ಮುಂಗಾರು ಮಳೆ ಚಿತ್ರವನ್ನು ಪುನೀತ್ ಮಾಡಬೇಕಿತ್ತು. ಕಾಲ್ ಶೀಟ್ ಸಿಗದೆ ಅದು ಗಣೇಶ್ ಪಾಲಾಯ್ತು. ಗೋಲ್ಡನ್ ಸ್ಟಾರ್ ಹುಟ್ಟಿಕೊಂಡರು. ಇದು ಚಿತ್ರರಂಗದಲ್ಲಿ ನಡೆಯುತ್ತಿರುವಂಥದ್ದೇ. ವಿಷ್ಣುವರ್ಧನ್ ಮಾಡಬೇಕಿದ್ದ ಬಂಧನ ಚಿತ್ರವನ್ನು ಮೊದಲು ಮಾಡಬೇಕಿದ್ದವರು ಅಂಬರೀಷ್. ಅಂಬಿಯನ್ನು ರೆಬಲ್ʻಸ್ಟಾರ್ ಮಾಡಿದ ಅಂತ ಚಿತ್ರದ ಆಫರ್ ಮೊದಲು ಹೋಗಿದ್ದು ವಿಷ್ಣುವರ್ಧನ್ ಅವರಿಗೆ. ಕಸ್ತೂರಿ ನಿವಾಸ ಚಿತ್ರದ ಕಥೆ ಮಾಡಿದ್ದು ಶಿವಾಜಿ ಗಣೇಶನ್ ಅವರಿಗೆ. ಆದರೆ, ಕೊನೆಗೆ ಅದು ಕನ್ನಡದಲ್ಲಿ ಡಾ.ರಾಜ್ ಅವರಿಗೆ ಸಿಕ್ಕಿತು. ಇನ್ನು ಸುದೀಪ್ ಮತ್ತು ದರ್ಶನ್ ವಿಷಯ.. ಬೇಡ ಬಿಡಿ..
ಇನ್ನು ಹಾಡುಗಳ ವಿಷಯಕ್ಕೆ ಬಂದರೆ.. ಮುಂಗಾರು ಮಳೆಯ ಟೈಟಲ್ ಸಾಂಗ್ʻನ್ನು ಮೊದಲು ಕಂಪೋಸ್ ಮಾಡಿದ್ದುದು ಅಮೆರಿಕ ಅಮೆರಿಕ ಚಿತ್ರಕ್ಕೆ. ಸ್ನೇಹಲೋಕ ಚಿತ್ರದ ಒಂದೇ ಉಸಿರಂತೆ ಇನ್ನು ನಾನು ನೀನು ಹಾಡನ್ನು ಕಂಪೋಸ್ ಮಾಡಿದ್ದುದು ಹಬ್ಬ ಚಿತ್ರಕ್ಕೆ. ಚೈತ್ರದ ಪ್ರೇಮಾಂಜಲಿಯಲ್ಲಿ ಬಳಸಿದ್ದ ಹಾಡುಗಳ ಮ್ಯೂಸಿಕ್, ಬಹುತೇಕ ಬೇರೆಯವರಿಂದ ರಿಜೆಕ್ಟ್ ಆಗಿದ್ದ ಟ್ಯೂನುಗಳು. ಇದೂ ಕೂಡಾ ಅಂತಹುದೇ ಒಂದು ವಿಷಯ. ಪುನೀತ್ ಅವರಿಗೆ ಬರೆದ ಹಾಡು.. ಯಶ್ ಚಿತ್ರಕ್ಕೆ ಬಳಕೆಯಾದ ಕಥೆ. ಆ ಹಾಡು ಹಿಟ್ ಆಗಿ, ಯಶ್ ಅವರನ್ನ ಸ್ಟಾರ್ ಆಗಿಸಿದ ಕಥೆ.
ಮಿಸ್ಟರ್ & ಮಿಸಸ್ ರಾಮಾಚಾರಿ ಚಿತ್ರದ ನೆನಪಿದ್ದರೆ, ಖಂಡಿತಾ ಈ ಹಾಡು ನೆನಪಿನಲ್ಲಿದ್ದೇ ಇರುತ್ತದೆ.
ಯಾರಲ್ಲಿ ಸೌಂಡು ಮಾಡೋದು..
