Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home News

ಕೋಲಾರದಲ್ಲಿ ಹೇಗಿದೆ ಟ್ರೆಂಡ್? ಸಿದ್ದು ಗೆಲ್ತಾರಾ? : ಪ್ಲಸ್ಸು ಮೈನಸ್ಸುಗಳ ಲೆಕ್ಕ

SpeciallU by SpeciallU
January 10, 2023
in News, Politics
Reading Time: 1 min read
0 0
0
ಕೋಲಾರದಲ್ಲಿ ಹೇಗಿದೆ ಟ್ರೆಂಡ್? ಸಿದ್ದು ಗೆಲ್ತಾರಾ? : ಪ್ಲಸ್ಸು ಮೈನಸ್ಸುಗಳ ಲೆಕ್ಕ

ಕೋಲಾರದಲ್ಲಿ ನಿಲ್ಲುತ್ತೇನೆ ಎಂಬ ಒಂದೇ ಒಂದು ಘೋಷಣೆ ಸಂಚಲನವನ್ನೇ ಸೃಷ್ಟಿಸಿದೆ. ಕೋಲಾರದಲ್ಲಿ ಮುನಿಯಪ್ಪ ಹಾಗೂ ರಮೇಶ್ ಕುಮಾರ್ ಬಣ ರಾಜಕೀಯ ಗೊತ್ತಿದ್ದರೂ ಸಿದ್ದರಾಮಯ್ಯ ಕೋಲಾರವನ್ನೇ ಆಯ್ಕೆ ಮಾಡಿಕೊಂಡಿದ್ದೇಕೆ ಎನ್ನುವುದೇ ಒಂದು ವಿಸ್ಮಯ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗುವ ಅವಕಾಶಗಳಿವೆ. ಆದರೆ ಸಿದ್ದರಾಮಯ್ಯ ಈ ಬಾರಿ ಕಳೆದ ಬಾರಿಯಂತೆ ಸಲೀಸಾಗಬಹುದು ಎಂಬ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿಲ್ಲ. ಕಳೆದ ಬಾರಿ ಈಸಿ ವಿಕ್ಟರಿ ಎಂದುಕೊಂಡು ಸ್ಪರ್ಧಿಸಿದ್ದ ಬಾದಾಮಿಯಲ್ಲಿ ಸಿಕ್ಕಿದ್ದು ಸಾವಿರ ಚಿಲ್ಲರೆ ವೋಟುಗಳ ಗೆಲುವು. ಚಾಮುಂಡೇಶ್ವರಿಯಲ್ಲಂತೂ 40 ಸಾವಿರ ಮತಗಳ ಅಂತರದ ಹೀನಾಯ ಸೋಲು. ಬಾದಾಮಿ ಕೈಹಿಡಿಯದೇ ಹೋಗಿದ್ದರೆ ಸಿದ್ದರಾಮಯ್ಯ ಮಾಜಿ ಶಾಸಕರಾಗುತ್ತಿದ್ದರು. ಆದರೆ ಸಿದ್ದರಾಮಯ್ಯ ಕೋಲಾರದ ಆಯ್ಕೆಯ ಹಿಂದೆ ಬೇರೆಯದೇ ಲೆಕ್ಕಾಚಾರವಿದೆ. ಮೊದಲನೆಯದ್ದು ವಯಸ್ಸು. ಅವರಿಗೀಗ 75ರ ಪ್ರಾಯ. ಒಂದು ಕ್ಷೇತ್ರಕ್ಕೆ ಸೀಮಿತರಾಗಿ ನಿಂತು ತೊಡೆತಟ್ಟಲು ಹೋದರೆ ರಾಜ್ಯದಲ್ಲಿ ಕಾಂಗ್ರೆಸ್‍ಗೆ ಹೊಡೆತ ಬೀಳುವ ಅಪಾಯವಿದೆ. ಹೀಗಾಗಿ ಒಂದು ಹೆಜ್ಜೆ ಮುಂದ ಹೋಗಿ ರಿಸ್ಕ್ ತೆಗೆದುಕೊಂಡಿದ್ದಾರೆ. ಸಿದ್ದರಾಮಯ್ಯ ಗೆಲುವಿನ ಲೆಕ್ಕಾಚಾರ ವಿಸ್ಮಯ ಹುಟ್ಟಿಸುವಂತಿದೆ. ಪ್ಲಸ್ಸು ಮೈನಸ್ಸುಗಳ ಲೆಕ್ಕದಲ್ಲಿ ಮೊದಲು ಜಾತಿ ಲೆಕ್ಕಾಚಾರ ನೋಡೋಣ.

