ಪರ್ವ (Parva). ಕನ್ನಡದ ಕ್ಲಾಸಿಕ್ ಕಾದಂಬರಿಗಳಲ್ಲಿ (kannada novel) ಒಂದು. ಎಸ್.ಎಲ್.ಬೈರಪ್ಪ S.L.Bhairappa ಅವರು ಬರೆದಿರುವ ಪರ್ವ, ಮಹಾಭಾರತದ (Mahabharatha) ಕುರಿತಾದ ಕಾದಂಬರಿ. ಈ ಕಾದಂಬರಿಯ ವಿಶೇಷತೆಯೆಂದರೆ ಇಲ್ಲಿ ಶ್ರೀಕೃಷ್ಣನೂ (Shree Krishna) ಸೇರಿದಂತೆ ಯಾವ ಪಾತ್ರಗಳಿಗೂ ಮಹಾನ್ ಶಕ್ತಿ ಇಲ್ಲ. ಬ್ರಹ್ಮಾಸ್ತ್ರ (Bramhasthra), ಮಾಯಾಜಾಲ, ಸೂರ್ಯನಿಂದ ವರ, ಪಾಂಡವರ ದೈವಾನುಗ್ರಹ.. ಇಂತಹ ಯಾವ ವಿಶೇಷಗಳೂ ಇಲ್ಲ. ಮಹಾಭಾರತ ನಡೆದ ಜಾಗದಲ್ಲಿ ಸಂಶೋಧನೆ ಮಾಡಿ, ಆ ಪಾತ್ರಗಳು, ಕಾಲವನ್ನು ಅಧ್ಯಯನ ಮಾಡಿ, ಅವುಗಳೆಲ್ಲವನ್ನೂ ನೈಜವಾಗಿ ಚಿತ್ರಿಸಿರುವ ಕಾದಂಬರಿ ಪರ್ವ. ಎಸ್.ಎಲ್. ಭೈರಪ್ಪ ಅವರ ಹಲವಾರು ಶ್ರೇಷ್ಟ ಕೃತಿಗಳಲ್ಲಿ ನಂ.1 ಸ್ಥಾನಕ್ಕೆ ಅರ್ಹವಾಗಬಹುದಾದ ಕಾದಂಬರಿ. ಈ ಪರ್ವ, ಕನ್ನಡ ಅಷ್ಟೇ ಅಲ್ಲ, ಹಿಂದಿ, ಮರಾಠಿ, ತೆಲುಗು, ತಮಿಳು, ಬೆಂಗಾಲಿ, ಸಂಸ್ಕೃತ, ರಷ್ಯನ್, ಚೈನೀಸ್ ಹಾಗೂ ಇಂಗ್ಲಿಷ್ ಭಾಷೆಗೆ ಅನುವಾದಗೊಂಡಿರುವ ಮಹಾನ್ ಕೃತಿ. ಈ ಕಾದಂಬರಿಯನ್ನೀಗ ಸಿನಿಮಾ ಮಾಡಲು ಹೊರಟಿದ್ದಾರೆ ಕಾಶ್ಮೀರ್ ಫೈಲ್ಸ್ (Kashmir files) ಖ್ಯಾತಿಯ (Vivek Agnihothri) ವಿವೇಕ್ ಅಗ್ನಿಹೋತ್ರಿ.


