ಯುವ.. ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ದೊಡ್ಮನೆಯ ಹೊಸ ಕುಡಿ. ರಾಘವೇಂದ್ರ ರಾಜಕುಮಾರ್ ಅವರ ಮಗ. ಪುನೀತ್ ಅವರಿದ್ದಾಗಲೇ ಯುವ ಎಂಟ್ರಿಗೆ ಸ್ಟೇಜ್ ಸಿದ್ಧವಾಗುತ್ತಿತ್ತಾದರೂ.. ಆಗಲಿಲ್ಲ. ಅಪ್ಪು ಅವರಿಗಾಗಿ 3 ಚಿತ್ರಗಳನ್ನು ನಿರ್ಮಾಣ ಮಾಡಿದ್ದ ಹೊಂಬಾಳೆ ಟೀಂ ಈಗ ಯುವ ರಾಜಕುಮಾರ್ ಅವರನ್ನು ಲಾಂಚ್ ಮಾಡುತ್ತಿದೆ. ಚಿತ್ರದ ಟ್ರೇಲರ್ ಕೂಡಾ ರಿಲೀಸ್ ಆಗಿದೆ.
ಯುವ. ಕಾಲೇಜ್ ಸ್ಟೂಡೆಂಟ್. ಕೆಣಕುವವರಿಗೆ ಕೆಂಡವಾಗುವ ಹುಡುಗ. ಅಲ್ಲೊಂದು ಗ್ಯಾಂಗ್ ವಾರ್. ಲವ್ ಸ್ಟೋರಿ. ಸ್ವಲ್ಪ ಅತ್ತ ಹೊರಳಿದರೆ.. ಅಲ್ಲಿ ಅಪ್ಪ ಮಗನ ಯುದ್ಧ. ಅಪ್ಪನ ಬೆನ್ನಿಗೆ ನಿಲ್ಲುವ ಅಮ್ಮ. ಡೆಲಿವರಿ ಬಾಯ್ ಆಗುವ ಯುವನಿಗೆ ಅಪ್ಪನ ಕಷ್ಟ ಅರ್ಥವಾಗುತ್ತದೆ. ಅದನ್ನು ಸಿಗರೇಟು ಎಸೆಯುವ ಒಂದೇ ದೃಶ್ಯದಲ್ಲಿ ಕಟ್ಟಿಕೊಟ್ಟಿದ್ದಾರೆ ಸಂತೋಷ್ ಆನಂದ ರಾಮ್. ಇದರ ಜೊತೆ ಮತ್ತೆ ಗ್ಯಾಂಗ್ ವಾರ್ ಶರುವಾಗುತ್ತದೆ. ಈ ಬಾರಿ ಅಪ್ಪನಿಗಾಗಿ.. ಯುವ ಹೊಡೆದಾಡುತ್ತಾನೆ. ಯುವ ಟ್ರೇಲರ್ ಇಷ್ಟು ಕಥೆ ಹೇಳುತ್ತಿದೆ.
ಹೊಂಬಾಳೆ ಮೂಲಕ ಬರುತ್ತಿರುವ ಯುವ ಸಿನಿಮಾದಲ್ಲಿ ಯುವ ಅಕ್ಷರಶಃ ಆರ್ಭಟಿಸಿದ್ಧಾರೆ. ಹೊಸಬನೆಂದು ಗೊತ್ತಾಗುವುದಿಲ್ಲ. ಸಪ್ತಮಿ ಗೌಡ ನೋಡುವುದಕ್ಕೆ ಚೆಂದ ಚೆಂದ. ಅಚ್ಯುತ್ ಮತ್ತು ಸುಧಾರಾಣಿ, ಯುವನ ಅಪ್ಪ-ಅಮ್ಮನಾಗಿ ನಟಿಸಿದ್ದಾರೆ. ಚಿತ್ರದ ಕೆಲವು ಡೈಲಾಗ್ಸ್ ಆಗಲೇ ಟ್ರೆಂಡ್ ಆಗುತ್ತಿವೆ.
ಹೇಳೋರು ಕೇಳೋರು ಯಾರು ಇಲ್ಲ ಅಂತ ನೀವ್ ಆಡಿದ್ದೇ ಆಟ ಅನ್ಕೊಂಡ್ರಾ..? ಹೆಸ್ರು ನೆನ್ಪ್ ಇದೆ ಅಲ್ಲ..
ಗೆಲ್ತಿರೋನ ಮಟ್ಟಹಾಕೋಕ್ಕೆ ಒಂದು ಗುಂಪಿರ್ತೈತೊ ಹಂಗ ಗೆಲ್ತಾನೇ ಅನ್ನೋನನ್ನು ಮಟ್ಟ ಹಾಕೋಕ್ಕೆ ಒಂದು ಪಂಗಡ ಇರ್ತೈತಿ
ನಿನ್ನನ್ನ ಓದೋಕ್ ಕಳ್ಸಿದ್ದು ನೀನ್ ಬುದ್ದಿ ಕಲೀಲಿ ಅಂತಾ. ನಾವ್ ಬುದ್ದಿ ಹೇಳಿಸ್ಕೊಳ್ಳೋಕಲ್ಲ..
