ಹಲವು ನಾಯಕಿ ನಟಿಯರು ಯಾವ್ಯಾವುದೋ ಆರೋಪಗಳಿಗೆ ಸಿಲುಕಿ ಒದ್ದಾಡುತ್ತಿದ್ದಾರೆ. ಬಾಲಿವುಡ್`ನಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ (Actress Jaqueline farnandis) ಮೊದಲಾದವರು ಮನಿ ಲಾಂಡ್ರಿಂಗ್ ಸುಳಿಯಲ್ಲಿ ಸಿಕ್ಕಿದ್ದಾರೆ. ಇನ್ನು ಕನ್ನಡದ ನಟಿಯರಾದ ಸಂಜನಾ ಗಲ್ರಾನಿ(Actress Sanjana galrani, ರಾಗಿಣಿ ದ್ವಿವೇದಿ (Actress Ragini Dwivedi) ಮೊದಲಾದವರು ಡ್ರಗ್ಸ್ ಕೇಸಿನಲ್ಲಿ ಸಿಕ್ಕಿದ್ದಿದ್ದಾರೆ. ಸದ್ಯಕ್ಕೆ ಹೊರಗಿದ್ದಾರಾದರೂ, ಇನ್ನೂ ಆರೋಪ ಮುಕ್ತರಾಗಿಲ್ಲ. ಚಿತ್ರರಂಗದ ಕೆಲವು ನಾಯಕ ನಟಿಯರು ಬೇರೆ ಬೇರೆ ಬಿಸಿನೆಸ್`ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನೂ ಕೆಲವರು ಹೇಳಬಾರದ ಮಾಡಬಾರದ ಬಿಸಿನೆಸ್`ನಲ್ಲಿಯೂ ಇದ್ದಾರೆ. ಆದರೆ, ಈ ನಟಿಯ ಮೇಲೆ ಬಂದಿರೋ ಆರೋಪವೇ ಬೇರೆ.
ರವಿಚಂದ್ರನ್ ಜೊತೆಗೆ ದೃಶ್ಯ (Drishya) , ದೃಶ್ಯ 2 (Drushya 2), ದರ್ಶನ್ (Actor Darshan) ಜೊತೆಗೆ ಗಜ (Gaja), ವಿಷ್ಣುವರ್ಧನ್ (Vishnuvardhan) ಜೊತೆಗೆ ನಮ್ಮೆಜಮಾನ್ರು.. ಚಿತ್ರಗಳಲ್ಲಿ ನಟಿಸಿರುವ ನಟಿ ನವ್ಯಾ ನಾಯರ್ (Actress Navya nair) ಈಗ ಐಆರ್`ಎಸ್ ಅಧಿಕಾರಿಯೊಬ್ಬರಿಂದ (IRS Officer) ಕೋಟಿಗಟ್ಟಲೆ ಅವ್ಯವಹಾರದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿದ್ದಾರೆ. ಇಡಿಯವರ ಕಣ್ಣು ಇದೀಗ ನವ್ಯಾ ನಾಯರ್ (Actress Navya nair) ಮೇಲೆ ಬಿದ್ದಿದೆ. ಐಆರ್‍ಎಸ್ ಅಧಿಕಾರಿ ಸಚಿನ್ ಸಾವಂತ್ ಅವರ ಪ್ರಕರಣದಲ್ಲಿ ನವ್ಯಾ ನಾಯರ್ ಅವರ ಹೆಸರು ತಳುಕು ಹಾಕಿಕೊಂಡಿದೆ. ಚಿನ್ನಾಭರಣ, ದುಬಾರಿ ಗಿಫ್ಟ್ಗಳು, ಕೋಟ್ಯಾಂತರ ರೂಪಾಯಿ ಹಣ ಪಡೆದ ಆರೋಪದಲ್ಲಿ ನವ್ಯಾ ನಾಯರ್ (Actress Navya nair) ಅವರ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಸಚಿನ್ ಸಾವಂತ್ ಎಂಬ ಅಧಿಕಾರಿ ಇತ್ತೀಚೆಗಷ್ಟೇ ಆಸ್ತಿ ಕಬಳಿಕೆ ಮಾಡಿದ ಆರೋಪದಲ್ಲಿ ಇಡಿ ಅವರನ್ನು ಬಂಧಿಸಿತ್ತು. 2002ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಗೆ ಸಂಬಂಧಿಸಿದ ಪ್ರಕರಣದಲ್ಲಿ ಸಚಿನ್ ಸಾವಂತ್ ಅವರನ್ನು ಬಂಧಿಸಲಾಗಿದೆ. ಕಸ್ಟಮ್ಸ್ ಹೆಚ್ಚುವರಿ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ಜೂನ್ 27ರಂದು ಲಖನೌದಲ್ಲಿ ಅವರನ್ನು ಬಂಧಿಸಲಾಗಿದೆ. ಇದೇ ಪ್ರಕರಣದ ವಿಚಾರಣೆಗೆ ನಟಿ ನವ್ಯಾಗೆ ಇಡಿ ನೋಟಿಸ್ ನೀಡಿದ್ದು ಹಾಜರಾಗುವಂತೆ ಹೇಳಿದೆ.
