ನಮ್ಮಲ್ಲಿ ತೀರ್ಮಾನ ಮಾಡಿಕೊಂಡು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿ ಹಾಕುತ್ತೇವೆ. ಲಿಂಗಾಯತ ಕೋಟಾ ಬಂದರೆ ನಾನೇ ಅಭ್ಯರ್ಥಿ”
ಇದು ಬಸನಗೌಡ ಪಾಟೀಲ ಯತ್ನಾಳ್ ಅವರ ಓಪನ್ ಸ್ಟೇಟ್‌ಮೆಂಟ್.
ʻನಾನೂ ಲಿಂಗಾಯತನೇ. ರಾಜ್ಯದ ಎಲ್ಲ ಕಡೆ ನನಗೆ ಬೆಂಬಲ ನನಗೆ ಇದೆ. ಚುನಾವಣೆ ನಡೆದರೆ ಮತ್ತೊಮ್ಮೆ ರಾಜ್ಯಾಧ್ಯಕ್ಷನಾಗಿ ಗೆದ್ದು ಬರುತ್ತೇನೆʼ
ಇದು ಹಾಲಿ ಅಧ್ಯಕ್ಷ ವಿಜಯೇಂದ್ರ ಅವರ ಹೇಳಿಕೆ. ಇಷ್ಟಕ್ಕೂ ವಿಜಯೇಂದ್ರ ಹಠಾವೋ ಎನ್ನುತ್ತಿರುವ ಯತ್ನಾಳ್, ರಮೇಶ್ ಜಾರಕಿಹೊಳಿ, ಲಿಂಬಾವಳಿ ಮೊದಲಾದವರ ಪ್ರಮುಖ ಬೇಡಿಕೆಗಳೇನು ಗೊತ್ತೇ..
ಯತ್ನಾಳ್ ಬಣದ ಪ್ರಮುಖ ಬೇಡಿಕೆಗಳು
ಹಿಂದುತ್ವ ಪರ ನಾಯಕರಿಗೆ ನೇತೃತ್ವ ಕೊಡಬೇಕು
ಕುಟುಂಬ ರಾಜಕಾರಣಕ್ಕೆ ಇತಿಶ್ರೀ ಹಾಡಬೇಕು
ಭ್ರಷ್ಟಾಚಾರ ರಹಿತದ ನಾಯಕತ್ವ ನೀಡಬೇಕು
ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಮುಂದುವರಿಯಬಾರದು ಎಂಬುದು ಭಿನ್ನರ ಬಣದ ಪ್ರಮುಖ ಒತ್ತಾಯ. ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗ, ಲಿಂಗಾಯತ ಸೇರಿದಂತೆ ಯಾವುದೇ ಸಮುದಾಯವನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪರಿಗಣಿಸುವುದಾದರೆ ತಮ್ಮ ಬಣದಿಂದ ಒಬ್ಬ ಸಮರ್ಥರಿಗೆ ಅವಕಾಶಕ್ಕೆ ಮನವಿ ಮಾಡಲು ನಿರ್ಧರಿಸಿದ್ದಾರೆ. ತಟಸ್ಥ ಬಣದ ನಾಯಕರು ರಾಜ್ಯಾಧ್ಯಕ್ಷರಾದರೂ ಆಕ್ಷೇಪವಿಲ್ಲಎಂದೂ ವರಿಷ್ಠರಿಗೆ ತಿಳಿಸಲು ಸಜ್ಜಾಗಿದ್ದಾರೆ.
