ಊರಿಂದ ಬರುವ ಗಂಡನಿಗೆ ಸ್ನಾನದ ಮನೆಯಲ್ಲಿ ಹೆಂಡತಿ ಹೆಬ್ಬೆರಳು ಕುಯ್ದುಕೊಂಡು ಕೆಂಡಕ್ಕೆ ತರ್ಪಣ ಬಿಡುವುದು ಕಂಡರೆ ಏನಾಗಬೇಡ..
ಮನೆಯ ಮೂಲೆ ಮೂಲೆಯಲ್ಲೂ ಕತ್ತರಿಸಿದ ನಿಂಬೆಹಣ್ಣಿನ ಹೋಳು. ಅವುಗಳಿಗೆ ಕುಂಕುಮ ಹರಿಶಿನ ಮೆತ್ತಿರೋದು ಬೇರೆ..
ಊಟಕ್ಕೆ ಕುಳಿತರೆ ಊಟದ ತಟ್ಟೆಯಲ್ಲಿ ಕೂದಲು..ಎಂಜಲು.. ಬೂದಿ.. ಎಣ್ಣೆ..
ಹೆದರಿದ ಗಂಡ ಹೆಂಡತಿಯ (Husband wife) ಮೇಲೆ ದೂರು ಕೊಟ್ಟಿದ್ದಾನೆ. ಕಬ್ಬನ್ ಪಾರ್ಕ್ ಪೊಲೀರಿಗೆ (Cubban Park polilce) ಕೊಟ್ಟಿರುವ ದೂರಿನ ಪ್ರಕಾರ ಆತನ ಹಾಗೂ ಆತನ ಮನೆಯವರ ಮೇಲೆ ಪತ್ನಿ ಹಾಗೂ ಆಕೆಯ ತವರು ಮನೆಯವರು ವಾಮಾಚಾರ (Vamachara) ನಡೆಸುತ್ತಿದ್ದಾರೆ. ದಯವಿಟ್ಟು ಆತನನ್ನು ಹಾಗೂ ಆತನ ಮನೆಯವರನ್ನು ಬಚಾವು ಮಾಡಬೇಕು ಅಂತ ಮನವಿ ಮಾಡಿದ್ದಾನೆ. ಪೊಲೀಸರು (Police) ಸಹ ಈತನ ದೂರನ್ನು, ಮೂಢನಂಬಿಕೆ ನಿವಾರಣಾ ಕಾಯ್ದೆಯ (superstition) ಅಡಿಯಲ್ಲಿ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.
ಆತ ವಿದೇಶಕ್ಕೆ ಹೋಗಿ ಇದೇ ಫೆಬ್ರವರಿ 22ರಂದು ವಾಪಸ್ ಆದನಂತೆ. ಅಂದು ತನ್ನ ಮನೆಯೊಳಗೆ ಬಂದ ತಕ್ಷಣ ತನ್ನ ಪತ್ನಿಯು ಸ್ನಾನದ ಕೋಣೆಯಲ್ಲಿ ಕೆಂಡದ ಮೇಲೆ ತನ್ನ ಎರಡೂ ಕೈಗಳ ಹೆಬ್ಬೆರಳನ್ನು ಕೊಯ್ದುಕೊಂಡು ಅದರಿಂದ ಬರುತ್ತಿದ್ದ ರಕ್ತವನ್ನು ಆ ಕೆಂಡದ ಮೇಲೆ ಹಾಕುತ್ತಿದ್ದನ್ನು ನೋಡಿ ಹೌಹಾರಿದೆ ಎಂದು ಹೇಳಿದ್ದಾನೆ. ಆನಂತರ ತನ್ನ ಮನೆಯ ಅಲ್ಲಲ್ಲಿ ನಿಂಬೆ ಹಣ್ಣುಗಳ ತುಂಡುಗಳು ಬಿದ್ದಿದ್ದನ್ನು ನೋಡಿದ್ದ ಆತ, ತನ್ನ ಮನೆಯಲ್ಲಿ ಇಲ್ಲದಾಗ ಏನೋ ನಡೆಯಬಾರದ್ದು ನಡೆಯುತ್ತಿದೆ ಎಂದು ಅನುಮಾನಗೊಂಡು ಖಾಸಗಿ ಪತ್ತೆದಾರಿಕೆ ಸಂಸ್ಥೆಯನ್ನು ಸಂಪರ್ಕಿಸಿ, ಅವರಿಗೆ ಈ ಘಟನೆಗಳ ಹಿನ್ನೆಲೆಯನ್ನು ತಿಳಿದುಕೊಡುವ ಕೆಲಸ ಒಪ್ಪಿಸಿದ್ದಾನೆ. ಖಾಸಗಿ ಪತ್ತೇದಾರರ ತನಿಖೆ ಪ್ರಕಾರ ಆತನ ಹೆಂಡತಿ ಹಾಗೂ ಆಕೆಯ ಮನೆಯವರು ಆತನ ಮೇಲೆ ವಾಮಾಚಾರ ನಡೆಸುತ್ತಿರುವುದು ಗೊತ್ತಾಗಿದೆ.
