ನಟ ದರ್ಶನ್ ಕ್ರೌರ್ಯದ ಕಥೆ ಇದು. ಆತ ಒಬ್ಬ ನಟನೂ ಹೌದು. ಅಸಹಾಯಕ ಸ್ಥಿತಿಯಲ್ಲಿ ಸಿಕ್ಕವರ ಎದುರು ದರ್ಶನ್ ಒಳಗಿರುವ ಮೃಗ ಹೊರಬುರುತ್ತೆ. ತಾನು ಸಿಕ್ಕಾಕ್ಕೊಂಡಾಗ ಕಣ್ಣೀರು ಹೊರಬರುತ್ತೆ. ನಟ ದರ್ಶನ್ ಪೊಲೀಸರ ಎದುರು ಕಣ್ಣೀರಿಟ್ಟಿದ್ದಾನೆ. ಕೋರ್ಟ್ʻನಲ್ಲಿಯೂ ಕಣ್ಣೀರು ಹಾಕಿದ್ದಾರೆ. ಆದರೆ, ಅಂತಹ ಕಣ್ಣೀರು, ಕರುಣೆ ರೇಣುಕಾಸ್ವಾಮಿ ವಿಚಾರದಲ್ಲಿ ಆಗಿಲ್ಲ. ಈಗ ಹೊರಬಿದ್ದಿರೋ ತನಿಖೆಯ ಪ್ರಕಾರ.. ರೇಣುಕಾಸ್ವಾಮಿಯನ್ನು ದರ್ಶನ್ ಗ್ಯಾಂಗ್ʻನವರು ಮೊದಲು ಕರೆದು ತಂದಿದ್ದು ದರ್ಶನ್ ಮನೆಯ ಬಳಿ. ಅಲ್ಲಿ ಅವನನ್ನು ʻತಮ್ಮ ಶೆಡ್ʼಗೆ ಎತ್ತಾಕ್ಕೊಂಡು ಹೋಗುವಂತೆ ಹೇಳಿ ಪವಿತ್ರಾ ಗೌಡಗೆ ಮೆಸೇಜ್ ಮಾಡ್ತಾರೆ. ನಿಂಗೆ ಟಾರ್ಚರ್ ಕೊಡ್ತಿದ್ದವನನ್ನು ಎತ್ತಾಕ್ಕೊಂಡು ಬಂದಿದ್ದೀವಿ, ಹೋಗೋಣ ಬಾ ಎಂದು ಹೇಳಿ, ಪವಿತ್ರಾ ಗೌಡ ಅವರನ್ನು ಕರೆದುಕೊಂಡು ಹೋಗ್ತಾರೆ. ಅಲ್ಲಿಗೆ ಹೋಗುವಷ್ಟರ ಹೊತ್ತಿಗ್ ರೇಣುಕಾಸ್ವಾಮಿಗೆ ಟಾರ್ಚರ್ ಶುರುವಾಗಿರುತ್ತೆ. ರಕ್ತ ಸೋರುತ್ತಿರುತ್ತೆ. ಆಗ ಬಿರಿಯಾನಿ ತರಿಸಿದ್ದಾರೆ.
ರೇಣುಕಾಸ್ವಾಮಿ ಪ್ಯೂರ್ ವೆಜಿಟೇರಿಯನ್. ಲಿಂಗಾಯತರಲ್ಲಿ ವೀರಶೈವ ಜಂಗಮ ಸಮುದಾಯಕ್ಕೆ ಸೇರಿದವರು. ಅದು ಗೊತ್ತಾಗಿಯೇ ದರ್ಶನ್ ಮತ್ತು ಗ್ಯಾಂಗ್ ಬಿರಿಯಾನಿ ತರಿಸಿತ್ತು. ಈ ವೇಳೆ ಹಲ್ಲೆ ನಡೆಸಿದ ಬಳಿಕ ಆರೋಪಿ ದರ್ಶನ್, ರೇಣುಕಾಸ್ವಾಮಿ ಮುಂದೆ ತಿನ್ನು ಅಂತ ಬಿರಿಯಾನಿ ಮುಂದಿಟ್ಟಿದ್ದನಂತೆ. ಒಂದು ತುತ್ತು ತಿನ್ನುತ್ತಿದ್ದಂತೆ ‘ಇದು ನಾನ್ ವೆಜ್ ‘ ನಾನು ತಿನ್ನಲ್ಲ ಎಂದು ರೇಣುಕಾಸ್ವಾಮಿ ನಿರಾಕರಿಸಿದ್ದಾರೆ. ಈ ವೇಳೆ ನಟ ದರ್ಶನ್ ತಿನ್ನುವಂತೆ ಒತ್ತಾಯ ಮಾಡಿದ್ದಾನೆ.
