ರಶ್ಮಿಕಾ ಮಂದಣ್ಣ ಬದಲಾಗುತ್ತಿದ್ದಾರೆ. ಬದಲಾಗಿದ್ದಾರೆ. ಈ ಹಿಂದೆಲ್ಲ ಏನೋ ಮಾಡಲು ಹೋಗಿ ಇನ್ನೇನೋ ಮಾಡಿಕೊಳ್ಳುತ್ತಿದ್ದ ರಶ್ಮಿಕಾ ಮಂದಣ್ಣ ನಡೆ, ವಿವಾದಗಳನ್ನೇ ಸೃಷ್ಟಿಸುತ್ತಿತ್ತು. ಪದೇ ಪದೇ ಟ್ರೋಲ್ ಆಗುತ್ತಿದ್ದ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಭಾವುಕರಾಗಿ ಪತ್ರವೊಂದನ್ನು ಬರೆದು ವೈಯಕ್ತಿಕ ವಿಷಯಗಳ ಬಗ್ಗೆ ಮಾತನಾಡದಂತೆ ಮನವಿಯನ್ನೂ ಮಾಡಿದ್ದರು. ಇದೀಗ ರಶ್ಮಿಕಾ ಬದಲಾಗಿರೋ ಸಿಗ್ನಲ್ ಸಿಗುತ್ತಿವೆ.
ನನಗೆ ಚಿತ್ರರಂಗದ ದಾರಿ ತೋರಿಸಿದ್ದು ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ. ಅವರು ನನಗೆ ಅವಕಾಶ ಕೊಟ್ಟರು. ಅಲ್ಲಿಂದ ಇಲ್ಲಿಯವರೆಗೆ ನಾನು ಸಾಕಷ್ಟು ಒಳ್ಳೆಯ ಜನರ ಜೊತೆಗೆ ಕೆಲಸ ಮಾಡಿದ್ದೇನೆ. ಪ್ರೇಮಾ ದಿ ಜರ್ನಲಿಸ್ಟ್ ಅನ್ನೋ ಯೂಟ್ಯೂಬ್ ಚಾನೆಲ್ಲಿನಲ್ಲಿ ಮಾತಾಡಿರುವ ರಶ್ಮಿಕಾ ಮಂದಣ್ಣ ಅವರ ಈ ಹೇಳಿಕೆಯೇ ಸಂಚಲನ ಸೃಷ್ಟಿಸಿರೋದು. ಕೆಲವೇ ದಿನಗಳ ಹಿಂದೆ ಹಿಂದಿ ಯೂಟ್ಯೂಬ್ ಚಾನೆಲ್ಲೊಂದಕ್ಕೆ ಮಾತನಾಡಿದ್ದ ರಶ್ಮಿಕಾ ಮಂದಣ್ಣ, ಕಿರಿಕ್ ಪಾರ್ಟಿಯ ಹೀರೋ ಕಂ ಪ್ರೊಡ್ಯೂಸರ್ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಇಬ್ಬರ ಹೆಸರನ್ನೂ ಹೇಳಿರಲಿಲ್ಲ. ಪರಂವಾ ಸ್ಟುಡಿಯೋಸ್ ಹೆಸರನ್ನೂ ಹೇಳದೆ.. ಮಾತನಾಡಿದ್ದರು. ನನಗೆ ನಟನೆಯಲ್ಲಿ ಆಸಕ್ತಿಯೇನೂ ಇರಲಿಲ್ಲ. ಅವರೇ ಬೆನ್ನು ಬಿದ್ದ ನಟಿಸುವಂತೆ ಮಾಡಿದ್ದರು ಎಂದಿದ್ದರು ರಶ್ಮಿಕಾ. ಅದಕ್ಕೆ ಮೊದಲಿನ ಸಂದರ್ಶನಗಳು ನೆನಪಿದ್ದವರು ರಶ್ಮಿಕಾ ಅವರನ್ನು ಹಿಗ್ಗಾಮುಗ್ಗಾ ಜಾಡಿಸಿದ್ದರು.