ನನ್ನ ಪತ್ನಿ ಹಾಗೂ ಆಕೆಯ ತವರು ಮನೆಯವರು ಬೆಂಗಳೂರಿನ ಅತ್ತಿಗುಪ್ಪೆಯಲ್ಲಿರುವ ಮಾಂತ್ರಿಕ ಹಾಗೂ ಪೂಜಾರಿಯೊಬ್ಬರನ್ನು ಭೇಟಿಯಾಗಿ ಅವರು ಹೇಳಿದಂತೆ ವಾಮಾಚಾರ ನಡೆಸುತ್ತಿದ್ದಾರೆ. ಈ ಮಾಂತ್ರಿಕ ಹಾಗೂ ಪೂಜಾರಿಯು ಸ್ಮಶಾನದಲ್ಲಿ ಮಾಟ ಮಾಡುವಂಥವರಾಗಿದ್ದು ಅವರ ಸಂಪರ್ಕಕ್ಕೆ ಬಂದ ನಂತರ ನನ್ನ ಪತ್ನಿ ಹೀಗಾಗಿದ್ದಾಳೆ. ಇತ್ತೀಚೆಗೆ, ತನ್ನ ತವರು ಮನೆಗೆ ಹೋಗಿದ್ದ ನನ್ನ ಪತ್ನಿಯು, ಅವರ ಮನೆಯ ಅಡುಗೆಯವರಿಂದ ಒಂದಿಷ್ಟು ಅಡುಗೆ ಮಾಡಿಸಿಕೊಂಡು ಬಂದು ನನಗೆ ಹಾಗೂ ನನ್ನ ಮನೆಯವರಿಗೆ ತಿನ್ನಿಸಿದ್ದಳು. ಆದರೆ, ಅದರಲ್ಲಿ ಬೂದಿ, ಕೆಲವು ಎಣ್ಣೆಗಳು ಹಾಗೂ ಎಂಜಲು ಸೇರಿತ್ತು. ಮನೆಯಲ್ಲಿ ನನ್ನ ಅಪ್ಪ ಕೆಲವು ದಿನಗಳಿಂದ ಕಾಯಿಲೆಬಿದ್ದಿದ್ದಾರೆ. ಮನೆಯಲ್ಲಿದ್ದ ಸಾಕುನಾಯಿಯೊಂದು ಇತ್ತೀಚೆಗೆ ಮೃತಪಟ್ಟಿದೆ. ಇದೆಲ್ಲವೂ ಈ ವಾಮಾಚಾರದಿಂದಲೇ ಆಗಿರುವುದು ಎಂದು ನಾನು ತಿಳಿದಿದ್ದು, ದಯವಿಟ್ಟು ನನ್ನನ್ನು ಇದರಿಂದ ಪಾರು ಮಾಡಬೇಕು ಎಂದು ಆತ ಕೋರಿದ್ದಾನೆ.
ಒಟ್ಟಿನಲ್ಲಿ ಕೋಟಿ ಕೋಟಿ ಆಸ್ತಿ ಇದ್ದರೂ, ಬಂಗಲೆಯೇ ಇದ್ದರೂ ಐಶಾರಾಮಿಯ ಸುಖ ಸುಪ್ಪತ್ತಿಗೆಯಲ್ಲೇ ತೇಲುತ್ತಿದ್ದರೂ.. ಉದ್ಯಮಿಗೆ ವಾಮಾಚಾರ ಕಾಡುತ್ತಿದೆ. ಏನಿದ್ದರೇನು.



