ಕೆಲವೇ ವರ್ಷಗಳ ಹಿಂದೆ ಬಿಜೆಪಿಯನ್ನು ನೋಡಿ ಕಾಂಗ್ರೆಸ್ ಕಲಿಯಬೇಕು. ಎಂತಹ ಶಿಸ್ತಿನ ಪಕ್ಷ ಅದು. ಆ ರೀತಿಯ ನೆಟ್ ವರ್ಕ್ ಇರಬೇಕು.. ಹಾರ್ಡ್ ವರ್ಕ್ ಇರಬೇಕು. ಮೊದಲು ಆ ರೀತಿಯ ಶಿಸ್ತು ಇರಬೇಕು ಎನ್ನುತ್ತಿದ್ದವರು, ಈಗ ಸೈಲೆಂಟ್ ಆಗಿದ್ಧಾರೆ. ಕಾಂಗ್ರೆಸ್ ಹೈಕಮಾಂಡ್ ಎದುರು ಬಿಜೆಪಿ ಹೈಕಮಾಂಡ್ ಏನೇನೂ ಅಲ್ಲ. ಕಾಂಗ್ರೆಸ್ ನೋಡಿ ಕಲಿಯುಬೇಕು ಎನ್ನುತ್ತಿರುವದು ಬೇರೆಯವರೇನಲ್ಲ. ಬಿಜೆಪಿಯಲ್ಲಿರುವ ಪಕ್ಷ ನಿಷ್ಠ ನಾಯಕರು.
ಬಿಜೆಪಿಯಲ್ಲೇ ಬಿಜೆಪಿ ಹೈಕಮಾಂಡ್ ವೀಕ್ ಎನ್ನುವ ಚರ್ಚೆ ಶುರುವಾಗಿದೆ. ಅದಕ್ಕೆಲ್ಲ ಕಾರಣವಾಗಿರುವುದು ಕಾಂಗ್ರೆಸ್ ಭಿನ್ನಮತ ಖರ್ಗೆಯವರ ಒಂದೇ ಮಾತಿಗೆ ಫುಲ್ ಸೈಲೆಂಟ್ ಆಗಿರುವುದು. ಆದರೆ ಅದೇ ಸಮಯದಲ್ಲಿ ಬಿಜೆಪಿಯ ಯತ್ನಾಳ್ V/S ವಿಜಯೇಂದ್ರ ಫೈಟ್‌ಗೆ ಬ್ರೇಕ್ ಬೀಳ್ತಾನೇ ಇಲ್ಲ.ಶಿವರಾಜ್ ಸಿಂಗ್ ಚೌಹಾಣ್ ರಾಜ್ಯದಲ್ಲಿದ್ದರೂ ಯತ್ನಾಳ್, ರಮೇಶ್ ಜಾರಕಿಹೊಳಿ ಬಾಯಿಗೆ ಬಿದ್ದಿಲ್ಲ. ಇತ್ತ ವಿಜಯೇಂದ್ರ ಬಣದ ರೇಣುಕಾಚಾರ್ಯ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಕೂಡಾ ಬಾಯಿಗೆ ಬಂದಂತೆ ಕೌಂಟರ್ ಕೊಡ್ತಿದ್ದಾರೆ. ಮಾತು ಈಗ ಏಕವಚನಕ್ಕೆ ತಿರುಗಿದೆ ಬಚ್ಚಾ, ಲುಚ್ಚಾಗಳೆಲ್ಲ ಬಂದಿವೆ. ಇನ್ನು ಸ್ಲಂ ಬೈಗುಳಗಳಾದ ಅ..ನ್.. ಅಕ್ಕ.. ಬಂದಿಲ್ಲ ಅಷ್ಟೇ.
