ಗೃಹಲಕ್ಷ್ಮಿ (GruhaLakshmi) ಯೋಜನೆ ಇನ್ನೇನು ಶುರುವಾಗಲಿದೆ. ಆಗಸ್ಟ್ 15ರಂದು ಹಣ ಅಕೌಂಟಿಗೆ ಬರಲಿದೆ. ವಾರ್ಷಿಕ ಇದೊಂದೇ ಯೋಜನೆಗೆ ಸುಮಾರು 34ರಿಂದ 35 ಸಾವಿರ ಕೋಟಿ ಹಣ ಬೇಕು. ಇಂತಹ ಯೋಜನೆ ಜಾರಿಯ ಬಗ್ಗೆ ಘೋಷಣೆ ಮಾಡಿಯೂ ವಿಳಂಬವಾಗಿದ್ದೇಕೆ..? ಹೇಗೆ ಜಾರಿಯಾಗಲಿದೆ..? ಯಾರು ಅರ್ಜಿ ಹಾಕಬೇಕು..? ಯಾವಾಗ ಹಾಕಬೇಕು..? ಎಲ್ಲ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದಾರೆ (Lakshmi Hebbalkar) ಲಕ್ಷ್ಮೀ ಹೆಬ್ಬಾಳ್ಕರ್.
ಗೃಹಲಕ್ಷ್ಮಿ (GruhaLakshmi)ಯೋಜನೆ ಪಡೆಯಲು ಏನು ಮಾಡಬೇಕು..?
ಎಪಿಎಲ್ ಹಾಗೂ ಬಿಪಿಎಲ್ (APL, BPL) ಕಾರ್ಡ್ಗಳಲ್ಲಿ ಯಜಮಾನಿ ಸ್ಥಾನದಲ್ಲಿ ನಮೂದಿಸಿರುವ ಪ್ರತಿಯೊಬ್ಬರೂ ಯೋಜನೆಗೆ ಅರ್ಹರು. ಕೇವಲ ಪತಿ ಹಾಗೂ ಪತ್ನಿ ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ ಮಾತ್ರ ಸಾಕು. ಪಡಿತರ ಚೀಟಿ ಕೂಡ ಕೇಳಲ್ಲ. ಆಧಾರ್ ಕಾರ್ಡ್ನಲ್ಲಿ ಲಿಂಕ್ ಆಗಿರುವ ಖಾತೆಗೆ ಹಣ ವರ್ಗಾವಣೆಯಾಗುತ್ತದೆ. ಎಪಿಎಲ್ ಅಥವಾ ಬಿಪಿಎಲ್ ಕಾರ್ಡ್ ಇರಲೇಬೇಕು. ಇಲ್ಲದವರಿಗೆ ಇಲ್ಲ.
ಏನೇನು ದಾಖಲೆಗಳು ಬೇಕು..?
APL, BPL ಅಂತ್ಯೋದಯ ಕಾರ್ಡ್ನಲ್ಲಿ ಮನೆಯೊಡತಿಯ ಹೆಸರಿರಬೇಕು. ಒಂದು ಮನೆಯಲ್ಲಿ ಒಬ್ಬರಿಗೆ ಮಾತ್ರ ಯೋಜನೆ ಅನ್ವಯವಾಗಲಿದೆ. ಯಜಮಾನಿಯ ಮೊಬೈಲ್ ನಂಬರ್ ಕಡ್ಡಾಯವಾಗಿ ಬೇಕಾಗುತ್ತದೆ. ಬ್ಯಾಂಕ್ ಖಾತೆಯೊಂದಿಗೆ ಮೊಬೈಲ್ ನಂ. ಲಿಂಕ್ ಆಗಿರಬೇಕು. ಯಜಮಾನಿ ಅಥವಾ ಪತಿ ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಮನೆ ಒಡತಿಯ ಯಜಮಾನ ಜಿಎಸ್ಟಿ ರಿರ್ಟನ್ಸ್ ಮಾಡಿರಬಾರದು.
ಯಾರು ಈ ಯೋಜನೆಗೆ ಆರ್ಹರಲ್ಲ..?
ಪತಿ ಅಥವಾ ಪತ್ನಿ ಆದಾಯ ತೆರಿಗೆ ಪಾವತಿದಾರರಾಗಿದ್ದರೆ (Income Taxk) ಅಥವಾ ಜಿಎಸ್ಟಿ ರಿಟನ್ಸ್ರ್ ಫೈಲ್ (GST/TDS returns) ಮಾಡುತ್ತಿದ್ದರೆ ಅವರು ಅರ್ಹರಲ್ಲ. ಅವರ ಮಕ್ಕಳು ಆದಾಯ ತೆರಿಗೆ ಪಾವತಿಸುತ್ತಿದ್ದರೂ ಸಮಸ್ಯೆಯಿಲ್ಲ. ಅಂದ್ರೆ ಮಕ್ಕಳು ತೆರಿಗೆ ಕಟ್ಟುತ್ತಿದ್ದರೂ, ತಾಯಿ ಅರ್ಜಿ ಸಲ್ಲಿಸಿದರೆ ಗೃಹಲಕ್ಷ್ಮೀ 2 ಸಾವಿರ ರೂ. ದೊರೆಯುತ್ತದೆ.
ಬ್ಯಾಂಕ್`ನಲ್ಲಿ ದುಡ್ಡು ಹಾಕಿದರೆ ಇಎಂಐಗೆ ಕಟ್ ಮಾಡಿಕೊಳ್ತಾರೆ. ಏನು ಮಾಡೋದು..?