ಎಂದು ಹೇಳೋ ಅಪ್ಪ…
ನನ್ನ ಬಗ್ಗೆ ನಿಮಗೇನ್ ಗೊತ್ತು ಎಂದು ಕೇಳೋ ಮಗ..
ನಿನ್ನ ದುರಹಂಕಾರ ಇಳಿಯುತ್ತೆ ಎಂದು ರೊಚ್ಚಿಗೇಳೋ ಅಪ್ಪ ಅಚ್ಯುತ್..
ತಿಂಗಳಿಂದ ದುಡೀತಾ ಇರೋ ನಿಂಗೇ ಇಷ್ಟು ಕೋಪ ಬರ್ತಿರಬೇಕಾದ್ರೆ.. 30 ವರ್ಷದಿಂದ ಈ ಮನೆಯನ್ನ ನೋಡ್ಕೊತಿದ್ಧಾರೆ. ಅವರಿಗೆ ಕೋಪ ಬರೋದ್ರಲ್ಲೇನು ತಪ್ಪು ಎನ್ನುವ ಅಮ್ಮ ಸುಧಾರಾಣಿ..
ಖರ್ಚು ಮಾಡ್ಬೇಕಾದ್ರೆ ನಮ್ ಖುಷಿ ನಮಿಗ್ ಕಾಣುತ್ತೆ.. ಅದೇ ದುಡಿಯುವಾಗ ಅಪ್ಪನ ನೋವೆನಂಥ ಅರ್ಥ ಆಗುತ್ತೆ ಎನ್ನುವ ಮಗ ಯುವ..
ಕೊನೆಗೆ ಸಾರಿ ಕೇಳುತ್ತಾನೆ. ಬೆನ್ನಲ್ಲೇ ಫೈಟ್ ಶುರುವಾಗುತ್ತೆ. ಆ್ಯಕ್ಟಿಂಗ್, ಫೈಟಿಂಗ್ , ಡ್ಯಾನ್ನಲ್ಲಿ ಯುವ ಮಿರಿ ಮಿರಿ ಮಿಂಚುತ್ತಾರೆ. ಯುವ ಲುಕ್ʻನಲ್ಲಿ ಅಭಿಮಾನಿಗಳು ಅಪ್ಪು ಅವರನ್ನು ಕಾಣುತ್ತಿದ್ದಾರೆ. ಅಪ್ಪು ನಟಿಸಿದ್ದ ಮೊದಲ ಸಿನಿಮಾ ಅಪ್ಪು.
ನಾನ್ ಲೋಕಲ್ ಎನ್ನೋ ಡೈಲಾಗ್ ಹಿಟ್ ಆಗಿತ್ತು. ಇಲ್ಲಿ ನೀನು ಲೋಕಲ್ ಆದ್ರೆ.. ನಾನು ಪಕ್ಕಾ ಲೋಕಲ್ ಅನ್ನೋ ಡೈಲಾಗ್ ಇದೆ. ಆ ಚಿತ್ರದಲ್ಲಿಯೂ ಹೀಗೆಯೇ.. ಅಪ್ಪ-ಮಗನ ಬಾಂಧವ್ಯದ ಕಥೆ ಹಾಗೂ ಆಗಿನ ಕಾಲಕ್ಕೆ ಹೊಸದು ಎನ್ನಿಸುವ ಲವ್ ಸ್ಟೋರಿ ಇತ್ತು. ಯುವ ಚಿತ್ರದಲ್ಲೂ ಅದೇ ರೀತಿಯ ಶೇಡ್ ಕಾಣಿಸುತ್ತಿವೆ. ಇನ್ನು ಕೆಲವರು ಯುವರತ್ನ ಚಿತ್ರದ ಛಾಯೆಯನ್ನು ಹುಡುಕ್ತಿದ್ಧಾರೆ.
ಮಾರ್ಚ್ 29ಕ್ಕೆ ಯುವ ರಿಲೀಸ್ ಆಗುತ್ತಿದೆ. ಇಂದು ಹೊಸಪೇಟೆಯಲ್ಲಿ ಪ್ರೀ-ರಿಲೀಸ್ ಈವೆಂಟ್ ನಡೆಯುತ್ತಿದೆ. ಟ್ರೇಲರ್ ನೋಡಿದವರಿಗೆ ಚಿತ್ರದಲ್ಲಿ ಹೊಸ ಕಥೆ ಏನಿದೆ ಅಂತನ್ನಿಸೋದು ಸಹಜ. ಆದರೆ.. ಕಥೆಯಂತೂ ಇದೆ. ಮಾಸ್ ಕಥೆ ಇದೆ.



