ಹುಲಿ ಉಗುರು (tiger claw pendent) ಕೇಸ್ ಕೆಲವರನ್ನಷ್ಟೇ ಅಟ್ಟಾಡಿಸಿದೆ. ಗೋಳಾಡಿಸಿದೆ ಎನ್ನುವ ಅಭಿಪ್ರಾಯ ಜೋರಾಗಿರುವ ಬೆನ್ನಲ್ಲೇ ಅರ್ಚಕರ ಸಂಕಷ್ಟ ಇನ್ನೂ ಮುಗಿದಿಲ್ಲ. ನಟ ರಾಜ್ಯಸಭಾ ಸದಸ್ಯ ಜಗ್ಗೇಶ್ (jaggesh) ಅವರಿಗೆ ಹುಲಿ ಉಗುರು ಕೇಸಿನಲ್ಲಿ ದೊಡ್ಡ ರಿಲೀಫ್ ಸಿಕ್ಕಿದೆ. ನೋಟಿಸ್ ಕೊಟ್ಟು ಉತ್ತರ ಕೊಡುವುದಕ್ಕೂ ಅವಕಾಶ ನೀಡದೆ ರೇಡ್ ಮಾಡಿದ್ದು ತಪ್ಪು ಎಂದಿರುವ ಹೈಕೋರ್ಟ್, ತಡೆ ನೀಡಿದೆ.
ಇನ್ನು ಹಳ್ಳಿಕಾರ್ ಸಂತೋಷ್ (hallikar santhosh) ಅವರಿಗೂ ಕೆಲವು ದಿನಗಳ ನಂತರ ಜಾಮೀನು ಸಿಕ್ಕಿ, ಅವರೀಗ ಮತ್ತೆ ಬಿಗ್ ಬಾಸ್ ಮನೆ (bigboss) ಸೇರಿದ್ದಾರೆ. ಆದರೆ ಅರ್ಚಕರ ಬಂಧನ ಪ್ರಕರಣ ಮುಕ್ತಾಯವಾಗಿಲ್ಲ. ಇನ್ನೂ ಜೈಲಿನಲ್ಲೇ ಇದ್ದಾರೆ. ಜಾಮೀನು ಕೂಡಾ ಸಿಕ್ಕಿಲ್ಲ.
ಜಗ್ಗೇಶ್ ಪ್ರಕರಣ : Jaggesh tiger claw pendent case, jaggesh gets relief ಅರಣ್ಯ ಇಲಾಖೆ ಅಧಿಕಾರಿಗಳಿಂದ ಜಗ್ಗೇಶ್ ಅವರಿಗೆ ನೋಟಿಸ್ ನೀಡಲಾಗಿತ್ತು. ಇದಕ್ಕೆ ತಡೆ ನೀಡಬೇಕು ಎಂದು ಜಗ್ಗೇಶ್ ಅವರು ಹೈಕೋರ್ಟ್ ಮೆಟ್ಟಿಲು ಏರಿದ್ದರು. ಜಗ್ಗೇಶ್ ಪರವಾಗಿ ಕೋರ್ಟ್ ಆದೇಶ ನೀಡಿದ್ದು, ಅರಣ್ಯಾಧಿಕಾರಿಗಳ ನೋಟಿಸಿಗೆ ಹೈಕೋರ್ಟ್ ತಡೆ ನೀಡಿದೆ. ರಾಜ್ಯಸಭಾ ಸದಸ್ಯ ಜಗ್ಗೇಶ್ ವಿರುದ್ಧದ ಕ್ರಮ ಕಾನೂನುಬಾಹಿರವೆಂದು ಜಗ್ಗೇಶ್ ಪರ ಹಿರಿಯ ವಕೀಲ ಪ್ರಭುಲಿಂಗ್ ನಾವದಗಿ ವಾದಿಸಿದರು. ವಾದವನ್ನು ಕೇಳಿದ ಬಳಿಕ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಈ ಆದೇಶ ನೀಡಿದೆ.
ಜಗ್ಗೇಶ್ ಅವರಿಗೆ ಅವರ ತಾಯಿ ಹುಲಿ ಉಗುರಿನ ಪೆಂಡೆಂಟ್ ಕೊಟ್ಟಿದ್ದರು. ಅದು ವೊರಿಜಿನಲ್ ಹುಲಿ ಉಗುರಿನ ಪೆಂಡೆಂಟ್ ಎಂದು ಜಗ್ಗೇಶ್ ಹೆಮ್ಮೆಯಿಂದ ಹೇಳಿಕೊಂಡಿದ್ದರು. ನ್ಯೂಸ್ ಫಸ್ಟ್ʻಗೆ ನೀಡಿದ ಸಂದರ್ಶನವೊಂದರಲ್ಲಿ ನೀಡಿದ್ದ ಹೇಳಿಕೆ ಭಾರಿ ವೈರಲ್ ಆಗಿತ್ತು. ಆ ಮೂಲಕವೇ ಜಗ್ಗೇಶ್ ಅವರಿಗೆ ನೋಟಿಸ್ ನೀಡಿ, ರೇಡ್ ಮಾಡಲಾಗಿತ್ತು. ಇದೀಗ ರಿಲೀಫ್ ಸಿಕ್ಕ ನಂತರ ಜಗ್ಗೇಶ್ ವೇದಾಂತಿಯಂತೆ ನಾನಾಯಿತು ನನ್ನ ಬದುಕಾಯಿತು ಎಂದು ಶ್ರದ್ಧೆಯಿಂದ ಬಾಳುತ್ತಿರುವ ನನ್ನನ್ನು ಪ್ರಚಾರ ವಸ್ತುವಿನಂತೆ ಬಳಕೆ ಮಾಡಲಾಯಿತು. ಪ್ರೀತಿ ನಂಬಿಕೆ ಸಂಬಂಧ ಎಂದು ಸಾಮಾಜಿಕವಾಗಿ ಮಾತಾನಾಡುತ್ತಿದ್ದ ನನ್ನನ್ನು ಮೂಕನಾಗಿಸಿ ಇನ್ನು ಮುಂದೆ ಯಾವ ವಿಷಯವು ಮಾತನಾಡದಂತೆ ದಿಗ್ಬಂಧಗನ ಹಾಕಿಕೊಂಡಿತು ಮನಸ್ಸು ಇಂದಿನ ದುರ್ದೈವ ಪ್ರಚಾರ ಕಂಡು. ಸಂಬಂಧ ಅರಿವಿಲ್ಲದ ಸಮುದಾಯ ಎಂದು ಹೇಳಿದ್ದಾರೆ.
