ವಾತ್ಸಾಯನ ಕಾಮಸೂತ್ರ. ಜಗತ್ತಿನಲ್ಲೇ ಕಾಮಕ್ಕಾಗಿಯೇ ಇರುವ ಅಧಿಕೃತ ಗ್ರಂಥ. ಭಾರತೀಯರು ಕೇವಲ ವೇದ, ಗಣಿತ, ಖಗೋಳ, ವೈದ್ಯ ಪದ್ಧತಿಗಳಲ್ಲಷ್ಟೇ ಅಲ್ಲ, ಕಾಮವನ್ನೂ ವಿಜ್ಞಾನದಂತೆಯೇ ಅಧ್ಯಯನ ಮಾಡಿದ್ದರು. ಆ ಕಾಮಸೂತ್ರದ ಪ್ರಕಾರ ಜಗತ್ತಿನಲ್ಲಿ ನಾಲ್ಕು ವಿಧದ ಮಹಿಳೆಯರು ಇದ್ದಾರಂತೆ. ಆ 4 ವಿಧದ ಹೆಂಗಸರ ಸಮಸ್ತ ವಿವರವನ್ನೂ ವಾತ್ಸಾಯನ ಋಷಿ ತಮ್ಮ ಗ್ರಂಥದಲ್ಲಿ ದಾಖಲಿಸಿದ್ದಾರೆ. ಅವರ ದೇಹದ ಗುಣಲಕ್ಷಣಗಳು, ವಿವಿಧ ಭಾವೋದ್ರೇಕದ ಆಸನಗಳು, ಮಿಲನ ಮಹೋತ್ಸವದಲ್ಲಿ ಅವರ ರೀತಿ ಎಲ್ಲವನ್ನೂ ವಿವರಿಸಿದ್ದಾರೆ. ಆ ಸೂತ್ರದ ಪ್ರಕಾರ..
1. ಪದ್ಮಿನಿ (Lotus woman)
2. ಚಿತ್ತಿನಿ (Art woman)
3. ಶಂಖಿನಿ (Conch woman)
4. ಹಸ್ತಿನಿ (Elephant woman)
ಎಂಬ 4 ವಿಧದ ಹೆಂಗಸರಿದ್ದಾರೆ. ಇದು ಕೇವಲ ಅವರ ದೈಹಿಕ ಗುಣ ಲಕ್ಷಣಗಳ ಕಥೆಯಷ್ಟೇ ಅಲ್ಲ.. ವ್ಯಕ್ತಿತ್ವದ ವಿವರವೂ ಇದೆ.

ಪದ್ಮಿನಿ
ಪದ್ಮಿನಿ ಎಂದರೆ ಪದ್ಮ. ಕಮಲದ ಮೊಗದವಳು. ಕಮಲದಾ ಕಣ್ಣವಳು. ಮುಖವು ಹುಣ್ಣಿಮೆಯಂತೆ ಹೊಳೆಯುತ್ತಿದ್ದರೆ ದೇಹದಲ್ಲಿ ಮಾಂಸಲಖಂಡವೂ ಅಷ್ಟೇ ಹೊಳಪಿನಿಂದ ಕೂಡಿರುತ್ತೆ ಎನ್ನುತ್ತಾನೆ ವಾತ್ಸಾಯನ. ಪದ್ಮಿನಿ ಜಾತಿಯ ಹೆಂಗಸರ ಚರ್ಮ ಸೂಕ್ಷ್ಮ. ಕೋಮಲ ಮತ್ತು ಸುಂದರ. ಈಕೆಗೆ ಗಾಢಬಣ್ಣ ಇರುವುದಿಲ್ಲ. ಜಿಂಕೆಯಂತಾ ಕಣ್ಣುಗಳಲ್ಲಿ ಹುಬ್ಬುಗಳು ನೀಟಾಗಿ ಕತ್ತರಿಸಿದಂತಿರುತ್ತವೆ. ರೀಬಾಕ್ ಲೋಗೋನ ಉಲ್ಟಾ ಹಾಕಿದಂತೆ.