ಪುನೀತ್ ರಾಜಕುಮಾರ್ ಜೊತೆಗಿನ ನೆನಪುಗಳನ್ನೂ ಮೆಲುಕು ಹಾಕಿದ ರಶ್ಮಿಕಾ, ದೊಡ್ಡ ಮಟ್ಟದಲ್ಲಿ ದೊಡ್ಡವರ ಜೊತೆ ಕೆಲಸ ಮಾಡುವುದು ಹೇಗೆ ಎಂದು ನನಗೆ ಗೊತ್ತಾಗಿದ್ದು ಪುನೀತ್ ಸರ್ ಜೊತೆ ಕೆಲಸ ಮಾಡಿದ ನಂತರ. ಅವರ ಕೆಲಸ ಮಾಡುವ ರೀತಿ ನನ್ನ ಮೇಲೆ ಬಹಳ ಪ್ರಭಾವ ಪ್ರಭಾವ ಬೀರಿತು ಎಂದಿದ್ದು ಅದೂ ಕೂಡಾ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.
ಗೀತಗೋವಿಂದಂ ಹಿಟ್ ಆದ ಮೇಲೆ ರಶ್ಮಿಕಾ ತೆಲುಗಿನಲ್ಲಿ ಸ್ಟಾರ್ ಆದರು. ಅದಾದ ಮೇಲೆ ಕನ್ನಡ ಮರೆತರು ಎಂಬುದು ಟ್ರೋಲಿಗರ ಟೀಕೆ. ರಕ್ಷಿತ್ ಶೆಟ್ಟಿ ಜೊತೆಗೆ ಎಂಗೇಜ್‍ಮೆಂಟ್ ಮತ್ತು ಬ್ರೇಕಪ್‍ನ್ನು ಅವರ ಫ್ಯಾನ್ಸ್ ಅರಗಿಸಿಕೊಂಡಿಲ್ಲ ಎನ್ನುವುದು ವಾಸ್ತವ. ಇಷ್ಟಕ್ಕೂ ಅದು ಪರ್ಸನಲ್ ವಿಷಯ. ಸ್ವತಃ ರಕ್ಷಿತ್, ರಶ್ಮಿಕಾ ಸುಮ್ಮನಿರುವಾಗ ಅವರ ವೈಯಕ್ತಿಕ ವಿಷಯಗಳನ್ನಿಟ್ಟುಕೊಂಡು ಉಸಾಬರಿ ಮಾಡುವುದು ಯಾಕೆ? ಎಂಬ ಪ್ರಶ್ನೆಗೆ ಯಾರಲ್ಲಿಯೂ ಉತ್ತರವಿಲ್ಲ. ಪ್ರೀತಿ ಮತ್ತು ಬ್ರೇಕಪ್ ಕನ್ನಡ ಚಿತ್ರರಂಗದಲ್ಲಿ ಹೊಸದೇನಲ್ಲ. ಇಲ್ಲಿಗೇ ಮುಗಿಯುವುದೂ ಇಲ್ಲ. ಇಂತಹ ನೂರಾರು ಲವ್ & ಬ್ರೇಕಪ್‍ಗಳನ್ನು ಇಂಡಸ್ಟ್ರಿಯವರು ನೋಡಿದ್ದಾರೆ. ಮರೆತಿದ್ದಾರೆ. ಬ್ರೇಕಪ್ ಮಾಡಿಕೊಂಡವರೂ ಅದನ್ನು ಮರೆತು ಹೊಸ ಬದುಕು ಕಟ್ಟಿಕೊಂಡಿದ್ದಾರೆ. ಕೆಲವೇ ಕೆಲವು ಬಹಿರಂಗವಾಗಿವೆ. ಹಲವು ಆಗಿಲ್ಲ. ಹೀಗಿರುವಾಗ ಮುಗಿದು ಹೋದ ವಿಷಯವನ್ನಿಟ್ಟುಕೊಂಡು ಟ್ರೋಲ್ ಮಾಡುವುದು ಯಾಕೆ ಎನ್ನುವುದು ಪ್ರಶ್ನೆ. ರಶ್ಮಿಕಾ ಬದಲಾಗಿದ್ದಾರೆ. ಎಲ್ಲವನ್ನೂ ಬ್ಯಾಲೆನ್ಸ್ ಮಾಡುವುದನ್ನು ಕಲಿಯುತ್ತಿದ್ದಾರೆ.