ಆಧಾರ್ ಕಾರ್ಡ್ ಲಿಂಕ್ ಇರುವ ಬ್ಯಾಂಕ್ ಖಾತೆಯಿಂದ ಲೋನ್ ಪಡೆದಿದ್ದೀರಿ. ಗೃಹ ಲಕ್ಷ್ಮೀ (GruhaLakshmi) ಹಣ ಇಎಂಐ ಕಡಿತ ಮಾಡಿಕೊಳ್ಳುತ್ತಾರೆ ಎಂಬ ಶಂಕೆಯಿದ್ದರೆ ಲಿಂಕ್ ಆಗಿಲ್ಲದ ಬ್ಯಾಂಕ್ ಖಾತೆಯ ಪಾಸ್ಬುಕ್ ಜೆರಾಕ್ಸ್ ಪ್ರತಿ ನೀಡಲು ಅವಕಾಶ ನೀಡಿದ್ದೇವೆ. ಇಂತಹ ಖಾತೆಗೂ ಹಣ ಹಾಕುತ್ತೇವೆ. ಅಲ್ಲದೆ, ಹಣ ಸಂದಾಯವಾದ ಕೂಡಲೇ ಮೊಬೈಲ್ ಸಂಖ್ಯೆಗೆ ಧ್ವನಿ ಸಂದೇಶ ಕೂಡ ಬರಲಿದೆ.
ತಪ್ಪು ಮಾಹಿತಿ ನೀಡಿ ಯೋಜನೆ ಪಡೆದರೆ ಏನು ಮಾಡ್ತೀರಿ..?
ಆಪ್ ವಿಳಂಬವಾಗಿದ್ದೇ ಆ ಕಾರಣಕ್ಕೆ. ತಪ್ಪು ಮಾಹಿತಿ ನೀಡಲು ಶೇ.1 ರಷ್ಟುಕೂಡ ಆ ಸಾಧ್ಯತೆಯಿಲ್ಲ. ತಂತ್ರಾಂಶವನ್ನು ಅಷ್ಟುಪ್ರಬಲವಾಗಿ ಅಪ್ಡೇಟ್ ಮಾಡಲಾಗಿದೆ. ತಪ್ಪು ಮಾಹಿತಿ ನೀಡಿದರೆ ಅರ್ಜಿಯೇ ಸ್ವೀಕೃತಿಯಾಗುವುದಿಲ್ಲ. ಮಾಹಿತಿ ಸರಿಯಿದ್ದರೆ ಸ್ಥಳದಲ್ಲೇ ನಿಮಗೆ ಫಲಾನುಭವಿ ಪ್ರಮಾಣಪತ್ರವೇ ಲಭ್ಯವಾಗಲಿದೆ.
ನಕಲಿ ಆಪ್ ತಡೆಯುವುದು ಹೇಗೆ..?
ಇಲಾಖೆ ಅಧಿಕೃತವಾಗಿ ಹೇಳುವವರೆಗೂ ವೆಬ್`ಸೈಟ್/ಆಪ್ ಡೌನ್‍ಲೋಡ್ ಮಾಡಬೇಡಿ. ದಾಖಲೆಗಳನ್ನೂ £ ಕೊಡಬೇಡಿ. ಹೀಗಾಗಿಯೇ ನಾವು ಇನ್ನೂ ಯೋಜನೆಗೆ ಚಾಲನೆ ಸಿಕ್ಕಿಲ್ಲ ಎಂದು ಹೇಳುತ್ತಲೇ ಇದ್ದೇವೆ. ಕೆಲವರು ಜನರ ಅಜ್ಞಾನದ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆ.
ಗೃಹಲಕ್ಷ್ಮೀ ಆಪ್ ಎಲ್ಲಿ ಡೌನ್`ಲೋಡ್ ಮಾಡಿಕೊಳ್ಳಬೇಕು..?
ಗೃಹ ಲಕ್ಷ್ಮೀ ಯೋಜನೆಗೆ ಸರ್ಕಾರದಿಂದ ಪ್ರತ್ಯೇಕ ಆ್ಯಪ್ ಬಿಡುಗಡೆ ಮಾಡಲಾಗುತ್ತೆ. ಸರ್ವರ್ ಸಮಸ್ಯೆಗೆ ಕಡಿವಾಣ ಹಾಕಲು ಇದೀಗ ಸರ್ಕಾರವೇ ಪ್ರತ್ಯೇಕ ಆ್ಯಪ್ ಸಿದ್ಧಪಡಿಸಿದ್ದು, ಅಧಿಕೃತವಾಗಿ ಬಿಡುಗಡೆ ಮಾಡುವುದೊಂದೇ ಬಾಕಿ ಇದೆ. ಗೂಗಲ್ ಪ್ಲೇ ಸ್ಟೋರ್, ಆ್ಯಪಲ್ ಸ್ಟೋರ್ನಲ್ಲಿ ಆ್ಯಪ್ ಲಭ್ಯವಾಗಲಿದೆ. ಇನ್ನೂ ಸೇವಾಸಿಂಧು ವೆಬ್ಸೈಟ್ನಲ್ಲೂ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗುತ್ತದೆ.
ಗೃಹಲಕ್ಷ್ಮಿ ಯೋಜನೆಯ ಆಪ್ ತಯಾರಾಗಿದ್ದು, ಗ್ರೀನ್ ಸಿಗ್ನಲ್ ಕೊಟ್ಟ ತಕ್ಷಣ ಆರಂಭವಾಗಲಿದೆ. ಆಗಸ್ಟ್ 15ಕ್ಕೆ ರಾಜ್ಯದ (Lakshmi Hebbalkar) ಅರ್ಹ ಮಹಿಳೆಯರ ಖಾತೆಗೆ ಹಣ ಬರಲಿದೆ. ತಿಂಗಳೂ ತಿಂಗಳೂ ಎರಡು ಸಾವಿರ ಫಿಕ್ಸ್.



