ಲೋಕಸಭೆ ಎಲೆಕ್ಷನ್ ಅಂತಿಮ ಹಂತಕ್ಕೆ ಬರ್ತಾ ಇದೆ. ರಿಸಲ್ಟ್, ಎಕ್ಸಿಟ್ ಪೋಲ್ ಜೊತೆಗೇನೇ ಬೆಟ್ಟಿಂಗ್ ದುನಿಯಾನೂ ಆಕ್ಟಿವ್ ಆಗಿದೆ. ಸಟ್ಟಾ ಬಜಾರ್ನಲ್ಲಿ. ಅದೊಂಥರ ವಿಚಿತ್ರ ಲೋಕ. ಇದು ಪೊಲಿಟಿಕಲ್ ಇಂಟ್ರೆಸ್ಟ್ ಇರೋವ್ರಿಗೆ ಇನ್ಫರ್ಮೇಷನ್ ಮಾತ್ರ. ಪ್ರಮೋಷನ್ ಅಂತೂ ಅಲ್ಲ.
ಈ ಸಟ್ಟಾ ಬಜಾರ್ ಲೆಕ್ಕನ ಯಾಕ್ ನಂಬಬೇಕು ಅಂದ್ರೆ, ಲಾಸ್ಟ್ ಇಯರ್ ಎಲೆಕ್ಷನ್ ಆಯ್ತಲ್ಲ, ನಮ್ ಕರ್ನಾಟಕದಲ್ಲಿ. ಆಗ ಇದು ಆಲ್ಮೋಸ್ಟ್ ಪಕ್ಕಾ ನಂಬರ್ ಕೊಟ್ಟಿತ್ತು. ಸಟ್ಟಾ ಬಜಾರ್ ಕೊಟ್ಟಿದ್ದದ್ದು 135 ಸೀಟು. ಕಾಂಗ್ರೆಸ್ ಗೆದ್ದಿದ್ದು 136+1 ಸೀಟು.ಹಂಗಾಗಿನೇ ಇದು ಸಿಕ್ಕಾಪಟ್ಟೆ ಇಂಟ್ರೆಸ್ಟಿಂಗು.
ಕರ್ನಾಟಕದ ವಿಷಯ ಬಿಡಿ, ಇದು ಸಟ್ಟಾ ಬಜಾರ್ಗೂ ಲೆಕ್ಕಕ್ಕೆ ಸಿಕ್ಕಲ್ಲ. ಸಟ್ಟಾ ಬಜಾರ್ ಪ್ರಕಾರ ಕರ್ನಾಟಕದಲ್ಲಿ ಜಾಸ್ತಿ ಬೆಟ್ಟಿಂಗ್ ನಡೀತಿರೋದು ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ.
ಸಿಟಿಗಳಲ್ಲಿ ಡಾ.ಮಂಜುನಾಥ್ ಪರ ಬೆಟ್ಟಿಂಗ್ ಆಗ್ತಿದ್ರೆ, ಹಳ್ಳಿ ಪ್ರದೇಶಗಳಲ್ಲಿ ಡಿಕೆ ಸುರೇಶ್ ಪರ ಬೆಟ್ಟಿಂಗ್ ನಡೀತಿದೆ. 50: 50 ಚಾನ್ಸ್ ಇದ್ಯಂತೆ.
ಅದನ್ನ ಬಿಟ್ರೆ, ಬೆಟ್ಟಿಂಗ್ ಅನ್ನೋದು ನಡೀತಿರೋದು ಮಂಡ್ಯ, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ, ವಿಜಯಪುರದಲ್ಲಿ ಮಾತ್ರ. ಸಟ್ಟಾ ಬಜಾರ್ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿ + ಜೆಡಿಎಸ್ ಒಟ್ಟಾರೆ 18ರಿಂದ 20 ಸೀಟು ಗೆಲ್ತಾರಂತೆ. ಉಳಿದದ್ದು ಕಾಂಗ್ರೆಸ್ ಗೆ ಅಂತಿದೆ.