ಎಲ್ಲ ಸರಿ, ಆದರೆ ಜಗ್ಗೇಶ್ ಕೇವಲ ಸಾಮಾನ್ಯ ವ್ಯಕ್ತಿಯಂತೆ ತಾನಾಯಿತು, ತನ್ನ ಬದುಕಾಯಿತು ಎಂದು ಬದುಕುವ ವ್ಯಕ್ತಿಯಲ್ಲ. ಜವಾಬ್ದಾರಿಗಳಿವೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ರಾಜ್ಯಸಭಾ ಸದಸ್ಯರಾಗಿರುವುದನ್ನು ಅವರೇನು ಮರೆತಂತೆ ಕಾಣುತ್ತಿಲ್ಲ. ನೆನಪಿಸಿಕೊಳ್ಳಬೇಕಷ್ಟೇ.
ಹಳ್ಳಿಕಾರ್ ಸಂತೋಷ್ ಪ್ರಕರಣ : Hallikar Santhosh gets relief and re-enters big boss house ಹುಲಿ ಉಗುರು ಖ್ಯಾತಿಯ ಸಂತೋಷ್ ಮರಳಿ ಬಿಗ್ ಬಾಸ್ ಮನೆ ಸೇರಿದ್ಧಾರೆ. ಸಂತೋಷ್ ಅವರು ಬಡವರೇನಲ್ಲ, ಕೋಟ್ಯಧಿಪತಿ. ಇಂತಹ ಹಳ್ಳಿಕಾರ್ ಸಂತೋಷ್ ಅವರನ್ನು ಬಿಗ್ ಬಾಸ್ ಮನೆಯಿಂದಲೇ ಕರೆದುಕೊಂಡು ಬರಲಾಗಿತ್ತು. ಜೈಲಿಗೆ ಹಾಕಲಾಗಿತ್ತು. ಇದೀಗ ಸಂತೋಷ್ ಅವರದ್ದು ಹುಲಿ ಉಗುರು ಹೌದೋ ಅಲ್ಲವೋ ಎಂಬ ಬಗ್ಗೆ ಪರೀಕ್ಷೆಗಳು ನಡೆಯುತ್ತಿದ್ದು, ಜಾಮೀನಂತೂ ಸಿಕ್ಕಿದೆ. ಅವರು ಮತ್ತೆ ಆಕ್ಟಿವ್ ಆಗಿ, ಬಿಗ್ ಬಾಸ್ ಮನೆ ಸೇರಿದ್ಧಾರೆ.
ಅರ್ಚಕರ ಕಥೆ ಏನು?
ಬಾಳೆಹೊನ್ನೂರಿನ Balehonnuru Khandya markandeshwara temple priests still in court custody ಖಾಂಡ್ಯ ಮಾರ್ಕಾಂಡೇಶ್ವರ ದೇವಾಲಯದ ಇಬ್ಬರು ಅರ್ಚಕರನ್ನು ಅರಣ್ಯ ವಲಯದ ಅಧಿಕಾರಿಗಳು ಬಂಧಿಸಿ ಜೈಲಿಗೆ ತಳ್ಳಿದ್ದಾರೆ. ಇಬ್ಬರಿಗೂ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೃಷ್ಣಾನಂದ ಹೊಳ್ಳ, ನಾಗೇಂದ್ರ ಜೋಯಿಸ ಅರೆಸ್ಟ್ ಆಗಿರುವವರು. ಇವರಲ್ಲಿ ಒಬ್ಬರಿಗೆ 71 ವರ್ಷ. ಇವರಿಗೆ ಇನ್ನೂ ಜಾಮೀನು ಸಿಕ್ಕಿಲ್ಲ. ಬಿಡುಗಡೆಯೂ ಆಗಿಲ್ಲ.
ಉಳಿದವರ ವಿಷಯ ಬಿಡಿ, ನಟ ದರ್ಶನ್, ನಿಖಿಲ್ ಕುಮಾರಸ್ವಾಮಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಲಕ್ಷ್ಮಣ ಸವದಿ ಮಕ್ಕಳು, ಅಳಿಯಂದಿರು, ಸ್ವಾಮೀಜಿಗಳು ಸೇರಿದಂತೆ ಹಲವರು ವಿಚಾರಣೆ ಎದುರಿಸಿದರು. ಹೊರತಾಗಿ ಬಂಧನ ಆಗಿಲ್ಲ. ಆದರೆ ಕಾನೂನಿನ ಎದುರು ಎಲ್ಲರೂ ಒಂದೇ. ಎಲ್ಲರೂ ಸಮಾನರು. ಹೌದು..!!!



