತಮ್ಮ ಇಬ್ಬರೂ ಒಟ್ಟಿಗೇ ಹಾಡಿ ಕುಣಿಯುವಾಗ ಖುಷಿ ಪಟ್ಟಿದ್ದವು ದೊಡ್ಮನೆ ಅಭಿಮಾನಗಳ ಕಂಗಳು ಮತ್ತು ಹೃದಯ. ಆದರೆ.. ಈಗ ಪುನೀತ್ ಅವರಿಲ್ಲ. ಕುಣಿಯುವ ಆಸೆಯಿದ್ದರೂ, ಶಿವಣ್ಣ, ತಮ್ಮನ ಜೊತೆ ಮತ್ತೆ ಹೆಜ್ಜೆ ಹಾಕೋಕ್ ಆಗಲ್ಲ. ಆದರೆ.. ರಾಘವೇಂದ್ರ ರಾಜಕುಮಾರ್ ಅವರ ಮಗ, ಯುವ ಈಗ ಎಂಟ್ರಿ ಕೊಟ್ಟಿದ್ದಾಗಿದೆ. ಶಿವಣ್ಣಂಗೆ ಕೋ-ಡ್ಯಾನ್ಸರ್ ಸಿಕ್ಕಿದ್ದಾಗಿದೆ.
ಯುವ ದೊಡ್ಡಪ್ಪ ಶಿವ ರಾಜ ಕುಮಾರ್ ಜೊತೆ ಹೆಜ್ಜೆ ಹಾಕಿದ್ಧಾರೆ. ಒಬ್ಬನೇ ಶಿವ, ಒಬ್ಬನೇ ಯುವ’ ಎಂದು ಆರಂಭವಾಗುವ ಹಾಡಿನ ಲಿರಿಕಲ್ ವಿಡಿಯೋಗೆ ಶಿವಣ್ಣ ಕೂಡಾ ಹೆಜ್ಜೆ ಹಾಕಿದ್ಧಾರೆ. ಯುವ ರಾಜ್ಕುಮಾರ್ ಸಖತ್ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ಹಾಡಿನಲ್ಲಿ ಒಳ್ಳೆಯ ಡ್ಯಾನ್ಸ್ ಮೂವ್ಸ್ ಸಹ ತೋರಿಸಿದ್ದಾರೆ. ಚಿತ್ರತಂಡ ಪ್ರಚಾರ ಆರಂಭಿಸಿದ್ದು, ಯುವ ರಾಜ್ಕುಮಾರ್ ತಮ್ಮ ದೊಡ್ಡಪ್ಪ ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿ ಒಟ್ಟಿಗೆ ಡ್ಯಾನ್ಸ್ ಮಾಡಿರುವುದು ವಿಶೇಷ.
ಥೀಮ್ ಸ್ಟೆಪ್ ಅನ್ನು ಇಬ್ಬರೂ ಒಟ್ಟಿಗೆ ಮಾಡಿದ್ದು, ಯುವ ರಾಜ್ಕುಮಾರ್ ಮತ್ತು ಶಿವ ರಾಜಕುಮಾರ್ ಇಬ್ಬರೂ ಸಲೀಸಾಗಿಯೇ ಹೆಜ್ಜೆ ಹಾಕಿದ್ಧಾರೆ. ಶಿವಣ್ಣ ವಯಸ್ಸಿನ ಲೆಕ್ಕಕ್ಕೆ ತಗೊಂಡ್ರೆ, ಫ್ಯಾನ್ಸ್ ಶಿವಣ್ಣಂಗೇ ಹೆಚ್ಚು ಮಾರ್ಕ್ಸ್ ಕೊಟ್ಟಿದ್ಧಾರೆ.
ಯುವ, ರಾಘವೇಂದ್ರ ರಾಜಕುಮಾರ್ ಅವರ ಮಗ. ಶಿವಣ್ಣ, ದೊಡ್ಡಪ್ಪ ಆಗಬೇಕು. ದೊಡ್ಡಪ್ಪನ ಆಶೀರ್ವಾದ ಪಡೆದೇ ಯುವ ಚಿತ್ರ ಆರಂಭಿಸಿರುವ ಯುವ ರಾಜಕುಮಾರ್, ಮೊದಲ ಚಿತ್ರದಲ್ಲೇ ಭರವಸೆ ಹುಟ್ಟಿಸಿದ್ದಾರೆ.
ಯುವ ಮಾರ್ಚ್ ೨೯ಕ್ಕೆ ರಿಲೀಸ್ ಆಗಲಿದ್ದು, ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಪುನೀತ್ ರಾಜ್ಕುಮಾರ್ ಅವರ ಮೆಚ್ಚಿನ ನಿರ್ದೇಶಕ ಸಂತೋಷ್ ಆನಂದ್ರಾಮ್ ನಿರ್ದೇಶನ ಮಾಡಿದ್ದಾರೆ. ಸಿನಿಮಾವನ್ನು ಹೊಂಬಾಳೆ ಫಿಲಮ್ಸ್ ನಿರ್ಮಾಣ ಮಾಡಿದೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಹೊಂಬಾಳೆ ಬ್ಯಾನರ್ ಸಿನಿಮಾ ಯುವ.
ಅಂದಹಾಗೆ ಶಿವಣ್ಣ ಅವರಿಗೆ ಸದ್ಯಕ್ಕೆ ಕರಟಕ ದಮನಕ ರಿಲೀಸ್ ಇದೆ. ಇನ್ನು ಇದೇ ತಿಂಗಳು ಪುನೀತ್ ಹುಟ್ಟುಹಬ್ಬವೂ ಇದೆ. ಅದು ಮುಗಿಯುತ್ತಿದ್ದಂತೆಯೇ ಯುವ ರಿಲೀಸ್ ಆಗ್ತಾ ಇದೆ. ಅಂದಹಾಗೆ ಶಿವಣ್ಣ ಮತ್ತು ಯುವ.. ಇಬ್ಬರ ಡ್ಯಾನ್ಸ್ ಸ್ಟೆಪ್ಪಿನಲ್ಲಿ ನಿಮಗೆ ಯಾರ ಸ್ಟೆಪ್ ಇಷ್ಟವಾಯ್ತು..?