ಕೋಲಾರ ಕ್ಷೇತ್ರದ ಜಾತಿ ಲೆಕ್ಕಾಚಾರ
ಒಟ್ಟು ಮತದಾರರ ಸಂಖ್ಯೆ : ಸುಮಾರು 2.31 ಲಕ್ಷ
ಒಕ್ಕಲಿಗರು : 40 ಸಾವಿರ
ಅಲ್ಪಸಂಖ್ಯಾತರು : 40 ಸಾವಿರ
ಕುರುಬರು : 20 ಸಾವಿರ
ಬಲಿಜಿಗ : 20 ಸಾವಿರ
ಇತರೆ ಜಾತಿಯ ಮತದಾರರು : ಸುಮಾರು 10 ಸಾವಿರ

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ಹೀಗಿರುವ ಕ್ಷೇತ್ರದಲ್ಲೀಗ ಸಿದ್ದು ಹವಾ ಏಳಬೇಕು. ಸಿದ್ದರಾಮಯ್ಯ ಜೊತೆ ರಮೇಶ್ ಕುಮಾರ್, ಕೆ.ಎಚ್.ಮುನಿಯಪ್ಪ, ಕೃಷ್ಣ ಬೈರೇಗೌಡ, ಶ್ರೀನಿವಾಸ ಗೌಡ, ಕೊತ್ತನೂರು ಮಂಜುನಾಥ್, ಡಾ.ಸುಧಾಕರ್, ಸಿ.ಎಂ.ಮುನಿಯಪ್ಪ ಹಾಗೂ ನಜೀರ್ ಅಹ್ಮದ್ ಸಿದ್ದು ಬೆನ್ನಿಗೆ ನಿಂತಿದ್ದಾರೆ. ಶ್ರೀನಿವಾಸ ಗೌಡ, ಹಾಲಿ ಶಾಸಕ. ಕಳೆದ ಬಾರಿ 82,788 ಮತಗಳನ್ನು ಪಡೆದಿದ್ದರು. ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ನಜೀರ್ ಅಹ್ಮದ್ ಪಡೆದಿದ್ದ ಮತಗಳು 38,537. ಗೆಲುವಿನ ಅಂತರ 44,251. ಆಗ ಪಕ್ಷೇತರ ಅಭ್ಯರ್ಥಿಯಾಗಿದ್ದ ವರ್ತೂರು ಪ್ರಕಾಶ್, ನಮ್ಮ ಕಾಂಗ್ರೆಸ್ ಎಂಬ ಪಕ್ಷ ಸ್ಥಾಪಿಸಿ, ನಿಂತು 35,544 ಮತಗಳನ್ನು ಪಡೆದಿದ್ದರು. ಆಗ ಬಿಜೆಪಿ ಅಭ್ಯರ್ಥಿಯಾಗಿದ್ದ ವೆಂಕಟಾಚಲಪತಿ 12,458 ಮತಗಳನ್ನು ಮಾತ್ರ.

ಸಿದ್ದು ಗೆಲುವಿಗೆ ಪ್ಲಸ್ ಪಾಯಿಂಟ್ಸ್
ಕೋಲಾರದಲ್ಲಿ ಹೆಚ್ಚಿರುವುದು ಅಲ್ಪಸಂಖ್ಯಾತರು. ಮುಸ್ಲಿಂ ಮತ್ತು ಕ್ರಿಶ್ಚಿಯನ್ನರ ಮತ ಕಾಂಗ್ರೆಸ್ಸಿಗೆ ಎನ್ನುವ ನಂಬಿಕೆ ಇದೆ. ಅಲ್ಲದೆ ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ನಜೀರ್ ಅಹ್ಮದ್, ಇಲ್ಲಿ ಸಿದ್ದು ಗೆಲುವಿಗೆ ಪಣ ತೊಟ್ಟಿದ್ದಾರೆ. ಕ್ಷೇತ್ರದಲ್ಲಿ ನಿರ್ಣಾಯಕ ಮತದಾರರು ಒಕ್ಕಲಿಗರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಹಾಲಿ ಶಾಸಕ ಶ್ರೀನಿವಾಸ ಗೌಡರ ಮೂಲಕ ಒಕ್ಕಲಿಗ ಮತಗಳೂ ತಮಗೇ ಬೀಳುತ್ತವೆ ಎಂಬ ಲೆಕ್ಕಾಚಾರ.
ಕೆ.ಎಚ್.ಮುನಿಯಪ್ಪ ಅವರೊಂದಿಗೆ ವಿಶ್ವಾಸ ಕುದುರಿಸಿಕೊಂಡಿರುವ ಸಿದ್ದರಾಮಯ್ಯ ದಲಿತ ಮತಗಳೂ ತಮಗೇ ಬೀಳುವಂತೆ ಶ್ರಮ ವಹಿಸುತ್ತಾರೆ. ಕುರುಬರ ಮತಗಳಂತೂ ವರ್ಗಾವಣೆಯಾಗುವ ಮಾತೇ ಇಲ್ಲ. ಅದು ತಮ್ಮದೇ ಎಂಬುದು ಸಿದ್ದರಾಮಯ್ಯ ವಿಶ್ವಾಸ.
ಪ್ರತಿಸ್ಪರ್ಧಿ ವರ್ತೂರು ಪ್ರಕಾಶ್ ಪ್ರಭಾವಿಯಾಗಿದ್ದರೂ, ಕ್ಷೇತ್ರದಲ್ಲಿ ಬಿಜೆಪಿ ಪ್ರಭಾವಿಯಲ್ಲ. ಭದ್ರನೆಲೆಯೂ ಇಲ್ಲ.

