ಮಹದಾನಂದವೂ ಮಗಳಾದರೆ..
ಬಡ ತಂದೆ ಸಹ ಮೆರೆಯೋ ದೊರೆ..
ಥಿಯೇಟರುಗಳಲ್ಲಿ ಗಿಲಕ್ಕೋ ಶಿವ ಗಿಲಕ್ಕೋ.. ಜುಂಜಪ್ಪನ ಹಾಡು.. ಪುಷ್ಪ ಪುಷ್ಪ.. ಹಾಡುಗಳು ಅಭಿಮಾನಿಗಳ ಎದೆಯಲ್ಲಿ ಪುಳಕ ಹುಟ್ಟಿಸುತ್ತಿವೆ. ತಂದೆ ಮಗಳ ಸೆಂಟಿಮೆಂಟ್ ಸೀನ್ ಪ್ರೇಕ್ಷಕರನ್ನು ಕಣ್ಣಿರು ಹಾಕಿಸುವಷ್ಟು ಮನೋಜ್ಞವಾಗಿ ಮುಡಿ ಬಂದಿದೆ.
ಹರ್ಷ ಕಮರ್ಷಿಯಲ್ ಚಿತ್ರದಲ್ಲಿ ಮತ್ತೊಮ್ಮೆ ಗೆದ್ದಿದ್ದರೆ, ಗೀತಾ ಶಿವರಾಜಕುಮಾರ್ ಮೊದಲ ಪ್ರಯತ್ನದಲ್ಲಿಯೇ ಸಕ್ಸಸ್ ಕಂಡಿದ್ದಾರೆ. ಶಿವಣ್ಣ ಅವರದ್ದೀಗ ಎಲ್ಲೆಲ್ಲೂ ಸಕ್ಸಸ್ ಯಾತ್ರೆ.
ಬೆಂಗಳೂರಿನ ಹಲವು ಚಿತ್ರಮಂದಿರಗಳಲ್ಲಿ ಯಶಸ್ಸಿನ ಪಯಣ ಮುಂದುವರೆಸಿರೋ ಶಿವಣ್ಣ, ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಧೆಡೆ ಥಿಯೇಟರುಗಳಿಗೆ ಭೇಟಿ ಕೊಡುತ್ತಿದ್ದಾರೆ. ಈ ಹಾದಿಯಲ್ಲಿ ಶಿವಣ್ಣ ಜೊತೆಯಲ್ಲಿ ಗಾನವಿ ಲಕ್ಷ್ಮಣ್, ಮಗಳು ಆದಿತಿ ಸಾಗರ್, ಶ್ವೇತಾ ಚೆಂಗಪ್ಪ, ಡೈರೆಕ್ಟರ್ ಹರ್ಷ ಸೇರಿದಂತೆ ಚಿತ್ರತಂಡದವರೆಲ್ಲ ಒಟ್ಟಿಗೇ ಹೋಗುತ್ತಿದ್ದಾರೆ.
ವೇದ ಚಿತ್ರತಂಡ ಇಂದು ಚಾಮರಾಜನಗರ, ಟಿ.ನರಸೀಪುರ, ಗುಂಡ್ಲುಪೇಟೆ ಹಾಗೂ ಹುಣಸೂರುಗಳಲ್ಲಿ ಚಿತ್ರಮಂದಿರಗಳಿಗೆ ಭೇಟಿ ಕೊಡಲಿದೆ. ನಾಳೆ ಕೊಳ್ಳೆಗಾಲ, ಮಳವಳ್ಳಿ, ಮದ್ದೂರು, ಮಂಡ್ಯ, ರಾಮನಗರಗಳಲ್ಲಿ ಚಿತ್ರಮಂದಿರಗಳನ್ನು ಭೇಟಿ ಮಾಡಲಿದೆ.
ತಮಿಳುನಾಡಿನಿಂದಲೂ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು, ಬಿಡುಗಡೆಯಾದ ಎಲ್ಲ ಕಡೆ ಉತ್ತಮ ಕಲೆಕ್ಷನ್ಸ್ ಮಾಡುತ್ತಿದೆ.