ಈ ಬಾರಿಯ ಆಸ್ಕರ್‍ನಲ್ಲಿ ಕನ್ನಡ ಚಿತ್ರಗಳ ಹೊಳಪು ಜೋರಾಗಿದೆ. ಕಾಂತಾರ ಹಾಗೂ ವಿಕ್ರಾಂತ್ ರೋಣ ಚಿತ್ರಗಳು ಮೊದಲ ಸುತ್ತಿನ ಅರ್ಹತೆ ದಾಟಿದ್ದು 301 ಚಿತ್ರಗಳ ಲಿಸ್ಟ್ ಸೇರಿವೆ. ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಅತ್ಯುತ್ತಮ ಚಿತ್ರ ಹಾಗೂ ನಟ ಎರಡು ವಿಭಾಗಗಳಲ್ಲಿ ಪ್ರಶಸ್ತಿ ಸುತ್ತು ತಲುಪಿದೆ ಎನ್ನಲಾಗಿದೆ. ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಕೂಡಾ ನಟನೆ ವಿಭಾಗದಲ್ಲಿಯೇ ಅರ್ಹತೆ ಗಿಟ್ಟಿಸಿದೆ.


ಸಂಜಯ್ ಲೀಆ ಬನ್ಸಾಲಿ ನಿರ್ದೇಶನದ ಅಲಿಯಾ ಭಟ್-ಅಜಯ್ ದೇವಗನ್ ಅಭಿನಯದ ಗಂಗೂಬಾಯಿ ಕಟವಾಡಿ. ಇಡೀ ಭಾರತದಲ್ಲಿ ಸಂಚಲನ ಸೃಷ್ಟಿಸಿದ್ದ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರ ವಿರೋಧ ಚರ್ಚೆಗೆ ಕಾರಣವಾಗಿದ್ದ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ ಆಭಿನಯದ ಕಾಶ್ಮೀರ್ ಫೈಲ್ಸ್
ವಿಜ್ಞಾನಿ ಪದ್ಮಶ್ರೀ ಪುರಸ್ಕøತ ನಂಬಿಯಾರ್ ಅವರು ದೇಶದ್ರೋಹದ ಆರೋಪ ಹೊತ್ತು, ದಶಕಗಳ ಕಾಲ ಹೋರಾಟ ಮಾಡಿ ತಮ್ಮ ಮೇಲಿನ ಆರೋಪಗಳನ್ನೆಲ್ಲ ಸುಳ್ಳು ಎಂದು ಸಾಬೀತು ಮಾಡಿ ನಿಷ್ಕಳಂಕ ಎಂದು ಕರೆಸಿಕೊಂಡ ಬಯೋಪಿಕ್. ಇದು ಮಾಧವನ್ ನಟನೆಯ ರಾಕೆಟ್ರಿ : ದಿ ನಂಬಿ ಎಫೆಕ್ಟ್ ಕೂಡಾ ಆಯ್ಕೆಯಾಗಿದ್ದವು. ತಮಿಳಿನ ಇರವಿನ್ ನಿಜಳ್, ಮಿ.ವಸಂತ ರಾವ್, ದಿ ಕನೆಕ್ಟ್ ಮಾರ್ನಿಂಗ್, ತುಝ್ಕಾ ಸಾಥಿ ಕೀ ನಹೀ ಚಿತ್ರಗಳೂ ಅರ್ಹತಾ ಸುತ್ತು ಪ್ರವೇಶಿಸಿವೆ. ಭಾರತೀಯ ಚಿತ್ರರಂಗದ ಅಧಿಕೃತ ಎಂಟ್ರಿಯಾಗಿರುವ ಗುಜರಾತಿ ಭಾಷೆಯ ಚಲ್ಲೋ ಶೋ ಚಿತ್ರ ಕೂಡಾ ಅರ್ಹತಾ ಸುತ್ತಿಗೆ ತಲುಪಿದೆ. ಒಟ್ಟಾರೆ 11 ಸಿನಿಮಾಗಳೂ ಸೇರಿದಂತೆ 15 ಭಾರತೀಯ ಚಿತ್ರ ಹಾಗೂ ಡಾಕ್ಯುಮೆಂಟರಿಗಳು ಪ್ರಶಸ್ತಿ ಸುತ್ತಿನ ಮೊದಲ ಅರ್ಹತೆ ಪಡೆದಿವೆ. ಒಟ್ಟಾರೆ 301 ಚಿತ್ರಗಳು. ಜನವರಿ 24ರಂದು ಶಾರ್ಟ್ ಲಿಸ್ಟ್ ಚಿತ್ರಗಳು ಅನೌನ್ಸ್ ಆಗಲಿವೆ.

