ಬಸ್ʻನಲ್ಲಿ ಉಚಿತ ಪ್ರಯಾಣದ ಗ್ಯಾರಂಟಿ ಸಿಕ್ಕ ಮೇಲೆ ಹೆಂಡತಿಯರು ಮಾತು ಕೇಳ್ತಿಲ್ಲ, ಗೃಹ ಲಕ್ಷ್ಮಿ ಹಣ ಬರತೊಡಗಿದ ಮೇಲೆ ಗಂಡ ಅಂದ್ರೆ ಕೇರ್ ಇಲ್ಲ ಎಂಬ ಮಾತುಗಳು ಇಲ್ಲಿ ಕಾಮನ್ ಆಗಿರುವಾಗಲೇ, ಅದನ್ನೂ ಮೀರಿಸಿದ ಪ್ರಕರಣಗಳು ಉತ್ತರ ಪ್ರದೇಶದಿಂದ ಬಂದಿವೆ.
ಉತ್ತರ ಪ್ರದೇಶದ ಮಹಾರಾಜಗಂಜ್ ಜಿಲ್ಲೆಯ ಪರಾರಿಯಾಗಿದ್ದಾರೆ. 11 ಮಹಿಳೆಯರು ಪತಿಯನ್ನು ಬಿಟ್ಟು, ಪ್ರೇಮಿಗಳ ಜೊತೆ ಎಸ್ಕೇಪ್ ಆಗಿದ್ದಾರೆ ಎಂಚ್ಲಾಲ್ ಬ್ಲಾಕ್ ಪ್ರದೇಶದ ವಿವಿಧ ಗ್ರಾಮಗಳಲ್ಲಿ 11 ಮಹಿಳೆಯರು ಪತಿಯನ್ನು ಬಿಟ್ಟು, ಪ್ರೇಮಿಗಳ ಜೊತೆ ಎಸ್ಕೇಪ್ ಆಗಿದ್ದಾರೆ ಎಂದು ರಿಪೋರ್ಟ್ ಆಗಿದೆ.
ಏಕಕಾಲದಲ್ಲಿ ಇಷ್ಟೊಂದು ಮಹಿಳೆಯರು ನಾಪತ್ತೆಯಾಗಿರೋದರಿಂದ ಈ ಭಾಗದಲ್ಲಿ ಸಂಚಲನ ಸೃಷ್ಟಿಯಾಗಿದೆ. ಆದ್ರೆ ಎಲ್ಲಾ 11 ಪ್ರಕರಣಗಳಲ್ಲಿ ಸಾಮ್ಯತೆ ಇದೆ. ಅಂದ್ರೆ ಎಲ್ಲ 11 ಮಹಿಳೆಯರೂ ಪಿಎಂ ಆವಾಸ್ ಯೋಜನೆಯಮೊದಲ ಕಂತು 40 ಸಾವಿರ ರೂಪಾಯಿ ಜಮೆ ಆಗುತ್ತಿದ್ದಂತೆ ಮಹಿಳೆಯರು ಮನೆಯಿಂದ ಹೊರ ಹೋಗಿದ್ದಾರೆ.
ಸ್ವಂತ ಸೂರಿಲ್ಲದ ಕುಟುಂಬಗಳಿಗೆ ಸರ್ಕಾರ ಮನೆ ನಿರ್ಮಾಣಕ್ಕೆ ಹಂತ ಹಂತವಾಗಿ ಕಂತುಗಳ ರೂಪದಲ್ಲಿ ಹಣ ಬಿಡುಗಡೆ ಮಾಡುತ್ತದೆ. ಈ ಹಣ ಮನೆಯ ಮಹಿಳಾ ಸದಸ್ಯರ ಖಾತೆಗೆ ಮಾತ್ರ ಜಮೆ ಮಾಡಲಾಗುತ್ತದೆ. ಇದೀಗ ಹಣ ಬರುತ್ತಿದ್ದಂತೆ ಮಹಿಳೆಯರು ತಮ್ಮ ಪ್ರೇಮಿಗಳ ಜೊತೆ ಪಲಾಯನ ಆಗುತ್ತಿದ್ದಾರೆ. ನಾಪತ್ತೆಯಾಗಿರುವ ಮಹಿಳೆಯರ ಗಂಡಂದಿರು ಪತ್ನಿ ಕಾಣೆಯಾಗಿರುವ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಂತರ ಸಂಬಂಧಿತ ಇಲಾಖೆಗೆ ತೆರಳಿ ಪಿಎಂ ಆವಾಸ್ ಯೋಜನೆಯ ಎರಡನೇ ಕಂತನ್ನು ಪತ್ನಿಯರ ಖಾತೆಗೆ ಜಮೆ ಮಾಡದಂತೆ ಮನವಿಯನ್ನು ಸಹ ಸಲ್ಲಿಸುತ್ತಿದ್ದಾರೆ.
