ನನ್ ಕೆಪಾಸಿಟಿ ಅರ್ಧ ಗಂಟೆ, ಮುಕ್ಕಾಲು ಗಂಟೆ ಎನ್ನುವವರ ಸಂಖ್ಯೆಗೆ ಕೊರತೆಯೇನೂ ಇಲ್ಲ. ಸಹಜವಾಗಿ, ಪ್ರಾಕೃತಿಕವಾಗಿ ಅದು ಸಾಧ್ಯವಿಲ್ಲ. ಆಟಕ್ಕೊಂದು ಮಿನಿಮಮ್ ಸಮಯ ಇರುತ್ತೆ. ಅಷ್ಟೆ, ಆದರೂ ಹಾಸಿಗೆಯಲ್ಲಿ ಲೂಸರ್ ಎಂದು ಕರೆಸಿಕೊಳ್ಳಲು ಯಾರೂ ಇಷ್ಟಪಡೋದಿಲ್ಲ. ಲೈಂಗಿಕ ಕಾರ್ಯಕ್ಷಮತೆಯು ಪ್ರತಿಯೊಬ್ಬರಿಗೂ ಒಂದೊಂದು ರೀತಿ. ಬಹಳ ಸೂಕ್ಷ್ಮ ವಿಷಯ.
ಐ ಆಮ್ ನಾಟ್ ಗುಡ್ ಇನ್ ಬೆಡ್ ಎದನ್ನೋದನ್ನ ಒಪ್ಪಿಕೊಳ್ಳೋಕೆ ನಾಚಿಕೆ, ಮುಜುಗರ. ಅದು ಎಷ್ಟೋ ಗಂಡಸರನ್ನು ಅಸಹಾಯಕರನ್ನಾಗಿಸಿ ಬಿಡುತ್ತದೆ. ಇನ್ನೂ ಕೆಲವರು ಅದನ್ನು ಮುಚ್ಚಿಟ್ಟುಕೊಂಡು ಕೊಚ್ಚಿಕೊಳ್ಳುತ್ತಲೇ ಕಾಲ ಕಳೀತಾರೆ. ನಿರಾಸೆ, ಅಸಹಾಯಕತೆ, ಆತಂಕಗಳನ್ನೆಲ್ಲ ಒಳಗೊಳಗೇ ಅನುಭವಿಸ್ತಾರೆ. ಇನ್ನೂ ಕೆಲವರಿಗೆ ಆಗ ಹೇಳಿದ್ದೆವಲ್ಲ, ನನ್ ಕೆಪಾಸಿಟಿ ಅರ್ಧ ಗಂಟೆ, ಮುಕ್ಕಾಲು ಗಂಟೆ ಎನ್ನುವವರ ಮಾತು ನಂಬಿ ಸಕ್ಸಸ್ ಆಗಿದ್ದರೂ ನರಳುತ್ತಾರೆ.
ಹೆಚ್ಚಿನ ಪುರುಷರಿಗೆ ಅಕಾಲಿಕ ಸ್ಖಲನದ ಸಮಸ್ಯೆ. ಒಮ್ಮೆ ಹೀಗಾಗಿ ಬಿಟ್ಟರೆ ಇನ್ನೊಂದು ಆಟ ಆಡುವುದಿರಲಿ, ಆಟವನ್ನೇ ತಪ್ಪಿಸಿಕೊಳ್ಳೋಕೆ ನೋಡ್ತಾರೆ. ಪ್ರಾಕ್ಟೀಸಸ್ ಆರ್ ಮೇಕ್ ಮೆನ್ ಪರ್ಫೆಕ್ಟ್ ಅನ್ನೋದು ಗೊತ್ತಿದೆ ತಾನೆ. ಇದನ್ನು ಸಂಗಾತಿ ಜೊತೆ ಮುಕ್ತವಾಗಿ ಮಾತನಾಡಿ. ಮತ್ತೆ ಮತ್ತೆ ಟ್ರೈ ಮಾಡಿ. ಗೆಲುವು ನಿಮಗೇ ಕಟ್ಟಿಟ್ಟ ಬುತ್ತಿ.
ಕೆಲವು ಪುರುಷರು ಎಷ್ಟೇ ಪ್ರಯತ್ನಿಸಿದರೂ ಒಂದು ನಿಮಿಷದೊಳಗೆ ಕ್ಲೈಮ್ಯಾಕ್ಸ್ ತಲುಪಿ ಬಿಡ್ತಾರೆ. ಇದು ಅವರಲ್ಲಿ ತಮ್ಮ ಸಂಗಾತಿಯನ್ನು ತೃಪ್ತಿ ಪಡಿಸಿಲ್ಲ ಎಂಬ ಭಾವನೆ ಕೊರೆಯೋಕೆ ಕಾರಣವಾಗುತ್ತೆ. ಮನಸ್ಸಿನಲ್ಲೇ ಮರುಗುತ್ತಾರೆ. ಕೊರಗುತ್ತಾರೆ. ಇದು ಅವರನ್ನು ಮುಜುಗರ ಮತ್ತು ನಾಚಿಕೆಗೀಡಾಗಿಸುತ್ತದೆ.