ದಿಲ್ಲಿಯಲ್ಲಿ ಎಲ್ಲವರಿಷ್ಠ ನಾಯಕರ ಭೇಟಿಗೂ ಸಮಯ ನಿಗದಿಯಾಗಿದೆ. ಎಲ್ಲರನ್ನೂ ಭೇಟಿಯಾಗಿ ತಮ್ಮ ಬಣದ ಅಭಿಪ್ರಾಯ ತಿಳಿಸಲಾಗುತ್ತದೆ ಎಂದು ಕಲಬುರಗಿಯಲ್ಲಿಮಾತನಾಡಿರುವ ಯತ್ನಾಳ್ ಹೇಳಿದ್ದಾರೆ. ಹಾಗಾಗಿ ಈ ರೆಬಲ್‌ಗಳು ದಿಲ್ಲಿ ಅಂಗಳದಲ್ಲಿ ಯಾವೆಲ್ಲಪ್ರಮುಖರನ್ನು ಭೇಟಿಯಾಗಬಹುದು ಎನ್ನುವಯದೇ ಕುತೂಹಲ. ಮಾಡಿಕೊಡುವ ಕೆಲಸ ಮಾಡಿದ್ದೇವೆ. ವರಿಷ್ಠರು ಅಂತಿಮವಾಗಿ ತೆಗೆದುಕೊಳ್ಳುವ ತೀರ್ಮಾನವನ್ನು ತಲೆಬಾಗಿ ಸ್ವೀಕರಿಸುತ್ತೇವೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಆದರೆ ವಿಚಿತ್ರ ಎಂದರೆ ಯತ್ನಾಳ್ ಬಣದಲ್ಲಿರುವ ಬಹುತೇಕ ನಾಯಕರು ʻಕುಟುಂಬ ರಾಜಕಾರಣʼದಲ್ಲಿ ಇರುವವರು. ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಅರವಿಂದ ಲಿಂಬಾವಳಿ, ಜಿಎಂ ಸಿದ್ದೇಶ್ವರ.. ಮೊದಲಾದವರೆಲ್ಲ ʻವಂಶಾವಳಿಯ ಕುಡಿʼಗಳೇ.
ಇನ್ನು ಹಿಂದುತ್ವದ ವಿಷಯಕ್ಕೆ ಬಂದರೆ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ ಮೊದಲಾದವರು ಕಾಂಗ್ರೆಸ್ಸಿನಲ್ಲಿದ್ದವರು. ಆಗ ʻಬಿಜೆಪಿಯ ಹಿಂದುತ್ವʼದ ವಿರುದ್ಧ ಮಾತನಾಡಿದ್ದವರೇ.
ಇನ್ನು ಭ್ರಷ್ಟಾಚಾರದ ಆರೋಪ ಹೊತ್ತವರು ಇರಬಾರದು ಎನ್ನುವ ಯತ್ನಾಳ್ ಬಣದಲ್ಲಿರುವ ನಾಯಕರೆಲ್ಲ ಒಂದಲ್ಲ ಒಂದು ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವವರೇ.
ಆದರೆ ಹೈಕಮಾಂಡ್ ಎದುರು ಮಾತನಾಡುತ್ತಿರುವ ಯತ್ನಾಳ್ ಬಣದವರು ಮಾತ್ರ ʻʻಹಿಂದುತ್ವ, ಕುಟುಂಬ ರಾಜಕಾರಣ ರಹಿತ, ಭ್ರಷ್ಟಾಚಾರ ವಿರುದ್ಧ ನಮ್ಮ ಹೋರಾಡುವುದು ನಮ್ಮ ಅಜೆಂಡಾ. ಕುಟುಂಬ ರಾಜಕಾರಣದ ಬಗ್ಗೆ ಕೇಂದ್ರದಲ್ಲಿಮಾತನಾಡುತ್ತಾರೆ, ಆದರೆ ಇಲ್ಲಿಕುಟುಂಬದ ಕುಡಿಗೆ ಅಧ್ಯಕ್ಷರನ್ನಾಗಿಸಲಾಗಿದೆ. ಹೀಗೆಲ್ಲಾಮಾತನಾಡೋದಿದ್ದರೆ ಮುಂದೆ ಕುಟುಂಬ ರಾಜಕಾರಣ, ಹಿಂದುತ್ವದ ಬಗ್ಗೆ ಮಾತನಾಡಬಾರದು ” ಎಂದು ಸಲಹೆ ನೀಡಿದ್ದಾರಂತೆ.
ಒಟ್ಟಿನಲ್ಲಿ ಯತ್ನಾಳ್ ಬಣದ ಬೇಡಿಕೆಗಳಿಗೆ ಅವರವರಲ್ಲೇ ವಿರೋಧಾಭಾಸವೂ ಇದೆ. ಏನಾಗುತ್ತೋ.. ಏನೋ.. ವಿಜಯೇಂದ್ರ ಹಠಾವೋನಾ.. ವಿಜಯೇಂದ್ರ ಬಚಾವೋ..ನ.