ಎದೆ ಭಾಗ ಗಟ್ಟಿಯಾಗಿದ್ದು, ತುಂಬಿದೆದೆಯುಳ್ಳ ಜವ್ವನೆ. ಬಳುಕುವ ನಡು ಉಳುಕುವಂತಾ ಎದೆಯವಳು. ಕುತ್ತಿಗೆಯೂ ಎತ್ತರವಾಗಿದ್ದು ಮೂಗು ನೇರ. ಹೊಕ್ಕುಳ ಭಾಗದಲ್ಲಿ ಮೂರು ಮಡಿಕೆಗಳು ಅಥವಾ ಸುಕ್ಕುಗಳಿರುತ್ತವೆ. ಅವಳ ಯೋನಿ ತೆರೆಯುವ ಕಮಲದ ಮೊಗ್ಗುಗಳನ್ನು ಹೋಲುತ್ತದೆ. ಸುಗಂಧಭರಿತ. ಹಂಸದಂತಹ ನಡಿಗೆಯವಳ ಧ್ವನಿಯಲ್ಲೊಂದು ಸಂಗೀತವಿರುತ್ತದೆ. ಬಿಳಿ ಬಣ್ಣ ಮತ್ತು ಆಭರಣ ಪ್ರಿಯೆ. ಆಹಾರ ಸೇವನೆ ಕಡಿಮೆ. ಶ್ರೀಮಂತ ಉಡುಪುಗಳೆಂದರೆ ಇಷ್ಟ. ಲಘುವಾದ ನಿದ್ರೆ. ಮಿಲನ ಮಹೋತ್ಸವವನ್ನು ಆನಂದಿಸುತ್ತಾಳೆ. ಬುದ್ದಿವಂತೆ. ಸೌಜನ್ಯಶೀಲ ಸದ್ಗುಣೆ. ಧಾರ್ಮಿಕ ನಂಬಿಕೆಯುಳ್ಳವಳೂ ಆಗಿರುತ್ತಾಳೆ.

ಚಿತ್ತಿನಿ
ಚಿತ್ತಿನಿ ಅಥವಾ ಚಿತ್ರಿಣಿ. ಈ ಗುಂಪಿಗೆ ಸೇರಿದ ಹೆಣ್ಣು ಮಧ್ಯಮ ಗಾತ್ರದವಳು. ಅತ್ತ ಕುಳ್ಳಿಯೂ ಅಲ್ಲ. ಇತ್ತ ಕಂಬವೂ ಅಲ್ಲ ಎನ್ನುವಷ್ಟು ಎತ್ತ. ಕಪ್ಪು ಕೂದಲು. ಸೊಂಟ ಮುಷ್ಟಿಗೆ ಸಿಗುವಷ್ಟು ಸಣ್ಣಗಿರುತ್ತದೆ. ಗಟ್ಟಿ ನಡು. ಮೇಲ್ಭಾಗ ಪೂರ್ಣ ಸ್ತನಗಳು. ತೊಡೆಗಳೂ ತುಂಬಿರುತ್ತವೆ. ಯೋನಿ ಭಾಗ ಮೃದುವಾಗಿರುತ್ತದೆ. ಸಂಭೋಗವನ್ನು ದೊಡ್ಡ ಸದ್ದಿನೊಂದಿಗೆ ಸುಖಿಸುವ ಹೆಣ್ಣು. ಕಣ್ಣುಗಳು ಅತ್ತಿಂದಿತ್ತ ಇತ್ತಿಂದತ್ತ ಚಲಿಸುತ್ತಲೇ ಇರುತ್ತವೆ. ಸಂತೋಷ ಬಯಸುವ ಹಾಗೂ ವೈವಿದ್ಯತೆ ಬಯಸುವ ಹೆಣ್ಣು. ಹಾಡು, ನೃತ್ಯವನ್ನು ಇಷ್ಟಪಡುತ್ತಾಳೆ. ವಿಷಯ ಲೋಲುಪತೆಯುಳ್ಳವಳು. ಪ್ರಾಣಿ ಪಕ್ಷಿಗಳ ಬಗ್ಗೆ ಪ್ರೀತಿಯುಳ್ಳವಳು.