ಈ ಸಟ್ಟಾ ಬಜಾರ್ ಇದ್ಯಲ್ಲ, ಅದು ಸಾಮಾನ್ಯ ಜನಕ್ಕೆ ಅರ್ಥ ಆಗದೇ ಇರೋ ಫೀಲ್ಡು. ಅಲ್ಲಿ ದಿನ ದಿನಾನೂ ನಂಬರ್ ಚೇಂಜ್ ಆಗ್ತಾ ಇರುತ್ತೆ. ಅಂತಹ ಸಟ್ಟಾ ಬಜಾರಿನಲ್ಲಿ ಒಂದು ನಂಬರ್ ಕೊಡ್ತಾರೆ. ಆ ನಂಬರ್ ಮೇಲೆ ಜನ ಬೆಟ್ಟಿಂಗ್ ಕಟ್ತಾರೆ. ಒಂದ್ ಇಂಟ್ರೆಸ್ಟಿಂಗ್ ಏನಪ್ಪ ಅಂದ್ರೆ, ಬಿಜೆಪಿ ಮತ್ತು ಎನ್ಡಿಎಗೆ ಮೊದಲು ಕೊಟ್ಟಂತ ನಂಬರ್ ಕೊಡ್ತಾ ಇಲ್ಲ ಅನ್ನೋದು.
ಅಂದ್ರೆ, ಮೊದ ಮೊದಲು ಬಿಜೆಪಿಗೆ 330 ಕೊಟ್ಟಿದ್ದ ಸಟ್ಟಾ ಬಜಾರಿನವ್ರು, ಈಗ 4ನೇ ಹಂತ ಮುಗಿಯುವ ಟೈಮಲ್ಲಿ 300ರ ಹೊಸ್ತಿಲಿಗೆ ತಂದಿದ್ದಾರೆ. ಅಂದ್ರೆ ಬಿಜೆಪಿ ನಂಬರ್ ಡೌನ್ ಆಗಿದೆ. ಸಟ್ಟಾ ಬಜಾರಿನವ್ರ ಪ್ರಕಾರ ಬಿಜೆಪಿ 370 ಗೆಲ್ಲೋದು, ಎನ್ಡಿಎ 400+ ಗೆಲ್ಲೋದು ಸಾಧ್ಯವೇ ಇಲ್ಲ.
ಆಮೇಲೆ ಕಾಂಗ್ರೆಸ್ಸಿನವರು ಲಾಸ್ಟ್ ಟೈಮಿಗಿಂತ ಒಂದ್ ಹತ್ತು ಸೀಟು ಜಾಸ್ತಿ ಗೆಲ್ಲಬಹುದು, ಅಷ್ಟೆ.
ನೋಡಿದ್ರೆ, ಅದು ಅಂತಿಮ ದಿನಗಳಲ್ಲಿ ಬಿಜೆಪಿ ಲೆಕ್ಕ ಡೌನ್ ಆಗಿದೆ ಅನ್ನೋ ಸ್ಟೋರಿ ಹೇಳ್ತಾ ಇದೆ. ಬಿಜೆಪಿಯವರು 370 ಅಂತಿದ್ರು. ಆದರೆ, ಸಟ್ಟಾ ಬಜಾರ್ ಲೆಕ್ಕ ನೋಡಿದ್ರೆ, 296ರಿಂದ 300 ಅಂತಿದ್ದಾರೆ. ಎನ್ಡಿಎ ಟೋಟಲ್ಲಾಗಿ 329 ರಿಂದ 332 ಸೀಟು ಗೆಲ್ಲಬಹುದು ಅಂತಿದೆ ಸಟ್ಟಾಬಜಾರ್.
ಕಾಂಗ್ರೆಸ್ಸಿನವರ ನಂಬರ್ 58 ರಿಂದ 62 ಇದೆ. ಹಂಗಂತ ಇಂಡಿಯಾ ಅಲಯನ್ಸ್ ಮೆಜಾರಿಟಿ ಬರುತ್ತಾ ಅಂದ್ರೆ, ಸಟ್ಟಾ ಬಜಾರಿನವರ ಪ್ರಕಾರ ಇಲ್ಲ. ಅದು 150 ಗಡಿ ಹತ್ತಿರ ಬಂದು ನಿಲ್ಲುತ್ತಂತೆ. ಅಷ್ಟೆ.
ಈ ಸಲ ಬಿಜೆಪಿಗೆ ಗುಜರಾತಿನಲ್ಲಿ ಮಾತ್ರ ಕ್ಲೀನ್ ಸ್ವೀಪ್ ಅಂದ್ರೆ, 26ಕ್ಕೆ 26 ಸೀಟು ಸಿಗುತ್ತಂತೆ. ಇಡೀ ದೇಶ ಎದುರು ನೋಡ್ತಿರೋ ಯೋಗಿಯ ಉತ್ತರ ಪ್ರದೇಶದಲ್ಲಿ ಕಳೆದ ಸಲಕ್ಕಿಂತ ಸ್ವಲ್ಪ ಜಾಸ್ತಿ ಅಂದ್ರೆ 62ರಿಂದ 65 ಗೆಲ್ಲುತ್ತಂತೆ. ಮಧ್ಯಪ್ರದೇಶದಲ್ಲಿ 27ರಿಂದ 28 ಗೆಲ್ಲಬಹುದು. ಆದರೆ ರಾಜಸ್ತಾನದಲ್ಲಿ 18 ರಿಂದ 20 ಗೆಲ್ಲಬಹುದಂತೆ. ಸಟ್ಟಾ ಬಜಾರಿನವರು ಸೋಲೋಕೆ ಕಾರಣ ಎಲ್ಲ ಹೇಳೋದಿಲ್ಲ. ಅಲ್ಲಿ ನಡೆಯೋದೇನಿದ್ರೂ ದುಡ್ಡಿನ ಲೆಕ್ಕ.