ಮುಡಿಯಲಿ ಮಲ್ಲಿಗೆಯ
ಮುಡಿದವಳ ಮೊದಲು ಮುಡಿಯಬೇಕು…
ಮಡದಿಗೆ ಪ್ರತಿದಿನವೂ….
ಮೊದಲಿರುಳಿರಬೇಕು…
ಮನಸಿನ ಮಧುವಿನ ಮಹಲೊಳಗೆ
ಮದನ ಮಣಿಯಬೇಕು….
ಮಹಿಳೆಯರು ಲೈಂಗಿಕ ಪರಾಕಷ್ಠೆ ತಲುಪಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಇದು ಪುರುಷರ ಮನಸ್ಸಿನಲ್ಲಿ ಒಂದು ರೀತಿಯ ಕೊರಗಿನಂತೆ ಕಾಡುತ್ತದೆ. ಇದಕ್ಕಾಗಿಯೇ ಹೇಳಿದ್ದು ಮನಸಿನ ಮಧುವಿನ ಮಹಲೊಳಗೆ
ಮದನ ಮಣಿಯಬೇಕು ಎಂದು. ಮೊದಲು ಮನಸ್ಸಿನ ಜೊತೆ ಆಡಬೇಕು.
ಕೆಲವು ಮಹಿಳೆಯರು ನೇರಾ ನೇರ. ತೃಪ್ತಿಯಾಗಲಿಲ್ಲ ಅನ್ನೋದನ್ನೂ ನೇರವಾಗಿ ಹೇಳಿಬಿಡ್ತಾರೆ. ಲೂಸರ್ ಎಂದು ಕರೆಯುತ್ತಾರೆ. ಇದು ಪುರುಷರನ್ನು ಕೆರಳಿಸುವುದು ಸತ್ಯ.ಸ್ವಾಭಿಮಾನಕ್ಕೇ ಪೆಟ್ಟು ಬಿದ್ದುಬಿಡುತ್ತೆ.
ವಿರಹಬಾಧೆ ದಹಿಸುವಾಗ…
ಬಾಲಬೋಧೆ ಏಕೆ
ಅಂತಹ ವೇಳೆ ಮಾತಿಗಿಂತ ಕೃತಿಯೇ ಒಳ್ಳೆಯದು. ಆಟಕ್ಕಿಳಿಯೋದೇ ಒಳ್ಳೆಯದು. ಆದರೆ ಆ ಆಟ ಹೊಸದಾಗಿರಬೇಕು. ಕೆಲವು ಪುರುಷರು ತಮ್ಮ ಆರಾಮ ವಲಯದಿಂದ ಹೊರಬರಲು ಇಷ್ಟಪಡುವುದಿಲ್ಲ ಹಾಗಾಗಿ ಲೈಂಗಿಕತೆಯ ವಿಷ್ಯದಲ್ಲಿ ಹೊಸ ಲೈಂಗಿಕ ಭಂಗಿಯನ್ನು ಪ್ರಯತ್ನಿಸಲು ಇಷ್ಟಪಡುವುದಿಲ್ಲ. ಇದರಿಂದ ಸಂಗಾತಿಗೆ ಬೇಸರವಾಗಬಹುದು. ಹೊಸ ಹೊಸ ಆಸನ, ಸ್ಟೈಲುಗಳಲ್ಲಿ ಟ್ರೈ ಮಾಡಿ.
ಪುರುಷರು ಸ್ವಾಭಿಮಾನ ಮತ್ತು ಆತ್ಮವಿಶ್ವಾಸದ ಕೊರತೆಯಿಂದ ಬಳಲುತ್ತಿದ್ದರೆ, ಅದು ಅವರ ಲೈಂಗಿಕ ಕಾರ್ಯಕ್ಷಮತೆಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ವಿಶ್ವಾಸವಿಲ್ಲದಿದ್ದರೆ, ಅವರು ಆಟ ಸರಿಯಾಗಿ ಆಡೋಕೆ ಸಾಧ್ಯವಿಲ್ಲ.
ಇದು ದಂಪತಿಗಳ ಲೈಂಗಿಕ ಜೀವನದ ಮೇಲೆ ಪರಿಣಾಮಬೀರುತ್ತದೆ.
ನಿನ್ನ ಮುದ್ದಾಡಬೇಕು ನರ ಬೊಂಬೆ
ನಿನ್ನ ಚಂಡಾಡಬೇಕು ನರ ಬೊಂಬೆ
ನಿನ್ನ ಕೊಂಡಾಡಬೇಕು ನರ ಬೊಂಬೆ
ಜೊತೆ ಉಂಡಾಡಬೇಕು ನರ ಬೊಂಬ
ಗೊಂಬೆಯೋಳಗೆ ರಂಭೆಯ ತೋರುವೆ
ಅನ್ನೋ ಬೊಂಬೆ ಈ ಹೆಣ್ಣು ಬೊಂಬೆ
ಎಂದು ಆಕೆ ಆಟಕ್ಕಿಳಿದರೆ ಮುಂದಿನ ಆಟ ಸಲೀಸು.
ಆಆ ಆಆಆ ಆಆಆಆ
ಆಆಆಆಆ ಸಲೀಸಾದರೆ.. ಆಟವೂ ಸಲೀಸು. ಲೂಸರ್ ಪಟ್ಟವೂ ಇಲ್ಲ.



