ಇಡೀ ದೇಶದಲ್ಲಿ ನಡೆಯುತ್ತಿರುವ ಲೋಕಸಭೆ ಚುನಾವಣೆ ಬಗ್ಗೆ ಹಲವು ಸಮೀಕ್ಷೆಗಳು ಹೊರಬೀಳುತ್ತಿವೆ. ಒಂದೆರಡು ನಂಬರ್ ಆಚೀಚೆ ಬಿಟ್ಟರೆ.. ಎಲ್ಲರದ್ದೂ ಒಂದೇ ಸಮೀಕ್ಷೆ. ಅವುಗಳ ಪ್ರಕಾರ ದೇಶದಲ್ಲಿ ಅಧಿಕಾರ ಹಿಡಿಯುವುದು ಎನ್ʻಡಿಎ. ಮತ್ತೆ ಪ್ರಧಾನಿಯಾಗುವುದು ನರೇಂದ್ರ ಮೋದಿ. ಈ ಕುರಿತಂತೆ ಹೊರಬಿದ್ದಿರುವ ಸಮೀಕ್ಷೆಗಳ ಲೆಕ್ಕ ನೋಡಿದರೆ.. ಅಚ್ಚರಿಯಾಗುವುದು ಸತ್ಯ.
ಇದುವರೆಗೆ ಟೈಮ್ಸ್ ನೌ, ಇಂಡಿಯಾ ಟುಡೇ, ಇಂಡಿಯಾ ಟಿವಿ, ಎನ್ʻಡಿಟಿವಿ, ನ್ಯೂಸ್ 18, ಜೀ ನ್ಯೂಸ್.. ಹೀಗೆ ಹಲವು ಸಂಸ್ಥೆಗಳು ಸಮೀಕ್ಷೆ ಮಾಡಿವೆ. ಇವುಗಳಲ್ಲಿ ಒಂದು ವಿಶೇಷವಾಗಿದೆ. ಇಂಡಿಯಾ ಟಿವಿ ಸಮೀಕ್ಷೆ ಕ್ಷೇತ್ರವಾರು ಲೆಕ್ಕ ಕೊಟ್ಟಿದೆ. ಅವುಗಳ ಪ್ರಕಾರ.. ರಾಜ್ಯದ 28 ಕ್ಷೇತ್ರಗಳಲ್ಲಿಯೂ ಯಾವ್ಯಾವ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಅನ್ನೋ ಲೆಕ್ಕ ಕೊಡಲಾಗಿದೆ.
1. ಚಿಕ್ಕೋಡಿ – ಕಾಂಗ್ರೆಸ್
2. ಬೆಳಗಾವಿ – ಬಿಜೆಪಿ
3. ಬಾಗಲಕೋಟೆ – ಬಿಜೆಪಿ
4. ಬಿಜಾಪುರ – ಬಿಜೆಪಿ
5. ಗುಲ್ಬರ್ಗಾ – ಕಾಂಗ್ರೆಸ್
6. ರಾಯಚೂರು – ಬಿಜೆಪಿ
7. ಬೀದರ್ – ಬಿಜೆಪಿ
8. ಕೊಪ್ಪಳ – ಬಿಜೆಪಿ
9. ಬಳ್ಳಾರಿ – ಬಿಜೆಪಿ
10. ಹಾವೇರಿ – ಬಿಜೆಪಿ
11. ಧಾರವಾಡ – ಬಿಜೆಪಿ
12. ಉತ್ತರ ಕನ್ನಡ – ಬಿಜೆಪಿ
13. ದಾವಣಗೆರೆ – ಬಿಜೆಪಿ
14. ಶಿವಮೊಗ್ಗ – ಬಿಜೆಪಿ
15. ಉಡುಪಿ ಚಿಕ್ಕಮಗಳೂರು – ಬಿಜೆಪಿ
16. ಹಾಸನ – ಜೆಡಿಎಸ್
17. ದಕ್ಷಿಣ ಕನ್ನಡ – ಬಿಜೆಪಿ
18. ಚಿತ್ರದುರ್ಗ – ಬಿಜೆಪಿ
19. ತುಮಕೂರು – ಬಿಜೆಪಿ
20. ಮಂಡ್ಯ – ಜೆಡಿಎಸ್
21.ಮೈಸೂರು – ಬಿಜೆಪಿ
22. ಚಾಮರಾಜನಗರ – ಕಾಂಗ್ರೆಸ್
23. ಬೆಂಗಳೂರು ಗ್ರಾಮಾಂತರ – ಕಾಂಗ್ರೆಸ್
24. ಬೆಂಗಳೂರು ಉತ್ತರ – ಬಿಜೆಪಿ
25. ಬೆಂಗಳೂರು ಸೆಂಟ್ರಲ್ – ಬಿಜೆಪಿ
26. ಬೆಂಗಳೂರು ದಕ್ಷಿಣ – ಬಿಜೆಪಿ
27. ಚಿಕ್ಕಬಳ್ಳಾಪುರ – ಬಿಜೆಪಿ
28. ಕೋಲಾರ – ಬಿಜೆಪಿ
ಅಂದಹಾಗೆ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಬಿಜೆಪಿ ಕಳೆದ ಬಾರಿ 25 ಕ್ಷೇತ್ರಗಳಲ್ಲಿ ಗೆದ್ದಿದ್ದರೂ.. ಜೆಡಿಎಸ್ʻಗೆ ತಾನು ಗೆದ್ದಿದ್ದ ಕ್ಷೇತ್ರವನ್ನು ಬಿಟ್ಟುಕೊಟ್ಟಿದೆ. ಹಾಸನದಲ್ಲಿ ಜೆಡಿಎಸ್ ಗೆದ್ದಿತ್ತು. ಕೋಲಾರದಲ್ಲಿ ಬಿಜೆಪಿ ಗೆದ್ದಿತ್ತು. ಮಂಡ್ಯದಲ್ಲಿ ಗೆದ್ದವರು ಆಮೇಲೆ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದಾರೆ. ಈ ಮೂರೂ ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧೆ ಮಾಡಲಿದೆ.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಅಣ್ಣ ಸ್ಪರ್ಧೆ ಮಾಡಿರುವ ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ ಕ್ಷೇತ್ರ, ಮೈಸೂರು ಈ ಎಲೆಕ್ಷನ್ನಿನ ಹಾಟ್ ಹಾಟ್ ಕ್ಷೇತ್ರಗಳು.
ಏನೇ ಹೇಳಿದರೂ.. ರ್ನಾಟಕದಲ್ಲಿ ಬಿಜೆಪಿಗೆ ಹೋದ ಚುನಾವಣೆಯಲ್ಲಿ ಬಂದಷ್ಟು ಸ್ಥಾನಗಳು ಬರುವ ಸಾಧ್ಯತೆಯಿಲ್ಲ, ಕೆಲವು ಸ್ಥಾನಗಳು ಕೈತಪ್ಪಲಿವೆ.