ಸಿದ್ದು ಮೈನಸ್ ಆಗಲಿರುವ ಅಂಶಗಳು
ಹಾಲಿ ಶಾಸಕ ಶ್ರೀನಿವಾಸ ಗೌಡ ಶಾಸಕರಾಗಿರುವುದು ಜೆಡಿಎಸ್‍ನಿಂದ. ಆದರೆ ಕುಮಾರಸ್ವಾಮಿ ವಿರುದ್ಧ ಟೀಕೆ ಮಾಡಿದ್ದಾರೆ. ಹಾಗೂ ಮಾಡುತ್ತಲೇ ಇದ್ದಾರೆ. ಹೀಗಾಗಿ ಗೌಡರ ಮತಗಳು ಶ್ರೀನಿವಾಸ ಗೌಡರ ಮೂಲಕ ಸಿದ್ದುಗೆ ಬರುತ್ತವೆ ಎಂಬುದರ ಬಗ್ಗೆ ಸಂಶಯವಿದೆ. ಈಗಲೂ ದೇವೇಗೌಡರ ಕುಟುಂಬ, ಒಕ್ಕಲಿಗರ ಆಸ್ಮಿತೆಯಾಗಿ ಉಳಿದುಕೊಂಡಿದೆ.
ಸ್ವತಃ ಗೆಲ್ಲಲು ಸಾಧ್ಯವಾಗದ ನಜೀರ್ ಅಹ್ಮದ್ ನೇತೃತ್ವವೇ ಪಕ್ಷಕ್ಕೆ ಮುಳುವಾಗಬಹುದು ಎಂಬ ಮಾತುಕತೆ ಚಾಲ್ತಿಗೆ ಬಂದಿದೆ.  ರಾಜ್ಯದ ಮಟ್ಟಿಗೆ ಸಿದ್ದು ಪ್ರಭಾವಿಯೇ ಇರಬಹುದು, ಕ್ಷೇತ್ರದ ಒಳಗೆ ವರ್ತೂರು ಪ್ರಕಾಶ್ ಪ್ರಭಾವವೇ ಬೇರೆ. 2013ರಲ್ಲಿ ಪಕ್ಷೇತರರಾಗಿ ಗೆದ್ದಿದ್ದವರು. ಆಗ ಈಗಿರುವ ಹಾಲಿ ಶಾಸಕರನ್ನೇ, ಜೆಡಿಎಸ್ ಅಭ್ಯರ್ಥಿಯನ್ನೇ ಮಣಿಸಿದ್ದರು. 2018ರಲ್ಲಿ ಕೂಡಾ ಪಕ್ಷೇತರರಾಗಿ ಪ್ರಬಲ ಪೈಪೋಟಿ ಒಡ್ಡಿದ್ದರು.

ವರ್ತೂರು ಪ್ರಕಾಶ್ ಕೂಡಾ ಕುರುಬ ಸಮುದಾಯದವರು. ಹೀಗಾಗಿ ಕುರುಬರ ಮತಗಳು ಒಡೆಯುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ ಕೋಲಾರದಲ್ಲಿ ಜೆಡಿಎಸ್ ವೋಟ್ ಬ್ಯಾಂಕ್ ಗಟ್ಟಿಯಾಗಿದೆ. ಇತ್ತೀಚಿನ ಪಂಚರತ್ನ ಯಾತ್ರೆಯಲ್ಲೂ ಅದು ಗೊತ್ತಾಗಿತ್ತು.