ಈ ವೇಳೆ ರೇಣುಕಾಸ್ವಾಮಿ ನನ್ನ ಜಾತಿ ಕೆಡಿಸಬೇಡಿ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದ, ತಿನ್ನಲು ನಿರಾಕರಿಸಿದಾಗ ಬಿರಿಯಾನಿಯಲ್ಲಿದ್ದ ಒಂದು ಮಾಂಸದ ಪೀಸ್ ಬಾಯಿಗೆ ತುರುಕಿದ್ದ ದರ್ಶನ್, ಬಿರಿಯಾನಿ ತಿನ್ನಿಸಿ ಬಳಿಕ ಎದೆಗೆ ಜಾಡಿಸಿ ಹೊಡೆದಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.
ಇಷ್ಟು ಮಾತ್ರವಲ್ಲ ನಟ ದರ್ಶನ್ ಕರಾಳಮುಖ ತನಿಖೆಯಲ್ಲಿ ಬಯಲಾಗಿದ್ದು, ದರ್ಶನ್ ಹಲ್ಲೆ ನಡೆಸಿದ್ದ ಬಗ್ಗೆ ಖಾಕಿ ಪಡೆಗೆ ಸಿಕ್ಕಿವೆ ಸ್ಪಷ್ಟ ಸಾಕ್ಷ್ಯಗಳು ಸಿಕ್ಕಿವೆ. ಇತರ ಆರೋಪಿಗಳು ಹೇಳಿರುವ ಹೇಳಿಕೆಗಳು ಮತ್ತು ಸಿಕ್ಕಿರುವ ಸಾಕ್ಷಿಗಳಿಗೆ ಪಕ್ಕಾ ಹೋಲಿಕೆಯಾಗುತ್ತಿದೆ.
ಪೋಸ್ಟ್ ಮಾರ್ಟಂ ಬಳಿಕ ನಿರಂತವಾಗಿ ಪೊಲೀಸರು ಸಂಪರ್ಕ ದಲ್ಲಿದ್ದ ವೈದ್ಯರು ನೀಡಿರುವ ವರದಿ ಹಾಗೂ ಇತರ ಆರೋಪಿಗಳ ಹೇಳಿಕೆಗೂ 100% ಹೋಲಿಕೆ ಇದೆ ಎಂದು ವರದಿ ತಿಳಿಸಿದೆ.
ರೇಣುಕಾಸ್ವಾಮಿ ಎದೆಗೆ ದರ್ಶನ್ ಜಾಡಿಸಿ ಹೊಡೆದ ಬಗ್ಗೆ ಇತರ ಆರೋಪಿಗಳು ಹೇಳಿದ್ದರು. ಈ ಬಗ್ಗೆ ಪೋಸ್ಟ್ ಮಾರ್ಟಂ ರಿಪೋರ್ಟ್ ನಲ್ಲಿಯೂ ಉಲ್ಳೇಖವಿದೆ. ಅಲ್ಲದೆ, ದರ್ಶನ್ ರೇಣುಕಾಸ್ವಾಮಿ ಮರ್ಮಾಂಗಕ್ಕೆ ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದರು. ಮರ್ಮಾಂಗದ ಬಳಿಯೂ ಹಲ್ಲೆ ಎಂದು ಪಿಎಂ ರಿಪೋರ್ಟ್ ನಲ್ಲಿ ಉಲ್ಲೇಖವಾಗಿದೆ.
ಹಠಮಾರಿಯಂತೆ ಕುಳಿತಿದ್ದಾನೆ ಎನ್ನಲಾಗಿದೆ. ದರ್ಶನ್ ಎದುರು ಅಸಹಾಯಕನಾಗಿ ನಿಂತಿದ್ದ ರೇಣುಕಾಸ್ವಾಮಿ ಅವನ ಕಣ್ಣಿಗೆ ಒಂದು ಎಂಟರ್ʻಟೇನ್ʻಮೆಂಟ್ ಪ್ರಾಪರ್ಟಿಯಾಗಿ ಕಂಡಿದ್ದರೆ ಆಶ್ಚರ್ಯವಿಲ್ಲ. ದರ್ಶನ್ʻನ ಚಿತ್ರಹಿಂಸೆಗಳ ಕಥೆಗಳೇ ನೂರಾರಿವೆ.