ಮಹಿಳೆಯರ ಖಾತೆಗೆ ಹಣ ಹಾಕುವುದನ್ನು ಕಡ್ಡಾಯ ಮಾಡಿದ್ದು ಮೋದಿ ಅಧಿಕಾರಕ್ಕೆ ಬಂದ ಮೇಲೆ. ಅದಕ್ಕೂ ಮೊದಲು ಇದೇ ರೀತಿ ನಡೆಯುತ್ತಿತ್ತಾದರೂ.. ಒಳಗೊಳಗೆ ಅಡ್ಜಸ್ಟ್ʻಮೆಂಟ್ ಸಾಧ್ಯವಿತ್ತು. ಅಂತಹ ಅಡ್ಜಸ್ಟ್ʻಮೆಂಟುಗಳಿಗೆಲ್ಲ ಬ್ರೇಕ್ ಬಿದ್ದಿದ್ದು ಮೋದಿ ಪ್ರಧಾನಿಯಾದ ಮೇಲೆ. ಹೀಗಾಗಿ ಓಡಿ ಹೋದ ಹೆಂಡತಿಯರ ಗಂಡಂದಿರೆಲ್ಲ ಮೋದಿಗೆ ಶಾಪ ಹಾಕ್ತಿದ್ಧಾರೆ.
ನಿಚ್ಲಾಲ್ ಬ್ಲಾಕ್‌ನಲ್ಲಿ ಪಿಎಂ ಆವಾಸ ಯೋಜನೆಯ 2,350 ಮಹಿಳಾ ಫಲಾನುಭವಿಗಳಿದ್ದಾರೆ. ಈಗಾಗಲೇ ಈ ವಿಭಾಗದ ಎಲ್ಲಾ ಮಹಿಳಾ ಫಲಾನುಭವಿಗಳಿಗೆ ಮೊದಲ ಕಂತಿನ ಹಣ ಜಮೆ ಮಾಡಲಾಗಿದೆ. ಸರ್ಕಾರದಿಂದ ಬಿಡುಗಡೆಯಾಗುವ ಹಣವನ್ನು ಮನೆ ನಿರ್ಮಾಣಕ್ಕಾಗಿಯೇ ಬಳಸಬೇಕು. ಒಂದು ವೇಳೆ ಅನ್ಯ ಕೆಲಸಕ್ಕೆ ಹಣ ಬಳಕೆಯಾಗಿರೋದು ಕಂಡು ಬಂದ್ರೆ ಅಧಿಕಾರಿಗಳು ಪಡೆದುಕೊಂಡು ಮೊತ್ತವನ್ನು ವಸೂಲಿ ಮಾಡುತ್ತಾರೆ. ಪತ್ನಿಯರು ಹಣದ ಜೊತೆ ಪರಾರಿಯಾಗಿರುವ ಕಾರಣ ಕೆಲವರ ಮನೆ ನಿರ್ಮಾಣ ಸ್ಥಗಿತಗೊಂಡಿದೆ. ಇದೀಗ ಅಂತಹವರಿಂದ ಹಣ ವಸೂಲಿ ಮಾಡಲು ಅಧಿಕಾರಿಗಳು ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಅತ್ತ ಹಣವೂ ಇಲ್ಲ. ಹೆಂಡತಿಯೂ ಇಲ್ಲ. ಜೊತೆಗೆ ಹಣ ದುರ್ಬಳಕೆ ಮಾಡಿಕೊಂಡಿದ್ಧಾರೆ ಎಂದು ಸರ್ಕಾರ ಮುಂದಿನ ಕಂತು ಬಿಡುಗಡೆ ಮಾಡದೇ ಹೋದರೆ, ಕನಸು ಕಂಡಿದ್ದ ಮನೆಯೂ ಇಲ್ಲ.