ಸಂಕ್ರಾಂತಿ ಶುಭಾಶಯ ಹೇಳುವಾಗ ಕನ್ನಡದಲ್ಲಿಯೇ ಮೊದಲು ಟ್ವೀಟ್ ಮಾಡಿದ್ದರು. ಇದೀಗ ರಕ್ಷಿತ್, ರಿಷಬ್ ಇಬ್ಬರ ಹೆಸರನ್ನೂ ಹೇಳಿದ್ದಾರೆ. ಅಂದಹಾಗೆ ಇದೇ ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ ನನ್ನ ತಂಗಿಯ ವಿಷಯಕ್ಕೆ, ಪರ್ಸನಲ್ ವಿಷಯಕ್ಕೆ ಸುಮ್ಮನಿರೋಕೆ ಸಾಧ್ಯವಿಲ್ಲ ಎಂದೂ ಹೇಳಿದ್ದಾರೆ. ಇತ್ತೀಚೆಗೆ ಕೆಲವು ಟ್ರೋಲಿಗರು ರಶ್ಮಿಕಾ ಮಂದಣ್ಣ ಅವರ ಫ್ಯಾಮಿಲಿಯವರ ಮೇಲೆ ಪರ್ಸನಲ್ ಆಗಿ ಟ್ರೋಲ್ ಮಾಡಿತ್ತು. ಅದನ್ನು ಸಹಿಸುವುದು ಸಾಧ್ಯವಿಲ್ಲ ಎಂದೂ ರಶ್ಮಿಕಾ ಮಂದಣ್ಣ ನೇರವಾಗಿಯೇ ಹೇಳಿದ್ದಾರೆ. ಸದ್ಯಕ್ಕೆ ರಶ್ಮಿಕಾ ಮಂದಣ್ಣ ಪುಷ್ಪ 2, ಹಿಂದಿಯಲ್ಲಿ ರಣ್‍ಬೀರ್ ಕಪೂರ್ ಜೊತೆ ಅನಿಮಲ್ ಸಿನಿಮಾ ಮಾಡುತ್ತಿದ್ದಾರೆ. ಇದರ ಜೊತೆಯಲ್ಲೇ ಮಹಿಳಾ ಕೇಂದ್ರಿತ ಸಿನಿಮಾವೊಂದನ್ನೂ ಶೀಘ್ರದಲ್ಲೇ ಅನೌನ್ಸ್ ಮಾಡಲಿದ್ದೇನೆ ಎಂದಿದ್ದಾರೆ ರಶ್ಮಿಕಾ ಮಂದಣ್ಣ. ರಶ್ಮಿಕಾ ಬದಲಾಗಿದ್ದಾರೆ. ರಶ್ಮಿಕಾ ಮಂದಣ್ಣ ಬದಲಾಗುತ್ತಿದ್ದಾರೆ. ವಯಸ್ಸಿನ್ನೂ ಜಸ್ಟ್ 26. ತಪ್ಪು ಮಾಡುವ ವಯಸ್ಸು ಮುಗಿದಿದೆ. ಈಗ ತಿದ್ದಿಕೊಳ್ಳೋ ವಯಸ್ಸು.
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes.The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.