Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Cinema

ವಿಷ್ಣುವರ್ಧನ್ ಸ್ಮಾರಕ ಸಿದ್ಧ : ಏನೇನೆಲ್ಲ ಇದೆ ಗೊತ್ತಾ..?

SpeciallU by SpeciallU
January 13, 2023
in Cinema, News
Reading Time: 1 min read
0 0
0
ವಿಷ್ಣುವರ್ಧನ್ ಸ್ಮಾರಕ ಸಿದ್ಧ : ಏನೇನೆಲ್ಲ ಇದೆ ಗೊತ್ತಾ..?

ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಗಳನ್ನು ಅಗಲಿ 13 ವರ್ಷಗಳಾಗಿವೆ. ಈ ಹಂತದಲ್ಲಿ ವಿಷ್ಣುವರ್ಧನ್ ಸ್ಮಾರಕಕ್ಕಾಗಿ ನಡೆದ ಹೋರಾಟಗಳು ಅದೆಷ್ಟೋ ಏನೋ.. ಒಂದು ಹಂತದಲ್ಲಿ ವಿಷ್ಣು ಅಭಿಮಾನಿಗಳು ಮತ್ತು ಕುಟುಂಬದ ನಡುವೆ ವೈಮನಸ್ಸನ್ನೂ ಸೃಷ್ಟಿಸಿದ್ದ ವಿಷ್ಣು ಸ್ಮಾರಕಕ್ಕೆ ಕೊನೆಗೂ ಕಾಲ ಕೂಡಿ ಬಂದಿದೆ. 13 ವರ್ಷಗಳ ಬಳಿಕ ಮೈಸೂರಿನ ಹಾಲಾಳು ಗ್ರಾಮದಲ್ಲಿ ವಿಷ್ಣುವರ್ಧನ್ ಸ್ಮಾರಕ ತಲೆ ಎತ್ತಿ ನಿಂತಿದೆ. ಸ್ಮಾರಕದ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ಜನವರಿ 29ರಂದು ಸ್ಮಾರಕ ಉದ್ಘಾಟನೆಯಾಗಲಿದೆ. ಜನವರಿ 29ರಂದು ಬೆಳಗ್ಗೆ 11 ಗಂಟೆಗೆ ಸರಿಯಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಮಾರಕ ಉದ್ಘಾಟನೆ ಮಾಡಲಿದ್ದಾರೆ.

ಮೈಸೂರಿನ ಹಾಲಾಳು ಗ್ರಾಮದಲ್ಲಿ ಸರ್ಕಾರ ಸ್ಮಾರಕ ನಿರ್ಮಾಣಕ್ಕೆ 5 ಎಕರೆ ಭೂಮಿ ನೀಡಿತ್ತು. ಭೂಮಿ ವ್ಯಾಜ್ಯ ಇಲ್ಲದೇ ಹೋಗಿದ್ದರೆ ಇಷ್ಟು ಹೊತ್ತಿಗೆ ನಿರ್ಮಾಣ ಕಾರ್ಯವೂ ಆಗುತ್ತಿತ್ತು. ಕೊನೆಗೂ ಎಲ್ಲ ಕಾನೂನು ಹೋರಾಟ ಮುಗಿಸಿ ಸ್ಮಾರಕ ನಿರ್ಮಾಣ ಪೂರ್ಣಗೊಂಡಿದೆ. 5 ಎಕರೆ ಪ್ರದೇಶದಲ್ಲಿ 3 ಎಕರೆ ಜಾಗದಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗಿದೆ ಎಂದು ನಟ, ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ ಹೇಳಿದ್ದಾರೆ.
ಸ್ಮಾರಕದಲ್ಲಿ ಏನೆಲ್ಲ ಇರಲಿದೆ?

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ಸ್ಮಾರಕದ ಎದುರು ವಿಭೂತಿ ಧಾರಿಯಾಗಿರುವ ವಿಷ್ಣುವರ್ಧನ್ ಅವರ 6 ಅಡಿ ಎತ್ತರದ ಪ್ರತಿಮೆ ಸ್ವಾಗತಿಸಲಿದೆ. ಸ್ಮಾರಕದಲ್ಲಿ ಫೋಟೋಗ್ಯಾಲರಿ ಇದ್ದು, ವಿಷ್ಣುವರ್ಧನ್ ಅವರ 600 ಅಪರೂಪದ ಚಿತ್ರಗಳಿರುತ್ತವೆ. ವಿಷ್ಣುವರ್ಧನ್ ಬಳುಸುತ್ತಿದ್ದ ಕೆಲವು ವಸ್ತುಗಳನ್ನೂ ನೋಡಬಹುದು ಸ್ಮಾರಕದಲ್ಲಿ ಒಂದು ಸಭಾಂಗಣವಿದ್ದು, ಇಲ್ಲಿ ನಾಟಕ ಹಾಗೂ ಸಿನಿಮಾಗಳ ಪ್ರದರ್ಶನಕೆಕ ಅವಕಾಶವಿದೆ. ಜೊತೆಗೆ ರಂಗ ತರಬೇತಿ ಕೇಂದ್ರವೂ ಇರಲಿದೆ.