‘ಪರ್ವ’ ಕಾದಂಬರಿಗೆ ಸಿನಿಮಾ ರೂಪ ಕೊಡುತ್ತಿರುವುದು ಬಾಲಿವುಡ್ನ ಖ್ಯಾತ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ. ಕಳೆದ ವರ್ಷ ‘ದಿ ಕಾಶ್ಮೀರ್ ಫೈಲ್ಸ್’, ಈ ವರ್ಷ ‘ದಿ ವ್ಯಾಕ್ಸಿನ್ ವಾರ್ (Vaccine war) ನಂತಹ ಸಿನಿಮಾಗಳನ್ನು ಮಾಡಿರುವ ವಿವೇಕ್ ಅಗ್ನಿಹೋತ್ರಿ, ಈಗ ಕನ್ನಡದ ‘ಪರ್ವ’ ಕಾದಂಬರಿಗೆ ಸಿನಿಮಾರೂಪ ನೀಡಲು ಮುಂದಾಗಿದ್ದಾರೆ. ಈ ಕುರಿತು ಅಕ್ಟೋಬರ್ 21ರಂದು ಅಧಿಕೃತ ಘೋಷಣೆ ಮಾಡಿದ್ದಾರೆ. ಚಿತ್ರಕ್ಕೆ ‘ಪರ್ವ’ Parva ಎಂದೇ ಹೆಸರಿಟ್ಟಿದ್ದು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣ ಮಾಡಿ, ರಿಲೀಸ್ ಮಾಡುವುದು ವಿವೇಕ್ ಅಗ್ನಿಹೋತ್ರಿ ಉದ್ದೇಶ. ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ಈ ಸಿನಿಮಾದ ಟೈಟಲ್ & ಪೋಸ್ಟರ್ ಲಾಂಚ್ ಮಾಡಲಾಗಿದೆ. ವಿಶೇಷವೆಂದರೆ, ಡಾ ಎಸ್ ಎಲ್ ಭೈರಪ್ಪ ಅವರು ಕೂಡ ಈ ಸಂದರ್ಭದಲ್ಲಿ ಹಾಜರಿದ್ದು, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ತಮ್ಮ ಕಾದಂಬರಿಯನ್ನು ಅಷ್ಟು ಸುಲಭವಾಗಿ ಸಿನಿಮಾ ಮಾಡುವುದಕ್ಕೆ ಒಪ್ಪದ ಎಸ್.ಎಲ್.ಭೈರಪ್ಪ, ವಿವೇಕ್ ಅಗ್ನಿಹೋತ್ರಿ ಅವರಿಗೆ ಅನುಮತಿ ಕೊಟ್ಟಿದ್ದಾರೆ. ಅದಕ್ಕೆ ಕಾರಣ ವಿವೇಕ್ ಅಗ್ನಿಹೋತ್ರಿಯವರ ಅನುಭವ ಎಂದು ಒಪ್ಪಿಕೊಂಡ ಬೈರಪ್ಪ, ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಪರ್ವ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಹಾಗೆಯೇ, ಇಂಗ್ಲೀಷ್ನಲ್ಲಿಯೂ ಸಿನಿಮಾ ಮಾಡಬೇಕು. ನಿಜವಾದ ಮಹಾಭಾರತ ಏನೋ ಅನ್ನೋದನ್ನು ತೋರಿಸಬಹುದು. ಈ ಸಿನಿಮಾ ಮಾಡುವುದಕ್ಕೆ ನನ್ನ ಕಡೆಯಿಂದ ಸಂಪೂರ್ಣ ಒಪ್ಪಿಗೆ ಇದೆ ಎಂದಿದ್ದಾರೆ.
ಈ ಕಾದಂಬರಿಯನ್ನು ವಿವೇಕ್ ಅಗ್ನಿಹೋತ್ರಿಗೆ ತಿಳಿಸಿದವರು ಪ್ರಕಾಶ್ ಬೆಳವಾಡಿ (Prakash belavadi). ಈ ಮೊದಲು ವಿವೇಕ್ ಅಗ್ನಿಹೋತ್ರಿಯವರ ಜೊತೆ ಸಿನಿಮಾಗಳಲ್ಲಿ ಕೆಲಸ ಮಾಡಿರುವ ಬೆಳವಾಡಿ, ಭೈರಪ್ಪ ಅವರ ಜೊತೆ ಮಾತನಾಡುವಂತೆ ಹೇಳಿದ್ದರು. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ನೋಡಿ, ಅವರು ಪರ್ವ ಸಿನಿಮಾವನ್ನು ಮಾಡುವಂತೆ ಹೇಳಿದರು. ಮಹಾಭಾರತದಲ್ಲಿ ನಾವು ಕೇಳದೆ ಇರುವಂತಹ ವಿಷಯಗಳನ್ನ ಪರ್ವದಲ್ಲಿ ಬರೆದಿದ್ದಾರೆ. ಇದಕ್ಕಾಗಿ ಅವರು ಸಾಕಷ್ಟು ವರ್ಷಗಳ ಕಾಲ ಶ್ರಮಿಸಿದ್ದಾರೆ. ನಾವು ಇದನ್ನು ಸಿನಿಮಾ ಮಾಡುತ್ತಿದ್ದೇವೆ. ಇದು ಮೂರು ಪಾರ್ಟ್ಗಳಲ್ಲಿ ತೆರೆಗೆ ಬರಲಿದೆ. ಒಟ್ಟಿಗೆ ಎಲ್ಲ ಪಾರ್ಟ್ಗಳ ಚಿತ್ರೀಕರಣ ಮಾಡಿ, ನಂತರ ಒಂದೊಂದೇ ತೆರೆಗೆ ತರುತ್ತೇವೆ ಎಂದಿದ್ದಾರೆ. ನಟಿ, ನಿರ್ಮಾಪಕಿ ಪಲ್ಲವಿ ಜೋಷಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.