ಶಂಖಿಣಿ ಎಂದೂ ಕರೆಯುತ್ತಾರೆ. ಶಂಖದಂತ ಹೆಣ್ಣು. ಈಕೆಯ ಚರ್ಮ ಸದಾ ಬಿಸಿ ಬಿಸಿ. ಕಂದು ಬಣ್ಣದವಳು. ಅವಳ ದೇಹ ದೊಡ್ಡದಾಗಿದ್ದು ಸೊಂಟ ದಪ್ಪಗಿರುತ್ತದೆ. ಆದರೆ ಸ್ತನಗಳು ಚಿಕ್ಕವು. ಮುಂಭಾರ ಇಲ್ಲ. ತಲೆ, ಕೈಗಳು ಮತ್ತು ಪಾದಗಳು ತೆಳ್ಳಗಿದ್ದು, ಉದ್ದವಾಗಿರುತ್ತವೆ. ಓರೆನೋಟದ ಚೆಲುವೆ. ಕಣ್ಣ ಮೊನೆಗಳಿಂದಲೇ ಎಲ್ಲವನ್ನೂ ನೋಡುವ ಸುಂದರಿ. ಯೋನಿಯು ಸದಾ ತೇವದಿಂದಿರುತ್ತದೆ. ಧ್ವನಿಯು ಒರಟು ಮತ್ತು ಕಠೋರ. ನಡಿಗೆಯೂ ಒರಟೊರಟು. ತಿನ್ನುವುದು ಕಡಿಮೆ. ಬಟ್ಟೆ, ಹೂ, ಆಭರಣ ಎಂದರೆ ಇಷ್ಟ. ಕಾಮೋತ್ಸಾಹ ಹೆಚ್ಚು. ಸಂಗಾತಿಯ ಮೈಯ್ಯಲ್ಲಿ ಉಗುರು ಮತ್ತು ಹಲ್ಲುಗಳನ್ನು ಊರಿ ದಂತಕ್ಷತ, ನಖಕ್ಷತ ಮಾಡುತ್ತಾಳೆ. ಕಠಿಣ ಹೃದಯಿ. ದಬ್ಬಾಳಿಕೆಯನ್ನೂ ಮಾಡುವ ಹಾಗೂ ಸದಾ ಎದುರು ಇರುವವರಲ್ಲಿ ತಪ್ಪು ಹುಡುಕುವವಳು.


ಹಸ್ತಿನಿ ಅಥವಾ ಆನೆಯಂಥ ಮಹಿಳೆ. ಈಕೆಯ ಎತ್ತರ ಕಡಿಮೆ. ಗಟ್ಟಿಮುಟ್ಟಾಗ ಒರಟು ದೇಹ. ಚರ್ಮ ಸುಂದರ. ಕಂದುಬಣ್ಣದ ಕೂದಲು. ದೊಡ್ಡ ತುಟಿ. ಗಟ್ಟಿ ಧ್ವನಿ. ಏದುರಿಸಿರು ಬರುವಂತೆ ಮಾತು. ನಡಿಗೆಯೂ ನಿಧಾನ ಮತ್ತು ವಕ್ರ.
ಸಾಮಾನ್ಯವಾಗಿ ಒಂದು ಪಾದದ ಬೆರಳುಗಳು ವಕ್ರವಾಗಿರುತ್ತವೆ. ಕಾಮಲೀಲೆಗೆ ನಿಧಾನವಾಗಿ ತೆರೆದುಕೊಳ್ಳುವವಳು. ಆದರೆ ಬೇಗ ತೃಪ್ತಳಾಗುವುದಿಲ್ಲ. ಹೊಟ್ಟೆಬಾಕುತನದವಳು. ನಾಚಿಕೆಯೂ ಇಲ್ಲ. ಸಿಡುಕೇ ಎಲ್ಲ.