ಸಭಾಂಗಣದಲ್ಲಿಯೇ ಕಚೇರಿ ಹಾಗೂ ಎರಡು ಕೊಠಡಿಗಳ ನಿರ್ಮಾಣ ಮಾಡಲಾಗಿದೆ. ವಾಹನಗಳ ಪಾರ್ಕಿಂಗ್, ಸುಸಜ್ಜಿತ ಶೌಚಾಲಯಗಳು, ಕ್ಲಾಸ್ ರೂಂ, ಕ್ಯಾಂಟೀನ್, ಸುಂದರವಾದ ಕಾರಂಜಿ, ಉದ್ಯಾನವನ ಎಲ್ಲವೂ ಇರಲಿವೆ.

ಸ್ಮಾರಕಕ್ಕೆ ಶ್ರಮಿಸಿದವರು..!
ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆ ನಡೆದಿದ್ದು ಅಭಿಮಾನ್ ಸ್ಟುಡಿಯೋದಲ್ಲಿ. ಆದರೆ ಹಲವು ಕಾರಣಗಳಿಂದ ಅದು ಈಡೇರಲಿಲ್ಲ. ವಿವಾದ ತಾರಕಕ್ಕೇರಿ ಭಾರತಿ ಮತ್ತು ವಿಷ್ಣುವರ್ಧನ್ ಅಭಿಮಾನಿಗಳ ನಡುವಿನ ಸಂಘರ್ಷಕ್ಕೂ ಕಾರಣವಾಗಿತ್ತು.

ವಿಷ್ಣುವರ್ಧನ್ ನಿಧನರಾದ ನಂತರ ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ, ಶೆಟ್ಟರ್, ಸದಾನಂದ ಗೌಡ ಸಿಎಂ ಆದರು. ಸುದೀಪ್, ಶಿವಣ್ಣ ಸೇರಿದಂತೆ ಹಲವರು ಪ್ರಯತ್ನ ಪಟ್ಟರು. ವಿಷ್ಣುಸೇನೆ ರಾಜ್ಯಾಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಕೂಡಾ ಶ್ರಮಪಟ್ಟರು. ಒಂದು ಹಂತದಲ್ಲಿ ವಿಷ್ಣುಸೇನೆ ಮತ್ತು ಭಾರತಿ ವಿಷ್ಣುವರ್ಧನ್ ಅವರ ಮಧ್ಯೆ ಮನಸ್ತಾಪವೂ ಆಯ್ತು. ಕೊನೆಗೆ ವಿಷ್ಣು ಸ್ಮಾರಕಕ್ಕೆ ಮನಸ್ಸು ಮಾಡಿದ್ದು, ಅನುದಾನ ಕೊಟ್ಟಿದ್ದು, ತೊಂದರೆಗಳನ್ನೆಲ್ಲ ನಿವಾರಿಸಿದ್ದು ಮಾತ್ರ ಯಡಿಯೂರಪ್ಪ. ಈಗ ಬಸವರಾಜ ಬೊಮ್ಮಾಯಿ ಜ.29ರಂದು ಉದ್ಘಾಟಿಸುತ್ತಿದ್ದಾರೆ.

ಅಂದಹಾಗೆ ಇಷ್ಟೆಲ್ಲ ವಿಶೇಷಗಳಿರುವ ಸ್ಮಾರಕ ಇದೊಂದೇ.
Tags: #Vishnuvardhan #Sahasasimha #VishnuDada #Vishnusena #Bharathi #Anirudda #Myosro #Halalu #ವಿಷ್ಣುವರ್ಧನ್ #ಸಾಹಸಸಿಂಹ #ವಿಷ್ಣುದಾದ #ವಿಷ್ಣುಸೇನಾ #ಭಾರತಿ #ಅನಿರುದ್ಧ #ಮೈಸೂರು #ಸುದೀಪ್ #ಹಾಲಾಳು #ವೀರಕಪುತ್ರಶ್ರೀನಿವಾಸ್
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.