ಯತ್ನಾಳ್, ರಮೇಶ್ ಜಾರಕಿಹೊಳಿ ಮೊದಲಾದವರೆಲ್ಲ ದೆಹಲಿಗೆ ಹೋಗಿ ಬಂದರೂ ಬ್ರೇಕ್ ಬಿದ್ದಿಲ್ಲ. ರಾಷ್ಟ್ರೀಯ ನಾಯಕರು ಬೀದಿಗಳಲ್ಲಿ ಜಗಳಕ್ಕೆ ಬ್ರೇಕ್ ಹಾಕುವಲ್ಲಿ ವಿಫಲವಾಗಿದ್ಧಾರೆ. ಈ ಬಗ್ಗೆ ಅಂದರೆ ಬಿಜೆಪಿ ಹೈಕಮಾಂಡ್ ಬಗ್ಗೆ ರಾಜ್ಯ ಬಿಜೆಪಿ ನಾಯಕರಲ್ಲಿ ಅಸಮಾಧಾನ ಶುರುವಾಗಿದೆ. ಯಾವುದೇ ನಿರ್ಧಾರ ತೆಗೆದುಕೊಳ್ಳದೆ ತಮಾಷೆ ನೋಡುತ್ತಿದ್ದರೆ ಪಕ್ಷಕ್ಕೆ ಡ್ಯಾಮೇಜ್ ಎಂದು ಎರಡೂ ಬಣಕ್ಕೆ ಸೇರದ ಪಕ್ಷ ನಿಷ್ಠರಿಂದಲೂ ಹೈಕಮಾಂಡ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ಧಾರೆ. ಈ ಸಂದರ್ಭದಲ್ಲಿಯೇ ಕಾಂಗ್ರೆಸ್ ನೋಡಿ ಕಲಿಯುಬೇಕು ಎನ್ನುತ್ತಿರುವ ಬಿಜೆಪಿ ಪಕ್ಷ ನಿಷ್ಠ ನಾಯಕರು ನೋಡಿ.. ಖರ್ಗೆಯವರ ಒಂದು ಮಾತಿಗೆ ಡಿಕೆ, ಸಿದ್ದು ಬಣದ ಭಿನ್ನಮತ ಫುಲ್ ಸೈಲೆಂಟ್ ಆಗಿದೆ. ಖರ್ಗೆ ಮಾದರಿಯಲ್ಲಿ ಖಡಕ್ ಎಚ್ಚರಿಕೆ ರವಾನಿಸಲು ಬಿಜೆಪಿ ಹೈಕಮಾಂಡ್ ವಿಫಲವಾಗಿದೆ ಎಂದು ಮಾತನಾಡಿಕೊಳ್ತಿದ್ಧಾರೆ.
ಕಾಂಗ್ರೆಸ್ಸಿನಲ್ಲಿ ಬಣ ಬಡಿದಾಟಕ್ಕೆ ಸಂಪೂರ್ಣ ಬಿದ್ದಿಲ್ಲವಾದರೂ ಹೊರಗೆ ಬಾಯಿಗೆ ಬಂದಂತೆ ಮಾತನಾಡುತ್ತಿಲ್ಲ. ಎರಡೂ ಬಣದವರು ತಮ್ಮ ತಮ್ಮನ್ನು ಸಮರ್ಥನೆ ಮಾಡಿಕೊಳ್ತಿದ್ದಾರೆ. ಬಚ್ಚ.. ಲುಚ್ಚ.. ಎಂದೆಲ್ಲ ಮಾತನಾಡುತ್ತಿಲ್ಲ. ಇದರ ಮಧ್ಯೆ ಸಿದ್ದು, ಸತೀಶ್ ಬಣದ ಶಾಸಕರ ದುಬೈ ಪ್ರವಾಸಕ್ಕೂ ಬ್ರೇಕ್ ಬಿದ್ದಿದೆ.
ಆದರೆ ಬಿಜೆಪಿಯಲ್ಲಿ ಹಾಗಲ್ಲ. ಇದರ ಬಗ್ಗೆ ಒಂದು ರಿಪೋರ್ಟ್ ಕೊಡಿ ಸರ್ ಎಂದು ಬಿಎಲ್ ಸಂತೋಷ್ ಬಳಿ ಹೇಳಿದರೆ ನಾನು ನಿಮಗೆ ಹೇಳಿದ್ದಷ್ಟನ್ನು ಮಾಡಿ, ಸಾಕು. ಎಕ್ಸ್ ಟ್ರಾ ಮಾತು ಬೇಡ ಎಂದಿದ್ದಾರಂತೆ. ಈ ನಾಯಕರು ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟೋಕೆ ಬಂದಿಲ್ಲ. ಸಮಾಧಿ ಕಟ್ಟೋಕೆ ಬಂದಿದ್ದಾರೆ ಎಂದು ಬಿಜೆಪಿ ನಿಷ್ಠರು ಹೇಳಿಕೊಂಡಿದ್ದಾರೆ.