ಅಲ್ಪಸಂಖ್ಯಾತರ ಮತಗಳಿರುವ ಕಾರಣಕ್ಕೆ ತಮ್ಮ ಕ್ಷೇತ್ರಕ್ಕೆ ಸಿದ್ದರಾಮಯ್ಯ ಬಂದರು ಎಂಬ ಅಭಿಪ್ರಾಯ ಮೂಡಿಸಿದರೆ, ಸಿದ್ದರಾಮಯ್ಯ ಅವರಿಗಿರುವ ಹಿಂದೂ ವಿರೋಧಿ ಎಂಬ ಹಣೆಪಟ್ಟಿ ಮುಳ್ಳಾಗಲೂಬಹುದು. ಸಿದ್ದರಾಮಯ್ಯ ಅವರ ಬಗ್ಗೆ ಒಕ್ಕಲಿಗರಲ್ಲಿ ಪ್ರೀತಿಯೇನೂ ಇಲ್ಲ. ಜೊತೆಗೆ ಸಿದ್ದರಾಮಯ್ಯ ಗೆದ್ದರೆ ತಮ್ಮ ಸಮುದಾಯದ ಡಿಕೆ ಶಿವಕುಮಾರ್ ಅವರಿಗೆ ಪೈಪೋಟಿ ಒಡ್ಡುತ್ತಾರೆ ಎನ್ನಿಸಿದರೆ ಅದು ಉಲ್ಟಾ ಆಗಲೂಬಹುದು.

ಕೆ.ಎಚ್.ಮುನಿಯಪ್ಪ ಮತ್ತು ರಮೇಶ್ ಕುಮಾರ್ ಬಣಗಳ ಮಧ್ಯೆ ಹೊಡೆದಾಟಗಳೇ ಆಗಿ ಹೋಗಿವೆ. ಈಗ ಸಿದ್ದರಾಮಯ್ಯ ಅವರಿಂದಾಗಿ ಏನೇ ಒಗ್ಗಟ್ಟು ಪ್ರದರ್ಶನ ಮಾಡಿದರೂ, ತಳಮಟ್ಟದಲ್ಲಿ ಇಬ್ಬರೂ ನಾಯಕರ ಪರವಾಗಿ ಕೈಕೈ ಮಿಲಾಯಿಸಿದ್ದವರು ಒಂದಾಗುವುದು ಅಷ್ಟು ಸುಲಭವಲ್ಲ.

ಇಷ್ಟಿದ್ದರೂ ಇಷ್ಟು ವರ್ಷಗಳಲ್ಲಿ 224ರಲ್ಲಿ ಒಂದು ಎಂದಾಗುತ್ತಿದ್ದ ಕೋಲಾರ, ಸಿದ್ದರಾಮಯ್ಯ ಸ್ಪರ್ಧೆಯಿಂದಾಗಿ ಇಡೀ ರಾಜ್ಯದ ಗಮನ ಸೆಳೆಯಲಿದೆ. ಅಂದಹಾಗೆ 2004ಲ್ಲಿ ಗೆದ್ದಿದ್ದೇ ಕೊನೆ, ಆಗಿನಿಂದ ಇಲ್ಲಿ ಗೆದ್ದಿರುವುದು ಪಕ್ಷೇತರರು ಮತ್ತು ಜನತಾ ಪರಿವಾರದವರು. ಕಾಂಗ್ರೆಸ್ 2ನೇ, 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. 2004ರಲ್ಲಿ ಗೆದ್ದ ಶ್ರೀನಿವಾಸ ಗೌಡರೂ ಕೂಡಾ ಒಮ್ಮೆ ಪಕ್ಷೇತರರಾಗಿ, ಮತ್ತೊಮ್ಮೆ ಜೆಡಿಯುನಿಂದ ಕಾಂಗ್ರೆಸ್‍ನ್ನು ಸೋಲಿಸಿದ್ದವರೇ. ಅದಾದ ಮೇಲೆ ಕಳೆದ ಎಲೆಕ್ಷನ್ನಿನಲ್ಲಿ ಜೆಡಿಎಸ್‍ನಿಂದ ನಿಂತು ಕಾಂಗ್ರೆಸ್‍ನ್ನು ಸೋಲಿಸಿದ್ದವರು. ಈಗ ಅವರು ತಾವೇ ಸೋಲಿಸಿದ್ದ ಪಕ್ಷಕ್ಕೆ ವೋಟ್ ಹಾಕಿ ಎಂದರೆ ಕಾಂಗ್ರೆಸ್ ಗೆಲ್ಲುತ್ತಾ? ಈ ಬಾರಿ ಮ್ಯಾಜಿಕ್ ನಡೆಯುತ್ತಾ?

Tags: #Siddaramaiah #VarthuruPrakash #Srinivasagowda #Kumarasaswamy #JDS #Congress #BJP#ಸಿದ್ದರಾಮಯ್ಯ #ವರ್ತೂರುಪ್ರಕಾಶ್ #ಕೋಲಾರ #ಶ್ರೀನಿವಾಸಗೌಡ #ಮೈಸೂರುಹುಲಿ #ಕುಮಾರಸ್ವಾಮಿ #ಜೆಡಿಎಸ್ #ಕಾಂಗ್ರೆಸ್ #ಬಿಜೆಪಿ
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.