2014ರಲ್ಲಿ ಸೂಪರ್ ಡ್ಯೂಪರ್ ಹಿಟ್ ಆದ ಚಿತ್ರ ಮಿಸ್ಟರ್ & ಮಿಸಸ್ ರಾಮಾಚಾರಿ. ಆ ಚಿತ್ರದ ಎಲ್ಲ ಹಿಟ್ ಹಾಡುಗಳಲ್ಲಿ ಇದೂ ಒಂದು.. ಯಾರಲ್ಲಿ ಸೌಂಡು ಮಾಡೋದು..
ಈ ಹಾಡಿಗೆ ಸಾಹಿತ್ಯ ಸಂತೋಷ್ ಆನಂದರಾಮ್ ಅವರದ್ದಾದರೆ, ಹಾಡಿದ್ದು ರಂಜಿತ್. ಸಂಗೀತ ನೀಡಿದ್ದು ಹರಿಕೃಷ್ಣ.
ಆದರೆ ಈ ಹಾಡನ್ನು ಬರೆದದ್ದು ಯಶ್ ಅವರಿಗೆ ಅಲ್ಲ, ಪುನೀತ್ ಅವರಿಗೆ ಬರೆದ ಹಾಡದು. ಆದರೆ, ಆ ಹಾಡನ್ನು ಬಳಸಿಕೊಳ್ಳೋಕೆ ಆಗಿರಲಿಲ್ಲ ಎಂದಿರೋ ಯೋಗರಾಜ್ ಭಟ್, ಮೊದಲು ಹಾಡಿನಲ್ಲಿ ಯಾರಲ್ಲಿ ಸೌಂಡು ಮಾಡೋದು.. ಸುಮ್ನಿರೀ ಅಣ್ಣಾ ಬೈಬೋದು.. ಅಣ್ಣಾ ಬಾಂಡ್… ಅಂತಾ ಸಾಹಿತ್ಯ ಇತ್ತು. ಅದು ಅಣ್ಣಾಬಾಂಡ್ ಚಿತ್ರಕ್ಕಾಗಿ ಬರೆದಿದ್ದ ಹಾಡು. ಆದರೆ, ಆ ಹಾಡನ್ನು ಬಳಸಿಕೊಳ್ಳೋಕೆ ಆಗಿರಲಿಲ್ಲ ಎಂದಿದ್ದಾರೆ. ಆದರೆ, ಒಮ್ಮೆ ಯಶ್ ಅವರು ಆ ಹಾಡನ್ನು ಮೊಬೈಲಿನಲ್ಲಿ ಕೇಳಿ ಇಷ್ಟಪಟ್ಟು ತಮ್ಮ ಚಿತ್ರಕ್ಕೆ ತೆಗೆದುಕೊಂಡರು ಅನ್ನೋ ವಿಷಯ ಹೇಳಿದ್ಧಾರೆ. ಈ ಹಾಡು ಯಶ್ ಅವರ ಸ್ಟಾರ್ ಪಟ್ಟವನ್ನು ಮೇಲಕ್ಕೆತ್ತಿದ್ದ ಹಾಡುಗಳಲ್ಲಿ ಒಂದು.
2014ರಲ್ಲಿ ರಿಲೀಸ್ ಆಗಿದ್ದ ಮಿಸ್ಟರ್ & ಮಿಸಸ್ ರಾಮಾಚಾರಿ ಯಾವ ಪರಿ ಹಿಟ್ ಆಯಿತೆಂದರೆ.. ಆಗಿನ ಸಮಯಕ್ಕೆ 50 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. ಕೆಜಿಎಫ್ ಬರುವವರೆಗೆ ಯಶ್ ವೃತ್ತಿ ಜೀವನದ ಸೂಪರ್ ಹಿಟ್ ನಂ.1 ಎನಿಸಿಕೊಂಡಿತ್ತು. ಯಶ್-ರಾಧಿಕಾ ಪಂಡಿತ್ ಜೋಡಿಯ ದಾಂಪತ್ಯಕ್ಕೆ ಮುನ್ನುಡಿ ಬರೆದಿದ್ದ ಸಿನಿಮಾ ಅದು.
ಇಲ್ಲಿ ಗಮನಿಸಬೇಕಾದ ವಿಷಯ ಅದಲ್ಲ. ಒಂದೊಳ್ಳೆ ಹಾಡು.. ಸೂಪರ್ ಆಗಿ ಬಂದಿದೆ ಎಂದಾಗ.. ಆ ಹಾಡನ್ನು ಗುರುತಿಸುವುದಿದೆಯಲ್ಲ.. ಅದೂ ಒಂದು ಕಲೆ. ಆ ಕಲೆ ಯಶ್ ಅವರಿಗೆ ಒಲಿದಿದೆ.. ಅಷ್ಟೆ.