ಆರೋಪಗಳ ಪ್ರಕಾರ ಸಚಿನ್ ಸಾವಂತ್ ನವ್ಯಾ ನಾಯರ್ ಅವರಿಗೆ ಹಲವಾರು ಬಾರಿ ಲಕ್ಷಾಂತರ ರೂ. ಬೆಲೆ ಬಾಳುವ ಚಿನ್ನಾಭರಣಗಳನ್ನು ಗಿಫ್ಟ್ ಆಗಿ ಕೊಟ್ಟಿದ್ದ. ಅಲ್ಲದೆ ನವ್ಯಾ ನಾಯರ್ ಅವರ ಮಗನ ಹುಟ್ಟುಹಬ್ಬಕ್ಕೂ ಗಿಫ್ಟ್ ಕೊಟ್ಟಿದ್ದ. ಈ ಕೊಡುಗೆಗಳ ಒಟ್ಟಾರೆ ಮೊತ್ತ 1 ಕೋಟಿಗೂ ಹೆಚ್ಚು ಎನ್ನಲಾಗಿದೆ. ಇದು ಗೆಳತನಕ್ಕಾಗಿ ಹಾಗೂ ನನ್ನ ಮಗನ ಮೇಲಿರುವ ಪ್ರೀತಿಗೆ ಕೊಟ್ಟಿರುವ ಗಿಫ್ಟ್. ಅಷ್ಟೇ ಹೊರುತು ಬೇರಾವುದೇ ಸಂಬಂಧ ಇಲ್ಲ ಎಂದಿದ್ದಾರಂತೆ ನವ್ಯಾ ನಾಯರ್.
ನವ್ಯಾ ಜತೆಗೆ ನಿಕಟ ಸಂಬಂಧವನ್ನೂ ಹೊಂದಿದ್ದರ ಬಗ್ಗೆ ಇಬ್ಬರ ನಡುವಿನ ಫೋನ್ ಕರೆ ಸಂಭಾಷಣೆಗಳೂ ಇಡಿ ಬಳಿ ಸಿಕ್ಕಿವೆ. ನಟಿಯನ್ನು ಭೇಟಿಯಾಗಲು ಸಚಿನ್ ಅವರು 8 ರಿಂದ 10 ಬಾರಿ ಕೊಚ್ಚಿಗೆ ಹೋಗಿದ್ದರು ಎಂದು ವರದಿಯಾಗಿದೆ. ವಾಟ್ಸ್ಆ್ಯಪ್ ಮೆಸೆಜ್ಗಳನ್ನೂ ತನಿಖಾಧಿಕಾರಿಗಳು ಪರಿಗಣನೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಕೊಚ್ಚಿಯಲ್ಲಿ ನವ್ಯಾ ಹಾಗೂ ಸಚಿನ್ ಒಂದೇ ಅಪಾರ್ಟ್ಮೆಂಟ್ನ ನಿವಾಸಿಗಳಾಗಿದ್ದು ನೆರೆ ಹೊರೆಯವರಾಗಿದ್ದರು. ನವ್ಯಾ, ಕೆಲವು ಬಾರಿ ಸಚಿನ್ರನ್ನು ಗುರುವಾಯೂರು ದೇವಾಲಯಕ್ಕೂ ಕರೆದೊಯ್ದಿದ್ದರು. ಇಡಿ ಆರೋಪದಂತೆ, ಸಚಿನ್, ಚಿನ್ನಾಭರಣೆ ಸೇರಿದಂತೆ ಕೆಲವು ದುಬಾರಿ ವಸ್ತುಗಳನ್ನು ನವ್ಯಾಗೆ ಉಡುಗೊರೆಯಾಗಿ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ ನವ್ಯಾ ನಾಯರ್ ಬಗ್ಗೆ ಮಾಹಿತಿ ನಮೂದಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.