ರಿಯಲ್ ಸ್ಟೋರಿ ಏನು?
ಆಸ್ಕರ್ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆಯೋಕೆ ಇರುವ ಮೊದಲ ಹಂತ ಅರ್ಜಿ ಹಾಕಿರುವ ಚಿತ್ರಗಳು ಅಮೆರಿಕದ 6 ಮೆಟ್ರೋ ಸಿಟಿಗಳಲ್ಲಿ ಸತತ ಒಂದು ವಾರ ಪ್ರದರ್ಶನಗೊಂಡಿರಬೇಕು. ವಿಶ್ವಮಟ್ಟದಲ್ಲಿ ಏನೇ ಹೆಸರು ಗಳಿಸಿದ್ದರೂ ಅಷ್ಟೆ, ಅಮೆರಿಕದ ನ್ಯೂಯಾರ್ಕ್, ಚಿಕಾಗೋ, ಇಲಿನೊಯಿಸ್, ಮಿಯಾಮಿ, ಫ್ಲೋರಿಡಾ, ಅಟ್ಲಾಂಟಾ, ಜಾರ್ಜಿಯಾಗಳಲ್ಲಿ ಜನವರಿ 01, 2022ರಿಂದ ಡಿಸೆಂಬರ್ 31, 2022ರ ಮಧ್ಯೆ ಯಾವುದಾದರೂ ಮಲ್ಟಿಪ್ಲೆಕ್ಸ್‍ಗಳಲ್ಲಿ ಸತತ ಒಂದು ವಾರ ಶೋ ಆಗಿರಬೇಕು. ಚಿತ್ರಗಳ ಅವಧಿ ಮಿನಿಮಮ್ 40 ನಿಮಿಷಗಳು ಇರಲೇಬೇಕು. ಈ ಆಧಾರದಲ್ಲಿ ಇವಿಷ್ಟೂ ಚಿತ್ರಗಳು ಆಯ್ಕೆಯಾಗಿವೆ.
ಮುಂದೇನು? ನಾಮಿನೇಷನ್ ಪ್ರಕ್ರಿಯೆ ಯಾವಾಗ?
ಜನವರಿ 12ರಿಂದ ನಾಮಿನೇಷನ್ ವೋಟಿಂಗ್ ಪ್ರಕ್ರಿಯೆ ಶುರುವಾಗಲಿದೆ. ಜನವರಿ 17ಕ್ಕೆ ವೋಟಿಂಗ್ ಕೊನೆಯಾಗಲಿದೆ. 5 ದಿನಗಳ ಕಾಲ ಆಸ್ಕರ್ ಅಕಾಡೆಮಿಯ ಸರಿಸುಮಾರು 10 ಸಾವಿರ ಸದಸ್ಯರು ವೋಟ್ ಮಾಡಲಿದ್ದಾರೆ. ಫೈನಲ್ ಹಂತಕ್ಕೆ ಹೋಗುವ ಚಿತ್ರಗಳ ಪಟ್ಟಿ ಜನವರಿ 17ರಂದು ಸಿಗಲಿದೆ. ಜನವರಿ 24ರಂದು ಪ್ರಶಸ್ತಿ ನೀಡಲಾಗುವುದು. ಅದೇ ದಿನ ಪ್ರಶಸ್ತಿ ಘೋಷಣೆಯಾಗಲಿದ್ದು, ಕಡೆಯ ಕ್ಷಣದವರೆಗೆ ನಿಗೂಢವಾಗಿಯೇ ಇರಿಸಲಾಗುತ್ತದೆ.
ಹಾಗಾದರೆ ಆಸ್ಕರ್ ಕನಸಾಗಿಯೇ ಉಳಿಯುತ್ತಾ?




ಹೌದು, ಆದರೆ ಕಾಂತಾರಕ್ಕಿಂತ ಹೆಚ್ಚು ಆರ್.ಆರ್.ಆರ್. ಚಿತ್ರದ ಮೇಲೆ ಭರವಸೆ ಹೆಚ್ಚಿದೆ. ಏಕೆಂದರೆ ಆರ್.ಆರ್.ಆರ್. ಚಿತ್ರವನ್ನು ರಾಜಮೌಳಿ ವಿಭಿನ್ನವಾಗಿ ಚಿತ್ರೋತ್ಸವಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಲಗಾನ್ ಚಿತ್ರ ಆಸ್ಕರ್ ರೇಸಿನಲ್ಲಿ ಎಡವಿದ್ದೆಲ್ಲಿ ಎಂದು ಅಮೀರ್ ಖಾನ್ ಹೇಳಿಕೊಂಡಿದ್ದರು. ಆ ತಪ್ಪುಗಳಾಗದಂತೆ ತಮ್ಮ ಚಿತ್ರವನ್ನು ಪ್ರಚಾರ ಮಾಡಿರುವ ರಾಜಮೌಳಿ, ಆಸ್ಕರ್ ಜ್ಯೂರಿಗಳು ಗಮನ ಹರಿಸುವ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಮಾಡಿ ಪ್ರಶಸ್ತಿಯನ್ನೂ ಗೆದ್ದಿದ್ದಾರೆ. ಇದೀಗ ತಾನೇ ಆರ್.ಆರ್.ಆರ್.ನ ನಾಟ್ಟು ನಾಟ್ಟು ಹಾಡಿನ ಸಂಗೀತಕ್ಕಾಗಿ ಎಂ.ಎಂ.ಕೀರವಾಣಿಯವರಿಗೆ ಗೋಲ್ಡನ್ ಗ್ಲೋಬ್ ಅವಾರ್ಡ್ ಸಿಕ್ಕಿದೆ.