ಒಡಿಶಾದಲ್ಲಿ11ರಿಂದ 12 ಗೆಲ್ಲಬಹುದು. ಪಂಜಾಬ್ನಲ್ಲಿ 2-3 ಗೆಲ್ಲಬಹುದ. ಪಶ್ಚಿಮಬಂಗಾಳದಲ್ಲಿ ಸ್ವಲ್ಪ ಜಾಸ್ತಿ ಆಗುತ್ತಂತೆ. 21-22 ಗೆಲ್ತಾರಂತೆ.
ತೆಲಂಗಾಣದಲ್ಲಿ 5-6, ಹರಿಯಾಣದಲ್ಲೂ 5-6, ಛತ್ತೀಸ್ಘಡದಲ್ಲಿ 10-11, ಜಾರ್ಖಂಡ್ ಕೂಡಾ 10-11, ದೆಹಲಿಯಲ್ಲಿ 6-7 ಅಂಡ್ ಪೈನಲಿ ತಮಿಳುನಾಡುನಲ್ಲಿ 3-4 ಸೀಟು ಗೆಲ್ಲಬಹುದು ಅನ್ನೋ ಸಟ್ಟಾಬಜಾರ್ ಲೆಕ್ಕ.
ಕಮ್ಮೀ ಅಂದ್ರೂ 15000 ಕೋಟಿ ಬಿಸಿನೆಸ್ ನಡೀತಿದ್ಯಂತೆ. ಈ ಸಟ್ಟಾ ಬಜಾರಿನಲ್ಲಿ ದುಡ್ಡು ಹಾಕಿ ಲಾಭ ಮಾಡೋಕೆ ಹೋಗಬೇಡಿ. ಅದನ್ನ ಯಾರ್ ನಡೆಸ್ತಾರೆ, ಹೇಗೆ ನಡೆಸ್ತಾರೆ ಅನ್ನೋದು ನಮಗೂ ಗೊತ್ತಿಲ್ಲ. ಆದರೆ ಈ ಸಟ್ಟಾ ಬಜಾರ್ ಪ್ರತೀ ಎಲೆಕ್ಷನ್ನಿನಲ್ಲೂ ಪರ್ಫೆಕ್ಟ್ ನಂಬರ್ ಕೊಡ್ತಾರೆ. ನಂಬರ್ ಅಂದ್ರೆ ಸಟ್ಟಾ ಬಜಾರ್ ಅಂತಾರೆ. ಯಾಕಂದ್ರೆ, ಅಮೆರಿಕದಲ್ಲಿ ಟ್ರಂಪ್ ಮತ್ತೆ ಗೆಲ್ಲಲ್ಲ ಅಂತಾ ಹೇಳಿದ್ದುದೂ ಇದೇ ಸಟ್ಟಾ ಬಜಾರ್.
ಹಂಗಂತ ಇದೇ ಫೈನಲ್ಲಾ.. ಹಂಗೇನಿಲ್ಲ. ಫಸ್ಟ್ ರೌಂಡ್ ಮುಗ್ದಾಗ ಬಿಜೆಪಿಗೆ 330 ಕೊಟ್ಟಿದ್ದ ಸಟ್ಟಾ ಬಜಾರ್, 2 ಮತ್ತು 3ನೇ ರೌಂಡಿನಲ್ಲಿ ಕಡಿಮೆ ನಂಬರ್ ಕೊಟ್ಟಿತ್ತು. 4ನೇ ರೌಂಡ್ ಮುಗಿಯೋ ಹೊತ್ತಿಗೆ ಮತ್ತೆ ನಂಬರ್ ಜಾಸ್ತಿ ಆಗಿತ್ತು. ಸಟ್ಟಾ ಬಜಾರ್ ಪ್ರಕಾರ ಈ ಬಾರಿನೂ ಬಿಜೆಪಿ ಸರಳ ಬಹುಮತ ಪಡೆಯೋದರಲ್ಲಿ ಅನುಮಾನ ಇಲ್ಲ.



